No Plastic Please: ಬಿದಿರಿನ ಬ್ರಷ್ ಬಳಸಿ, ಪರಿಸರ ಉಳಿಸಿ

By Suvarna News  |  First Published Feb 18, 2022, 10:21 AM IST

ಹಲ್ಲು (Teeth), ವಸಡು ನೋವಿನ ಸಮಸ್ಯೆನಾ ? ಮುಲಾಮು ಹಚ್ಚಿದ್ರೂ, ಮನೆಮದ್ದು ಮಾಡಿದ್ರೂ ಪ್ರಯೋಜನ ಆಗ್ತಿಲ್ವಾ ? ಹಾಗಿದ್ರೆ ಇಲ್ಲಿದೆ ಬೆಸ್ಟ್ ಸೊಲ್ಯೂಶನ್. ಬಿದಿರಿನ ಬ್ರಷ್ (Brush) ಒಮ್ಮೆ ಟ್ರೈ ಮಾಡಿ ನೋಡಿ.


ಪರಿಸರ ಮತ್ತು ಮನುಷ್ಯನ ಜೀವನ ಪರಸ್ಪರ ಬೆಸೆದುಕೊಂಡಿದೆ. ಪ್ರಕೃತಿಯಿಲ್ಲದೆ ಮನುಷ್ಯನಿಲ್ಲ. ಆದರೆ, ವರುಷಗಳು ಕಳೆಯುತ್ತಾ ಹೋದಂತೆ ಪರಿಸರದಲ್ಲಿ ಮಾಲಿನ್ಯ (Pollution)ದ ಪ್ರಮಾಣವೂ ಹೆಚ್ಚಾಗುತ್ತಲೇ ಹೋಗುತ್ತಿದೆ. ಮನುಷ್ಯ ತಯಾರಿಸಿ ಉಪಯೋಗಿಸುತ್ತಿರುವ ಹಲವು ಉತ್ಪನ್ನಗಳು ಪರಿಸರಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಅದರಲ್ಲಿ ಮುಖ್ಯವಾದುದು ಪ್ಲಾಸ್ಟಿಕ್ (Plastic). ನೀರಲ್ಲಿ ಬೆರೆಯದ, ಬೆಂಕಿಯಲ್ಲಿ ಸುಡದ, ಮಣ್ಣಿನಲ್ಲಿ ಬೆರೆಯದ ಪ್ಲಾಸ್ಟಿಕ್ ಭೂ, ಜಲ, ವಾಯು ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಆದರೆ, ವಿಪರ್ಯಾಸವೆಂದರೆ ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಉಪಯೋಗ ವಿಪರೀತವಾಗುತ್ತಿದೆ.

ಪ್ಲಾಸ್ಟಿಕ್ ಎಂಬುದು ಸರ್ವಾಂತರ್ಯಾಮಿಯಾಗಿ ಪರಿಸರಕ್ಕೆ ಮಾರಕವಾಗುತ್ತಿದೆ. ಆಗೊಮ್ಮೆ ಈಗೊಮ್ಮೆ ಪ್ಲಾಸ್ಟಿಕ್ ಬ್ಯಾನ್ ಎಂದು ಹೇಳಿ ಬಟ್ಟೆಯ ಚೀಲಗಳು ಬಳಕೆ ಶುರುವಾದರೂ ಕೆಲವೇ ದಿನಗಳು ಮತ್ತೆ ಪ್ಲಾಸ್ಟಿಕ್ ಹಾವಳಿ ಶುರುವಾಗಿ ಬಿಡುತ್ತದೆ. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ವಿಚಾರದ ಬಗ್ಗೆ ಆಲೋಚಿಸುವ ಪರ್ಯಾಯವಾಗಿ ಏನನ್ನು ಬಳಸಬಹುದು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಮಣ್ಣು, ಬಿದಿರಿನ ವಸ್ತುಗಳನ್ನು ವಿವಿಧ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಪರ್ಯಾಯವಾಗಿ  ಬಳಸಲು ಸಾಧ್ಯವಾಗುತ್ತದೆ. ಕಾಗದದ ಚೀಲಗಳು ಮತ್ತು ಸ್ಟೀಲ್ ಸ್ಟ್ರಾಗಳ ನಂತರ, ಈಗ ಬಿದಿರಿನ ಟೂತ್ ಬ್ರಷ್‌ (Toothbrush)ಗಳಿಗೆ ಬದಲಾಯಿಸುವ ಸಮಯ ಬಂದಿದೆ.

