ಹೆಚ್ಚಿದ ಸ್ಕ್ರೀನ್ ಟೈಮ್, ಹೆತ್ತವರಿಗೆ ನಾನಾ ಒತ್ತಡ, ಸಾಮಾಜಿಕ ಅಂತರ, ಆಟವಾಡಲು ಜೊತೆಗಾರರು ಇಲ್ಲದಿರುವುದು ಮುಂತಾದ ಸಮಸ್ಯೆಗಳು ಓಮಿಕ್ರಾನ್‌ನಿಂದಾಗಿ ಮತ್ತೆ ಮರುಕಳಿಸುವಂತೆ ಕಾಣುತ್ತಿದೆ. ಇಂಥ ಸಂದರ್ಭದಲ್ಲಿ ನಿಮ್ಮ ಮಕ್ಕಳ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಸಾಮಾಜಿಕ ಅಂತರ (Social Distance), ಸಾಮಾನ್ಯ ಶಾಲೆಯ ಬದಲಿಗೆ ಆನ್‌ಲೈನ್ ತರಗತಿಗಳು, ಹೆಚ್ಚಿನ ಸ್ಕ್ರೀನ್ ಟೈಮ್, ಮತ್ತು ಪೋಷಕರ ಆಯಾಸ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಈ ಸಾಂಕ್ರಾಮಿಕ (Pandemic) ಸಮಯದಲ್ಲಿ ಮಕ್ಕಳ ಮಾನಸಿಕ ಆರೋಗ್ಯವು ಗಂಭೀರ ಕಾಳಜಿಯಾಗಿದೆ. ಪಾಲಕರು, ತಮ್ಮ ಮಕ್ಕಳಿಗೆ ಭಾವನಾತ್ಮಕವಾಗಿ ಅಲಭ್ಯರಾಗಿದ್ದಾರೆ. ಮನೆಯಲ್ಲಿ ಸೀಮಿತ ಪರಿಸರ ಹಾಗೂ ಕಡಿಮೆ ಸಾಮಾಜಿಕ ಸಂವಹನ, ಜೊತೆಗೆ ಇಡೀ ದಿನದ ಕೆಲಸದ ನಂತರ ಹೆತ್ತವರು ತಮ್ಮ ಒತ್ತಡವನ್ನೆಲ್ಲ ಮಕ್ಕಳ ಮೇಲೆ ವರ್ಗಾಯಿಸುತ್ತಾರೆ. ಇದು ಕೋವಿಡ್ ಸನ್ನಿವೇಶ. ಈ ಕೋವಿಡ್ ಗಂಡಾಂತರ ಈ ವರ್ಷವೂ ಮುಕ್ತಾಯಗೊಳ್ಳುವ ಮೊದಲು, ಓಮಿಕ್ರಾನ್ (Omicron) ಎಂಬ ಹೊಸ ರೂಪಾಂತರಿಯ ಜೊತೆ ಮತ್ತೆ ವಕ್ಕರಿಸಿದೆ. ಈ ಹೊಸ ರಿಯಾಲಿಟಿಯನ್ನು ನಿಭಾಯಿಸಲು ಕಲಿಯುವುದು ಈಗ ಅತ್ಯಂತ ಅಗತ್ಯ. ಮಗುವಿನ ಮಾನಸಿಕ ಆರೋಗ್ಯಕ್ಕಾಗಿ ಪೋಷಕರು ಮಾಡಬಹುದಾದ ಕೆಲವು ವಿಷಯಗಳು ಇಲ್ಲಿವೆ:
ಸ್ಕ್ರೀನ್ ಟೈಮ್ ಮಿತಿಗೊಳಿಸಿ (Screen time)
ಇದನ್ನು ಜಾರಿಗೊಳಿಸುವುದರಿಂದ ನೀವು ನಿಮ್ಮ ಮಗುವಿನ ಅಚ್ಚುಮೆಚ್ಚಿನ ಪೋಷಕರಾಗುವುದಿಲ್ಲ. ಆದರೆ ಅಸಂಖ್ಯಾತ ಅಧ್ಯಯನಗಳು ಹೆಚ್ಚಿನ ಸ್ಕ್ರೀನ್ ಟೈಮ್ ಅನೇಕ ನಕಾರಾತ್ಮಕ ಪರಿಣಾಮಗಳನ್ನು ಹೊಂದಿದೆ ಎಂದು ಸಾಬೀತುಪಡಿಸಿದೆ. ಒತ್ತಡ, ಸಾಮಾಜಿಕ ಆತಂಕ, ಪ್ರತ್ಯೇಕತೆ, ದೈಹಿಕ ಆಯಾಸ ಮತ್ತು ಕಣ್ಣಿನ ಆಯಾಸ. ವಿಶೇಷವಾಗಿ ಮಲಗುವ ಮೊದಲು ಇದರಲ್ಲಿ ಎಷ್ಟು ಸಮಯವನ್ನು ಕಳೆಯುತ್ತಾರೆ ಎಂಬುದರ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಮಲಗುವ ಮುನ್ನ ಕನಿಷ್ಠ ಒಂದು ಗಂಟೆಯ ಮೊದಲು ಎಲ್ಲಾ ಎಲೆಕ್ಟ್ರಾನಿಕ್ಸ್‌ಗಳನ್ನು ಸ್ವಿಚ್ ಆಫ್ ಮಾಡಿ, ನಿಮ್ಮ ಮನಸ್ಸು ಮತ್ತು ದೇಹವು ವಿಶ್ರಾಂತಿ ಪಡೆಯಲು ಸ್ವಲ್ಪ ಸಮಯವನ್ನು ನೀಡುವುದು ಅತ್ಯಂತ ಅಗತ್ಯ. ಮಲಗುವ ಮುನ್ನ ಓದುವುದು ಅಥವಾ ಧ್ಯಾನದಂತಹ ಚಟುವಟಿಕೆಗಳನ್ನು ಮಾಡುವುದು ನಿದ್ರೆಯ ಗುಣಮಟ್ಟದಲ್ಲಿ ತೀವ್ರ ಸುಧಾರಣೆಗಳನ್ನು ತರುತ್ತದೆ.
Weight Loss : ಉಪವಾಸ ಮಾಡಿ ತೂಕ ಇಳಿಸಿಕೊಳ್ಳಲು ಮುಂದಾಗಿದ್ರೆ ಎಚ್ಚರ..!
ಅನೇಕ ವಿಷಯಗಳ ಚರ್ಚೆಗಳು
ನಾವು ವಾಸಿಸುವ ಕಾಲದಲ್ಲಿ, ನಾವು ಪ್ರತಿದಿನ ನೋಡುವ ಸುದ್ದಿಗಳು, ಮಾಧ್ಯಮಗಳು ಕೋವಿಡ್ ಬಗ್ಗೆ ಕೇಂದ್ರೀಕೃತವಾಗಿವೆ. ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯುವುದು, ನೀಡುವುದು ಯಾವಾಗಲೂ ಮುಖ್ಯ. ಆದರೆ ಜಗತ್ತಿನಲ್ಲಿ ಬೇರೇನು ನಡೆಯುತ್ತಿದೆ ಎಂಬುದರ ಕುರಿತು ನಿಮ್ಮ ಪ್ರೀತಿಪಾತ್ರರ ಜೊತೆಗೆ ಹೆಚ್ಚಿಗೆ ಮಾತಾಡುವುದು ಗುಣಮಟ್ಟದ ಸಮಯ ಎನಿಸಿಕೊಳ್ಳುತ್ತದೆ. ಮಕ್ಕಳಿಗೆ ಕೆಲವೊಮ್ಮೆ ಅಷ್ಟೇನೂ ಆಸಕ್ತಿಯಿಲ್ಲದ ವಿಷಯದಲ್ಲಿ ನೀವು ಮಾಹತಿ ನೀಡಬೇಕಾದೀತು, ಹಾಗೇ ನಿಮಗೆ ಅಷ್ಟೇನೂ ಇಷ್ಟವಿಲ್ಲದ ವಿಷಯದಲ್ಲಿ ಮಕ್ಕಳಿಂದ ಹೆಚ್ಚು ಮಾತು ಆಲಿಸಬೇಕಾದೀತು. ಆದರೆ ಇದರಲ್ಲಿ ಮಕ್ಕಳಿಗೆ ಪೋಷಕರ ಸಮಯ ಮತ್ತು ಗಮನ ಅಗತ್ಯವಿರುತ್ತದೆ. ಇದರಿಂದ ನಿಮ್ಮ ಕುಟುಂಬದೊಳಗಿನ ಸಂಬಂಧ ಸುಧಾರಿಸುತ್ತದೆ. ಚಲನಚಿತ್ರಗಳು, ಕ್ರೀಡೆಗಳನ್ನು ಚರ್ಚಿಸಿ.
undefined
ಶಾಂತವಾಗಿರಿ (Be cool)
ಪೋಷಕರಾಗಿ, ನಿಮ್ಮ ಮಕ್ಕಳು ಯಾವಾಗಲೂ ಸುರಕ್ಷತೆ ಮತ್ತು ಸೌಕರ್ಯಕ್ಕಾಗಿ ನಿಮ್ಮನ್ನು ನೋಡುತ್ತಾರೆ. ನೀವು ಅವರ ಪ್ರಾಥಮಿಕ ಆರೈಕೆ ನೀಡುವವರು ಮತ್ತು ಮಾದರಿಗಳು. ಅಸ್ತವ್ಯಸ್ತವಾಗಿರುವ ವಾತಾವರಣದಲ್ಲಿ ಶಾಂತವಾಗಿರುವುದು ಆರೋಗ್ಯಕರ ಜೀವನಶೈಲಿಗೆ ತುಂಬಾ ನಿರ್ಣಾಯಕವಾಗಿದೆ. ಎಚ್ಚರಿಕೆ ಅಗತ್ಯ, ಆದರೆ ಗಾಬರಿ ಅಲ್ಲ. ಒತ್ತಡದ ಹೆಚ್ಚಳವು ದೇಹದ ಪ್ರತಿರೋಧ ಶಕ್ತಿಯನ್ನು ಮತ್ತಷ್ಟು ದುರ್ಬಲ ಮಾಡುತ್ತದೆ. ಜೊತೆಗೆ ಇತರ ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆ.
ಫಿಟ್ನೆಸ್ (Fitness) ಮತ್ತು ದೈಹಿಕ ಚಟುವಟಿಕೆಗಳು (Excerscises)
ಒತ್ತಡವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಮನಸ್ಸಿಗೆ ಸಹಾಯ ಮಾಡಲು ಒಂದು ಪ್ರಮುಖ ಮಾರ್ಗವೆಂದರೆ ವ್ಯಾಯಾಮ. ದೈಹಿಕವಾಗಿ ಸಕ್ರಿಯವಾಗಿರುವಾಗ, ನಿಮ್ಮ ಮೆದುಳು ನಿಮ್ಮ ಮನಸ್ಥಿತಿಯ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುವ ಉತ್ತಮ ರಾಸಾಯನಿಕಗಳನ್ನು ಉತ್ಪಾದಿಸುತ್ತದೆ. ನಿಮ್ಮ ಮೆದುಳು ತನ್ನ ದೇಹವನ್ನು ಆರೋಗ್ಯಕರವಾಗಿ ಇರಿಸಿಕೊಂಡಿದ್ದಕ್ಕೆ ನಿಮಗೆ ಪ್ರತಿಫಲ ನೀಡುತ್ತದೆ. ಯೋಗವು ಬಹಳ ಕಡಿಮೆ ಸ್ಥಳಾವಕಾಶದ ಅಗತ್ಯವಿರುವ ಒಂದು ಉತ್ತಮ ಚಟುವಟಿಕೆ. ಮತ್ತಿದು ನಿಮ್ಮ ಇಡೀ ದೇಹದ ಮೇಲೆ ಕೆಲಸ ಮಾಡುತ್ತದೆ, ವಿಶ್ರಾಂತಿಯನ್ನು ಉತ್ತೇಜಿಸುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಕುಟುಂಬವಾಗಿ ದೈಹಿಕವಾಗಿ ಸದೃಢವಾಗಿರುವುದು ನಿಮಗೆ ಒಟ್ಟಿಗೆ ಬಾಂಧವ್ಯವನ್ನು ನೀಡುತ್ತದೆ. ಎಲ್ಲಾ ಕುಟುಂಬ ಸದಸ್ಯರು ದೈಹಿಕ ವ್ಯಾಯಾಮಗಳಲ್ಲಿ ಭಾಗವಹಿಸುವುದು ಉತ್ತಮ ಉಪಾಯ.
ಧ್ಯಾನ (Meditation)
ಹೆಚ್ಚಿನ ಜನರು ಯೋಚಿಸುವುದಕ್ಕಿಂತ ಧ್ಯಾನವು ತುಂಬಾ ಸರಳವಾಗಿದೆ. ಧ್ಯಾನವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ಲೆಕ್ಕವಿಲ್ಲದಷ್ಟು ವೈದ್ಯಕೀಯ ಅಧ್ಯಯನಗಳು ತೋರಿಸಿವೆ. ಇದು ಅತ್ಯಂತ ಉಪಯುಕ್ತವಾಗಿದೆ, ಆತಂಕವನ್ನು ಕಡಿಮೆ ಮಾಡುತ್ತದೆ ಮತ್ತು ವಿಶ್ರಾಂತಿಯನ್ನು ಉತ್ತೇಜಿಸುತ್ತದೆ. ನಿಯಮಿತವಾಗಿ ಧ್ಯಾನ ಮಾಡುವ ಜನರು, ಕಡಿಮೆ ಒತ್ತಡದ ಮಟ್ಟವನ್ನು ಹೊಂದಿರುವುದು ಮತ್ತು ಮಾಡದವರಿಗಿಂತ ಹೆಚ್ಚು ಸಂತೋಷದಿಂದ ಮತ್ತು ಹೆಚ್ಚು ಶಾಂತಿಯುತವಾಗಿರುತ್ತಾರೆ ಎಂದು ವರದಿಗಳು ತಿಳಿಸಿವೆ. ನಿಮ್ಮ ದಿನದ 5-10 ನಿಮಿಷಗಳನ್ನು ಧ್ಯಾನಕ್ಕೆ ತೆಗೆದುಕೊಳ್ಳುವ ಮೂಲಕ ಪ್ರಾರಂಭಿಸಿ ಮತ್ತು ಸತತವಾಗಿ ಅಭ್ಯಾಸ ಮಾಡಿ. ಧ್ಯಾನವನ್ನುಯಾವುದೇ ವಯಸ್ಸಿನ ಯಾರೂ ಮಾಡಬಹುದು ಮತ್ತು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದು ಅತ್ಯಂತ ಪ್ರಯೋಜನಕಾರಿಯಾಗಿದೆ.
ನಿಮ್ಮ ವೇಳಾಪಟ್ಟಿ ಯೋಜಿಸಿ (Time Table)
ನಿಮ್ಮ ಮಕ್ಕಳು ತಮ್ಮ ದಿನಚರಿ ರೂಪಿಸಲು ಸಹಾಯ ಮಾಡಿ. ಸಾಂಕ್ರಾಮಿಕ ರೋಗದ ಅತಿದೊಡ್ಡ ಪ್ರತಿಕೂಲ ಪರಿಣಾಮವೆಂದರೆ ದಿನಚರಿಯ ವ್ಯತ್ಯಾಸ. ಈ ಹೊಸ ಜೀವನ ವಿಧಾನಕ್ಕೆ ಹೊಂದಿಕೊಳ್ಳುವ ಮೂಲಕ ನಿಮ್ಮ ದಿನದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿ. ನಿಗದಿತ ಕಾರ್ಯಗಳ ದಿನಚರಿಯನ್ನು ಅನುಸರಿಸುವ ಮೂಲಕ ಪ್ರಾರಂಭಿಸಿ. ಮಕ್ಕಳಿಗೆ ಆಟದ ಸಮಯ ಮತ್ತು ಕೆಲಸದ ಸಮಯವನ್ನು ನಿಗದಿಪಡಿಸಿ. ನೀವೇ ಅಚ್ಚುಕಟ್ಟಾದ ದಿನಚರಿಯನ್ನು ಹೊಂದಿ ತೋರಿಸಿ. ನಿಮ್ಮ ಕೆಲಸವು ನಿಮ್ಮನ್ನು ಸುಟ್ಟುಹಾಕಲು ಬಿಡಬೇಡಿ. ಕುಟುಂಬದ ಪ್ರತಿಯೊಬ್ಬರೂ ಭಾಗವಹಿಸಿ ಆನಂದಿಸಬಹುದಾದ ಚಟುವಟಿಕೆಗಳಿಗೆ ದಿನಚರಿ ಸಮಯ ಮೀಸಲಿಡಿ.
ಕುಟುಂಬ ಮತ್ತು ಸ್ನೇಹಿತರೊಂದಿಗೆ ಮಾತನಾಡಿ (Family)
ಅನೇಕ ಬಾರಿ, ಬೇಸರ ತೊಡೆದುಹಾಕುವ ಪ್ರಯತ್ನದಲ್ಲಿ, ನಾವು ಚಲನಚಿತ್ರ ನೋಡುವುದು, ಆಟವಾಡುವುದು, ನಮ್ಮ ಪ್ರೀತಿಪಾತ್ರರೊಂದಿಗೆ ಸಮಯವನ್ನು ಕಳೆಯಬಹುದು. ಆದರೆ ನಾವು ಅವರೊಂದಿಗೆ ನಿಜವಾಗಿಯೂ ಸಂವಹನ ಮಾಡಲು ಮತ್ತು ಸಂವಾದಿಸಲು ಮರೆತುಬಿಡಬಹುದು. ಅನೇಕವೇಳೆ, ಜನರಿಂದ ತುಂಬಿರುವ ಕೋಣೆಯಲ್ಲಿಯೂ ನಾವು ಒಂಟಿಯಾಗಿರಬಹುದು. ನಾವು ಅನುಭವಿಸುವ ಯಾವುದೇ ಭಾವನೆಗಳು ಮತ್ತು ನಮ್ಮ ಆಲೋಚನೆಗಳನ್ನು ನಾವು ನಂಬುವವರೊಂದಿಗೆ ಬಹಿರಂಗವಾಗಿ ಚರ್ಚಿಸುವುದು ನಮ್ಮ ಯೋಗಕ್ಷೇಮಕ್ಕೆ ಅತ್ಯಗತ್ಯ. ಮಾನವರು ಸಾಮಾಜಿಕ ಜೀವಿಗಳು ಮತ್ತು ನಾವು ಉಳಿವಿಗಾಗಿ ಪರಸ್ಪರ ಅವಲಂಬಿಸಿದ್ದೇವೆ. ಭಾವನೆಗಳನ್ನು ಹೊಂದುವುದು ಮತ್ತು ಭಾವನೆಗಳನ್ನು ವ್ಯಕ್ತಪಡಿಸುವುದು ಕೆಟ್ಟದಲ್ಲ. ಭಾವನಾತ್ಮಕ ನಿಗ್ರಹವು ಅನೇಕ ಆರೋಗ್ಯ ಅಪಾಯಗಳು ಮತ್ತು ಬೇಗನೆ ಸಾವಿಗೆ ಕಾರಣವಾಗಬಹುದು. ಇದು ನಿಮ್ಮ ನರಮಂಡಲದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ನಿಮ್ಮ ಮಕ್ಕಳು ನಿಜವಾಗಿಯೂ ಏನು ಹೇಳಲು ಬಯಸುತ್ತಾರೆ ಎಂಬುದನ್ನು ಕೇಳಿ. ಆರೋಗ್ಯಕರ ರೀತಿಯಲ್ಲಿ ನಿಮ್ಮನ್ನು ವ್ಯಕ್ತಪಡಿಸಿ. ಮೈಂಡ್‌ಫುಲ್‌ನೆಸ್ ಎನ್ನುವುದು ಪ್ರಸ್ತುತ ಕ್ಷಣದ ಬಗ್ಗೆ ಇರುವ ವ್ಯಾಯಾಮ. ಅದು ಹಿಂದಿನ ಅಥವಾ ವರ್ತಮಾನಕ್ಕೆ ಸಂಬಂಧಿಸಿದ ಯಾವುದನ್ನೂ ಯಾವುದೇ ರೀತಿಯಲ್ಲಿ ಯೋಚಿಸುವುದಿಲ್ಲ. ಮತ್ತಿದು ಒತ್ತಡದ ಸಮಯದಲ್ಲಿ ಅಭ್ಯಾಸ ಮಾಡಬಹುದಾದ ಉತ್ತಮ ಮನಸ್ಥಿತಿ.
Health Tips : ವಯಸ್ಸೇ ಆಗದಂತೆ ಕಾಣಲು ಏನ್ಮಾಡಬೇಕು.. ಸರಳ ಸೂತ್ರಗಳು!
ಆನ್‌ಲೈನ್ ಕೋರ್ಸ್‌ಗಳು (Online courses)
ನಾವು ಕಲಿಯುವುದನ್ನು ಮತ್ತು ಬೆಳೆಯುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ನಾವು ಅನೇಕ ಸ್ಥಳಗಳಿಗೆ ಹೋಗಲು ದೈಹಿಕವಾಗಿ ಸಾಧ್ಯವಾಗದಿರಬಹುದು. ಆದರೆ ಈ ಕೆಟ್ಟ ಪರಿಸ್ಥಿತಿಯನ್ನು ಅತ್ಯುತ್ತಮವಾಗಿಸಲು ನಾವು ಪ್ರಪಂಚದೊಂದಿಗೆ ಸಂವಹನ ನಡೆಸುವ ವಿಧಾನ ಬದಲಾಗಬೇಕು. ಆನ್‌ಲೈನ್ ಕೋರ್ಸ್‌ಗಳು ಮತ್ತು ಇಂಟರ್ನೆಟ್ ಧಾರಾಳ ಮಾಹಿತಿಯನ್ನು ಹೊಂದಿದೆ. ಮನೆಯಲ್ಲಿ ಸಿಗುವ ಹೆಚ್ಚುವರಿ ಸಮಯವನ್ನು ಅದರ ಸಂಪೂರ್ಣ ಪ್ರಯೋಜನ ಪಡೆಯುವಂತೆ ಬಳಸಿ. ಕೆಲಸಕ್ಕಾಗಿ ಕೌಶಲ್ಯಗಳನ್ನು ಕಲಿಯಿರಿ ಅಥವಾ ಹೊಸ ಹವ್ಯಾಸಗಳನ್ನು ಗಳಿಸಿ. ಇದು ಮೆದುಳಿನ ಕಾರ್ಯಗಳನ್ನು ಸುಧಾರಿಸುತ್ತದೆ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಮಕ್ಕಳನ್ನು ಅವರ ಇಚ್ಛೆಗೆ ಸರಿಹೊಂದುವ ಕೋರ್ಸ್‌ಗಳಿಗೆ ಸೇರಿಸಿ.
ನಿಮ್ಮ ನಿಯಂತ್ರಣದಲ್ಲಿರುವುದನ್ನು ಮಾಡಿ
ನೀವು ನಿಯಂತ್ರಿಸಲಾಗದ ವಿಷಯಗಳು ಯಾವಾಗಲೂ ಇರುತ್ತವೆ. ನಿಮ್ಮ ಪ್ರಭಾವದ ಹೊರಗಿನ ಸನ್ನಿವೇಶಗಳನ್ನು ಬಿಡಲು ಕಲಿಯಿರಿ. ಯಾಕೆಂದರೆ ಅದನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ. ನಮಗೆ ಮತ್ತು ನಮ್ಮ ಸುತ್ತಮುತ್ತಲಿನ ಜನರಿಗೆ ನಮ್ಮಿಂದ ಸಾಧ್ಯವಾದಷ್ಟು ಉತ್ತಮವಾದದ್ದನ್ನು ಮಾಡುವುದು ಯಾವಾಗಲೂ ಸಾಧ್ಯವಿದೆ. ಧನಾತ್ಮಕ ಮತ್ತು ಋಣಾತ್ಮಕ ಭಾವನೆಗಳು ಜೀವನದ ಭಾಗವಾಗಿವೆ. ನಾವು ಮಾಡಬಹುದಾದುದೆಂದರೆ ಪ್ರತಿಯೊಂದು ಸನ್ನಿವೇಶಕ್ಕೂ ಸರಿಯಾಗಿ ಮತ್ತು ಸೂಕ್ತವಾಗಿ ಪ್ರತಿಕ್ರಿಯಿಸಲು ಕಲಿಯುವುದು ಮತ್ತು ನಮ್ಮ ಮುಂದೆ ಇರುವ ಕ್ಷಣಗಳನ್ನು ಆನಂದಿಸುವುದು.