ಸಂಶೋಧನೆ ಹೆಸರಲ್ಲಿ ಗರ್ಭಿಣಿ ಕೋತಿಗಳಿಗೆ ಟಾರ್ಚರ್: PETA ನಿದ್ದೆಗೆಡಿಸಿದ ಫೋಟೋಸ್!
First Published | May 17, 2020, 5:32 PM ISTಸದ್ಯ ವಿಶ್ವದೆಲ್ಲೆಡೆ ಕೊರೋನಾ ತಡೆಗಟ್ಟುವ ಔಷಧಿ ಶೋಧ ನಡೆಸಲು ಕಸರತ್ತು ಮುಂದುವರೆದಿದೆ. ಈ ಮಹಾಮಾರಿ ಹೊಡೆದೋಡಿಸುವ ನಿಟ್ಟಿನಲ್ಲಿ ಹಲವಾರು ಲಸಿಕೆಗಳೂ ಅಭಿವೃದ್ಧಿಪಡಿಸಲಾಗುತ್ತಿವೆ. ಇವತ್ತಿಗೂ ಕೂಡಾ ವಿಜ್ಞಾನಿಗಳು ಯಾವುದೇ ಔಷಧಿ ಕಂಡು ಹಿಡಿದರೂ ಮನುಷ್ಯನಿಗೆ ಬಳಸುವ ಮುನ್ನ ಪ್ರಾಣಿಗಳ ಮೇಲೆ ಪ್ರಯೋಗಿಸಲಾಗುತ್ತದೆ. ಇವುಗಳಲ್ಲಿ ಇಲಿಗಳಿಂದ ಹಿಡಿದು ಕೋತಿ ಸೇರಿದಂತೆ ಅನೇಕ ಪ್ರಾಣಿಗಳ ಮೇಲೆ ಪ್ರಯೋಗಿಸಲಾಗುತ್ತದೆ. ಆದರೆ ಅನೇಕ ಬಾರಿ ಇಂತಹ ಪ್ರಯೋಗ ನಡೆಸುವ ಲ್ಯಾಬ್‌ನಲ್ಲಿ ಸಂಶೋಧನೆ ಹೆಸರಲ್ಲಿ ಪ್ರಾಣಿಗಳನ್ನು ಹಿಂಸಿಸುತ್ತಿರುವುದೂ ಗಮನಕ್ಕೆ ಬಂದಿದೆ. ಇತ್ತೀಚೆಗಷ್ಟೇ ಅಮೆರಿಕದ ಆರೆಗಾನ್‌ನ ಹಿಲ್ಸ್‌ಬೋರೋದಲ್ಲಿರುವ ನ್ಯಾಷನಲ್ ಪ್ರೈಮೆಟ್ ರಿಸರ್ಚ್ ಸೆಂಟರ್‌ನ ಕೆಲ ಶಾಕಿಂಗ್ ಫೋಟೋಗಳು ವೈರಲ್ ಆಗಿವೆ. ಇಲ್ಲಿನ ಲ್ಯಾಬ್‌ನಲ್ಲಿ ಪ್ರಯೋಗದ ಹೆಸರಲ್ಲಿ ಕೋತಿಗಳಿಗೆ ಟಾರ್ಚರ್ ನೀಡಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಗರ್ಭಿಣಿ ಕೋತಿಗಳಿಗೆ. ಪೇಟಾ ಸದ್ಯ ಈ ಫೋಟೋಗಳ ಆಧಾರದ ಮೇರೆಗೆ ಸಂಶೋಧಕರ ವಿರುದ್ಧ ತನಿಖೆಗಿಳಿದಿದೆ.