ಪ್ರಸವ ನಂತರದ ಮನಸ್ಥಿತಿ ಬದಲಾವಣೆಗಳು (Postpartum Mood Swings) ಅಂದ್ರೆ ಮೂಡ್ ಸ್ವಿಂಗ್ ಅಥವಾ 'ಬೇಬಿ ಬ್ಲೂಸ್' ಅನೇಕ ಮಹಿಳೆಯರಿಗೆ ಹೆಚ್ಚು ಕಾಲ ಉಳಿಯುವುದಿಲ್ಲ. ಆದರೂ ಕೆಲವು ಮಹಿಳೆಯರು ಈ ಸಮಸ್ಯೆ ಅನುಭವಿಸುತ್ತಾರೆ. ಸಂತೋಷ ಅಥವಾ ದುಃಖವನ್ನು ಅನುಭವಿಸುವುದರ ಜೊತೆಗೆ, ಅವು ಮಹಿಳೆಗೆ ಕಾರಣವಿಲ್ಲದೆ ಅಳಲು ಕಾರಣವಾಗಬಹುದು, ತಾಳ್ಮೆ ಕಳೆದುಕೊಳ್ಳಬಹುದು, ಕಿರಿಕಿರಿಯಾಗಬಹುದು, ಚಡಪಡಿಕೆ, ಆತಂಕ ಅಥವಾ ಹೆರಿಗೆಯ ನಂತರ ಒಂಟಿ ಅನಿಸುವುದು ಇತ್ಯಾದಿ. ಈ ಭಾವನೆಗಳು ಹೆರಿಗೆಯ ನಂತರ ಅಲ್ಪಾವಧಿಯವರೆಗೆ ಮಾತ್ರ ಇರಬಹುದು ಅಥವಾ ಹಲವಾರು ವಾರಗಳವರೆಗೆ ಇರಬಹುದು.
ಬೇಬಿ ಬ್ಲೂಸ್ ಎಂದರೇನು? (What is baby blue)
ಸರಿಸುಮಾರು 80 ಪ್ರತಿಶತದಷ್ಟು ಪ್ರಸವ ನಂತರದ ತಾಯಂದಿರು ಬೇಬಿ ಬ್ಲೂಸ್ ಅನ್ನು ಅನುಭವಿಸುತ್ತಾರೆ, ಇದು ಹೆರಿಗೆಯ ನಂತರ ದುಃಖ, ಆತಂಕ, ಒತ್ತಡ ಮತ್ತು ಮನಸ್ಥಿತಿಯ ಬದಲಾವಣೆಗಳ ಅವಧಿಯಾಗಿದೆ. ಯಾವಾಗಲೂ ಎಲ್ಲಾ ಮಹಿಳೆಯರು ಹೆರಿಗೆ ನಂತರ ಕೇವಲ ಸಂತೋಷದಿಂದಲೇ ಇರುತ್ತಾರೆ ಎನ್ನಲಾಗೋದಿಲ್ಲ.
ಬೇಬಿ ಬ್ಲೂಸ್ ಯಾವಾಗ ಪ್ರಾರಂಭವಾಗುತ್ತದೆ?
ಮಗುವಿಗೆ ಜನ್ಮ ನೀಡಿದ ಕೆಲವೇ ದಿನಗಳಲ್ಲಿ ಬೇಬಿ ಬ್ಲೂಸ್ ಕಾಣಿಸಿಕೊಳ್ಳುವುದು ಅಸಾಮಾನ್ಯವೇನಲ್ಲ, ಆದರೆ ಹೆರಿಗೆ ವಿಶೇಷವಾಗಿ ಕಷ್ಟಕರವಾಗಿದ್ದರೆ, ನೀವು ಅವುಗಳನ್ನು ಬೇಗನೆ ಅನುಭವಿಸಬಹುದು. ಇದರಿಂದ ಹೊಸ ತಾಯಿ ತನ್ನ ಮನಸ್ಥಿತಿಯನ್ನು ಹತೋಟಿಯಲ್ಲಿಡಲು (mood control) ಸಾಧ್ಯವಾಗದೇ ಇರಬಹುದು.
ಬೇಬಿ ಬ್ಲೂಸ್ ಅಥವಾ ಪ್ರಸವಾನಂತರದ ಮೂಡ್ ಸ್ವಿಂಗ್ ಗೆ ಕಾರಣವೇನು?
