ಬಾಳಲ್ಲಿ ಜೈಸಬೇಕಾ? ಹಾಗಿದ್ರೆ ಪೂಲ್‌ನಲ್ಲಿ ಈಸಬೇಕು!

By Kannadaprabha News  |  First Published Apr 17, 2022, 4:27 PM IST

ಸ್ವಿಮ್ಮಿಂಗ್‌ ಕೋಚ್‌ಗಳಿಗೆ ಈಗ ಕೆಲಸವೋ ಕೆಲಸ. ಮಕ್ಕಳು ಕಲಿಯಲು ಕೊಳಕ್ಕೆ ಧುಮುಕಿದರೆ, ಅರ್ಧಂಬರ್ಧ ಕಲಿತ ದೊಡ್ಡವರು ಬೇಸಿಗೆಯ ಬಿಸಿಯಿಂದ ತಣ್ಣಗಾಗಲು ನೀರಿನಲ್ಲಿ ಇಳಿಯುತ್ತಿದ್ದಾರೆ. ಈಜಿನಲ್ಲಿ ಪರಿಣತರು ಮಾತ್ರ ಎರಡು ತಿಂಗಳು ಈಜುಕೊಳದ ‘ರಶ್‌’ ಯಾವಾಗ ಮಾಯವಾಗುತ್ತದೆ ಎಂದು ಕಾಯುತ್ತಿದ್ದಾರೆ!


ಡಾ.ಕೆ.ಎಸ್‌. ಪವಿತ್ರ

ಮಕ್ಕಳೇನೋ ಅರೆ ಮನಸ್ಸಿನಿಂದ, ‘ತಾವು ಬಾಲ್ಯದಲ್ಲಿ ಈಜು ಕಲಿತಿಲ್ಲವಲ್ಲ’ ಎಂಬ ಸಂಕಟದಿಂದ ನರಳುವ ಅಪ್ಪ-ಅಮ್ಮಂದಿರಿಂದ ಕೊಳಕ್ಕೆ ದೂಡಲ್ಪಡುತ್ತಾರೆ. ಆದರೆ ಅಪ್ಪ-ಅಮ್ಮ?.. ಈಜಿನ ಬಗ್ಗೆ ಅಪ್ಪ-ಅಮ್ಮ ಕಲಿಯುವ ಉತ್ಸಾಹ ತೋರಿಸುವುದು ಕಡಿಮೆಯೇ. ನನ್ನ ಪ್ರಕಾರ ಮಕ್ಕಳು ಬೇಸಿಗೆಯಲ್ಲಿ ಈಜು ಶಿಬಿರಕ್ಕೆ ಹೋಗಿ ಕಲಿಯುವಾಗ ಅಪ್ಪ-ಅಮ್ಮಂದಿರೂ ತಾವೂ ಕಲಿಯುವ ಪ್ರಯತ್ನ ಮಾಡಬೇಕು, ಒಂದೊಮ್ಮೆ ಕಲಿತಿದ್ದರೆ, ಬರೀ ಬದುಕಿನಲ್ಲಿ ಈಜುವುದಲ್ಲ, ನೀರಿನಲ್ಲಿ ಈಜುವುದಕ್ಕೆ ತೊಡಗಬೇಕು.

Tap to resize

Latest Videos

undefined

ಹೀಗೆ ಹೇಳಿದ ತಕ್ಷಣ ಜನ ಸಬೂಬುಗಳ ಉದ್ದ ಪಟ್ಟಿಯನ್ನೇ ಮುಂದಿಡುತ್ತಾರೆ. ಕೂದಲು-ಚರ್ಮ ಹಾಳಾಗಿ ಹೋಗುತ್ತದೆ, ನೀರು ಅಂದ್ರೆನೇ ಹೆದರಿಕೆ ಬಂದು ಬಿಟ್ಟಿದೆ, ಮಕ್ಕಳಿಗೆ ಹಾಗಾಗೋದು ಬೇಡ ಅಂತಲೇ ಈಗಲೇ ಹೇಗಾದ್ರೂ ಮಾಡಿ ಕಲಿಸಬೇಕು ಅಂತ ಕರ್ಕೊಂಡು ಬಂದಿದ್ದೀವಿ ಅಷ್ಟೆ, ಇಷ್ಟುದೊಡ್ಡವರಾದ ಮೇಲೆ ಮೈಗಂಟುವ ಸ್ವಿಮ್‌ಸೂಟ್‌ ಹಾಕಿಕೊಂಡು ನೀರಿಗೆ ಇಳಿಯೋದಾದ್ರೂ ಹೇಗೆ ಇತ್ಯಾದಿ ಇತ್ಯಾದಿ. ಆದರೆ ಇಷ್ಟೆಲ್ಲಾ ಕಾರಣಗಳ ಮಧ್ಯೆಯೂ ನನಗನ್ನಿಸುವುದು ‘ಬಾಳಲ್ಲಿ ಜೈಸಬೇಕು’ ಎನ್ನುವ ಗುರಿಗೆ ಒಂದು ಮಾರ್ಗ ‘ಪೂಲ್‌ನಲ್ಲಿ ಈಸುವುದು!’