Latest Videos

undefined

Health Tips : ತೂಕ ಇಳಿಸ್ಬೇಕಾ? ಹಾಗಾದ್ರೆ ಪ್ಲ್ಯಾಸ್ಟಿಕ್‌ನಿಂದ ದೂರವಿರಿ!

ಪ್ಲಾಸ್ಟಿಕ್ ಬದಲು ಬಿದಿರು (Bamboo) ಬಳಕೆ
ಭಾರತ ವಿಶ್ವದಲ್ಲಿ ಬಿದಿರಿನ ವಿಶ್ವದ ಅತಿದೊಡ್ಡ ಉತ್ಪಾದಕರಲ್ಲಿ ಒಂದಾಗಿದೆ. ಹೀಗಾಗಿಯೇ ಪ್ಲಾಸ್ಟಿಕ್ ಚೇರ್, ಟೇಬಲ್, ಅಲಂಕಾರಿಕ ವಸ್ತುಗಳ ಬದಲು ಬಿದಿರನ್ನು ಇವುಗಳನ್ನು ತಯಾರಿಸಲು ವ್ಯಾಪಕವಾಗಿ ಬಳಸಲಾಗುತ್ತಿದೆ. ಇವು ನೋಡಲು ಸುಂದರ ಮಾತ್ರವಲ್ಲ ಇಕೋ ಫ್ರೆಂಡ್ಲಿ (Eco Friendly) ಸಹ ಆಗಿದೆ. ಬಿದಿರಿನಿಂದ ಹಲ್ಲುಜ್ಜುವ ಬ್ರಷ್‌ನ್ನು ಸಹ ತಯಾರಿಸುತ್ತಾರೆ ಅನ್ನೋದು ನಿಮಗೆ ಗೊತ್ತಾ ?

ಮೊದಲಿನಿಂದಲೂ ಹಲ್ಲುಜ್ಜಲು ಪ್ಲಾಸ್ಟಿಕ್ ಬ್ರಷ್ ಬಳಸುವುದು ಎಲ್ಲರ ರೂಢಿ. ಆದರೆ ಕೇವಲ ಪ್ಲಾಸ್ಟಿಕ್ ಬ್ರಷ್ ಒಂದನ್ನು ಮಾತ್ರ ಬಳಸುವುದರಿಂದ ವರ್ಷಕ್ಕೆ ಅದೆಷ್ಟು ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತದೆ ನೋಡಿ. ವ್ಯಕ್ತಿಯೊಬ್ಬ ವರ್ಷಕ್ಕೆ 5ರಿಂದ 7 ಬಾರಿ ಬ್ರಷ್ ಬದಲಾಯಿಸಿದರೂ ಅಷ್ಟು ಬಾರಿ ಪ್ಲಾಸ್ಟಿಕ್ ಬಳಸಿ ಪರಿಸರಕ್ಕೆ ನಶಿಸಲಾಗದ ತ್ಯಾಜ್ಯವನ್ನು ನೀಡಿದಂತಾಗುತ್ತದೆ. ಆದರೆ ತಿಳ್ಕೊಳ್ಳಿ, ಬಿದಿರಿನಿಂದಲೂ ಬ್ರಷ್ ತಯಾರಿಸುತ್ತಾರೆ ಮತ್ತು ಇದು ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಳಸಲು ಅತ್ಯುತ್ತಮ ಆಯ್ಕೆ. ಮಾತ್ರವಲ್ಲ, ಬಿದಿರಿನ ಬ್ರಷ್ ಬಳಸುವುದು ಆರೋಗ್ಯಕ್ಕೆ ಸಹ ಅತ್ಯುತ್ತಮ. ಹಾಗಿದ್ರೆ ಬಿದಿರಿನ ಬ್ರಷ್‌ನಿಂದ ಹಲ್ಲುಜ್ಜುವುದರಿಂದ ಏನೆಲ್ಲಾ ಉಪಯೋಗವಿದೆ ತಿಳಿಯೋಣ.

Bathing Tips: ಪ್ಲಾಸ್ಟಿಕ್ ಸ್ಕ್ರಬ್ ಬಳಸೋದ್ರಿಂದ ಆಗಬಹುದು ಸಮಸ್ಯೆ!

