ಬಾಳೆಹಣ್ಣು ಎಂದಾಕ್ಷಣ ಹಣ್ಣು, ಪಂಚಾಮೃತ, ಸ್ಮೂಥೀಸ್(Smoothies), ಹಲ್ವಾ(Halwa) ಹೀಗೆ ಹಲವು ರೀತಿಯಲ್ಲಿ ನೆನಪಾಗುತ್ತದೆ. ಊಟವಾದ ನಂತರ ಬಾಳೆಹಣ್ಣು ತಿನ್ನುವುದು ಹಿಂದಿನಿAದಲೂ ನಡೆದುಕೊಂಡು ಬಂದ ಸಂಪ್ರದಾಯ. ಪ್ರತೀ ದಿನ ಬಾಳೆಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಲಾಭವಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ವಿಶ್ವದಲ್ಲಿ ಅತಿ ಹೆಚ್ಚಾಗಿ ಹುಡುಕಾಟ ನಡೆಸುವ ಹಣ್ಣು ಎಂದರೆ ಬಾಳೆಹಣ್ಣು(Banana). ಏಕೆಂದರೆ ಇದೊಂದು ನೈಸರ್ಗಿಕ ಆರೋಗ್ಯವರ್ಧಕ ಮಾತ್ರವಲ್ಲದೆ ರುಚಿಕರವಾದ ಹಣ್ಣೂ ಸಹ ಹೌದು. ಬಾಳೆಹಣ್ಣು ಸೇವನೆಯಿಂದ ಪೋಷಕಾಂಶಗಳು ಸಿಗುವುದಲ್ಲದೆ, ತೂಕ ಕಡಿಮೆ, ಜೀರ್ಣಕ್ರಿಯೆ, ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ. ಬಾಳೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಂ ಹೊಂದಿದ್ದು, ಕೆಲವು ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳನ್ನು(Minerals) ಹೊಂದಿದೆ. ಇದು ಶೇ.6ರಷ್ಟು ಫೈಬರ್ ಅನ್ನು ಒದಗಿಸುತ್ತದೆ. ಅಲ್ಲದೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು ಮತ್ತು ದೇಹದ ಸಮತೋಲನ ಕಾಪಾಡಿಕೊಳ್ಳುತ್ತದೆ. ವಾಸ್ತವವಾಗಿ ಕೇವಲ ಒಂದು ಬಾಳೆಹಣ್ಣು ದೈನಂದಿನ ಸೇವನೆಯಲ್ಲಿ ಶೇ.9ರಷ್ಟು ಪೊಟ್ಯಾಸಿಯಂ(Potassium) ಮತ್ತು ಶೇ.8ರಷ್ಟು ಮೆಗ್ನೀಸಿಯಂ(Magnesium) ಅನ್ನು ನೀಡುತ್ತದೆ. ಹಾಗಾದರೆ ಬಾಳೆಹಣ್ಣು ಸೇವನೆಯಿಂದ ಆರೋಗ್ಯದ ಮೇಲಾಗುವ ಪ್ರಯೋಜನಗಳು ಇಲ್ಲಿವೆ.
1. ಪೋಷಕಾಂಶ ಭರಿತವಾಗಿದೆ(Protein)
ಒಂದು ಸಾಮಾನ್ಯ ಗಾತ್ರದ ಬಾಳೆಹಣ್ಣಿನಲ್ಲಿ ಸರಿಸುಮಾರು 112 ಕ್ಯಾಲೊರಿಗಳನ್ನು ಹೊಂದಿದೆ. ಇದರೊಂದಿಗೆ 0 ಗ್ರಾಂ ಕೊಬ್ಬು(Fat), 1 ಗ್ರಾಂ ಪ್ರೋಟೀನ್(Protein), 29 ಗ್ರಾಂ ಕಾರ್ಬೋಹೈಡ್ರೇಟ್(Carbohydrates) ಹಾಗೂ 3 ಗ್ರಾಂ ಫೈಬರ್(Fiber) ಅನ್ನು ಹೊಂದಿದೆ.