ಈಜು ಬರದವರಿಗೆ ‘ಈಜುವುದು’ ಎಷ್ಟುಕಷ್ಟ, ನೀರೊಳಗೆ ತಲೆ ಮುಳುಗಿಸಿರುವುದು ಎಷ್ಟುಪರಿಣತಿಯ ಕೆಲಸ ಎಂಬುದು ಚೆನ್ನಾಗಿ ಗೊತ್ತು. ಅದೇ ಈಜು ಬರುವವರಿಗೆ ಆರಂಭದ ಹಂತದಲ್ಲಿ ಇದರ ಫಜೀತಿ ಗೊತ್ತಿರುತ್ತದೆ. ಉಸಿರು ತೆಗೆದುಕೊಳ್ಳಲು ತಲೆ ಎತ್ತಿದ ತಕ್ಷಣ ಕಾಲು ಕೆಳಕ್ಕೆ ಹೋಗಿ ದೇಹ ಮುಂದೆ ಸಾಗುವುದೇ ಇಲ್ಲ! ದಿಕ್ಕು ಬದಲಿಸಬೇಕೆಂದರೆ ಕೈಗಳನ್ನು ತಿರುಗಿಸಬೇಕು, ನಿಧಾನ ಮಾಡಬೇಕೆಂದರೆ ಕಾಲುಗಳು ಬ್ರೇಕ್‌ನಂತೆ ವರ್ತಿಸುತ್ತವೆ, ‘ಮಶ್ರೂಮ್‌ ಫä್ರಟ್‌’ನಂತೆ ತೇಲಲು ದೇಹ ಹೇಳಿದಂತೆ ನಾವು ಗಟ್ಟಿಯಾಗಿ ಕೇಳಬೇಕು. ಇವೆಲ್ಲ ಅನುಭವದಿಂದ ಕಲಿಯುವಂತಹವು. ಇವೆಲ್ಲದರ ನಡುವೆ ನಮ್ಮ ದೇಹ ಹೇಗೋ 21 ದಿನಗಳಲ್ಲಿ ಈಜು ಕಲಿತು, ನೀರಿನಲ್ಲಿ ಓಡಾಡುವಂತೆ ಆಗಿಬಿಡುತ್ತದೆ ಎಂಬುದೇ ಆಶ್ಚರ್ಯ.

ವರ್ಷಪೂರ್ತಿ ಚಳಿ-ಸೆಕೆ-ಮಳೆಗಳ ಗೊಡವೆ ಇಲ್ಲದೆ, ದೇಹದ ಸಾಮರ್ಥ್ಯಕ್ಕಾಗಿಯೇ ವಾರಕ್ಕೆ 3 ದಿನ ಈಜುವ ನನಗೆ ಈಜು ಒಂದು ಏಕಾಕಿತನದ ಆಟ ಅನಿಸುತ್ತದೆ. ಈಜುವವನಿಗೆ ಸಂಗಾತಿ ಎಂದರೆ ಅವನ ಯೋಚನೆಗಳು, ಭಾವನೆಗಳು, ಕಲ್ಪನಾಶಕ್ತಿ. ಒಮ್ಮೆ ಈಜು ಬಂದ ಮೇಲೆ ನೀರಿನ ಭಯ ಮಾಯವಾಗುತ್ತದೆ. ಕೈ-ಕಾಲು ಹೇಗೆ ಹೊಡೆಯಬೇಕು, ತಲೆ ಯಾವಾಗ ಎತ್ತಬೇಕು ಎಂಬುದು ತನ್ನಿಂತಾನೇ, ಅಪ್ರಯತ್ನವಾಗಿ ಬರತೊಡಗುತ್ತದೆ.

ಹುಡುಗರಿಗೂ ಇರಬೇಕು ಅಳುವ ಸುಖ!

