Congenital Heart Disease ಪ್ರಕರಣಗಳು ಈಗೀಗ ಹೆಚ್ಚಾಗುತ್ತಿದ್ದು, ಇದಕ್ಕೆ ಏನೇ ಕಾರಣಗಳಿದ್ದರೂ ಭ್ರೂಣದಲ್ಲಿ ಪತ್ತೆ ಹಚ್ಚುವುದು ಮಾತ್ರವಲ್ಲ, ಸೂಕ್ತ ಚಿಕಿತ್ಸೆಯೂ ನೀಡಬಹುದು ಎಂಬುವುದು ಸಮಾಧಾನದ ಸಂಗತಿ.
ಭ್ರೂಣದಲ್ಲಿರುವಾಗಲೇ ಮಗುವನ್ನು ಕಾಡುವ ಹೃದಯದ ಸಮಸ್ಯೆನ್ನು ಜನ್ಮಜಾತ ಹೃದ್ರೋಗ ಎನ್ನುತ್ತಾರೆ. ಮಗುವಿನ ಸಾವಿಗೂ ಕಾರಣವಾಗಬಹುದಾದ ಈ ಸಮಸ್ಯೆನ್ನು ಹುಟ್ಟುವ ಮೊದಲೇ ಬರೀ ಪತ್ತೆ ಹಚ್ಚುವುದು ಮಾತ್ರವಲ್ಲ, ಅದಕ್ಕೆ ಸೂಕ್ತ ಚಿಕಿತ್ಸೆಯನ್ನೂ ಕೊಡಬಹುದು ಅನ್ನೋದು ಸಮಾಧಾನದ ಸಂಗತಿ. ಇಂಥದ್ದೊಂದು ಹೃದಯ ಸಮಸ್ಯೆ ಕಾಣಿಸಿಕೊಳ್ಳಲು ಕಾರಣಗಳು ಏನೇನು, ತಡೆಯೋದು ಹೇಗೆ? ಇಲ್ಲಿದೆ ಮಾಹಿತಿ.
ಕಾರಣಗಳು:
undefined
ಆನುವಂಶಿಕ ಅಂಶಗಳು: ಕುಟಂಬದಲ್ಲಿ ಅಥವಾ ಪೂರ್ವಿಕರಲ್ಲಿ ಹೃದಯ ಸಂಬಂಧಿ ರೋಗಗಳಿದ್ದರು, ಇದು ಹುಟ್ಟುವ ಮಗುವಿಗೆ ಕಾಡುವ ಸಾಧ್ಯತೆ ಹೆಚ್ಚು. ಸಾಮಾನ್ಯವಾಗಿ ಕುಟುಂಬದಲ್ಲಿ ಹತ್ತಿರವಿದ್ದವರಿಗೆ ಈ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.
ಪರಿಸರ ಅಂಶಗಳು: ಗರ್ಭಾವಸ್ಥೆಯಲ್ಲಿ ವಿಷಕಾರಿ ವಸ್ತುಗಳು ಅಂದರೆ ಅಮ್ಮ ಸಿಗರೇಟು ಸೇದುವುದು, ಕುಡಿಯೋದು ಮಾಡುವುದಲ್ಲದೇ ಕೆಲವು ಸೋಂಕುಗಳಿಗೆ ತುತ್ತಾದರೂ ಮಕ್ಕಳಲ್ಲಿ ಹೃದಯ ಸಮಸ್ಯೆ ಕಾಣಿಸುವ ಸಾದ್ಯತೆ ಹೆಚ್ಚು. ಪರಿಸರ ಮಾಲಿನ್ಯವೂ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಅದೂ ಸಮಸ್ಯೆಗೆ ಕಾರಣವೆನ್ನಲಾಗುತ್ತದೆ.
ಕ್ರೋಮೋಸೋಮಲ್ ಅಸಹಜತೆ: ಡೌನ್ ಸಿಂಡ್ರೋಮ್ ಅಥವಾ ಟರ್ನರ್ ಸಿಂಡ್ರೋಮ್ ಇದ್ದರೂ ಮಗುವಿಗೆ ಹೃದ್ರೋಗ ಕಾಣಿಸಿಕೊಳ್ಳಬಹುದು.
ಅಮ್ಮನ ಆರೋಗ್ಯ: ಗರ್ಭಾವಸ್ಥೆಯಲ್ಲಿ ಅಮ್ಮನ ಆರೋಗ್ಯ ಹದಗೆಟ್ಟಿದ್ದಲ್ಲದೇ, ಮಗುವಿಗೆ ಅಪಾಯವಾಗುವಂಥ ಕೆಲವು ಔಷಧಿಗಳನ್ನು ತಿಂದರೂ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲದು. ಅನಿಯಂತ್ರಿತ ಮಧುಮೇಹವೋ ಅಥವಾ ಬೊಜ್ಜು ಇದ್ದರೆ ಹುಟ್ಟುವ ಮಗುವಿನಲ್ಲಿ CHD ಬೆಳವಣಿಗೆಗೆ ಕಾರಣವಾಗಬಹುದು
ಔಷಧಗಳು: ಗರ್ಭಾವಸ್ಥೆಯಲ್ಲಿ ತಾಯಿ ಬಳಸುವ ಕೆಲವು ಔಷಧ ಭ್ರೂಣದ ಬೆಳವಣಿಗೆಗೆ ಅಡ್ಡಿಯಾಗಬಹುದು ಮತ್ತು CHD ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಮುನ್ನೆಚ್ಚರಿಕೆಗಳು:
ನಿಯಮಿತ ಪ್ರಸೂತಿ ತಪಾಸಣೆ: ನಿರೀಕ್ಷಿತ ತಾಯಂದಿರು ನಿಯಮಿತ ಪ್ರಸೂತಿ ತಪಾಸಣೆಗೆ ಹಾಜರಾಗುವುದು ಬಹಳ ಮುಖ್ಯ. ಈ ಭೇಟಿ ಆರೋಗ್ಯ ಪೂರೈಕೆದಾರರು ಮಗುವಿನ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಯಾವುದೇ ಸಂಭಾವ್ಯ ಸಮಸ್ಯೆಗಳನ್ನು ಮೊದಲೇ ಪತ್ತೆ ಹಚ್ಚಲು ಅನುವು ಮಾಡಿಕೊಡುತ್ತದೆ.
ಆರೋಗ್ಯಕರ ಜೀವನಶೈಲಿ (Healthy Lifestyle): ಗರ್ಭಧಾರಣೆಯ ಮೊದಲು ಮತ್ತು ನಂತರ ಆರೋಗ್ಯಕರ ಜೀವನಶೈಲಿ ಕಾಪಾಡಿಕೊಂಡರೆ CHD ಅಪಾಯವನ್ನು ಕಡಿಮೆ ಮಾಡುತ್ತದೆ. ಸಮತೋಲಿತ ಆಹಾರ ಸೇವನೆ. ದೈಹಿಕವಾಗಿ ಸಕ್ರಿಯವಾಗಿರುವುದು ಮತ್ತು ಮದ್ಯ ಮತ್ತು ತಂಬಾಕಿನಂತಹ ಹಾನಿಕಾರಕ ಪದಾರ್ಥಗಳನ್ನು ತಪ್ಪಿಸಿದರೆ ಭ್ರೂಣ ಆರೋಗ್ಯವಾಗಿರುತ್ತದೆ.
ಜೆನೆಟಿಕ್ ಕೌನ್ಸೆಲಿಂಗ್: CHD ಅಥವಾ ಇತರೆ ಆನುವಂಶಿಕ ಪರಿಸ್ಥಿತಿಗಳ ಕುಟುಂಬದ ಇತಿಹಾಸವಿದ್ದರೆ, ಆನುವಂಶಿಕ ಕೌನ್ಸೆಲಿಂಗ್ ಮೊರೆ ಹೋಗುವುದು ಒಳ್ಳೇಯದು. ಗರ್ಭ ಧರಿಸೋ ಮುನ್ನ ವೈದ್ಯರ ಸಲಹೆಯಂತೆ ಅಗತ್ಯ ಕ್ರಮಗಳನ್ನು ಕೈಗೊಂಡರೆ ಸಂಭವಿಸಬಹುದಾದ ಅಪಾಯವನ್ನು ತಡೆಯಬಹುದು.
ದೀರ್ಘಕಾಲದ ಆನಾರೋಗ್ಯವಿದ್ದರೆ: ಮಧುಮೇಹ (Diabetic) ಅಥವಾ ಅಧಿಕ ರಕ್ತದೊತ್ತಡದಂತಹ (High Blood Pressure) ಸೇರಿ ದೀರ್ಘಕಾಲದ ಆರೋಗ್ಯ ಸ್ಥಿತಿಗಳನ್ನು ಹೊಂದಿರುವ ಮಹಿಳೆಯರು ಗರ್ಭಾವಸ್ಥೆಯಲ್ಲಿ ಈ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ತಮ್ಮ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ಸೂಚನೆಗಳನ್ನು ಫಾಲೋ ಮಾಡಬೇಕು.
ದುಶ್ಚಟಗಳಿಗೆ ಹೇಳಿ ಬೈ: ಗರ್ಭಿಣಿಯರು ತಂಬಾಕು ಹೊಗೆ, ಕೆಲವು ಔಷಧಿ ಮತ್ತು ಬೆಳೆಯುತ್ತಿರುವ ಭ್ರೂಣಕ್ಕೆ ಹಾನಿ ಮಾಡುವ ಪರಿಸರ ಮಾಲಿನ್ಯ, ಹಾನಿಕಾರಕ ಪದಾರ್ಥಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು.
ಆರಂಭಿಕ ಮಧ್ಯಸ್ಥಿಕೆ ಮತ್ತು ಚಿಕಿತ್ಸೆ: ಮಗುವಿನಲ್ಲಿ CHD ಪತ್ತೆಯಾದರೆ, ಆರಂಭದಲ್ಲಿಯೇ ಅಲರ್ಟ್ ಆಗೋದು ಒಳಿತು. ಸೂಕ್ತಿ ಚಿಕಿತ್ಸೆ ವೊರೆ ಹೋಗಬೇಕಾಗುತ್ತದೆ. ಹೃದಯ ದೋಷಗಳನ್ನು ಸರಿಪಡಿಸಲು ಮತ್ತು ಮಗುವಿನ ಒಟ್ಟಾರೆ ಆರೋಗ್ಯ ಸುಧಾರಿಸಲು ಇದು ಅತ್ಯಗತ್ಯ. ಶಸ್ತ್ರಚಿಕಿತ್ಸೆ ಮೂಲಕವೂ ಪರಿಸ್ಥಿತಿಯನ್ನು ಸುಧಾರಿಸಬಹುದು.
ಗಂಭೀರ ಪರಿಣಾಮ ಬೀರುವಂಥ ಈ ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ಗುರುತಿಸಿ, ಅಗತ್ಯ ಚಿಕಿತ್ಸೆ ನೀಡುವುದು ಅತ್ಯಗತ್ಯ. ಅಕಸ್ಮಾತ್ ಮಗು ಈ ಸಿಎಚ್ಡಿಯಿಂದ ಬಳಲುತ್ತಿದೆ ಎಂಬ ಸತ್ಯ ಗೊತ್ತಾದಾಗ ಪ್ಯಾನಿಕ್ ಆಗುವ ಅಗತ್ಯವಿಲ್ಲ. ಭ್ರೂಣಕ್ಕೆ ಚಿಕಿತ್ಸೆ ನೀಡುವ ಮೂಲಕವೋ ಅಥವಾ ಹುಟ್ಟಿದ ಕೂಡಲೇ ಶಸ್ತ್ರ ಚಿಕಿತ್ಸೆ ಮಾಡಿಸುವುದರಿಂದ ರೋಗಕ್ಕೆ ಮುಕ್ತಿ ಹಾಬಹುದು.