ದಂತಗಳ ನಡುವೆ ಇರುವ ಬೇಡವಾದ ಅಂಶಗಳನ್ನು ಹೊರಹಾಕುವ ಮಾದರಿಯಲ್ಲಿ ಬ್ರೇನ್ ಫ್ಲಾಸಿಂಗ್ ಕೂಡ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. 8ಡಿ ಸಂಗೀತದ ಮೂಲಕ ಬೇಡವಾದ ಸಂಗತಿಗಳನ್ನು ಹೊರದೂಡಿ, ಮಿದುಳಿಗೆ ವಿಶ್ರಾಂತಿ ಮತ್ತು ಉತ್ತೇಜನ ಎರಡೂ ದೊರೆಯುವಂತೆ ಮಾಡಬಹುದು.
ಬೇಡವಾದ ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದರಿಂದ ಮಿದುಳಿಗೆ ಹಾನಿಯಾಗುತ್ತದೆ. ಅದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯಗಳಿಗೆ ಸಮಸ್ಯೆ ಉಂಟಾಗಬಹುದು. ಹೀಗಾಗಿ, ಉತ್ತಮ ಸಂಗತಿಗಳನ್ನಷ್ಟೇ ಸ್ಮರಣೆಯಲ್ಲಿಟ್ಟುಕೊಳ್ಳಬೇಕು. ಆದರೆ, ಬೇಡವಾದ ವಿಚಾರಗಳನ್ನು ಮಿದುಳಿನಿಂದ ಹೊರಹಾಕುವುದು ಹೇಗೆ? ನಮಗೆಲ್ಲ ಗೊತ್ತಿರುವಂತೆ ಮನುಷ್ಯನ ಪ್ರಯತ್ನವೇ ಇಲ್ಲಿ ಪ್ರಮುಖ. ಬೇರೆ ಬೇರೆ ಕ್ರಿಯೆಗಳಲ್ಲಿ ತೊಡಗಿಸಿಕೊಂಡು ಕ್ರಿಯಾಶೀಲವಾಗಿರುವುದು, ಧ್ಯಾನ, ಪ್ರಾಣಾಯಾಮ, ವ್ಯಾಯಾಮಗಳ ಮೂಲಕ ಮಿದುಳಿಗೆ ಉತ್ತೇಜನ ನೀಡುವುದು, ಸಂಗೀತ, ನೃತ್ಯ, ಚಿತ್ರಕಲೆ ಮುಂತಾದ ಕಲೆಗಳ ಮೂಲಕ ಮಿದುಳನ್ನು ಪ್ರಫುಲ್ಲವಾಗಿಸುವುದು ಮುಂತಾದವು ನಮಗೆ ಈವರೆಗೆ ಗೊತ್ತಿರುವ ಮಾರ್ಗಗಳು. ಆದರೆ, ಇದೀಗ ಹೊಸದಾದ ಕ್ಲೀನಿಂಗ್ ಪದ್ಧತಿಯೊಂದು ಸದ್ದು ಮಾಡುತ್ತಿದೆ. ಹಲ್ಲುಗಳ ಮಧ್ಯದಲ್ಲಿ ಸಿಲುಕಿರುವ ಬೇಡದ ಕೊಳೆ ಅಥವಾ ಆಹಾರದ ಅಂಶಗಳನ್ನು ಫ್ಲಾಸಿಂಗ್ ಮೂಲಕ ನಿವಾರಣೆ ಮಾಡಿಕೊಳ್ಳಲಾಗುತ್ತದೆ. ಇದು ದಂತದ ಕ್ಲೀನಿಂಗ್ ಕಾರ್ಯ. ಇದೇ ಮಾದರಿಯಲ್ಲಿ ಮಿದುಳನ್ನೂ ಸಹ ಫ್ಲಾಸಿಂಗ್ ಮಾಡುವ ವಿಧಾನ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಧಾನ ಭಾರೀ ಸುದ್ದಿಯಾಗುತ್ತಿದೆ.
