ಈಗಿನ ದಿನಗಳಲ್ಲಿ ಚಿತ್ರವಿಚಿತ್ರ ರೋಗಗಳು ಪತ್ತೆಯಾಗ್ತಿವೆ. ಪ್ರಾಣಿ, ಕಲುಷಿತ ವಾತಾವರಣದಿಂದ ಮಾತ್ರವಲ್ಲ ಈಗ ಗಿಡಗಳಿಂದಲೂ ರೋಗ ಹರಡುತ್ತಿದೆ. ಕೊಲ್ಕತ್ತಾದಲ್ಲಿ ಗಿಡದಿಂದ ಹುಟ್ಟಿಕೊಂಡ ರೋಗವೊಂದು ಆಘಾತ ಉಂಟು ಮಾಡಿದೆ.
ಮನೆಯ ಸುತ್ತ ಮುತ್ತ ಚೆಂದದ ಗಿಡಗಳಿದ್ದರೆ ಮನೆಗೆ ಇನ್ನೂ ಹೆಚ್ಚಿನದಾದ ಕಳೆ ಬರುತ್ತದೆ. ತರಹೇವಾರಿಯ ಸಸ್ಯ, ಹೂವಿನ ಗಿಡಗಳಿಂದ ಮನಸ್ಸಿಗೂ ಸಂತೋಷ ಸಿಗುತ್ತೆ. ಈಗಂತು ಅನೇಕ ರೀತಿಯ ಹೊರಾಂಗಣ ಹಾಗೂ ಒಳಾಂಗಣ ಗಿಡಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಹೀಗೆ ಕಣ್ಮನ ಸೆಳೆಯುವ ಗಿಡಗಳಿಂದ ನಮಗೆ ರೋಗಗಳು ಬರುತ್ತವೆ ಎಂದರೆ ನೀವು ನಂಬುತ್ತೀರಾ?
ಆಶ್ಚರ್ಯ ಎನಿಸಿದರೂ ಇದು ನಿಜ. ಈ ಮೊದಲು ಮನುಷ್ಯನಿಂದ ಮನುಷ್ಯನಿಗೆ, ಪ್ರಾಣಿಯಿಂದ ಮನುಷ್ಯನಿಗೆ ರೋಗ (Disease) ಗಳು ಹರಡುತ್ತಿತ್ತು. ಇವುಗಳ ಹೊರತಾಗಿ ಕಲುಷಿತ ನೀರು, ಅಶುದ್ಧ ಗಾಳಿ, ಸುತ್ತಲಿನ ಮಲಿನ ಪರಿಸರ (Environment) ದಿಂದಲೂ ಸೋಂಕುಗಳು ಬರುತ್ತಿತ್ತು. ಆದರೆ ಈಗ ಮನುಷ್ಯ ಗಿಡಗಳಿಂದ ಕೂಡ ರೋಗಗ್ರಸ್ಥನಾಗುತ್ತಾನೆ ಎಂಬುದು ತಿಳಿದುಬಂದಿದೆ. ಕೋಲ್ಕತ್ತಾದ 61 ವರ್ಷದ ಸಸ್ಯ ತಜ್ಞ (Expert) ರೊಬ್ಬರು ಮೊಟ್ಟಮೊದಲ ಬಾರಿಗೆ ಶಿಲೀಂಧ್ರ ರೋಗಕ್ಕೆ ಬಲಿಯಾಗಿದ್ದಾರೆ.
Women Health : ಹೆರಿಗೆ ನಂತ್ರ ಮಮ್ಮಿ ಮೇಕ್ ಓವರ್ ಸರ್ಜರಿ ಮಾಡಿಸಿಕೊಳ್ಳೋದೇಕೆ?
ಇದು ಸಸ್ಯ ರೋಗ : ವರದಿಯ ಪ್ರಕಾರ ಈ ತಜ್ಞರು ಸಸ್ಯ ಮೈಕಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಸೋಂಕಿತ ವ್ಯಕ್ತಿ ಬಹಳ ವರ್ಷದಿಂದ ಕೊಳೆತ ಅಣಬೆಗಳು ಹಾಗೂ ವಿವಿಧ ಸಸ್ಯ ಶಿಲೀಂಧ್ರಗಳ ಸಂಶೋಧನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಹಲವು ವರ್ಷಗಳ ಶಿಲೀಂಧ್ರ ಸೋಂಕಿನಿಂದ ಈಗ ಅವರು ‘ಕೊಂಡ್ರೊಸ್ಟೆರಿಯಮ್ ಪರ್ಫ್ಯೂರಿಯಮ್’ ಗೆ ಸಂಕ್ರಮಿತರಾಗಿದ್ದರು. ವೈದ್ಯಲೋಕಕ್ಕೂ ಸವಾಲಾಗಿದ್ದ ಈ ರೋಗ ಸಸ್ಯಗಳಿಂದ ಹರಡುತ್ತದೆ ಎಂಬುದನ್ನು ವೈದ್ಯರು ಕೂಡ ಊಹಿಸಿರಲಿಲ್ಲ. ಈ ಫಂಗಸ್ ನಿಂದ ಗಿಡಗಳಲ್ಲಿ ಸಿಲ್ವರ್ ಲೀಫ್ ರೋಗ ಕಾಣಿಸಿಕೊಳ್ಳುತ್ತೆ.
