ಶ್ರೀರಸ್ತು ಶುಭಮಸ್ತು : ಅಭಿ ಚಾಕರಿ ಮಾಡ್ತಿರೋ ತುಳಸಿ ಬಗ್ಗೆ ವೀಕ್ಷಕರ ಅಸಮಾಧಾನ, ಮಗನಿಗೆ ಅನ್ಯಾಯ ಮಾಡ್ತಿದ್ದಾಳ ತುಳಸಿ!

First Published | Aug 14, 2024, 3:50 PM IST

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಕಥೆ ಏರಿಳಿತವಾಗಿ ಸ್ಲೋ ಆಗಿ ಸಾಗ್ತಾ ಇದೆ. ಇದರ ಮಧ್ಯೆ ತುಳಸಿ ಪಾತ್ರದ ಬಗ್ಗೆ ಜನ ಅಸಮಧಾನ ಹೊರ ಹಾಕ್ತಿದ್ದಾರೆ. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು (Srirasthu Shubhamastu)ಧಾರಾವಾಹಿ ತುಂಬಾನೆ ನಿಧಾನವಾಗಿ ಸಾಗ್ತಿದೆ, ಕಥೆ ವೇಗ ಪಡಿತಿಲ್ಲಾ ಅಂತಾ ಜನ ಟೀಕೆ ಮಾಡುತ್ತಿರೋ ಮಧ್ಯೆ ಇದೀಗ ತುಳಸಿ ಪಾತ್ರದ ಕುರಿತು ಜನರು ಗರಂ ಆಗಿದ್ದಾರೆ. ಕಾರಣ ಅಭಿ ಮತ್ತು ಅವಿ ಮೇಲಿನ ಪ್ರೀತಿ. 
 

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ, ಮಾಧವನನ್ನು ಮದುವೆಯಾಗಿ ಅವರ ಮನೆ ಸೇರಿದ ಮೇಲೆ ಮಗ ಸಮರ್ಥ್ ಅಮ್ಮನ ಮೇಲೆ ಕೋಪಗೊಂಡಿದ್ದಾನೆ. ತನಗೆ ಇಷ್ಟವಿಲ್ಲ, ಯಾರಿಗೂ ಗೊತ್ತಿಲ್ಲದೇ ಅಮ್ಮ ಮದುವೆಯಾಗಿದ್ದು, ಸಮರ್ಥ್ ಕೋಪಕ್ಕೆ ಕಾರಣವಾಗಿದೆ. 
 

Tap to resize

ಇನ್ನೊಂದೆಡೆ ತುಳಸಿ ಮಾಧವನ ಮನೆ ಸೇರಿದ ಮೇಲೆ ಅಲ್ಲಿ ಅಭಿ ಮತ್ತು ಅವಿ ಇಬ್ಬರೂ ಆಕೆಯನ್ನು ಸ್ವೀಕರಿಸಿರಲಿಲ್ಲ, ಆದರೆ ದಿನಕಳೆದಂತೆ ತುಳಸಿಯ ಪ್ರೀತಿ, ಕಾಳಜಿಯನ್ನ ಅರ್ಥ ಮಾಡ್ಕೊಂಡ ಅವಿ ತುಳಸಿಯನ್ನ ಅಮ್ಮ ಅಂತ ಒಂಪ್ಕೊಂಡಿದ್ದಾನೆ, ಆದರೆ ಅಭಿಗೆ ಮಾತ್ರ ತುಳಸಿ ಮೇಲಿನ ಕೋಪ ಕಡಿಮೆಯಾಗಿಲ್ಲ. 
 

ಹಾಗೇ ನೋಡಿದ್ರೆ ಅಭಿ ಒಳ್ಳೆ ಹುಡುಗನೇ, ಆತನಿಗೂ ತುಳಸಿ ಮೇಲೆ ಪ್ರೀತಿ ಗೌರವ ಎಲ್ಲಾ ಇದೆ, ಆದರೆ ಶಾರ್ವರಿ ಮತ್ತು ದೀಪಿಕಾ ಮಾಡೋ ಕುತಂತ್ರದಿಂದ ಅವನು ಇವತ್ತಿಗೂ ತುಳಸಿಯನ್ನ ಅಮ್ಮ ಅಂತ ಸ್ವೀಕರಿಸಿಯೇ ಇಲ್ಲ. 
 

ಅಭಿ ಪ್ರೀತಿ ಸಿಗದಿದ್ದರೂ ತುಳಸಿ, ಅವಿ ಮತ್ತು ಅಭಿಗಾಗಿ ತುಂಬಾನೆ ಕಾಳಜಿ ತೋರಿಸೋದು, ಅವರಿಗಾಗಿ ಕಾಯೋದು, ಅವರ ಸೇವೆ ಮಾಡೋದು ವೀಕ್ಷಕರಿಗೆ ಮಾತ್ರ ಇಷ್ಟ ಆಗ್ತಿಲ್ಲ. ಸ್ವಂತ ಮಗ ಸಮರ್ಥ್ ಕಡೆಗೆ ಕಾಳಜಿ ತೋರಿಸದೆ ಇನ್ಯಾರದ್ದೋ ಚಾಕರಿ ಮಾಡೋದಾರಿ ಕಿಡಿ ಕಾರಿದ್ದಾರೆ ಜನ. 
 

ಸೀರಿಯಲ್ ಪ್ರೊಮೋದಲ್ಲಿ (serial promo) ತೋರಿಸಿದಂತೆ ಅಭಿ ರಾತ್ರಿ ಹೊತ್ತು ಮನೆಗೆ ಕುಡಿದುಕೊಂಡು ಬರ್ತಾನೆ, ಆತನನ್ನು ದಾರಿಯಲ್ಲಿ ಕಂಡ ಸಮರ್ಥ್ ತಾನೆ ಕುದ್ದಾಗಿ ಮನೆಗೆ ಕರೆದುಕೊಂಡು ಬಂದಿದ್ದಾನೆ. ಮನೆಗೆ ಅರೆ ಪ್ರಜ್ಞಾವಸ್ಥೆಯಲ್ಲಿ ಬಂದ ಅಭಿಯನ್ನ ತುಳಸಿ ಮತ್ತು ಅವಿ ಕಾಳಜಿಯಿಂದ ಮಲಗಿಸಿ, ತುಳಸಿ ಅಭಿಯ ಶೂ ಬಿಚ್ಚುತ್ತಾ ಸೇವೆ ಮಾಡ್ತಿದ್ದಾರೆ. ಅಭಿ ನಿದ್ರೆಯಲ್ಲಿ ತುಳಸಿ ಮತ್ತು ಅವಿಯ ಕೈಯನ್ನ ಗಟ್ಟಿಯಾಗಿ ಹಿಡಿದು ಮಲಗಿದ್ದಾನೆ. 
 

ಇದನ್ನ ನೋಡಿದ ಜನ ಅಣ್ಣ ತಮ್ಮಂದಿರ ಪ್ರೀತಿ ಏನೋ ಸರಿ, ಆದ್ರೆ ಈ ತುಳಸಿ ಮಾತ್ರ ತನ್ನ ಮಕ್ಕಳನ್ನ ಬಿಟ್ಟು ಇನ್ನೊಬ್ರ ಚಾಕರಿ ಮಾಡ್ತಿದ್ದಾರೆ, ತುಳಸಿ ಅತಿ ಆಯ್ತು ಶೂ ಬಿಚ್ಚೋ ಅವಶ್ಯಕತೆ ಇತ್ತಾ? ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

Latest Videos

click me!