ನಿಖರವಾಗಿ ಕಾರಣವನ್ನು ಗುರುತಿಸಲು ಸಾಧ್ಯವಾಗದಿದ್ದರೂ ಕೆಲವೊಂದು ಕಾರಣದಿಂದ ಈ ಸಮಸ್ಯೆ ಉಂಟಾಗುತ್ತೆ. ಜನನದ ನಂತರ ನಿಮ್ಮ ದೇಹವು ತೀವ್ರವಾದ ಹಾರ್ಮೋನುಗಳ ಏರಿಳಿತಗಳಿಗೆ (hormone imbalance) ಒಳಗಾಗುತ್ತದೆ, ಇದು ನಿಮ್ಮ ಮಗುವನ್ನು ಚೇತರಿಸಿಕೊಳ್ಳಲು ಮತ್ತು ನೋಡಿಕೊಳ್ಳಲು ಸಹಾಯ ಮಾಡುತ್ತದೆ, ನಿಮ್ಮ ಗರ್ಭಾಶಯವನ್ನು ಕುಗ್ಗಿಸುತ್ತದೆ ಮತ್ತು ಹಾಲುಣಿಸುವಿಕೆಯನ್ನು ಉತ್ತೇಜಿಸುತ್ತದೆ.
ಆ ಹಾರ್ಮೋನುಗಳ ಬದಲಾವಣೆಗಳ ಪರಿಣಾಮವಾಗಿ, ಪ್ರಸವ ನಂತರ ತಾಯಂದಿರು ಮಾನಸಿಕ ಬದಲಾವಣೆಗಳನ್ನು ಸಹ ಅನುಭವಿಸಬಹುದು. ಇದರಿಂದ ಹೆಚ್ಚಿನ ಮಹಿಳೆಯರು ಕಿರಿಕಿರಿ, ಸಿಟ್ಟು, ತಾಳ್ಮೆ ಕೆಡುವುದನ್ನು ಕಾಣಬಹುದು. ಈಗಷ್ಟೆ ತಾಯಿಯಾದ ಮಹಿಳೆ ಮಗುವಿನ ಕಾರಣದಿಂದಾಗಿ ನಿಯಮಿತವಾಗಿ ನಿದ್ರೆ ಮಾಡಲು ಸಾಧ್ಯವಾಗೋದಿಲ್ಲ. ಮತ್ತು ಪ್ರಸವಾನಂತರದ ಅವಧಿಯಲ್ಲಿ ಹೊಸ ಮಗುವಿನೊಂದಿಗೆ ಬರುವ ಎಲ್ಲಾ ಪ್ರಮುಖ ಜೀವನಶೈಲಿ ಬದಲಾವಣೆಗಳು (lifestyle changes) ಮತ್ತು ಜೀವನದ ಬದಲಾವಣೆಗಳನ್ನು ನಿಭಾಯಿಸಬೇಕಾಗುತ್ತದೆ. ಇದರಿಂದಾಗಿಯೇ ಪ್ರಸವಾನಂತರದ ಮನಸ್ಥಿತಿ ಬದಲಾಗುವ ಸಾಧ್ಯತೆಯಿದೆ.
ಬೇಬಿ ಬ್ಲೂಸ್ನ ಲಕ್ಷಣಗಳು ಯಾವುವು?
ಪ್ರಸವ ನಂತರದ ಮೂಡ್ ಸ್ವಿಂಗ್ ಮಗು ಜನಿಸಿದ ಎರಡರಿಂದ ಮೂರು ದಿನಗಳ ನಂತರ ಕಾಣಿಸಿಕೊಳ್ಳುವುದು ಸಾಮಾನ್ಯ. ಸಾಮಾನ್ಯವಾಗಿ, ರೋಗಲಕ್ಷಣಗಳು ಹತ್ತು ದಿನಗಳಲ್ಲಿ ತಾವಾಗಿಯೇ ಕಣ್ಮರೆಯಾಗುತ್ತವೆ, ಆದರೆ ಸಾಂದರ್ಭಿಕವಾಗಿ ಅದು ಕಣ್ಮರೆಯಾಗಲು ಹದಿನಾಲ್ಕು ದಿನಗಳವರೆಗೆ ತೆಗೆದುಕೊಳ್ಳಬಹುದು.
ಬೇಬಿ ಬ್ಲೂಸ್ ರೋಗ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ, ಆದರೆ ಸಾಮಾನ್ಯವಾಗಿ, ಸಣ್ಣ ಪ್ರಚೋದನೆಗಳಿಗಾಗಿ ವಿವರಿಸಲಾಗದಷ್ಟು ಅಳುವುದು, ಮೂಡ್ ಸ್ವಿಂಗ್ (Mood Swing) ಹೊಂದಿರುವುದು ಅಥವಾ ವಿಶೇಷವಾಗಿ ಕಿರಿಕಿರಿಗೊಳ್ಳುವುದು, ನಿಮ್ಮ ಮಗುವಿನ ಜೊತೆಗೆ ಬಾಂಡಿಂಗ್ ಬೆಳೆಸಲು ಸಾಧ್ಯವಾಗದೇ ಇರೋದು, ಚಡಪಡಿಕೆ ಅಥವಾ ನಿದ್ರಾಹೀನತೆಯನ್ನು (sleeplessness) ಅನುಭವಿಸುವುದು, ವಿಪರೀತ ದಣಿವು ಇವೆಲ್ಲವೂ ಬೇಬಿ ಬ್ಲೂಸ್ ಲಕ್ಷಣಗಳು.