ಸೋಂಕಿಗೆ ಒಳಗಾದ ವ್ಯಕ್ತಿಯಲ್ಲಿ ಕಾಣಿಸುವ ಲಕ್ಷಣಗಳು : ಸಸ್ಯ ಮೈಕಾಲಜಿಸ್ಟ್ ಆದ ವ್ಯಕ್ತಿಗೆ ಮೊದಲು ಗಡಸು ಧ್ವನಿ, ಕೆಮ್ಮು, ತೀವ್ರ ಸುಸ್ತಿನ ಅನುಭವ ಆಗುತ್ತಿತ್ತು. 61 ವರ್ಷದ ಆ ವ್ಯಕ್ತಿಗೆ ಆಹಾರ ಸೇವಿಸುವುದು ಕೂಡ ಕಷ್ಟವೇ ಆಗಿತ್ತು. ಗಂಟಲಿನಲ್ಲಿ ಪ್ಯಾರಾಟಾಶಿಯಲ್ ಅಂಶವನ್ನು ಹೊಂದಿದ್ದರಿಂದ ಇವರಿಗೆ ಗಂಟಲು ಕೆರೆತ ನೋವು ಮುಂತಾದ ಸಮಸ್ಯೆಗಳು ಆಗುತ್ತಿತ್ತು. ಇವರು ಡಯಾಬಿಟೀಸ್, ಮೂತ್ರಪಂಡದ ಖಾಯಿಲೆ ಮುಂತಾದ ಯಾವುದೇ ಖಾಯಿಲೆಯನ್ನು ಹೊಂದಿರಲಿಲ್ಲ ಹಾಗೂ ಇವರಿಗೆ ಯಾವುದೇ ರೀತಿಯ ಮಾದಕ ದ್ರವ್ಯ ಸೇವನೆಯ ಕೆಟ್ಟ ಅಭ್ಯಾಸಗಳು ಕೂಡ ಇರಲಿಲ್ಲ.
Women Health : ಎದೆ ಹಾಲಿನ ಬಣ್ಣದಿಂದ ಪತ್ತೆಯಾಯ್ತು ಕ್ಯಾನ್ಸರ್..!
ಸೋಂಕಿಗೆ ಒಳಗಾಗಿದ್ದು ಹೇಗೆ? : ಸಸ್ಯ ವಿಜ್ಞಾನಿಯಾಗಿದ್ದ ಇವರು ಅನೇಕ ವರ್ಷಗಳಿಂದ ಮೈಕಾಲಜಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಹಲವು ಸಸ್ಯಗಳ ಶಿಲೀಂಧ್ರಗಳ ಜೊತೆ ಬಹಳ ಸಮಯದಿಂದ ಕೆಲಸ ಮಾಡುವುದರಿಂದಲೇ ಇವರು ಈ ಶಿಲೀಂಧ್ರ ರೋಗಕ್ಕೆ ತುತ್ತಾಗಿದ್ದಾರೆ. ‘ಕೊಂಡ್ರೊಸ್ಟೆರಿಯಮ್ ಪರ್ಫ್ಯೂರಿಯಮ್’ ಗೆ ತುತ್ತಾದ ಇವರಿಗೆ ಎರಡು ತಿಂಗಳ ಕಾಲ ಎಂಟಿಫಂಗಲ್ ಮಾತ್ರೆಗಳನ್ನು ನೀಡಿದ ಮೇಲೆ ಅವರು ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಈ ರೋಗದ ಕುರಿತು ಕೆಲವು ಮಾಹಿತಿ : ಸಿಲ್ವರ್ ಲೀಫ್ ಫಂಗಸ್ ಖಾಯಿಲೆಯು ಗುಲಾಬಿ ಗಿಡದ ಜಾತಿಗೆ ಸೇರಿದ ಗಿಡಗಳಲ್ಲಿ ಹೆಚ್ಚು ಕಂಡುಬರುತ್ತವೆ. ಈ ಫಂಗಸ್ ಗೆ ತುತ್ತಾದ ಗಿಡದ ಎಲೆಗಳು ಬೆಳ್ಳಿಯ ಬಣ್ಣಕ್ಕೆ ತಿರುಗುತ್ತವೆ. ಇಂತಹ ಫಂಗಸ್ ಕಣ್ಣಿಗೆ ಕಾಣದ ಸೂಕ್ಷ್ಮಜೀವಿಗಳಾಗಿರುವುದರಿಂದ ಅವು ಕಣ್ಣಿಗೆ ಕಾಣಿಸುವುದಿಲ್ಲ. ಇಂತಹ ಫಂಗಸ್ ಗಳು ಮನುಷ್ಯನ ಶರೀರವನ್ನು ಸೇರಿ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತವೆ. ನಿತ್ಯ ಜೀವನದಲ್ಲಿ ಕೂಡ ನಾವು ನಮ್ಮ ಶರೀರಕ್ಕೆ ಹಾನಿಮಾಡುವ ಅಥವಾ ತುರಿಕೆ, ಚರ್ಮದ ದದ್ದುಗಳನ್ನು ಉಂಟುಮಾಡುವ ಅನೇಕ ಗಿಡಗಳನ್ನು ನೋಡುತ್ತೇವೆ. ಇದರ ಹೊರತಾಗಿ ಹೆಚ್ಚು ತೇವಾಂಶ ಇರುವ ಕಡೆಗಳಲ್ಲಿ ಕೂಡ ಫಂಗಸ್ ಬೆಳೆಯುತ್ತದೆ. ಒದ್ದೆ ಬಟ್ಟೆ, ಅತಿಯಾದ ಡಿಯೋಡ್ರಂಟ್ ಗಳ ಬಳಕೆಯಿಂದ ಕೂಡ ಫಂಗಸ್ ಬಾಧಿಸುತ್ತೆ.