ಮನುಷ್ಯನ ದೇಹಕ್ಕೆ(Human Body) ಕೇವಲ ಹಣ್ಣು(Fruits) ತರಕಾರಿ(Vegetables) ಸೇವಿಸುವುದರಿಂದ ಬೇಕಾದ ನ್ಯೂಟ್ರೀಷನ್(Nutrition) ಸಿಗುವುದಷ್ಟೇ ಅಲ್ಲ. ಅವುಗಳ ಸಿಪ್ಪೆಯಿಂದಲೂ(Peels) ಹಲವು ಆರೋಗ್ಯಕ್ಕೆ ಉಪಯುಕ್ತವಾದ ಅಂಶಗಳು ಸಿಗುತ್ತವೆ. ನೈಸರ್ಗಿಕವಾಗಿ(Naturally) ಸಿಗುವ ವಿಟಮಿನ್(Vitamin), ಮಿನರಲ್ಸ್ಗಳು(Mineral) ಅದರಲ್ಲಿರುತ್ತವೆ. ಹಾಗಾದರೆ ಯಾವೆಲ್ಲಾ ಹಣ್ಣು ತರಕಾರಿಗಳ ಸಿಪ್ಪೆ ದೇಹಕ್ಕೆ ಒಳ್ಳೆಯದು ಎಂಬುದರ ಮಾಹಿತಿ ಇಲ್ಲಿದೆ.
ಸಿಪ್ಪೆ(Peels) ಎಂದಾಕ್ಷಣ ಎಲ್ಲರೂ ಕಸದ ಬುಟ್ಟಿ(Dust Bin) ಕಡೆ ಅದನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಅದರಿಂದ ಆರೋಗ್ಯಕ್ಕೆ ಎಷ್ಟು ಲಾಭವಿದೆ ಎಂಬುದನ್ನು ಎಲ್ಲರು ತಿಳಿಯಬೇಕಿದೆ. ಹಿಂದಿನ ಕಾಲದಲ್ಲಿ ಹಿರಿಯರು ಕೆಲ ಹಣ್ಣು(Fruits) ಹಾಗೂ ತರಕಾರಿಗಳ ಸಿಪ್ಪೆಯಿಂದ(Vegetables Peels) ನಾನಾ ರೀತಿಯ ಆಹಾರ ಪದಾರ್ಥಗಳನ್ನು ಹಾಗೂ ಚರ್ಮಕ್ಕೂ(Skin) ಬಳಸುತ್ತಿದ್ದರು. ಸೌಂದರ್ಯ(Beauty) ಹಾಗೂ ಆರೋಗ್ಯಕ್ಕೂ(Health) ಈ ಸಿಪ್ಪೆಗಳು ಉಪಯುಕ್ತವಾಗಿದೆ. ನ್ಯಾಚುರಲ್ ಹೆಲ್ತ್ ನ್ಯೂಸ್ ಅವರು ಈ ಹಣ್ಣಿನ ಸಿಪ್ಪೆ ಕುರಿತು ಆಶ್ಚರ್ಯಕರ ಮಾಹಿತಿ ನೀಡಿದ್ದಾರೆ. ಯಾವೆಲ್ಲಾ ಹಣ್ಣಿನ ಸಿಪ್ಪೆಗಳು ಆರೋಗ್ಯಕ್ಕೆ ಒಳ್ಳೆಯದು ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮಳೆಗಾಲದಲ್ಲಿ ಮಶ್ರೂಮ್‌ನಿಂದ ತಯಾರಿಸಿದ ಆಹಾರ ತಿನ್ಬೋದಾ?
