ಕ್ಲಿಯರ್ ಸ್ಕಿನ್‌ಗಾಗಿ ದಿನಕ್ಕೆಷ್ಟು ನೀರು ಕುಡೀಬೇಕು?

By Suvarna News  |  First Published Feb 17, 2024, 12:40 PM IST

ನೀರು ನಮ್ಮ ದೇಹದೊಳಗಿನ ಎಲ್ಲ ಕಲ್ಮಶಗಳನ್ನು ಹೊರ ಹಾಕುತ್ತದೆ. ಇದರಿಂದ ನಮ್ಮ ತ್ವಚೆಯನ್ನು ಸ್ವಚ್ಛ, ಸುಂದರವಾಗಿಸುತ್ತದೆ. ಕ್ಲಿಯರ್ ಸ್ಕಿನ್‌ಗಾಗಿ ನೀವು ದಿನವೊಂದಕ್ಕೆ ಎಷ್ಟು ನೀರು ಕುಡೀಬೇಕು ಗೊತ್ತಾ?


ನೀರಂತೂ ನಾವೆಲ್ಲ ಕುಡಿಯಲೇಬೇಕು, ಕುಡಿಯುತ್ತೇವೆ. ಡಿಹೈಡ್ರೇಶನ್ ಆಗದಿರಲು ದಿನಕ್ಕೆ 8 ಗ್ಲಾಸ್ ನೀರು ಕುಡಿಯಿರಿ, 2 ಲೀಟರ್ ಕುಡಿಯಿರಿ ಎಂಬೆಲ್ಲ ಅನೇಕ ಲೇಖನಗಳನ್ನು ನೀವೀಗಾಗಲೇ ಓದಿರಬಹುದು. ಆದರೆ, ಫಳ ಫಳ ಹೊಳವ ಕ್ಲಿಯರ್ ಸ್ಕಿನ್‌ಗಾಗಿ ದಿನವೊಂದಕ್ಕೆ ಎಷ್ಟು ನೀರು ಕುಡಿಯಬೇಕು?

ಯಾವುದೇ ನಟ ನಟಿಯರನ್ನು ಅವರ ತ್ವಚೆಯ ಸೀಕ್ರೆಟ್ ಕೇಳಿದಾಗೆಲ್ಲ ಅವರಿಂದ ಬರುವ ಮೊದಲ ಉತ್ತರವೇ ತಾವು ತುಂಬಾ ನೀರು ಕುಡಿಯುತ್ತೇವೆಂಬುದು. ಈ ತುಂಬಾ ಎಂದರೆ ಎಷ್ಟು? ದಿನಕ್ಕೆ ಎಷ್ಟು ನೀರು ಕುಡಿದರೆ ತ್ವಚೆ ಸ್ವಚ್ಛವಾಗಿ, ಹೊಳಪು ಪಡೆಯುತ್ತದೆ?

Tap to resize

Latest Videos

undefined

ಮಾನವ ದೇಹದ ಮುಕ್ಕಾಲು ಭಾಗ ನೀರಿನಿಂದಲೇ ತುಂಬಿದೆ. ನೀರು ನಮಗೆ ತಾಪಮಾನವನ್ನು ನಿಯಂತ್ರಿಸಲು, ಆಹಾರವನ್ನು ಜೀರ್ಣಿಸಿಕೊಳ್ಳಲು, ನಮ್ಮ ಕೀಲುಗಳನ್ನು ಚಲಿಸುವಂತೆ ಮಾಡಲು, ಬ್ಯಾಕ್ಟೀರಿಯಾವನ್ನು ಹೊರಹಾಕಲು, ರಕ್ತದ ಪರಿಮಾಣವನ್ನು ನಿರ್ವಹಿಸಲು, ಜೀವಕೋಶಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ತಲುಪಿಸಲು ಸಹಾಯ ಮಾಡುತ್ತದೆ. ಅಂದರೆ ನಾವು ಮಾಡುವ ಪ್ರತಿ ಕೆಲಸಕ್ಕೂ ನೀರು ಮೂಲಭೂತವಾಗಿದೆ.

ಶಂಕರ್‌ನಾಗ್ ಗೌರವಾರ್ಥ ಅರಸಾಳು ರೇಲ್ವೆ ಸ್ಟೇಶನ್ ಆಯ್ತು ಮಾಲ್ಗುಡಿ ಮ್ಯ ...
 

ಶುದ್ಧ ಚರ್ಮಕ್ಕಾಗಿ ನೀವು ಪ್ರತಿದಿನ ಎಷ್ಟು ನೀರು ಕುಡಿಯಬೇಕು?
ನೀರು ನಮ್ಮೊಳಗಿನ ಎಲ್ಲ ಕಲ್ಮಶಗಳನ್ನು ಹೊರಗಟ್ಟುತ್ತದೆ. ಇದರಿಂದ ದೇಹ ಒಳಗಿನಿಂದ ಸ್ವಚ್ಛವಾಗುತ್ತದೆ. ಅದು ನಮ್ಮ ಚರ್ಮದ ಮೇಲೆ ಪ್ರತಿಫಲಿಸುತ್ತದೆ ಮತ್ತು ಆಗ ತ್ವಚೆಯೂ ಮೊಡವೆ, ಕಲೆಗಳಿಲ್ಲದೆ ಸ್ವಚ್ಛವಾಗಿದ್ದು ಹೊಳಪು ಪಡೆಯುತ್ತದೆ. ಇಂಥ ತ್ವಚೆ ಪಡೆಯಲು, ಯುಎಸ್ ಮೂಲದ ಅಕಾಡೆಮಿ ಆಫ್ ನ್ಯೂಟ್ರಿಷನ್ ಅಂಡ್ ಡಯೆಟಿಕ್ಸ್ ದಿನಕ್ಕೆ ಸುಮಾರು 15.5 ಕಪ್‌ಗಳು (ಪ್ರತಿ ಕಪ್‌ಗೆ 240 ಮಿಲಿ) ಅಥವಾ 3.7 ಲೀಟರ್ ಕುಡಿಯಬೇಕು ಎಂದು ಸಲಹೆ ನೀಡುತ್ತದೆ. ನಿಮ್ಮ ವ್ಯಾಯಾಮ, ಅನಾರೋಗ್ಯ, ಲಿಂಗ, ತೂಕ, ಉಪ್ಪು ಆಹಾರಗಳು, ಹಣ್ಣುಗಳು, ಹವಾನಿಯಂತ್ರಿತ ಪರಿಸರಗಳು ಮತ್ತು ಬೆವರುವಿಕೆಯಂತಹ ವಿಷಯಗಳ ಆಧಾರದ ಮೇಲೆ ನೀವು ಬೇಸ್‌ಲೈನ್‌ಗಿಂತ ಹೆಚ್ಚು ಅಥವಾ ಕಡಿಮೆ ಕುಡಿಯಬೇಕಾಗಬಹುದು.

ಇದ್ದ ಕೆಲಸ ಬಿಟ್ಟು 100 ಕೋಟಿ ರೂ. ಕಂಪನಿ ಕಟ್ಟಿದ 30ರ ಯುವತಿ; ತಾಯಿಯ ...
 

ನಿರ್ಜಲೀಕರಣದ ಚಿಹ್ನೆಗಳು
ಡಿಹೈಡ್ರೈಶನ್ ಆದಾಗ ಒತ್ತಡದ ತಲೆನೋವು, ಒಣ ಚರ್ಮ, ಒಣ ಬಾಯಿ, ಶುಷ್ಕ ಕೂದಲು, ಗಮನ ಕೇಂದ್ರೀಕರಿಸುವಲ್ಲಿ ತೊಂದರೆ, ಆಯಾಸ ಮತ್ತು ಗಾಢ ಬಣ್ಣದ ಮೂತ್ರ ಮುಂತಾದ ಸಮಸ್ಯೆಗಳು ತಲೆದೋರುತ್ತವೆ. ಅತಿಯಾದ ಡಿಹೈಡ್ರೇಶನ್ ನಿಮ್ಮ ದೇಹದಲ್ಲಿ ಕಡಿಮೆ ಮಟ್ಟದ ಸೋಡಿಯಂ, ಮೆದುಳಿನ ಊತದಿಂದಾಗಿ ಸಾವಿಗೆ ಕಾರಣವಾಗಬಹುದು. ಹಾಗಾಗಿ, ಬಾಯಾರಲು ಅವಕಾಶ ನೀಡಬಾರದು. ಪ್ರತಿ ಬಾರಿ ಮೂತ್ರವೂ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಆಗಾಗ ನೀರು ಕುಡಿಯುತ್ತಲೇ ಇರಬೇಕು. 

click me!