Children Health Tips: ಉತ್ತಮ ಆರೋಗ್ಯಕ್ಕೆ ಮಗುವಿಗೆ ನೀಡಿ ಬಾಳೆಹಣ್ಣಿನ ಸೆರೆಲಾಕ್
2. ರಕ್ತದಲ್ಲಿನ ಸಕ್ಕರೆ ಮಟ್ಟ ಸುಧಾರಣೆ(Blood Sugar Level)
ಹಸಿರು ಹಾಗೂ ಬಲಿಯದ ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್‌ಗಳು ಹೆಚ್ಚಾಗಿದ್ದು, ನಿರೋಧಕ ಪಿಷ್ಟದ ರೂಪದಲ್ಲಿರುತ್ತವೆ. ಇದು ದೇಹವು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಅಜೀರ್ಣ ಫೈಬರ್ ಆಗಿದೆ. ಬಾಳೆಹಣ್ಣು ಬಹಳಷ್ಟು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದ್ದರೂ ಸಹ, ಅವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದಿಲ್ಲ. ಅದಾಗ್ಯೂ, ಮಧುಮೇಹ(Diabetes) ಹೊಂದಿರುವವರು ಒಂದೇ ಬಾರಿಗೆ ಹೆಚ್ಚು ಬಾಳೆಹಣ್ಣು ತಿನ್ನಬಾರದು ಎಂದು ಹೇಳುತ್ತಾರೆ.
3. ಜೀರ್ಣಕ್ರಿಯೆ ಸುಲಭಗೊಳಿಸುತ್ತದೆ (Easy Digestion)
ಬಾಳೆಹಣ್ಣಿನಲ್ಲಿ ಡಯೆಟರಿ ಫೈಬರ್ (Dietary Fiber) ಇದ್ದು, ಇದು ಸುಧಾರಿತ ಜೀರ್ಣಕ್ರಿಯೆ ಸೇರಿದಂತೆ ಅನೇಕ ಆರೋಗ್ಯ ಪ್ರಯೋಜನಗಳಿಗೆ ಸಂಬAಧಿಸಿದೆ. ಮಧ್ಯಮ ಗಾತ್ರದ ಬಾಳೆಹಣ್ಣು ಸುಮಾರು 3 ಗ್ರಾಂಗಳಷ್ಟು ಫೈಬರ್‌ಅನ್ನು ಒದಗಿಸುತ್ತದೆ. ನಿರೋಧಕ ಪಿಷ್ಟವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಫೈಬರ್ ಜೀರ್ಣಕ್ರಿಯೆಯನ್ನು ತಪ್ಪಿಸುತ್ತದೆ ಮತ್ತು ದೊಡ್ಡ ಕರುಳಿಗೆ(Large intustine) ಹೋಗುತ್ತದೆ. ಅಲ್ಲಿ ಅದು ಕರುಳಿನಲ್ಲಿರುವ ಪ್ರಯೋಜನಕಾರಿ ಬ್ಯಾಕ್ಟೀರಿಯಾಕ್ಕೆ(Bacteria) ಆಹಾರವಾಗುತ್ತದೆ.
4. ತೂಕ ನಷ್ಟ(Weight Loss)
ಬಾಳೆಹಣ್ಣು ಡಯೆಟ್ ಫ್ರೆಂಡ್ಲಿ(Diet Friendly) ಹಣ್ಣಾಗಿದೆ. ಏಕೆಂದರೆ ಇದರಲ್ಲಿನ ಕಡಿಮೆ ಕ್ಯಾಲೋರಿ(Calorie), ಪೌಷ್ಟಿಕಾಂಶಗಳನ್ನು ಹೊಂದಿದ್ದು ತೂಕ ನಷ್ಟಕ್ಕೆ ಸಹಕಾರಿಯಾಗಿದೆ. ಅಲ್ಲದೆ ತರಕಾರಿ(Vegetables) ಮತ್ತು ಹಣ್ಣುಗಳಿಂದ(Fruits) ಹೆಚ್ಚಿನ ಫೈಬರ್ ಅನ್ನು ತಿನ್ನುವುದು ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಅನುಕೂಲಕರವಾಗಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಎಲ್ಲರೂ ಹೆಚ್ಚಿಗೆ ತಿನ್ನೋ ಹಣ್ಣು, ಬೇಗ ಹಾಳಾಗಬಾರದು ಅಂದ್ರೆ ಹೀಗ್ ಮಾಡಿ
