ನೆಗಡಿ ಬಂದಾಗ ಕಿರಿಕಿರಿಯಾಗೋದು ಸಾಮಾನ್ಯ. ಯಾಕಪ್ಪ ಈ ಶೀತ ಬರುತ್ತೆ ಅಂದುಕೊಳ್ತೇವೆ. ಆದ್ರೆ ವರ್ಷಕ್ಕೆ ಒಮ್ಮೆ ಅಥವಾ ಎರಡು ಬಾರಿ ನೆಗಡಿಯಾಗಿ ಮೂಗು ಸೋರುತ್ತಿದ್ದರೆ ಖುಷಿಪಡಿ. ಇದು ನಿಮ್ಮ ಉತ್ತಮ ಆರೋಗ್ಯದ ಲಕ್ಷಣ.
ನೆಗಡಿಯಾಗೋದು ಸಾಮಾನ್ಯ. ಅದ್ರಲ್ಲೂ ಮಕ್ಕಳಿಗೆ ಆಗಾಗ ನೆಗಡಿಯಾಗ್ತಿರುತ್ತದೆ. ಹಿಂದಿನ ಕಾಲದಲ್ಲಿ ಮಕ್ಕಳಿಗೆ ನೆಗಡಿಯಾಗಿದ್ರೆ ಅವರನ್ನು ಹಾಗೆ ಬಿಡ್ತಿದ್ದರು. ಮೂಗಿನಿಂದ ಸಿಂಬಳ ಹೋಗಿ ಮೂರ್ನಾಲ್ಕು ದಿನಗಳಲ್ಲಿ ಅವರು ಚೇತರಿಸಿಕೊಳ್ತಿದ್ದರು. ಆದ್ರೆ ಈಗ ಕಾಲ ಬದಲಾಗಿದೆ. ಮಕ್ಕಳು ಸುರ್ ಅಂತಾ ಮೂಗು ಏರಿಸಿದ್ರೆ ಸಾಕು ಪಾಲಕರು ಕಂಗಾಲಾಗ್ತಾರೆ. ತಕ್ಷಣ ಮಕ್ಕಳಿಗೆ ಮನೆಯಲ್ಲಿರುವ ನೆಗಡಿ ಔಷಧಿ ನೀಡ್ತಾರೆ. ಸಣ್ಣ ನೆಗಡಿಗೆ ವೈದ್ಯರ ಬಳಿ ಹೋಗುವ ಪಾಲಕರ ಸಂಖ್ಯೆ ಕೂಡ ಸಾಕಷ್ಟಿದೆ.
ನಮ್ಮ ದೇಹ (Body) ಯಾವುದೇ ವಿಷವನ್ನು ಇಟ್ಟುಕೊಳ್ಳಲು ಇಷ್ಟಪಡೋದಿಲ್ಲ. ಅದು ಒಂದಲ್ಲ ಒಂದು ರೀತಿಯಲ್ಲಿ ಅದನ್ನು ಹೊರಗೆ ಹಾಕುವ ಪ್ರಯತ್ನ ನಡೆಸುತ್ತದೆ. ದೇಹದಲ್ಲಿ ಕಫ ತುಂಬಿದಾಗ ಅದು ನೆಗಡಿ (Cold) ರೂಪದಲ್ಲಿ ಹೊರಗೆ ಬರುತ್ತದೆ. ನಾವಿಂದು ಈ ನೆಗಡಿಗೆ ಸಂಬಂಧಿಸಿದಂತೆ ಕೆಲ ಮಾಹಿತಿಯನ್ನು ನಿಮಗೆ ನೋಡ್ತೇವೆ.
ಸೀನುವುದು, ಗಂಟಲು ತುರಿಕೆ, ಮೂಗು ಸೋರುವುದು ನೆಗಡಿಯ ಲಕ್ಷಣ ಎನ್ನೋದು ನಿಮಗೆಲ್ಲ ತಿಳಿಸಿದೆ. ಇದು ಅತ್ಯಂತ ಸಾಮಾನ್ಯವಾದ ಅನಾರೋಗ್ಯ. ಈ ರೋಗಲಕ್ಷಣ (Symptoms) ಗಳು ಸಾಮಾನ್ಯವಾಗಿ ವೈರಲ್ (Viral) ಸೋಂಕಿನಿಂದ ಉಂಟಾಗುತ್ತವೆ. ನೆಗಡಿ ಒಂದೇ ವೈರಸ್ ನಿಂದ ಬರೋದಿಲ್ಲ. ನೆಗಡಿಗೆ ಕಾರಣವಾಗುವ 200 ಕ್ಕೂ ಹೆಚ್ಚು ವೈರಸ್‌ಗಳಿವೆ. ಆದ್ರೆ ರೈನೋವೈರಸ್ ಗಳಿಂದ ನೆಗಡಿ ಹೆಚ್ಚಾಗಿ ನಮ್ಮನ್ನು ಕಾಡುತ್ತದೆ. ನೆಗಡಿ ಹರಡುವ ರೋಗ. ನಾವು ಸದಾ ಜನರ ಜೊತೆಗಿರ್ತೇವೆ. ಹಾಗಾಗಿ ಬೇರೆಯವರ ನೆಗಡಿ ವೈರಸ್ ನಮಗೆ ಬರುತ್ತದೆ.
ವರ್ಷಕ್ಕೆ ಎಷ್ಟು ಬಾರಿ ಕಾಡುತ್ತೆ ನೆಗಡಿ : ವಯಸ್ಕರು ವರ್ಷಕ್ಕೆ ಸರಾಸರಿ 2-3 ನೆಗಡಿಗೆ ಒಳಗಾಗ್ತಾರೆ. ಮಕ್ಕಳು ವರ್ಷಕ್ಕೆ ಸುಮಾರು 6 ರಿಂದ 10 ಬಾರಿ ನೆಗಡಿದೆ ಒಳಗಾಗ್ತಾರೆ. ಮಕ್ಕಳಲ್ಲಿ ನೆಗಡಿ ತುಂಬಾ ಸಾಮಾನ್ಯವಾಗಿರುವುದಕ್ಕೆ ಒಂದು ಪ್ರಮುಖ ಕಾರಣವೆಂದರೆ ಅವರು ಸಾಮಾನ್ಯವಾಗಿ ಡೇಕೇರ್ ಮತ್ತು ಶಾಲೆಗಳಲ್ಲಿ ಪರಸ್ಪರ ನಿಕಟ ಸಂಪರ್ಕದಲ್ಲಿರುತ್ತಾರೆ. ಹೆಚ್ಚಿನ ಜನರು ಚಳಿಗಾಲ ಮತ್ತು ವಸಂತಕಾಲದಲ್ಲಿ ನೆಗಡಿಗೆ ಒಳಗಾಗ್ತಾರೆ. ಹಾಗಂತ ಈ ಎರಡು ಮಾಸದಲ್ಲಿ ಮಾತ್ರ ನೆಗಡಿಯಾಗ್ಬೇಕೆಂದೇನಿಲ್ಲ. ವರ್ಷದ ಯಾವುದೇ ಸಮಯದಲ್ಲಿ ಕೂಡ ನಿಮಗೆ ನೆಗಡಿ ಕಾಡಬಹುದು. ಮಹಿಳೆಯರು, ವಿಶೇಷವಾಗಿ 20 ರಿಂದ 30 ವರ್ಷ ವಯಸ್ಸಿನವರು ಪುರುಷರಿಗಿಂತ ಹೆಚ್ಚು ನೆಗಡಿ ಹೊಂದಿರುತ್ತಾರೆ. 60 ವರ್ಷಕ್ಕಿಂತ ಮೇಲ್ಪಟ್ಟ ಜನರು ವರ್ಷಕ್ಕೆ ಒಂದಕ್ಕಿಂತ ಕಡಿಮೆ ಬಾರಿ ನೆಗಡಿಗೆ ಒಳಗಾಗ್ತಾರೆಂದು ತಜ್ಞರು ಹೇಳ್ತಾರೆ.
