Kids Health : 9-5-2-1-0 ಸೂತ್ರದ ಬಗ್ಗೆ ನಿಮಗೆ ಗೊತ್ತಾ?

By Suvarna News  |  First Published Feb 20, 2023, 11:01 AM IST

ಇಂದಿನ ಮಕ್ಕಳೆ ನಾಳಿನ ಪ್ರಜೆಗಳು ಎನ್ನುತ್ತೇವೆ. ಹಾಗೆಯೇ ಇಂದಿನ ಉತ್ತಮ ಜೀವನ ಶೈಲಿಯೇ ನಾಳಿನ ಆರೋಗ್ಯ. ಮಕ್ಕಳು, ಮಕ್ಕಳಿರುವಾಗ್ಲೇ ಒಳ್ಳೆ ಅಭ್ಯಾಸ ರೂಢಿಸಿಕೊಂಡ್ರೆ ನಿರೋಗಿಗಳಾಗಿ ಜೀವನ ನಡೆಸಬಹುದು. 
 


ದಿನಚರಿ, ಊಟ, ನಿದ್ದೆ, ಟಿವಿ ಎಲ್ಲವನ್ನೂ ಒಂದು ನಿಯಮದ ಪ್ರಕಾರ ಮಾಡಬೇಕು. ಟೈಮ್ ಟೇಬಲ್ ಸೆಟ್ ಮಾಡಬೇಕು ಎಂದು ದಿನವೂ ಅಂದುಕೊಳ್ತೇವೆ. ಆದರೆ ಮಕ್ಕಳ ತುಂಟತನ, ದೊಡ್ಡವರ ಆಲಸಿತನದ ನಡುವೆ ಯಾವ ಟೈಮ್ ಟೇಬಲ್ ಕೂಡ ಜಾರಿಗೆ ತರಲು ಸಾಧ್ಯವಾಗುವುದಿಲ್ಲ. ಹಾಗೊಮ್ಮೆ ಕಷ್ಟಪಟ್ಟು ಜಾರಿಗೊಳಿಸಿದರೂ ಅದು ಬಹಳ ದಿನ ಮುಂದುವರೆಯುವುದು ಕಷ್ಟ. ಆದ್ರೆ 9-5-2-1-0 ಸೂತ್ರ ಜಾರಿಗೆ ತಂದ್ರೆ ಸಾಕಷ್ಟು ಲಾಭವಿದೆ. ನಾವಿಂದು ಮಕ್ಕಳಿಗೆ ಅನುಸರಿಸಬೇಕಾದ 9-5-2-1-0 ಸೂತ್ರದ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಏನಿದು 9-5-2-1-0 ಸೂತ್ರ (Formula)? : ಮಕ್ಕಳು (Children) ಹಾಗೂ ಮನೆಯವರ ದಿನಚರಿಗಳು ಸಮಯಕ್ಕೆ ಸರಿಯಾಗಿ ನಡೆಯಲು 9-5-2-1-0 ಸೂತ್ರ ಬಹಳ ಪ್ರಯೋಜನಕಾರಿಯಾಗಿದೆ. ಸಾಮಾಜಿಕ ಕಾರ್ಯಕರ್ತರ ಸಂಸ್ಥೆ ಸುರಕ್ಷಿತ ಮತ್ತು ಆರೋಗ್ಯ (Health) ಕರ ಮಕ್ಕಳ ಒಕ್ಕೂಟವು ಈ ಹೊಸ ಫಾರ್ಮುಲಾವನ್ನು ಜಾರಿಗೆ ತಂದಿದೆ. ಈ ಸೂತ್ರ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿವಿಧ ಅಂಶಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಈ ಸೂತ್ರದಡಿ ಮಕ್ಕಳ ಆಹಾರದ ಸಮಯ, ಆಟ (Game)ದ ಸಮಯ, ಟಿವಿ, ಮೊಬೈಲ್ ನೋಡುವ ಸಮಯ, ಯಾವ ಸಮಯದಲ್ಲಿ ಎಂತಹ ಆಹಾರ ತೆಗೆದುಕೊಳ್ಳಬೇಕು ಎಂಬುದನ್ನು ನಿಖರವಾಗಿ ಹೇಳಲಾಗಿದೆ.  

Tap to resize

Latest Videos

9 ಅಂದ್ರೆ ಪ್ರತಿನಿತ್ಯ 9 ಗಂಟೆ ನಿದ್ರೆ ಅವಶ್ಯಕ : ಸೂತ್ರದಲ್ಲಿನ 9 ಎನ್ನುವುದು ಮಕ್ಕಳ ನಿದ್ದೆಯ ಸಮಯವನ್ನು ಸೂಚಿಸುತ್ತದೆ. ಒಳ್ಳೆಯ ನಿದ್ರೆ ಮಕ್ಕಳ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ. ಮಕ್ಕಳು ಒಂಭತ್ತು ಗಂಟೆಗಿಂತಲೂ ಕಡಿಮೆ ನಿದ್ದೆ ಮಾಡಿದರೆ ಅದು ಅವರ ಏಕಾಗ್ರತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಡಿಮೆ ನಿದ್ದೆ ಫುಡ್ ಕ್ರೇವಿಂಗ್ ಅನ್ನು ಹೆಚ್ಚಿಸುತ್ತದೆ. ಇದರಿಂದ ಮಕ್ಕಳು ಜಂಕ್ ಫುಡ್ ಗಳನ್ನು ಹೆಚ್ಚು ತಿನ್ನಲು ಆರಂಭಿಸುತ್ತಾರೆ. ಹಾಗಾಗಿ ಮಕ್ಕಳು ಒಂಭತ್ತು ಗಂಟೆ ನಿದ್ದೆ ಮಾಡಲೇಬೇಕು.

Lung Cancer: ಹೇಗೆ ಬೇಕಾದರೂ ಬರಬಹುದು, ಬಾರದಂತೆ ಹೀಗ್ ಮಾಡಿ!

5 ಅಂದ್ರೆ ದಿನಕ್ಕೆ 5 ಬಾರಿ ಹಣ್ಣು ತರಕಾರಿ ಸೇವನೆ : ಮಕ್ಕಳಾಗಲಿ ಇಲ್ಲ ದೊಡ್ಡವರಾಗಲಿ ದಿನಕ್ಕೆ 5 ಬಾರಿ ಹಣ್ಣು ಅಥವಾ ತರಕಾರಿಯನ್ನು ತಿನ್ನಬೇಕು. ಇದರಿಂದ ಬೊಜ್ಜಿಗೆ ಸಂಬಂಧಿಸಿದ ಖಾಯಿಲೆಗಳು, ಡಯಾಬಿಟೀಸ್ ಮತ್ತು ಹೃದಯ ಸಂಬಂಧಿ ರೋಗಗಳನ್ನು ನಿಯಂತ್ರಿಸಬಹುದು. ಹಣ್ಣುಗಳಲ್ಲಿ ಬಾಳೆಹಣ್ಣು, ಸೇಬು, ಕಿತ್ತಳೆ ಮುಂತಾದವುಗಳನ್ನು ನೀವು ಸೇವಿಸಬಹುದು. ಇದೇ ರೀತಿ ಕಾಲು ಕಪ್ ನಷ್ಟು ಡ್ರೈ ಫ್ರುಟ್ಸ್ ಗಳನ್ನು ಅಥವಾ ಒಂದು ಕಪ್ ನಷ್ಟು ಹೆಚ್ಚಿದ ತರಕಾರಿಗಳನ್ನು ಕೂಡ ನೀವು ಸೇವಿಸಬೇಕು.