5. ಹೃದಯದ ಆರೋಗ್ಯ ಸುಧಾರಣೆ (Heart Disease)
ಪೊಟ್ಯಾಸಿಯಮ್ ಹೃದಯದ ಆರೋಗ್ಯಕ್ಕೆ, ವಿಶೇಷವಾಗಿ ರಕ್ತದೊತ್ತಡ ನಿರ್ವಹಣೆಗೆ ಮುಖ್ಯವಾದ ಖನಿಜವಾಗಿದೆ. ಸಾಮಾನ್ಯವಾಗಿ ಜನರು ಆಹಾರದಿಂದ ಸಾಕಷ್ಟು ಪೊಟ್ಯಾಸಿಯಂ ಪಡೆಯುವುದಿಲ್ಲ. ಹಾಗೆಯೇ, ಸಾಕಷ್ಟು ಪೊಟ್ಯಾಸಿಯಮ್ ಹೊಂದುವ ಜನರು ಹೃದ್ರೋಗದ ಅಪಾಯವನ್ನು ಶೇ.27 ಕಡಿಮೆ ಹೊಂದಿರುತ್ತಾರೆ. ಹೆಚ್ಚುವರಿಯಾಗಿ, ಬಾಳೆಹಣ್ಣಿನಲ್ಲಿ ಶೇ.8ರಷ್ಟು ಮೆಗ್ನೀಸಿಯಂ(Magnesium) ಹೊಂದಿದೆ. ಇದು ಹೃದಯದ ಆರೋಗ್ಯಕ್ಕೆ ಮುಖ್ಯವಾದ ಮತ್ತೊಂದು ಖನಿಜವಾಗಿದೆ. ಮೆಗ್ನೀಸಿಯಮ್ ಕೊರತೆಯು ಹೃದ್ರೋಗ, ಅಧಿಕ ರಕ್ತದೊತ್ತಡ(High Blood pressure) ಮತ್ತು ರಕ್ತದಲ್ಲಿನ ಹೆಚ್ಚಿನ ಮಟ್ಟದ ಕೊಬ್ಬಿನ ಅಪಾಯವನ್ನು ಹೆಚ್ಚಿಸಬಹುದು.
6. ಹಸಿವು ನೀಗಿಸುತ್ತದೆ
ಹಸಿವಾದಾಗ ಒಂದು ಬಾಳೆಹಣ್ಣು ಸೇವಿಸಿದರೆ ಹಸಿವು ನೀಗುತ್ತದೆ. ಏಕೆಂದರೆ ಬಾಳೆಹಣ್ಣಿನಲ್ಲಿ ಕರಗುವ ಫೈಬರ್ ಉತ್ತಮವಾಗಿದೆ. ಹಾಗಾಗಿ ಇದು ಜೀರ್ಣಕ್ರಿಯೆಯನ್ನು ಸುಲಭವಾಗಿಸುತ್ತದೆ. ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಮೂಲಕ ಹೊಟ್ಟೆ ತುಂಬಿದಂತೆ ಅನಿಸುತ್ತದೆ. ಪ್ರೋಟೀನ್ ಸಿಗುವುದಲ್ಲದೆ ಇದರಲ್ಲಿ ಪೋಷಕಾಂಶಗಳು ಕಡಿಮೆ ಪ್ರಮಾಣದಲ್ಲಿದೆ. ಹಾಗಾಗಿ ಹಸಿವಿನ ವಿರುದ್ಧ ಹೋರಾಡಲು ಮೊಸರಿಗೆ ಹೋಳು ಮಾಡಿದ ಬಾಳೆಹಣ್ಣನ್ನು ಸೇರಿಸಿ ಅಥವಾ MilkShake ರೀತಿ ಸೇವಿಸಿ.
7. ಮೂತ್ರಪಿಂಡದ ಆರೋಗ್ಯ ಸುಧಾರಣೆ (Kidney)
ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಪೊಟ್ಯಾಸಿಯಮ್ ಬಹಳ ಮುಖ್ಯ. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಂ ಉತ್ತಮವಾಗಿದೆ. ಇದು ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಆರಂಭಿಕ ಹಂತದ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ 5,000 ಕ್ಕೂ ಹೆಚ್ಚು ಜನರಲ್ಲಿ ಅಧ್ಯಯನ ನಡೆಸಿದ್ದು, ಕಡಿಮೆ ಪೊಟ್ಯಾಷಿಯಂನಿಂದ ಕಡಿಮೆ ರಕ್ತದೊತ್ತಡ (Blood Pressure) ಮತ್ತು ಮೂತ್ರಪಿಂಡದ ಕಾಯಿಲೆಯ ನಿಧಾನಗತಿಯ ಪ್ರಗತಿಗೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ. ಹಾಗಾಗಿ ಆಹಾರದಲ್ಲಿ ಪೊಟ್ಯಾಸಿಯಂ ಹೆಚ್ಚಿರುವ ಹಣ್ಣು, ಆಹಾರಗಳನ್ನು ಸೇವಿಸಿ.