International Yoga Day: ಹೇಗಿತ್ತು ಮೊದಲ ಅಂತಾರಾಷ್ಟ್ರೀಯ ಯೋಗ ದಿನ?

By Kannadaprabha News  |  First Published Jun 21, 2022, 9:52 AM IST

*  ಜೂ.21, 2015ರಂದು ಮೊದಲ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ 
*  ದೆಹಲಿಯಲ್ಲಿ 84 ದೇಶಗಳ ಗಣ್ಯರಿಂದ ಯೋಗ
*  ‘ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ’ ಇದು ಮೊದಲ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್‌ 


ಪ್ರಧಾನಿ ನರೇಂದ್ರ ಮೋದಿ ಅವರು ಸೆ.27, 2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಭಾಷಣದಲ್ಲಿ ಯೋಗದ ಮಹತ್ವವನ್ನು ವಿವರಿಸಿ, ಯೋಗ ದಿನಾಚರಣೆಯ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವ ಭಾರತದ ಪ್ರಸ್ತಾಪಿನ ಕರಡು ನಿರ್ಣಯವನ್ನು ವಿಶ್ವಸಂಸ್ಥೆಯ 177 ಸದಸ್ಯ ರಾಷ್ಟ್ರಗಳು ಅನುಮೋದಿಸಿದವು. ಬಳಿಕ ಡಿ.11, 2014ರಂದು ವಿಶ್ವಸಂಸ್ಥೆಯು ಅಧಿಕೃತವಾಗಿ ಜೂ.21ಅನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಣೆ ಮಾಡಿತು. ಈ ಹಿನ್ನೆಲೆಯಲ್ಲಿ ಜೂ.21, 2015ರಂದು ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗಿತ್ತು. ಇದರಿಂದಾಗಿ ಪ್ರಾಚೀನ ಭಾರತದ ಯೋಗ ಪರಂಪರೆಗೆ ಅಂತಾರಾಷ್ಟ್ರೀಯ ಮನ್ನಣೆ ಲಭಿಸಿತ್ತು.

ದೆಹಲಿಯಲ್ಲಿ 84 ದೇಶಗಳ ಗಣ್ಯರಿಂದ ಯೋಗ!

Tap to resize

Latest Videos

ನವದೆಹಲಿಯ ರಾಜಪಥದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕ್ಯಾಬಿನೆಟ್‌ ಸಚಿವರು, 84 ದೇಶದ ಗಣ್ಯರು ಸೇರಿದಂತೆ 35,985 ಜನರು ಸುಮಾರು 35 ನಿಮಿಷಗಳ ಕಾಲ 21 ಯೋಗಾಸನಗಳನ್ನು ಮಾಡಿ, ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದ್ದರು. ಆಯುಷ್‌ ಸಚಿವಾಲಯವು ಕಾರ್ಯಕ್ರಮ ನಿರ್ವಹಣೆಯ ಹೊಣೆಯನ್ನು ಹೊತ್ತುಕೊಂಡಿತ್ತು. ಈ ವೇಳೆ ದೇಶದ ವಿವಿಧ ಭಾಗಗಳಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಯೋಗಾಭ್ಯಾಸ ನಡೆಸಿದ್ದರು. ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋನ ಮರೀನಾ ಗ್ರೀನ್‌ ಪಾರ್ಕಿನಲ್ಲಿ 5000 ಜನರು ಏಕಕಾಲಕ್ಕೆ ಯೋಗಾಭ್ಯಾಸ ಮಾಡಿದ್ದರು.

ಯೋಗದ ಮಹತ್ವವೇನು? ನಾವೇಕೆ ಯೋಗ ಮಾಡಬೇಕು?

ಥೀಮ್‌ ಏನಾಗಿತ್ತು?

‘ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ’ ಇದು ಮೊದಲ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್‌ ಆಗಿತ್ತು.

ಎಷ್ಟು ದೇಶಗಳು ಭಾಗಿ?

ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳಲ್ಲಿ ಯೆಮೆನ್‌ ದೇಶವನ್ನು ಹೊರತುಪಡಿಸಿ, ಉಳಿದ 192 ದೇಶಗಳು ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದ್ದವು. ಯೋಗ ದಿನಾಚರಣೆಯಲ್ಲಿ 44 ಇಸ್ಲಾಮಿಕ್‌ ದೇಶಗಳು ಕೂಡ ಪಾಲ್ಗೊಂಡಿದ್ದು ವಿಶೇಷ.

2 ವಿಶ್ವ ದಾಖಲೆಗಳು

ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದ ಮೂಲಕ ಭಾರತ 2 ಗಿನ್ನೆಸ್‌ ವಿಶ್ವ ದಾಖಲೆಯನ್ನು ಸೃಷ್ಟಿಸಿತ್ತು. ಏಕಕಾಲಕ್ಕೆ 35,985 ಒಂದೆಡೆ ನೆರೆದು ಯೋಗ ಮಾಡಿದ್ದು ಮೊದಲನೇ ವಿಶ್ವ ದಾಖಲೆಯಾದರೆ, ಈ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ದೇಶದ ನಾಗರಿಕರು ಭಾಗವಹಿಸಿದ್ದು (84 ದೇಶಗಳು) ಇನ್ನೊಂದು ವಿಶ್ವ ದಾಖಲೆಯೆನಿಸಿಕೊಂಡಿತ್ತು. ಆಯುಷ್‌ ಸಚಿವಾಲಯದ ಪರವಾಗಿ ಸಚಿವ ಶ್ರೀಪಾದ ಯೆಸ್ಸೊ ನಾಯ್‌್ಕ ಗಿನ್ನೆಸ್‌ ವಿಶ್ವ ದಾಖಲೆ ಪ್ರಶಸ್ತಿ ಪತ್ರವನ್ನು ಸ್ವೀಕರಿಸಿದ್ದರು. ಈ ವೇಳೆ 10.83 ಲಕ್ಷ ಎನ್‌ಸಿಸಿ ಕೆಡೆಟ್‌ ಸಮವಸ್ತ್ರ ಧರಿಸಿ ದೇಶದ 1,943 ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ ಯೋಗಾಸನ ಮಾಡಿದ್ದು, ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್ನಲ್ಲಿ ಸೇರ್ಪಡೆಯಾಗಿತ್ತು.

ಯೋಗಕ್ಕೆ ವಿಶ್ವ ಮಾನ್ಯತೆ ದೊರೆತಿದ್ದು ಹೇಗೆ?

ಆರ್‌ಬಿಐ ನಾಣ್ಯ ಬಿಡುಗಡೆ

2015ರಲ್ಲಿ ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸ್ಮರಣಾರ್ಥ ಭಾರತೀಯ ರಿಸವ್‌ರ್‍ ಬ್ಯಾಂಕ್‌ 10 ರು. ನಾಣ್ಯವನ್ನು ಬಿಡುಗಡೆ ಮಾಡಿತ್ತು.
2015, ಜೂ.21 ಮೊದಲ ಅಂ.ರಾ. ಯೋಗ ದಿನ
35,985- ಜನರಿಂದ ಏಕಕಾಲಕ್ಕೆ ಯೋಗಾಭ್ಯಾಸ
84- ದೇಶದ ಗಣ್ಯರು ಭಾಗಿ
35- ನಿಮಿಷಗಳ ಕಾಲ ಯೋಗ
21- ಯೋಗಾಸನಗಳ ಪ್ರದರ್ಶನ
192- ರಾಷ್ಟ್ರಗಳಲ್ಲಿ ಯೋಗ ದಿನ ಆಚರಣೆ
 

click me!