ಬ್ರಾ ಕೇವಲ ಒಳ ಉಡುಪಲ್ಲ, ವಿಶ್ವಾಸ ಹೆಚ್ಚಿಸೋ ವಸ್ತ್ರ

First Published | Mar 7, 2020, 4:02 PM IST

ಮಹಿಳೆಯರು ಸಂಕೋಚ ಪಡುವ ಒಳ ಉಡುಪಾಗಿ ಬ್ರಾ ಉಳಿದಿಲ್ಲ. ಮಹಿಳೆಯರ ಕಾನ್ಫಿಂಡೆನ್ಸ್‌ ಹೆಚ್ಚಿಸುವ ವಸ್ತ್ರವಾಗಿ ಮಾರ್ಪಟ್ಟಿರುವುದು ಸುಳ್ಳಲ್ಲ.  ಒಳ ಉಡುಪಾಗಿ ಮಾತ್ರ ಅಗತ್ಯವಾಗಿದ್ದ  ಬ್ರಾ ಈಗ ಫ್ಯಾಷನ್‌ ಸ್ಟೇಟ್‌ಮೆಂಟ್‌ ಅಗಿ  ಬದಲಾಗಿ ತರಾವರಿ ಡಿಸೈನ್‌ಗಳ, ಮಾದರಿಗಳ ಬ್ರಾಗಳು ನಾರಿಯರ ಮನ ಗೆದ್ದಿದೆ. ಹೆಂಗಳೆಯರ ಸೌಂದರ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಬ್ರೇಸಿಯರ್ಸ್ ಇಂದು ಮಾರುಕಟ್ಟೆಯಲ್ಲಿ ವಿಧ ವಿಧವಾಗಿ ಸಿಗುತ್ತವೆ. ಮಹಿಳೆಯರು ಡ್ರೆಸ್‌ ಮತ್ತು ಚಟುವಟಿಕೆಗೆ ತಕ್ಕ ಬ್ರಾ ತೊಡುವುದು ಅಗತ್ಯ.

ಹೊರಾಂಗಣ ಚಟುವಟಿಕೆ ಓಟ, ಆಟ ಯಾ ಜಿಮ್‌ ವರ್ಕೌಟ್‌ ಸಮಯದಲ್ಲಿ ಕಂಫರ್ಟ್‌ಬಲ್ ಆಗಿರಲು ಸ್ಪೋರ್ಟ್ಸ್‌ ಬ್ರಾ ಕಡ್ಡಾಯವಾಗಿ ಆರಿಸಿಕೊಳ್ಳಿ.
ಸ್ತನಗಳನ್ನು ಎತ್ತಿ ಹಿಡಿದು ಶೇಪ್‌ ನೀಡಲು ಪುಶ್‌ ಅಪ್‌ ಬ್ರಾಗಳು ಬೆಸ್ಟ್‌.
Tap to resize

ತೆಳುವಾದ ಟಾಪ್ ಅಥವಾ ವುಲನ್‌ ಪುಲ್‌ ಓವರ್‌ ಧರಿಸುವಾಗ ಸ್ಲಿಪ್‌ ಜೊತೆ ಸೇರಿಕೊಂಡಿರುವ ಬಿಲ್ಟ್‌ ಇನ್‌ ಬ್ರಾಗಳನ್ನು ಧರಸಿ.
ಸ್ಟ್ರಾಪ್‌ಲೆಸ್‌ ಬ್ರಾಗಳು ಅಫ್‌ ಶೋಲ್ಡರ್ ಡ್ರೆಸ್‌ , ಬೋಟ್‌ ನೆಕ್ ಬ್ಲೌಸ್‌ಗಳ ಅಂದ ಹೆಚ್ಚಿಸುತ್ತವೆ.
ಮಕ್ಕಳಿಗೆ ಹಾಲುಣಿಸುವ ನ್ಯೂ ಮಮ್ಮಿಗಳಿಗೆ ಮ್ಯಾಟರ್‌ನೆಟಿ ಬ್ರಾಗಳು.
ಬ್ಯಾಕ್‌ಲೆಸ್‌ ಡ್ರೆಸ್‌ಗಳಿಗೆ ಅಂಟಿಸಿ ಕೊಳ್ಳುವ ಸಿಲಿಕಾನ್‌ ಬ್ರಾಗಳು ಚೆಂದ. ಸಣ್ಣ ಸ್ತನಗಳನ್ನು ಹೊಂದಿದವರಿಗೆ ಹೇಳಿಮಾಡಿಸಿದ ಟೈಪ್‌.
ವೈರ್‌ಲೆಸ್‌ ಬ್ರಾಗಳು ಹೆಚ್ಚು ಕಂಫರ್ಟಬಲ್‌ ವಿಧದ ಬ್ರಾಗಳಲ್ಲಿ ಒಂದು. ಆರಿಸಿಕೊಳ್ಳುವ ಸರಿಯಾದ ಸೈಜ್‌ ಬಗ್ಗೆ ಗಮನವಿರಲಿ.
ಕುಂಚಕಗಳಿಗೆ ಸಪೋರ್ಟ್‌ ಮತ್ತು ಶೇಪ್‌ ನೀಡಲು ಅಂಡರ್‌ವೈರ್‌ ಬ್ರಾಗಳು ಬೆಸ್ಟ್‌.
ಚೆಂದದ ಗೌನ್‌, ಬ್ಯಾಕ್‌ಲೆಸ್‌ ಟಾಪ್‌, ಸ್ಟ್ರಾಪ್‌ ಲೆಸ್‌ ಡ್ರೆಸ್‌, ಟೀ ಶರ್ಟ್‌ ಎಲ್ಲದಕ್ಕೂ ಸರಿಹೊಂದುವ ಹಾಲ್ಟರ್‌ ಬ್ರಾ ತೊಟ್ಟು ಶೋ ಅಫ್‌ ಮಾಡಿ.
ಟೈಟ್‌ ಟಾಪ್‌ ತೊಟ್ಟಾಗ ಮೇಲೆ ಒಳ ಉಡುಪಿನ ಯಾವುದೇ ಮಾರ್ಕ್‌ ಬಿಳದಿರಲು ಟೀ ಶರ್ಟ್‌ ಬ್ರಾ ನಿಮ್ಮ ಆಯ್ಕೆ ಆಗಿರಲಿ.

Latest Videos

click me!