ಈಜುವಾಗ ಮಾತಾಡುವ ಹಾಗಿಲ್ಲ, ದೃಷ್ಟಿಗೆ ಕಾಣುವುದು ಕೆಳಗೆ ಅಥವಾ ಮುಂದೆ ಇರುವ ನೆಲ/ನೀರು ಮಾತ್ರ, ನೀರಿನಲ್ಲಿ ಕೇಳಿಸುವುದೂ ಸಾಧ್ಯವಿಲ್ಲ. ನಿಶ್ಯಬ್ದದ ಏಕಾಂಗಿತನವೇ ಈಜು ಕೊಡುವ ದೊಡ್ಡ ಅವಕಾಶ! ಈ ಅವಕಾಶದಲ್ಲಿ ನಿಮ್ಮ ಯೋಚನೆಗಳು-ಭಾವನೆಗಳು ಎಲ್ಲವೂ ನಿಮ್ಮೆದುರು ನಿಲ್ಲಲು ಸಾಧ್ಯವಿದೆ. ‘ದಡ ಮುಟ್ಟುವುದು

ಸಾಧ್ಯವೇ, ಸಾಧ್ಯವಿಲ್ಲ, ಮುಳುಗಿದರೆ? ಯಾವುದು ನನಗೆ ಬರುವುದಿಲ್ಲ, ಏನು ಬರುತ್ತದೆ’ ಎಂಬ ಯೋಚನೆಗಳಂತಹ ಸಾವಿರ ಯೋಚನೆಗಳು ಬಂದು ತೇಲುತ್ತ , ನಮ್ಮನ್ನು ಮುಳುಗಿಸುತ್ತವೆ! ಈ ಎಲ್ಲ ಯೋಚನೆಗಳಲ್ಲಿ ಮುಳುಗಿಯೂ ಪ್ರತಿ ಬಾರಿ ದಡ ಮುಟ್ಟಿದಾಗ, ದಡ ಮುಟ್ಟಿದ ಸಂತೋಷದ ಅನುಭವ ನಮ್ಮನ್ನು ಆವರಿಸಲು ಸಾಧ್ಯವಿದೆ!

ಪ್ರವಾಸ ಹೋಗದಿದ್ದರೇನಂತೆ ಮನೆಯಲ್ಲಿದ್ದೇ ಜಗತ್ತು ಸುತ್ತಿ ಬನ್ನಿ!

‘ಮೆಡಿಟೇಷನ್‌’ ಮಾಡಿದ್ರೆ ಹೇಗೆ? ಎಂದು ಜನ ಮತ್ತೆ ಮತ್ತೆ ನನ್ನನ್ನು ಕೇಳುತ್ತಾರೆ, ಧ್ಯಾನದ ಕ್ಲಾಸಿಗೆ ಸೇರುತ್ತಾರೆ. ಅವರೆಲ್ಲರನ್ನು ನಾನು ಕೇಳುತ್ತೇನೆ, ‘ಈಜು ಕಲಿತು ನೋಡಿ, ಮೆಡಿಟೇಷನ್‌ನಲ್ಲಿ ಸಿದ್ಧಿಸದ ಏಕಾಗ್ರತೆ ಬೇಗ ಬರುತ್ತದೆ. ‘ನಾನು ಯಾರು’ ಎಂಬುದಕ್ಕೆ ನಿಮ್ಮ ಸಾಮರ್ಥ್ಯ -ದೌರ್ಬಲ್ಯ ಎರಡೂ ಏಕಕಾಲಕ್ಕೆ ನಿಮ್ಮ ಮುಂದೆ, ಕೆಳಗಿನ ನೆಲ ಪೂಲಲ್ಲಿ ಸ್ಪಷ್ಟವಾಗಿ ಕಾಣಿಸುವಂತೆ ನಿಚ್ಚಳವಾಗಿಬಿಡುತ್ತವೆæ!’

ಈ ಬೇಸಿಗೆಯಲ್ಲಿ ಮಕ್ಕಳೊಂದಿಗೆ ‘ಪೂಲ್‌’ನಲ್ಲಿ ಇಳಿಯಿರಿ. ಈಜು ಕಲಿತಿರದಿದ್ದರೆ ಬದುಕಿನಲ್ಲಿ ಜೈಸಲೆಂದೇ ಅಲ್ಲದಿದ್ದರೂ, ಮ್ಜಅಕ್ಕಾದರೂ , ನಿಮ್ಮ ಸಾಮರ್ಥ್ಯ-ದೌರ್ಬಲ್ಯಗಳ ಸ್ಯಾಂಪಲ್‌ ನೋಡಲಾದರೂ ಈಜು ಕಲಿಯಲು ಪ್ರಯತ್ನಿಸಿ.

click me!