ಮೊಬೈಲ್ ಇಲ್ಲದೆ ಜೀವನ ಇಲ್ಲ ಎನ್ನುವಂತಾಗಿದೆ. ಇದು ನಮ್ಮ ಸುಖಿ ಜೀವನಕ್ಕೆ ಅಡ್ಡಿಯಾಗ್ತಿಲ್ಲ ಅಂತಾ ನಾವಂದುಕೊಂಡಿದ್ದೇವೆ. ಆದ್ರೆ ಅದ್ರಿಂದ ಆಗ್ತಿರುವ ಹಾನಿ ಅಷ್ಟಿಷ್ಟಲ್ಲ. ಮೊಬೈಲ್ ನಿಮ್ಮಿಂದ ದೂರ ಇರಬೇಕೆಂದ್ರೆ ಹೀಗೆ ಮಾಡಿ.
ಸ್ಮಾಟ್ಫೋನ್ ಗಳು ನಮ್ಮ ಜೀವನದ ಅವಿಭಾಜ್ಯ ಅಂಗ ಎನ್ನುವಂತಾಗಿದೆ. ಇಡೀ ದಿನ ಫೋನ್ ನಲ್ಲಿ ಮುಳುಗಿರುವ ಜನರು ಸಾಮಾಜಿಕ ಜಾಲತಾಣ ಸೇರಿದಂತೆ ಅನೇಕ ವಿಡಿಯೋ, ವಿಷ್ಯಗಳನ್ನು ನೋಡ್ತಿರುತ್ತಾರೆ. ಮನೆಯಲ್ಲಿರುವ ಜನರ ಜೊತೆ ಮಾತನಾಡುವುದಕ್ಕಿಂತ ಆನ್ಲೈನ್ ನಲ್ಲಿ ಚಾಟ್ ಮಾಡೋರ ಸಂಖ್ಯೆ ಹೆಚ್ಚಿದೆ. ಇದನ್ನು ಇತ್ತೀಚಿಗೆ ನಡೆದ ವಿವೋ ಸಮೀಕ್ಷೆ ವರದಿ ಕೂಡ ದೃಢಪಡಿಸಿದೆ.
ವಿವೋ (Vivo) ಇತ್ತೀಚೆಗೆ ಸ್ಮಾರ್ಟ್‌ಫೋನ್‌ಗಳು ಮತ್ತು ಮಾನವ ಸಂಬಂಧಗಳ ಮೇಲೆ ಅವುಗಳ ಪ್ರಭಾವ 2023 ಎಂಬ ಶೀರ್ಷಿಕೆಯ ವರದಿಯನ್ನು ಪ್ರಕಟಿಸಿದೆ. ಜನರು ಮೊಬೈಲ್ ಬಳಸುವ ಹಾಗೂ ಮೊಬೈಲ್ (Mobile) ಸ್ಕ್ರೀನ್ ಗೆ ಸಂಬಂಧಿಸಿದ ಅನೇಕ ಅಚ್ಚರಿಯ ಸಂಗತಿಗಳನ್ನು ಬಿಚ್ಚಿಟ್ಟಿದೆ. ವರದಿ ಪ್ರಕಾರ, ಶೇಕಡಾ 90ರಷ್ಟು ಜನರು ತಮ್ಮ ಫೋನ್‌ಗಳನ್ನು ತಮ್ಮ ಜೀವನದ ಅವಿಭಾಜ್ಯ ಅಂಗವೆಂದು ಪರಿಗಣಿಸುತ್ತಾರೆ. ಶೇಕಡಾ 83 ಮಕ್ಕಳು ಮೊಬೈಲ್ ಫೋನ್ ತಮ್ಮ ಜೀವನದ ಭಾಗ ಎಂದು ಒಪ್ಪಿಕೊಂಡಿದ್ದಾರೆ. ಇನ್ನು ಶೇಕಡಾ 83ರಷ್ಟು ಮಕ್ಕಳು ತಮ್ಮ ಫೋನ್‌ಗಳು ತಮ್ಮ ಜೀವನದಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ನಂಬುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಶೇಕಡಾ 91 ಮಂದಿ ತಮ್ಮ ಮೊಬೈಲ್ ನಿಂದ ಬೇರ್ಪಟ್ಟಾಗ ಆತಂಕವನ್ನು ಅನುಭವಿಸುತ್ತಾರೆ. ಆತಂಕಕಾರಿ ಸಂಗತಿಯೆಂದರೆ ಶೇಕಡಾ 89ರಷ್ಟು ಮಕ್ಕಳು ತಮ್ಮನ್ನು ಆನ್‌ಲೈನ್ ಪ್ರಭಾವಿಗಳಿಗೆ ಹೋಲಿಸಿಕೊಳ್ಳುತ್ತಿದ್ದಾರೆ. ಮೊಬೈಲ್ ವೀಕ್ಷಣೆ ಹಾಗೂ ಪ್ರಭಾವಿಗಳ ಜೊತೆ ತಮ್ಮನ್ನು ಹೋಲಿಸಿಕೊಳ್ಳುವ ಪ್ರವೃತ್ತಿ ಪ್ರಸ್ತುತ ಅವರ ಜೀವನಶೈಲಿಯಲ್ಲಿ ಅತೃಪ್ತಿ ಅಥವಾ ಖಿನ್ನತೆಕೆ ಕಾರಣವಾಗ್ತಿದೆ. ಫೋನ್ ನೊಂದಿಗೆ ಆಳವಾದ ಸಂಬಂಧ ಹೊಂದಿದ ಜನರು ಈಗ್ಲೇ ಅದರಿಂದ ಹೊರಗೆ ಬರುವ ಪ್ರಯತ್ನ ನಡೆಸಬೇಕಿದೆ. ಇದಕ್ಕಾಗಿ ಎಲ ಎಚ್ಚರಿಗೆ ಹೆಜ್ಜೆಗಳನ್ನು ಇಡಬೇಕು.
ಟಾಯ್ಲೆಟ್‌ನಲ್ಲಿ ಪ್ರೆಶರ್ ಹಾಕಿದಷ್ಟು, ಸಾವಿಗೆ ಸಮೀಪಿಸುತ್ತಿದ್ದೀರಿ ಎಂದರ್ಥ!
ಜಾಗೃತಿ : ಮೊಬೈಲ್ ನಿಂದ ದೂರವರಲು ನೀವು ನಿಮ್ಮನ್ನು ಜಾಗೃತಿಗೊಳಿಸಬೇಕು. ನಿಮ್ಮ ಹವ್ಯಾಸ, ಸಂಬಂಧಗಳನ್ನು ಬಲಪಡಿಸಲು ಆಧ್ಯತೆ ನೀಡಬೇಕು. ನೀವು ಫೋನ್ ನೋಡಲು 20 ನಿಮಿಷ ಕಳೆದಿದ್ದೀರಿ ಎಂದಾದ್ರೆ ಆ 20 ನಿಮಿಷ ನಿಮ್ಮ ಪ್ರೀತಿಪಾತ್ರರೊಂದಿಗೆ ಅಥವಾ ವೈಯಕ್ತಿಕ ಆಸಕ್ತಿಗಳ ಮೇಲೆ ಕೇಂದ್ರೀಕರಿಸಿಲ್ಲ ಎಂದರ್ಥಮಾಡಿಕೊಳ್ಳಿ. ಆ ಸಮಯವನ್ನು ಉಳಿಸಿ, ನಿಮ್ಮ ಹವ್ಯಾಸಕ್ಕೆ ಬಳಸಿಕೊಳ್ಳಿ.