ನೆನಪಿಟ್ಟುಕೊಳ್ಳಬೇಕಾದ ವಿಷಯಗಳು :
ಪ್ರಸವದ ಎರಡು ವಾರಗಳ ನಂತರವೂ ನೀವು ಇನ್ನೂ ದುಃಖಿತರಾಗಿದ್ದರೆ, ಆತಂಕಕ್ಕೊಳಗಾಗಿದ್ದರೆ ಅಥವಾ ಅತಿಯಾದ ಒತ್ತಡದಲ್ಲಿದ್ದರೆ ನೀವು ಪ್ರಸವಾನಂತರದ ಖಿನ್ನತೆಯನ್ನು ಹೊಂದಿರಬಹುದು. ಇದು ಸಾಮಾನ್ಯವಾಗಿ ಎರಡು ವಾರಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ, ಮತ್ತು ಇದು ಸಾಮಾನ್ಯವಾಗಿ ಜನನದ ನಂತರ ಬಹಳ ಬೇಗನೆ ಪ್ರಾರಂಭವಾಗುತ್ತದೆ, ಆದ್ದರಿಂದ ಜನನದ ಹಲವಾರು ವಾರಗಳ ನಂತರ ನೀವು ಇದ್ದಕ್ಕಿದ್ದಂತೆ ಖಿನ್ನತೆಗೆ (postpartum depression) ಒಳಗಾಗಲು ಪ್ರಾರಂಭಿಸಿದರೆ, ಅದು ಬಹುಶಃ ಬೇಬಿ ಬ್ಲೂಸ್ ಅಲ್ಲ ಅನ್ನೋದನ್ನು ನೆನಪಿಡಿ.
ರೋಗದ ತೀವ್ರತೆಯ ಬಗ್ಗೆ ವ್ಯಕ್ತಿಯ ಕಲ್ಪನೆಯು ಇನ್ನೊಬ್ಬ ವ್ಯಕ್ತಿಯ ಅಭಿಪ್ರಾಯಕ್ಕಿಂತ ಭಿನ್ನವಾಗಿರಬಹುದು, ಆದ್ದರಿಂದ ಬೇಬಿ ಬ್ಲೂಸ್ ವ್ಯಕ್ತಿನಿಷ್ಠವಾಗಿರುತ್ತದೆ. ಸಾಮಾನ್ಯವಾಗಿ, ನೀವು ಖಿನ್ನತೆಗೆ ಒಳಗಾಗುತ್ತೀರಿ ಮತ್ತು ನಿಮ್ಮಲ್ಲೇ ನೀವು ಕಳೆದು ಹೊಗುತ್ತೀರಿ ನಿಜಾ, ಆದರೆ ಅವು ನಿಮ್ಮ ಜೀವನದ ಗುಣಮಟ್ಟದ ಮೇಲೆ ಹೆಚ್ಚು ಪರಿಣಾಮ ಬೀರಬಾರದು. ಹೀಗೆ ಆದರೆ ಪ್ರಸವಾನ್ಂತರದ ಖಿನ್ನತೆ ತೀವ್ರವಾಗಿರುತ್ತೆ.
ಬೇಬಿ ಬ್ಲೂಸ್ ಗೆ ಚಿಕಿತ್ಸೆ ನೀಡುವುದು ಹೇಗೆ?
ನಿಮ್ಮ ಮಗು ನಿದ್ರೆ ಮಾಡುತ್ತಿರುವಾಗ, ನೀವು ಸಹ ಸಾಧ್ಯವಾದಷ್ಟು ನಿದ್ರೆ ಮಾಡಿ.
ಆರೋಗ್ಯಕರ ಆಹಾರಗಳಿಂದ ನಿಮ್ಮ ದೇಹಕ್ಕೆ ಶಕ್ತಿ ನೀಡಿ.
ವಾಕಿಂಗ್, ತಾಜಾ ಗಾಳಿ ಮತ್ತು ಸೂರ್ಯನ ಬೆಳಕು ಇವೆಲ್ಲವೂ ನಿಜವಾಗಿಯೂ ಜೀವನದಲ್ಲಿ ಬದಲಾವಣೆ ತರಬಹುದು.
ಸಹಾಯವನ್ನು ಸ್ವೀಕರಿಸಲು ಹಿಂಜರಿಯಬೇಡಿ.
ನಿಮ್ಮನ್ನು ಮತ್ತು ನಿಮ್ಮ ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ.