ಚಳಿಗಾಲದಲ್ಲಿ ಟೆನ್ಷನ್ ಜಾಸ್ತಿಯಾಗ್ತಿದ್ರೆ ಹೀಗೆ ಕಂಟ್ರೋಲ್ ಮಾಡಿ

By Suvarna News  |  First Published Dec 10, 2022, 4:21 PM IST

ಚಳಿಗಾಲದಲ್ಲಿ ಬೆಚ್ಚಗೆ ಹೊದ್ದು ಮಲಗುವ ಆಸೆಯಾಗುತ್ತದೆ. ಜೊತೆಗೆ ತಿನ್ನುವ ಚಟ ಹೆಚ್ಚಾಗುತ್ತದೆ. ಹಸಿವಾಯ್ತು ಅಂತಾ ಅನಾರೋಗ್ಯಕರ ಆಹಾರ ತಿಂದು ಯಡವಟ್ಟು ಮಾಡಿಕೊಳ್ತೆವೆ. ಇದ್ರಿಂದ ರಕ್ತದೊತ್ತಡ ಹೆಚ್ಚಾಗಿ ಕೋಪ ನೆತ್ತಿಗೇರುತ್ತದೆ. 
 


ಚಳಿಗಾಲದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಶುರುವಾಗುತ್ತವೆ. ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆ ಚಳಿ ವಿಪರೀತವಾಗಿದ್ದು, ಅನಾರೋಗ್ಯಕ್ಕೆ ಒಳಗಾಗ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಚಳಿಗಾಲದಲ್ಲಿ ನೆಗಡಿ, ಕೆಮ್ಮ, ಜ್ವರದ ಜೊತೆ ರಕ್ತದೊತ್ತಡ ಸಮಸ್ಯೆ ಶುರುವಾಗುತ್ತದೆ. ಚಳಿಗಾಲದಲ್ಲಿ ಒತ್ತಡ ಕೂಡ ನಮ್ಮನ್ನು ಕಾಡುತ್ತದೆ. ಚಳಿಗಾಲದಲ್ಲಿ ಆಹಾರ ಪದ್ಧತಿ ಸಂಪೂರ್ಣವಾಗಿ ಬದಲಾಗುವುದ್ರಿಂದ ಅಧಿಕ ರಕ್ತದೊತ್ತಡದಿಂದಾಗುವ ಒತ್ತಡ ನಮ್ಮನ್ನು ಕಾಡುತ್ತದೆ. 

ಚಳಿಗಾಲ (Winter) ದಲ್ಲಿ ತಾಪಮಾನ (Temperature) ಕಡಿಮೆಯಾಗುವ ಕಾರಣ ಹಸಿವು ಹೆಚ್ಚಾಗುತ್ತದೆ. ನಮ್ಮ ರಕ್ತ (Blood) ಸ್ವಲ್ಪ ದಪ್ಪವಾಗಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ ನಾವು ಹೆಚ್ಚು ಕೊಲೆಸ್ಟ್ರಾಲ್ ಇರುವ ಮತ್ತು ಉಪ್ಪಿನ ಆಹಾರವನ್ನು ತಿನ್ನುತ್ತೇವೆ. ಇದ್ರಿಂದ ಅಧಿಕ ರಕ್ತದೊತ್ತಡ (Blood Pressure)  ಮತ್ತಷ್ಟು ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಅನೇಕ ಜನರಿಗೆ  ಚಳಿಗಾಲದಲ್ಲಿ ಹೃದಯರಕ್ತನಾಳದ ಸಮಸ್ಯೆ ಶುರುವಾಗುತ್ತದೆ. ಚಳಿಗಾಲದಲ್ಲಿ ಹೃದಯಾಘಾತ  (Heart Attack ) ಅಪಾಯವೂ ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ನಾವು ರಕ್ತದೊತ್ತಡ ಸಮಸ್ಯೆಯಿಂದ ದೂರವಿರಬೇಕು, ಒತ್ತಡ ಕಡಿಮೆ ಮಾಡಿಕೊಳ್ಳಬೇಕು ಅಂದ್ರೆ ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಬೇಕು. ಅದು ಹೇಗೆ ಎಂಬುದನ್ನು ನಾವಿಂದು ಹೇಳ್ತೆವೆ.  

Tap to resize

Latest Videos

ಚಳಿಗಾಲದಲ್ಲಿರಲಿ ಈ ಆಹಾರ (Food) ಸೇವನೆ :
ಮೆಂತ್ಯ ಬೀಜ :
ಮೆಂತ್ಯ ಬೀಜಗಳು  ಕರಗುವ ಫೈಬರ್ ಹೊಂದಿರುತ್ತವೆ. ಇದು ಕೊಲೆಸ್ಟ್ರಾಲ್ ಸಮಸ್ಯೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಮೆಂತ್ಯದ ಕಾಳುಗಳು ಮಾತ್ರವಲ್ಲದೆ ಮೆಂತ್ಯದ ಎಲೆಗಳು ಸಹ ರಕ್ತದೊತ್ತಡ ನಿಯಂತ್ರಣಕ್ಕೆ ಒಳ್ಳೆಯದು.  ಇದಕ್ಕೆ ಉಪ್ಪನ್ನು ಕಡಿಮೆ ಸೇರಿಸಿದ್ರೆ ಮತ್ತಷ್ಟು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ಆದ್ರೆ  ಪ್ರತಿದಿನ ಇದನ್ನು ಸೇವಿಸಬಾರದು. ಇದು  ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಸಾಧ್ಯತೆಯಿರುತ್ತದೆ. ನೀವು ಮೆಂತ್ಯದ ಪುಡಿಯನ್ನು ನೀರಿಗೆ ಹಾಕಿ ಕೂಡ ಕುಡಿಯಬಹುದು.

MENTAL HEALTH: ಕೆಲಸ ನಿಮ್ಮನ್ನ ಹೈರಾಣ ಮಾಡುತ್ತಿದೆ ಅಂತ ಗೊತ್ತಾಗೋದು ಯಾವಾಗ?

ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ (Garlic) : ಬೆಳಿಗ್ಗೆ ಒಂದು ಲವಂಗ ಹಾಗೂ ಹಸಿ ಬೆಳ್ಳುಳ್ಳಿ ತಿನ್ನುವುದ್ರಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ ಎಂದು ಅನೇಕ ಅಧ್ಯಯನಗಳಿಂದ ಪತ್ತೆಯಾಗಿದೆ. ರಕ್ತ ಶುದ್ಧೀಕರಣ ಮತ್ತು ರಕ್ತದೊತ್ತಡ ಎರಡಕ್ಕೂ ಬೆಳ್ಳುಳ್ಳಿ ಒಳ್ಳೆಯದು. ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. 

ಆರೋಗ್ಯಕ್ಕೆ ಅಶ್ವಗಂಧ : ಅಶ್ವಗಂಧ ರಕ್ತದೊತ್ತಡ ಕಡಿಮೆ ಮಾಡಲು ನೆರವಾಗುವ ಇನ್ನೊಂದು ಪದಾರ್ಥವಾಗಿದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಚಮಚ ಅಶ್ವಗಂಧದ ಪುಡಿಯನ್ನು ಒಂದು ಲೋಟ ನೀರಿನೊಂದಿಗೆ ಸೇವಿಸಿದರೆ ಆರೋಗ್ಯ ವೃದ್ಧಿಸುತ್ತದೆ.   

ಸರ್ಪಗಂಧ ಸೇವನೆ ಮಾಡಿ : ಆಯುರ್ವೇದ ಔಷಧದದಲ್ಲಿ ಇದು ಪ್ರಾಮುಖ್ಯತೆ ಪಡೆದಿದೆ. ಇದೊಂದು ಸಣ್ಣ ಸಸ್ಯ. ಇದು ಅನೇಕ ಫೈಟೊನ್ಯೂಟ್ರಿಯೆಂಟ್‌ಗಳನ್ನು ಒಳಗೊಂಡಿದೆ. ಇದು ಉತ್ತಮ ನಿದ್ರೆ ಮತ್ತು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ರಕ್ತನಾಳಗಳನ್ನು ಬಿಗಿಗೊಳಿಸುವ ಮೂಲಕ ರಕ್ತದ ಹರಿವನ್ನು ಸರಿಪಡಿಸುತ್ತವೆ. ನಿಮ್ಮ ಆಹಾರದಲ್ಲಿ ನೀವು ಸರ್ಪಗಂಧದಿಂದ ಮಾಡಿದ ಟಾನಿಕ್ಸ್ ಬಳಸುವ ಮುನ್ನ ವೈದ್ಯರ ಸಲಹೆಯನ್ನು ಪಡೆಯಿರಿ.  

Healthy Food : ಹಸಿವಾದಾಗ ಹಾಳು ಮೂಳು ತಿನ್ನೋದು ಎಷ್ಟು ಸರಿ?

ಇವುಗಳನ್ನು ಸೇವನೆ ಮಾಡಿ : ಅಧಿಕ ರಕ್ತದೊತ್ತಡ ಕಾಡ್ತಿದೆ ಎನ್ನುವವರು, ಸೇಬು ಹಣ್ಣು, ಬಾಳೆಹಣ್ಣು, ಬ್ಲ್ಯಾಕ್‌ಬೆರಿ, ಎಲೆಕೋಸು,   ದ್ರಾಕ್ಷಿ, ಸೊಪ್ಪು, ಈರುಳ್ಳಿಗಳು, ಬಟಾಣಿ, ಟೊಮೆಟೊ ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಹಾಗೆ ಹೆಚ್ಚು ಕೊಬ್ಬಿನಂಶವಿರುವ ಆಹಾರವನ್ನು ಸೇವಿಸಬಾರದು. ಅಧಿಕ ರಕ್ತದೊತ್ತಡದಿಂದ ಬಳಲುವ ಜನರು ಸಸ್ಯಾಹಾರ ಸೇವನೆ ಮಾಡಿದ್ರೆ ಒಳ್ಳೆಯದು. ಹಾಗೆಯೇ  ನಾರಿನಂಶವಿರುವ ಆಹಾರವನ್ನು ಸೇವಿಸಬೇಕು.
ಅಧಿಕ ರಕ್ತದೊತ್ತಡದಿಂದ ಬಳಲುವ ಜನರು ದೈಹಿಕ ವ್ಯಾಯಾಮ ಮಾಡಬೇಕು. 30 – 40 ನಿಮಿಷ ವಾಕಿಂಗ್ ಮಾಡುವುದು ಒಳ್ಳೆಯದು. ಜೀವನ ಶೈಲಿ ಬದಲಾವಣೆ ಮಾಡುವ ಮುನ್ನ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. 
 

click me!