
ನಾವಂತೂ ಪ್ರತಿ ದಿನ ಸ್ನಾನ (Bath) ಮಾಡ್ತೇವೆ. ನೀವೂ ಪ್ರತಿ ದಿನ ಸ್ನಾನ ಮಾಡ್ತೀರೆಂದು ನಾವು ಭಾವಿಸಿದ್ದೇವೆ. ಸ್ನಾನ ಮಾಡೋದು ಆರೋಗ್ಯ (Health)ಕ್ಕೆ ಒಳ್ಳೆಯದು. ಕೆಲವರು ದಿನಕ್ಕೆ ಎರಡು ಬಾರಿ ಸ್ನಾನ ಮಾಡ್ತಾರೆ. ಮತ್ತೆ ಕೆಲವರು ವಾರಕ್ಕೆ ಐದು ದಿನ ಸ್ನಾನ ಮಾಡ್ತಾರೆ. ಸ್ನಾನ ಮಾಡೋದು ಅವರವರ ಆಯ್ಕೆ. ಆದ್ರೆ ಅತಿಯಾಗಿ ಬೆವರು (Sweat)ವವರು ಪ್ರತಿ ದಿನ ಸ್ನಾನ ಮಾಡುವ ಅಗತ್ಯವಿಲ್ಲವೆಂದೂ ಕೆಲವರು ಹೇಳ್ತಾರೆ. ಪ್ರತಿ ದಿನ ಸ್ನಾನ ಹಾಗೂ ಬೆವರಿನಿಂದಾಗಿ ದೇಹ (Body) ಶುಷ್ಕಗೊಳ್ಳುತ್ತದೆ. ಇದ್ರಿಂದ ತುರಿಕೆ ಸೇರಿದಂತೆ ಅನೇಕ ಚರ್ಮದ ಸಮಸ್ಯೆ ಕಾಡುತ್ತದೆ. ಚರ್ಮದ ಎಣ್ಣೆಯಂಶ ಕಡಿಮೆಯಾಗುತ್ತದೆ. ಸ್ನಾನವನ್ನು ಯಾವಾಗ ಬೇಕಾದ್ರೂ ಮಾಡಿ,ಮಾಡುವಾಗ ಸರಿಯಾಗಿ ಮಾಡಿ. ಯಾಕೆಂದ್ರೆ ಸ್ನಾನ ಮಾಡುವಾಗ ನಾವು ಮಾಡುವ ಕೆಲ ತಪ್ಪುಗಳು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸ್ನಾನ ಮಾಡುವಾಗ ಯಾವುದರ ಬಗ್ಗೆ ಕಾಳಜಿ ವಹಿಸಬೇಕೆಂಬುದನ್ನು ಇಂದು ಹೇಳ್ತೆವೆ.
ಸೋಪಿನ ಬಳಕೆ : ಆಂಟಿಬ್ಯಾಕ್ಟೀರಿಯಲ್ ಸಾಬೂನುಗಳು ನಮ್ಮ ದೇಹದಲ್ಲಿರುವ ಒಳ್ಳೆ ಬ್ಯಾಕ್ಟೀರಿಯಾವನ್ನು ಕೂಡ ಕೊಲ್ಲುತ್ತವೆ. ಅಲ್ಲದೆ ಈ ಸಾಬೂನುಗಳು ಚರ್ಮವನ್ನು ಒಣಗಿಸುತ್ತವೆ. ಹಾಗಾಗಿ ಸೌಮ್ಯವಾದ ಹಾಗೂ ಮಾಯಿಶ್ಚರೈಸರ್ ಹೊಂದಿರುವ ಸೋಪುಗಳನ್ನು ಬಳಕೆ ಮಾಡಿ. ಪರಿಮಳಯುಕ್ತ ಸೋಪುಗಳ ಬಳಕೆಯನ್ನು ಕಡಿಮೆ ಮಾಡಿ.
ಮಾಯಿಶ್ಚರೈಸರ್ ಬಳಕೆ : ಅನೇಕರು ಸ್ನಾನ ಮಾಡಿದ ತಕ್ಷಣ ಮಾಯಿಶ್ಚರೈಸರ್ ಕ್ರೀಂ ಬಳಕೆ ಮಾಡುವುದಿಲ್ಲ. ಸ್ನಾನವಾದ ಸ್ವಲ್ಪ ಸಮಯದ ನಂತ್ರ ಕ್ರೀಂ ಬಳಸ್ತಾರೆ. ಇದರಿಂದ ಪ್ರಯೋಜನವಿಲ್ಲ. ತಕ್ಷಣ ಕ್ರೀಂ ಬಳಸಿದ್ರೆ ಅದು ಚರ್ಮಕ್ಕೆ ಅಂಟಿಕೊಳ್ಳುತ್ತದೆ. ಚರ್ಮ ಬಿರುಕು ಬಿಡದಂತೆ ಕಾಪಾಡುತ್ತದೆ.
LOVE AND HEART: ಪ್ರೀತಿ ಮಾಡೋದು ಹೃದಯದ ಆರೋಗ್ಯಕ್ಕೆ ಡೇಂಜರ್ ಅಂತೆ..!