undefined
ಕಿತ್ತಳೆ ಸಿಪ್ಪೆ:
ಕಿತ್ತಳೆ ಹಣ್ಣಿನ(Orange) ಸಿಪ್ಪೆಯು ತೂಕ ಇಳಿಸುವುದಕ್ಕೆ(Weight Loss) ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲದೆ ಈ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ ಪುಡಿ(Dry Powder) ಮಾಡಿಟ್ಟುಕೊಂಡು ಬೇಕಾದಾಗ ಫೇಸ್ ಮಾಸ್ಕ್(Face Mask) ರೀತಿ ತಯಾರಿಸಿ ಹಚ್ಚಲಾಗುತ್ತದೆ. ಇದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ. ಕಿತ್ತಳೆ ಸಿಪ್ಪೆಯು ಉಸಿರಾಟದ ಸಮಸ್ಯೆ(Respiration System), ಮಲಬದ್ಧತೆ(Constipation), ಹೃದಯದಲ್ಲಿ ಉರಿಯುವ(Heart Inflammatory System) ಸಮಸ್ಯೆಯನ್ನು ನಿವಾರಿಸುತ್ತದೆ. ಕಿತ್ತಳೆ ಟೀಯನ್ನು ದಿನವೂ ಕುಡಿಯುವುದರಿಂದ ಚರ್ಮದಲ್ಲಿನ ಮೊಡವೆಯನ್ನು ತೆಗೆದು ಹಾಕುತ್ತದೆ ಹಾಗೂ ದೇಹದ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ.
ಬಾಳೆಹಣ್ಣಿನ ಸಿಪ್ಪೆ
ಬಾಳೆ ಹಣ್ಣಿನ ಸಿಪ್ಪೆಯ(Banana Peel) ಒಳಭಾಗವನ್ನು ಹಲ್ಲುಗಳ(Teeth) ಮೇಲೆ ಉಜ್ಜುವುದರಿಂದ ಹಲ್ಲುಗಳನ್ನು ನೈಸರ್ಗಿಕವಾಗಿ ಬಿಳಿಯಾಗಿಸುತ್ತದೆ(Weightens). ಇದರ ಸಿಪ್ಪೆಯ ಪೇಸ್ಟ್(Paste) ಅನ್ನು ಸುಟ್ಟ ಗಾಯದ ಮೇಲೆ ಹಚ್ಚಿದರೆ ಗಾಯದಿಂದಾಗುವ ಕಿರಿಕಿರಿ(Irritation) ಹಾಗೂ ನೋವು(Pain) ಕಡಿಮೆಯಾಗುತ್ತದೆ. ಕಾಲಿನ ಹಿಮ್ಮಡಿಯ ಪಾದದ ಬಿರುಕಿಗೆ ಬಾಳೆಹಣ್ಣಿನ ಪೇಸ್ಟ್ ಅನ್ನು ಸ್ವಲ್ಪದಿನ ಹಚ್ಚಿದರೆ ಪರಿಣಾಮಕಾರಿ ರಿಸಲ್ಟ್ ಪಡೆಯಬಹುದು. ಅಲ್ಲದೆ ಬಾಳೆ ಹಣ್ಣಿನ ಸಿಪ್ಪೆಯನ್ನು ಮುಖಕ್ಕೆ(Face) ಹಾಗೂ ದೇಹಕ್ಕೆ(Body) 5 ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ಮೊಡವೆಗಳು ತೆಗೆದುಹಾಕುತ್ತವೆ.
ಇದನ್ನೂ ಓದಿ: ಆರೋಗ್ಯದ ಮೇಲೆ ಜಾದೂ ಮಾಡುತ್ತೆ ಸೋಂಪು - ಕಲ್ಲುಸಕ್ಕರೆ
ದ್ರಾಕ್ಷಿ ಸಿಪ್ಪೆ
ದ್ರಾಕ್ಷಿಯಲ್ಲಿ ವಿಟಮಿನ್(Vitamin) ಹಾಗೂ ಆಂಟಿ ಆಕ್ಸಿಡೆಂಟ್(Antioxident) ಅಂಶವಿದ್ದು, ಇದರಲ್ಲಿ ಪೆಕ್ಟಿನ್‌ನ(Pectin) ಗರಿಷ್ಠ ಸಾಂದ್ರತೆಗಳು, ಒಂದು ರೀತಿಯ ಕರಗುವ ಪೈಬರ್(Fiber) ಇದೆ. ಪೆಕ್ಟಿನ್ ಅಂಶವು ರಕ್ತದಲ್ಲಿನ ಕೊಲೆಸ್ಟಾçಲ್(Blood Cholesterol), ನಿರ್ಜಲೀಕರಣ(Dehydrate), ಕ್ಯಾನರ್(Cancer) ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚುವುದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ.