2 ಅಂದ್ರೆ 2 ಗಂಟೆಗಿಂತ ಹೆಚ್ಚು ಕಾಲ ಸ್ಕ್ರೀನ್ ನೋಡ್ಬೇಡಿ : ಇತ್ತೀಚಿಗೆ ಪುಟ್ಟ ಮಗುವಿನಿಂದ ಹಿಡಿದು ದೊಡ್ಡ ಮಕ್ಕಳವರೆಗೆ ಎಲ್ಲರೂ ಮೊಬೈಲ್ ಗೆ ಮಾರುಹೋಗುತ್ತಿದ್ದಾರೆ. ಇದು ಮಕ್ಕಳ ಕಣ್ಣು ಮತ್ತು ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಮಕ್ಕಳಲ್ಲಿ ಆಲಸ್ಯ, ಬೊಜ್ಜಿನ ಸಮಸ್ಯೆ, ನಿದ್ರೆಯ ಸಮಸ್ಯೆ ಕೂಡ ತಲೆದೋರುತ್ತದೆ. ಹಾಗಾಗಿ ಮಕ್ಕಳ ಸ್ಕ್ರೀನ್ ಟೈಮಿಂಗ್ ಅನ್ನು ಆದಷ್ಟು ಕಡಿಮೆಗೊಳಿಸೋದು ಉತ್ತಮ.

1 ಅಂದ್ರೆ ದಿನವೂ ಒಂದು ಗಂಟೆ ವ್ಯಾಯಾಮ : ನೀವು ಎಷ್ಟೇ ಬ್ಯುಸಿಯಾಗಿದ್ದರೂ ಕೂಡ ನಿಮ್ಮ ಅಮೂಲ್ಯ ಸಮಯದ ಒಂದು ಗಂಟೆಯನ್ನು ವ್ಯಾಯಾಮಕ್ಕೆ, ಫಿಸಿಕಲ್ ಎಕ್ಟಿವಿಟಿಗೋಸ್ಕರ ಮೀಸಲಿಡಿ. ವ್ಯಾಯಾಮದಿಂದ ಡಿಪ್ರೆಶನ್, ಒತ್ತಡದಂತಹ ಸಮಸ್ಯೆಗಳು ದೂರವಾಗುತ್ತವೆ. ವ್ಯಾಯಾಮದಿಂದ ಏಕಾಗ್ರತೆ, ಪೊಸಿಟಿವ್ ಥಿಂಕಿಂಗ್ ಕೂಡ ಹೆಚ್ಚುತ್ತದೆ. ಮಕ್ಕಳು ಹೊರಗಡೆ ಆಡುವುದರಿಂದಲೂ ಅವರು ಎಕ್ಟಿವ್ ಆಗಿರುತ್ತಾರೆ.

Beauty Tips : ಬಣ್ಣ ಹಚ್ಚಿದ ಕೂದಲನ್ನು ಹೀಗೆ ಕೇರ್ ಮಾಡಿ

0 ಅಂದ್ರೆ ಆಹಾರದಲ್ಲಿ ಸಕ್ಕರೆ  ಅಂಶ ಶೂನ್ಯವಾಗಿರಲಿ : 9-5-2-1-0 ಸೂತ್ರದಲ್ಲಿ ಸೊನ್ನೆಗೆ ಬಹಳ ಮಹತ್ವವಿದೆ. ಈ ಸೂತ್ರದ ಪ್ರಕಾರ ಮಕ್ಕಳ ಆಹಾರದಲ್ಲಿ ಜಂಕ್ ಫುಡ್ ಮತ್ತು ಸಕ್ಕರೆಯ ಪಾನೀಯಗಳನ್ನು ಶೂನ್ಯಗೊಳಿಸಬೇಕಿದೆ. ಏಕೆಂದರೆ ಜಂಕ್ ಫುಡ್ ಗಳಿಂದ ಮಕ್ಕಳಲ್ಲಿ ಬೊಜ್ಜು ಹೆಚ್ಚುತ್ತದೆ. ಸಕ್ಕರೆಯ ಪಾನೀಯಗಳಿಂದ ಹಲ್ಲುಗಳಲ್ಲಿ ಕ್ಯಾವಿಟೀಸ್ ಉಂಟಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಈ ಆಹಾರ ಪದಾರ್ಥಗಳ ಬದಲಾಗಿ ನೀವು ಮನೆಯಲ್ಲೇ ತಯಾರಿಸಿದ ಪಾನೀಯ ಅಥವಾ ತಿಂಡಿಗಳನ್ನು ಮಕ್ಕಳಿಗೆ ನೀಡಿದರೆ ಅವರು ಆರೋಗ್ಯವಂತರಾಗುತ್ತಾರೆ.

click me!