ಮಾನಸಿಕ ಆರೋಗ್ಯದ ಕ್ಷೇತ್ರದಲ್ಲಿ (Mental Health Sector) ಕೆಲಸ ಮಾಡುತ್ತಿರುವ ತಜ್ಞರ ಪ್ರಕಾರ, 8ಡಿ ಆಡಿಯೋ (8D Audio) ವಿಧಾನ ಮಿದುಳಿನ (Brain) ಬೇಡವಾದ ವಿಚಾರಗಳನ್ನು ನಿವಾರಣೆ ಮಾಡುವಲ್ಲಿ ಭಾರೀ ಸಹಕಾರಿಯಾಗಿದೆ. ಇದು ನಮ್ಮಲ್ಲಿರುವ ಯೋಚನೆಗಳನ್ನು ಸ್ಪಷ್ಟಪಡಿಸುತ್ತದೆ. ಹಲ್ಲುಗಳ ಮಧ್ಯ ಇರುವ ಬೇಡದ ಅಂಶವನ್ನು ನಿವಾರಣೆ ಮಾಡುವ ಫ್ಲಾಸಿಂಗ್ ನಂತೆಯೇ ಈ 8ಡಿ ವಿಧಾನ ಮಿದುಳಿನಲ್ಲಿರುವ ಅನಗತ್ಯ ಅಂಶಗಳನ್ನು ದೂರ ಮಾಡುತ್ತದೆ. ವ್ಯಕ್ತಿಯ ಬೌದ್ಧಿಕ ಸಾಮರ್ಥ್ಯವನ್ನು (Mental Ability) ವಿಸ್ತರಿಸುವ ಮೂಲಕ ಸಮಸ್ಯೆ ನಿವಾರಣೆ ಮಾಡುವಂತೆ ಇದು ಕೆಲಸ ನಿರ್ವಹಿಸುತ್ತದೆ.
Health Tips: ಯಾಕೋ ಕೆಲಸದ ಮೇಲೆ ಫೋಕಸ್ ಮಾಡಲಾಗುತ್ತಿಲ್ಲ ಅನ್ನೋರ ಗಮನಕ್ಕೆ!
ನೂತನ ಟ್ರೆಂಡ್
ಬ್ರೇನ್ ಫ್ಲಾಸಿಂಗ್ (Brain Flossing) ಎನ್ನುವುದು ನೂತನ ಟ್ರೆಂಡ್. ಸಂಗೀತ (Music) ಮಿದುಳನ್ನು ಸುಧಾರಿಸುತ್ತದೆ, ಮಿದುಳನ್ನು ಶಾಂತಗೊಳಿಸಿ ಆರೋಗ್ಯಕ್ಕೆ ಸಹಕಾರಿ ಎನ್ನುವುದು ಈಗಾಗಲೇ ಸಾಬೀತಾಗಿರುವ ಸಂಗತಿ. ನಾವು ಭಾರತೀಯರು ಸಂಗೀತದ ಮಹತ್ವವನ್ನು (Indian Musical Significance) ಬಹಳ ಹಿಂದೆಯೇ ಅರಿತಿದ್ದೇವೆ. ಸಂಗೀತದ ಇಂತಹ ಮಾಂತ್ರಿಕ ಶಕ್ತಿಯ ಬಗ್ಗೆ 2017ರಲ್ಲಿ ನಡೆದ ಒಂದು ಅಧ್ಯಯನದಲ್ಲಿ ಬೆಳಕು ಚೆಲ್ಲಲಾಗಿತ್ತು. ನಿರ್ದಿಷ್ಟ ಬೀಟ್ ಗಳನ್ನು ಕೇಳುತ್ತಿರುವಾಗ ಮಿದುಳಿನ ಮೇಲೆ ಪ್ರಭಾವ (Effect) ಉಂಟಾಗಿ, ಒತ್ತಡದ ಕಾರಣದಿಂದ ಉಂಟಾದ ದೈಹಿಕ (Physical) ಮತ್ತು ಮಾನಸಿಕ ಪರಿಣಾಮ ಶಮನಗೊಳ್ಳುವುದು ಕಂಡುಬಂದಿತ್ತು.
ಡೊಪಮೈನ್ (Dopamine) ಉತ್ಪಾದನೆ ಮೇಲೆ ಪ್ರಭಾವ
ಸಂಗೀತ ಕೇಳುವುದರಿಂದ ಮಿದುಳಿನಲ್ಲಿ ಡೊಪಮೈನ್ ಹಾರ್ಮೋನ್ (Hormone) ಸ್ರವಿಕೆ ಉತ್ತಮವಾಗುತ್ತದೆ. ಡೊಪಮೈನ್ ಉತ್ಪಾದನೆ ಹೆಚ್ಚಿದಾಗ ಆತಂಕ ಮತ್ತು ಖಿನ್ನತೆಯ ಭಾವನೆಗಳು ನಿವಾರಣೆಯಾಗುತ್ತವೆ. ವೇಗವಾದ ಬೀಟ್ ಹೊಂದಿರುವ ಸಂಗೀತ ಕೇಳಿದಾಗ ನಾವೂ ಸಹ ಅದರೊಂದಿಗೆ ಹೆಚ್ಚು ಎಚ್ಚರಿಕೆಯಿಂದ ಅನುಭವಿಸುತ್ತೇವೆ ಹಾಗೂ ಎನರ್ಜೆಟಿಕ್ (Energetic) ಆಗುತ್ತೇವೆ. ರಿಲ್ಯಾಕ್ಸ್ ಮಾಡುವಂತಹ ಶಾಂತವಾದ ಸಂಗೀತ ಅಥವಾ ನಮ್ಮ ಹಿಂದೂಸ್ತಾನಿ ಶಾಸ್ತ್ರೀಯ ಪದ್ಧತಿಯಂತಹ ಸಂಗೀತ ಕೇಳಿದಾಗ ಮಿದುಳು ಸಹ ಕೂಲ್ (Cool) ಆಗುತ್ತದೆ, ಮಿದುಳಿಗೆ ವಿಶ್ರಾಂತಿ (Relax) ದೊರೆಯುತ್ತದೆ.
Brain Health: ತೂಕ ಹೆಚ್ಚಿದರೆ ಮೆದುಳಿನ ಆರೋಗ್ಯಕ್ಕೂ ತೊಂದರೆ!
ಮಿದುಳಿಗೆ ಶಾಂತಿ, ಶಕ್ತಿ
ತಜ್ಞರ ಪ್ರಕಾರ, ಈ 8ಡಿ ಮ್ಯೂಸಿಕ್ ಕೆಲವು ಟ್ರಿಕ್ ಗಳನ್ನು ಒಳಗೊಂಡಿದೆ. ಇದರ ಪ್ರಭಾವದಿಂದಾಗಿ ವಿಶಾಲವಾದ ಅವಕಾಶ ಹೊಂದಿರುವ ಭಾವನೆ ಮೂಡುತ್ತದೆ. ನಿರ್ದಿಷ್ಟ ಮಾದರಿಯ ಸಂಗೀತ ಕೇಳಿದಾಗ ಎರಡೂ ಭಾಗದ ಮಿದುಳಿನ ವಲಯದಲ್ಲಿ ಉತ್ತೇಜನ ಉಂಟಾಗುತ್ತದೆ. ನರಗಳ ಸಂಪರ್ಕ ಅತ್ಯುತ್ತಮಗೊಳ್ಳುತ್ತದೆ. ಕೆಲವರು 8ಡಿ ಮ್ಯೂಸಿಕ್ ಕೇಳಿದಾಗ ರಿಲ್ಯಾಕ್ಸ್ ಆದ ಅನುಭವ ಪಡೆದರೆ, ಮತ್ತೆ ಕೆಲವರು ಹೆಚ್ಚು ಎನರ್ಜಿ ದೊರೆಯುವುದಾಗಿ ಹೇಳಿದ್ದಾರೆ. ಇದರಿಂದ ಮಿದುಳು ಹೆಚ್ಚು ಫೋಕಸಿವ್ ಆಗುತ್ತದೆ.