ಶೇಂಗ ಸಿಪ್ಪೆ
ಭಾರತದಲ್ಲಿ ಶೇಂಗವನ್ನು(Peanut) ಸ್ನಾö್ಯಕ್ಸ್ ರೂಪದಲ್ಲಿ ತಿನ್ನಲಾಗುತ್ತದೆ. ದ್ವಿದಳ ಧಾನ್ಯಗಳಲ್ಲಿ ಒಂದಾಗಿದ್ದು, ಆರೋಗ್ಯಕ್ಕೆ ಒಳ್ಳೆಯ ಔಷಧವೂ ಹೌದು. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಗ್ನೀಶಿಯಂ(Magnesium) ಇದ್ದು, ಚರ್ಮಕ್ಕೆ ರಕ್ತದ ಹರಿವನ್ನು(Blood Flow) ಪೂರೈಸಲು ನರ(Nerves), ಸ್ನಾಯು(Muscles) ಮತ್ತು ರಕ್ತನಾಳಗಳನ್ನು ಶಾಂತಗೊಳಿಸುತ್ತದೆ. ಪ್ರತೀ ದಿನ ಇದನ್ನು ಸೇವಿಸುವುದರಿಂದ ಯುವ(Young) ಮತ್ತು ಆರೋಗ್ಯಕರ ಚರ್ಮವನ್ನು(Healthy Skin) ನೀಡುತ್ತದೆ.
ದಾಳಿಂಬೆ ಸಿಪ್ಪೆ
ದಾಳಿಂಬೆ ಹಣ್ಣಿನಲ್ಲಿ(Pomegranate) ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್(Protein) ಇರುತ್ತದೆ. ಇದರ ಸಿಪ್ಪೆಗಳು ಚರ್ಮದಲ್ಲಿ ಕಾಲಜನ್(Collagen) ಕೆಲಸ ಮಾಡುವುದನ್ನು ತಡೆಯುತ್ತದೆ. ಜೀವಕೋಶದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಚರ್ಮದ ಸುಕ್ಕುಗಳು ಮತ್ತು ವಯಸ್ಸಾದ ಚಿಹ್ನೆಗಳನ್ನು ಯಶಸ್ವಿಯಾಗಿ ವಿಳಂಬಗೊಳಿಸಲು ಸಹಾಯ ಮಾಡುತ್ತದೆ.