ಪರಿಸರ ಸ್ನೇಹಿ ಬ್ರಷ್
ಪ್ರಕೃತಿಯಲ್ಲಿ ಹೇರಳವಾಗಿ ದೊರಕುವ ಬಿದಿರಿನಿಂದ ತಯಾರಿಸುವ ಬ್ರಷ್ ಪರಿಸರ ಸ್ನೇಹಿಯೂ ಆಗಿದೆ. ಪ್ಲಾಸ್ಟಿಕ್ ಬ್ರಷ್ ಪರಿಸರಕ್ಕೆ ಮಾರಕವಾದರೆ, ಬಿದಿರಿನ ಬ್ರಷ್ ಪರಿಸರಕ್ಕೆ ಪೂರಕವಾಗಿದೆ. ಬಿದಿರಿನ ಬ್ರಷ್ ಬಳಕೆಯಿಂದ ಪರಿಸರದಲ್ಲಿ ಕಡಿಮೆ ಪ್ರಮಾಣದ ತ್ಯಾಜ್ಯ ಉಂಟಾಗುತ್ತದೆ. ಯಾಕೆಂದರೆ ಬಿದಿರು ಮೂರು ತಿಂಗಳಿನಿಂದ ಒಂದು ವರ್ಷದ ಒಳಗೆ ಮಣ್ಣಿನಲ್ಲಿ ಕೊಳೆಯುತ್ತದೆ. ಆದರೆ ಪ್ಲಾಸ್ಟಿಕ್ ಹಾಗಲ್ಲ ಅದು ಎಂದಿಗೂ ಮಣ್ಣಿನಲ್ಲಿ ಬೆರೆಯುವುದೇ ಇಲ್ಲ. ಪರಿಸರಕ್ಕೆ ಮಾರಕವಾಗಿ ಮಣ್ಣಿನಲ್ಲಿ ಹಾಗೆಯೇ ಇರುತ್ತದೆ.

ಬಿದಿರು ಕೀಟ ನಿರೋಧಕವಾಗಿದೆ
ಭಾರತದಲ್ಲಿ ಅತೀ ಹೆಚ್ಚಾಗಿ ಬೆಳೆಯುವ ಬಿದಿರು ಸ್ವಯಂ ಪುನರುತ್ಪಾದಕ ಸಸ್ಯವಾಗಿದೆ. ಯಾವುದೇ ರಾಸಾಯನಿಕದ ಹಂಗಿಲ್ಲದೆ ಬೆಳೆಯುವ ಸಸ್ಯ. ಹೀಗಾಗಿ ಬಿದಿರಿನ ಎಲ್ಲಾ ಉತ್ಪನ್ನದ ಬಳಕೆಯೂ ಒಳ್ಳೆಯದು. ಬಿದಿರು ನೈಸರ್ಗಿಕವಾಗಿ ಕೀಟ ನಿರೋಧಕವಾಗಿದೆ. ಹೀಗಾಗಿಯೇ ಹಲ್ಲುಜ್ಜಲು ಬಿದಿರಿನ ಬ್ರಷ್ ಬಳಕೆ ಅತ್ಯಂತ ಸುರಕ್ಷಿತ ಆಯ್ಕೆಯಾಗಿದೆ. 

ದೀರ್ಘಕಾಲ ಬಾಳ್ವಿಕೆ ಬರುತ್ತದೆ
ಬಿದಿರಿನ ಹಲ್ಲುಜ್ಜುವ ಬ್ರಷ್‌ಗಳು ಪ್ಲಾಸ್ಟಿಕ್ ಬ್ರಷ್‌ಗಳಿಗಿಂತ ಹೆಚ್ಚು ಉತ್ತಮವಾಗಿ ಕಾಣುತ್ತವೆ. ಬಿದಿರಿನ ಬ್ರಷ್‌ಗಳಿಗೆ ಖರೀದಿಸುವಾಗ ಒಂದು ಸಾರಿ ಹೆಚ್ಚು ಹಣ ನೀಡಬೇಕಿದ್ದರೂ ಇದು ದೀರ್ಘಕಾಲ ಬಾಳ್ವಿಕೆ ಬರುತ್ತದೆ. ಬ್ರಷ್ನ್ನು ಆಗಾಗ ಬದಲಾಯಿಸುತ್ತಾ ಹಲ್ಲುನೋವು, ವಸಡು ನೋವು ಎಂದು ಪೇಚಾಡುವ ಅಗತ್ಯವಿಲ್ಲ. 

click me!