ಮೈ ಒರೆಸುವ ಟವೆಲ್ ನಲ್ಲಿದೆ ಆರೋಗ್ಯ : ಒದ್ದೆಯಾದ ಟವೆಲ್‌ಗಳು ಬ್ಯಾಕ್ಟೀರಿಯಾ, ಯೀಸ್ಟ್ ಗಳು ಮತ್ತು ವೈರಸ್‌ಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳವಾಗಿದೆ. ಕೊಳಕು ಟವೆಲ್ ನಿಂದಾಗಿ ಅನೇಕ ಚರ್ಮದ ಸಮಸ್ಯೆ ಕಾಡುತ್ತದೆ. ಇದನ್ನು ತಪ್ಪಿಸಲು ವಾರಕ್ಕೊಮ್ಮೆಯಾದರೂ ನಿಮ್ಮ ಟವೆಲ್ ಅನ್ನು ಸ್ವಚ್ಛಗೊಳಿಸಿ. ಶುದ್ಧ ನೀರಿನಲ್ಲಿ ಸ್ವಚ್ಛಗೊಳಿಸಿದ ಟವೆಲನ್ನು ಬಿಸಿಲಿನಲ್ಲಿ ಒಣಗಿಸಿ. ಒದ್ದೆಯಾದ ಟವೆಲನ್ನು ಎಲ್ಲೆಂದರಲ್ಲಿ ಇಡಬೇಡಿ.
ಲೂಫ್ ಸ್ವಚ್ಛತೆ : ಸ್ಕ್ರಬ್ಬಿಂಗ್ ಲೂಫ್ ಒಳ್ಳೆಯದು. ಅನೇಕರು ಇದನ್ನು ಬಳಸುತ್ತಾರೆ. ಆದ್ರೆ ಅದನ್ನು ಸ್ವಚ್ಛಗೊಳಿಸಲು ಜನರು ಮರೆಯುತ್ತಾರೆ. ಪ್ರತಿ ದಿನ ಲೂಫ್ ಕ್ಲೀನ್ ಮಾಡಬೇಕು. ಅದನ್ನು ಒಣ ಜಾಗದಲ್ಲಿಡುವುದು ಬಹಳ ಒಳ್ಳೆಯದು. ಇದ್ರ ಜೊತೆ ಸಾಮಾನ್ಯ ಲೂಫನ್ನು 3-4 ವಾರಕ್ಕೊಮ್ಮೆ ಹಾಗೂ ಪ್ಲಾಸ್ಟಿಕ್ ಲೂಫನ್ನು ಎರಡು ತಿಂಗಳಿಗೊಮ್ಮೆ ಬದಲಿಸಬೇಕು.
ಪ್ರತಿ ದಿನ ತಲೆ ಸ್ನಾನ : ಕೆಲವರು ಪ್ರತಿ ದಿನ ತಲೆ ಸ್ನಾನ ಮಾಡ್ತಾರೆ. ಮತ್ತೆ ಕೆಲವರು ಹೆಚ್ಚು ಶಾಂಪೂ ಬಳಸಿ ತಲೆ ಸ್ವಚ್ಛಗೊಳಿಸುತ್ತಾರೆ. ಆದ್ರೆ ಪ್ರತಿ ದಿನ ತಲೆ ಸ್ನಾನ ಮಾಡುವುದು ಒಳ್ಳೆಯದಲ್ಲ. ಹಾಗೆ ಅತಿ ಶಾಂಪೂ ಬಳಕೆ ಕೂಡ ಉತ್ತಮ ಮಾರ್ಗವಲ್ಲ. ವಾರದಲ್ಲಿ ಎರಡು ದಿನ ಮಾತ್ರ ತಲೆ ಸ್ನಾನ ಮಾಡುವುದು ಒಳ್ಳೆಯದು.
ಶವರ್ ಕ್ಲೀನಿಂಗ್ : ಶವರ್ ನಲ್ಲಿ ಸ್ನಾನ ಮಾಡುವ ನಾವು ಶವರ್ ಕ್ಲೀನಿಂಗ್ ಮರೆತಿರುತ್ತೇವೆ. ಶವರ್ ರಂಧ್ರದಲ್ಲಿ ಬ್ಯಾಕ್ಟೀರಿಯಾ ಸಂಗ್ರಹಗೊಂಡಿರುತ್ತದೆ. ಪ್ರತಿ ಬಾರಿ ಶವರ್ ಬಳಸುವ ಮೊದಲು ಒಂದು ನಿಮಿಷ ಶವರ್ ನಿಂದ ನೀರನ್ನು ಬಿಡಬೇಕು. ಇದ್ರಿಂದ ಶವರ್ ರಂಧ್ರದಲ್ಲಿರುವ ಬ್ಯಾಕ್ಟೀರಿಯಾ ಹೊರಗೆ ಹೋಗುತ್ತದೆ.
Easy Exercise: ಬಾತ್ ಟವೆಲ್ ಬಳಸಿಯೂ ವ್ಯಾಯಾಮ ಮಾಡ್ಬೋದು
ಕರ್ಟನ್ : ಸ್ನಾನದ ಮನೆಯಲ್ಲಿ ಅನೇಕರು ಕರ್ಟನ್ ಹಾಕಿರ್ತಾರೆ. ಈ ಕರ್ಟನ್ ನಲ್ಲಿ ಸಾಕಷ್ಟು ಬ್ಯಾಕ್ಟೀರಿಯಾ ಸಂಗ್ರಹವಾಗಿರುತ್ತದೆ. ಆಗಾಗ ಕರ್ಟನ್ ಸ್ವಚ್ಛಗೊಳಿಸಬೇಕು.
ಬಿಸಿ ನೀರಿನಲ್ಲಿ ಸ್ನಾನ : ಚಳಿಗಾಲದಲ್ಲಿ ಅನೇಕರು ಕುದಿರುವ ನೀರಿನಲ್ಲಿ ಸ್ನಾನ ಮಾಡ್ತಾರೆ. ಚಳಿಗಾಲವಿರಲಿ, ಇಲ್ಲ ಬೇಸಿಗೆಯಿರಲಿ ಅತಿಯಾದ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದಲ್ಲ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.