ನೆಗಡಿಯಾಗದೆ ಹೋದ್ರೆ ಕಾಡುವ ಸಮಸ್ಯೆ ಏನು? : ಮೊದಲೇ ಹೇಳಿದಂತೆ ವರ್ಷಕ್ಕೆ ಒಮ್ಮೆಯಾದ್ರೂ ನೆಗಡಿ ಬರಬೇಕು. ನೆಗಡಿಯಾಗದೆ ಹೋದ್ರೆ ಅಥವಾ ನೆಗಡಿಯಾದ ತಕ್ಷಣ ಮಾತ್ರೆ, ಔಷಧಿ ಸೇವನೆ ಮಾಡಿ ನಮ್ಮ ದೇಹದಲ್ಲಿರುವ ಕಫ, ಬ್ಯಾಕ್ಟೀರಿಯಾವನ್ನು ನಾವು ಹೊರಗೆ ಹಾಕದೆ ಹೋದ್ರೆ ಸಮಸ್ಯೆ ಎದುರಾಗುತ್ತದೆ.
ಮೊಟ್ಟೆಯ ಈ ಭಾಗ ವಿಷವಂತೆ, ವಿಜ್ಞಾನಿಗಳು ಹೇಳಿರೋದೇನು?
ತಜ್ಞರ ಪ್ರಕಾರ, ದೇಹದಿಂದ ಕಫ ಹೊರಗೆ ಹೋಗ್ದೆ ಹೋದ್ರೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ನಮ್ಮನ್ನು ಕಾಡುತ್ತದೆ. ಚರ್ಮದ ಮೇಲೆ ದದ್ದು, ತುರಿಕೆ ಸೇರಿದಂತೆ ಕೆಲ ಅನಾರೋಗ್ಯ ಕಾಡುತ್ತದೆ. ವರ್ಷಕ್ಕೆ 1 ರಿಂದ 2 ಬಾರಿ ನೆಗಡಿ ಅಥವಾ ಜ್ವರ ಬಂದ್ರೆ ಅದು ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಯ ಸಂಕೇತವಾಗಿದೆ. ನೀವು ಆರೋಗ್ಯವಾಗಿದ್ದು, ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇದೆ ಎಂಬುದನ್ನು ಸೂಚಿಸುತ್ತದೆ.
ಬೇಗ ಅಪ್ಪ ಆಗಲು ಬಯಸಿದ್ರೆ, ಈ ಆಹಾರಕ್ರಮ ಅನುಸರಿಸಿ
ನೆಗಡಿ ಹಾಗೂ ನಮ್ಮ ಮಾನಸಿಕ ಆರೋಗ್ಯದ ನಡುವೆಯೂ ನಂಟಿದೆ. ಹುಚ್ಚರು ದುಃಖ ಅಥವಾ ಖಿನ್ನತೆಯ ಭಾವದಲ್ಲಿರುತ್ತಾರೆ, ಏಕಾಗ್ರತೆ ಇರೋದಿಲ್ಲ, ಅತಿಯಾದ ಭಯ ಅಥವಾ ಚಿಂತೆ ಅವರನ್ನು ಕಾಡುತ್ತೆ ಎಂಬುದು ನಿಮಗೆ ಗೊತ್ತು. ಹಾಗೆಯೇ ಅವರು ಅತಿಯಾದ ಆಯಾಸ, ಕಡಿಮೆ ಶಕ್ತಿ ಅಥವಾ ನಿದ್ರಾಹೀನತೆ ಎದುರಿಸುತ್ತಾರೆ. ಈ ಎಲ್ಲದರ ಮಧ್ಯೆ ಒಂದು ವಿಶೇಷವೆಂದ್ರೆ ಮಾನಸಿಕ ಅಸ್ವಸ್ಥರು ಅಂದ್ರೆ ಹುಚ್ಚರಿಗೆ ನೆಗಡಿ ಕಾಡೋದಿಲ್ಲ.