ಫೋನ್ ನಲ್ಲಿ ಕಳೆದ ಸಮಯ ಲೆಕ್ಕ ಹಾಕಿ : ಒಂದು ಬಾರಿ ಕುಳಿತುಕೊಂಡು ಈ ವರ್ಷ ನೀವು ಎಷ್ಟು ಸಮಯ ಫೋನ್ ನಲ್ಲಿ ಕಳೆದಿದ್ದೀರಿ ಎಂಬುದನ್ನು ಲೆಕ್ಕ ಮಾಡಿ. ಅದಕ್ಕೆ ಸಂಬಂಧಿಸಿದ ಅಪ್ಲಿಕೇಷನ್ ಕೂಡ ನೀವು ಬಳಸಬಹುದು. ಕಳೆದ ಸಮಯವನ್ನು 365 ರಿಂದ ಗುಣಿಸಿ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ವ್ಯರ್ಥ ಮಾಡಿದ ಸಮಯ ಎಷ್ಟು ಎನ್ನುವ ಜ್ಞಾನ ಆಗ ನಿಮಗೆ ಸಿಗುತ್ತದೆ.
60 ವರ್ಷ ಮೇಲ್ಪಟ್ಟವರು ಮಾತ್ರವಲ್ಲ, ಈ ರೋಗ ಲಕ್ಷಣಗಳಿದ್ದವರೂ ಮಾಸ್ಕ್ ಧರಿಸಬೇಕು!
ಫೋನ್ ದೂರವಿಡಲು ಹೀಗೆಲ್ಲ ಮಾಡಿ : ನಿಮ್ಮಿಂದ ಫೋನ್ ಸಾಧ್ಯವಾದಷ್ಟು ದೂರವಿದ್ರೆ ನಿಮಗೆ ಒಳ್ಳೆಯದು. ಹಾಸಿಗೆ ಪಕ್ಕದಲ್ಲೇ ಜಾರ್ಜರ್ ಪಾಯಿಂಟ್ ಇದ್ರೆ, ಚಾರ್ಜ್ ಹಾಕಿದ ಸಮಯದಲ್ಲೂ ನೀವದನ್ನು ವೀಕ್ಷಿಸುತ್ತೀರಿ. ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು ಜೊತೆಗಿರುವಾಗ ಫೋನ್ ಬಳಸಬೇಡಿ. ಊಟ, ಆಹಾರ ಸೇವನೆ ಮಾಡುವಾಗ ಫೋನ್ ಬಳಸದಂತೆ ಅವರಿಗೂ ಸಲಹೆ ನೀಡಿ.
ಫೋನಿನ ಆಕರ್ಷಣೆ ಕಡಿಮೆ ಮಾಡಿ : ನಿಮ್ಮ ಫೋನ್ ಸ್ಕ್ರೀನ್ ಬಣ್ಣ ಬಣ್ಣದಲ್ಲಿದ್ದರೆ ಅದು ನಿಮ್ಮನ್ನು ಆಕರ್ಷಿಸುತ್ತದೆ. ಅದೇ ಅದು ಕಪ್ಪು – ಬಿಳಿ ಬಣ್ಣದಲ್ಲಿದ್ದರೆ ಆಕರ್ಷಣೆ ಕಡಿಮೆ. ಮೊದಲು ನಿಮ್ಮ ಫೋನ್ ಸೆಟ್ಟಿಂಗ್ ಬದಲಿಸಿ. ಈ ಕಪ್ಪು ಬಿಳುಪು ಕಡಿಮೆ ಡೋಪಮೈನ್ ಬಿಡುಗಡೆ ಮಾಡುತ್ತದೆ. ಮುಖ್ಯ ಅಪ್ಲಿಕೇಷನ್ ಗಳನ್ನು ಮರೆಮಾಚಿಡಿ. ನೀವು ಫೋನ್ ಅನ್ ಲಾಕ್ ಮಾಡಿದಾಗ ನಿಮಗೆ ಈ ಅಪ್ಲಿಕೇಷನ್ ಗಳು ಕಣ್ಣಿಗೆ ಕಾಣದಂತೆ ನೋಡಿಕೊಳ್ಳಿ.