ಆಲೂಗೆಡ್ಡ
ಆಲೂಗೆಡ್ಡೆ ಸಿಪ್ಪೆಯಲ್ಲಿ(Potato peel) ಹೆಚ್ಚಿನ ಪ್ರಮಾಣದಲ್ಲಿ ನ್ಯೂಟ್ರೀಷನ್(Nutrition), ಐರನ್(Iron), ಕ್ಯಾಲ್ಶಿಯಂ(Calcium), ಪೊಟ್ಯಾಶಿಯಂ(Potassium), ಮೆಗ್ನೀಶಿಯಂ(Magnesium), ವಿಟಮಿನ್ ಬಿ6(Vitamin B6) ಹಾಗೂ ವಿಟಮಿನ್ ಸಿ(Vitamin C) ಇದೆ. ಸಿಹಿ ಆಲೂಗೆಡ್ಡೆಯ ಚರ್ಮವು ಗಮನಾರ್ಹ ಪ್ರಮಾಣದ ಬೀಟಾ ಕ್ಯಾರೋಟಿನ್‌ನಿಂದ(Beta-Carotene) ತುಂಬಿರುತ್ತದೆ, ಇದು ಜೀರ್ಣಕ್ರಿಯೆಯ(Digestion) ಸಮಯದಲ್ಲಿ ವಿಟಮಿನ್ ಎ(Vitamin A) ಆಗಿ ಬದಲಾಗುತ್ತದೆ. ಜೀವಕೋಶದ ಆರೋಗ್ಯ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ನಿಯಂತ್ರಣಕ್ಕೆ ವಿಟಮಿನ್ ಎ ಅತ್ಯಗತ್ಯ. ಅಂಗಗಳ ಕಾರ್ಯನಿರ್ವಹಣೆಯನ್ನು ನಿರ್ವಹಿಸುವಲ್ಲಿ ಸಾಧನವಾಗಿದೆ.
ಇದನ್ನೂ ಓದಿ: Health Tips : ಹೊಟ್ಟೆಯಲ್ಲಿ ಸದಾ ಕಾಡುವ ಗ್ಯಾಸ್ ಗೆ ಹೇಳಿ ಗುಡ್ ಬೈ
ಸೌತೇಕಾಯಿ
ಸೌತೇಕಾಯಿಯ(Cucumber) ಹಸಿರು ಸಿಪ್ಪೆಯಲ್ಲಿ ಆಂಟಿ ಆಕ್ಸಿಡೆಂಟ್(Antioxidant), ಕರಗದ ಫೈಬರ್ ಮತ್ತು ಪೊಟ್ಯಾಶಿಯಮ್ ಹೇರಳವಾಗಿದೆ. ಇದರಲ್ಲಿ ವಿಟಮಿನ್ ಕೆ(Vitamin K) ಹೇರಳವಾಗಿದೆ. ಇದನ್ನು ಸಲಾಡ್ ಮಾಡಿ ತಿನ್ನುವುದರಿಂದ ಡಯೆಟ್ ಫ್ರೆಂಡ್ಲಿಯೂ(Diet Friendly) ಹೌದು. ದೇಹ ನಿರ್ಜಲೀಕರಣ ಆಗದಂತೆ ನೋಡಿಕೊಳ್ಳುತ್ತದೆ. ಇದರಲ್ಲಿ ಶೇ.96ರಷ್ಟು ನೀರಿನಾಂಶವಿದೆ. ಮಕ್ಕಳಿಗೆ ಸೌತೇಕಾಯಿ ರಸ ಕುಡಿಸುವುದರಿಂದ ಚುರುಕು ಹಾಗೂ ಬುದ್ಧಿ ಬೆಳವಣಿಗೆಗೆ ಸಹಕಾರಿಯಾಗಿದೆ.
ಕಲ್ಲಂಗಡಿ
ಕಲ್ಲಂಗಡಿಯಲ್ಲಿ(Watermelon) ಸಿಟ್ರುಲಿನ್ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ. ಸಿಟ್ರುಲಿನ್ ಉತ್ಕರ್ಷಣ ನಿರಧಕ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಅರ್ಜಿನೈನ್(Arginine) ಆಗಿ ಪರಿವರ್ತಿಸುತ್ತದೆ. ಅರ್ಜಿನೈನ್‌ನಲ್ಲಿ ಅಮಿನೋ ಆಸಿಡ್(Amino Acid) ಇದ್ದು ಹೃದಯಕ್ಕೆ ಬಹುಳ ಒಳ್ಳೆಯದು. ಅಲ್ಲದೆ ರಕ್ಷಣಾ ವ್ಯವಸ್ಥೆ ಮತ್ತು ರಕ್ತಪರಿಚಲನಾ ವ್ಯವಸ್ಥೆಗೆ ಒಳ್ಳೆಯದು.