'ಆಡು ಮುಟ್ಟದ ಸೊಪ್ಪಿಲ್ಲ, ನೀ ಮುಟ್ಟದ ಹುಡ್ಗೀರ್‌ ಇಲ್ಲ..' ತುಪ್ಪದ ಬೆಡಗಿ ಜೊತೆ ಕಿಶನ್‌ 'ಹಾಟ್‌' ಮಳೆ ಡಾನ್ಸ್‌!

First Published | May 14, 2024, 7:19 PM IST

ಮಾಜಿ ಬಿಗ್‌ ಬಾಸ್‌ ತಾರೆ ಹಾಗೂ ರಿಯಾಲಿಟಿ ಶೋ ಸ್ಟಾರ್‌ ಕಿಶನ್‌ ಬಿಳಗಲಿ ಹೊಸ ವಿಡಿಯೋ ಮೂಲಕ ಇನ್ಸ್‌ಟಾಗ್ರಾಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈತನ ಜೊತೆ ವಿಡಿಯೋದಲ್ಲಿರೋದು ನಟಿ ರಾಗಿಣಿ ದ್ವಿವೇದಿ.

ಡಾನ್ಸರ್‌ ಕಿಶನ್‌ ಬಿಳಗಲಿ ಸೋಶಿಯಲ್‌ ಮೀಡಿಯಾದಲ್ಲಿ ಮತ್ತೆ ಕಿಚ್ಚೆಬ್ಬಿಸಿದ್ದಾರೆ. ಅವರ ಹೊಸ ವಿಡಿಯೋ ಇನ್ಸ್‌ಟಾಗ್ರಾಮ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದೆ.

ನಟಿ ನಮ್ರತಾ ಗೌಡ ಅವರೊಂದಿಗೆ ಕೆಲವೊಂದು ಡಾನ್ಸ್ ವಿಡಿಯೋ ಮಾಡಿ ಅದನ್ನು ಕಿಶನ್‌ ಬಿಳಗಲಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು.

Tap to resize

ಈ ಬಾರಿ ಅವರ ವಿಡಿಯೋದಲ್ಲಿ ಕಾಣಿಸಿಕೊಂಡಿರುವುದು, ವೀರ ಮದಕರಿ ಸಿನಿಮಾದ ಮೂಲಕ ನಾಯಕಿಯಾಗಿ ಕಾಣಿಸಿಕೊಂಡ ನಟಿ ರಾಗಿಣಿ ದ್ವಿವೇದಿ.

ಕೆಂಪು ಬಣ್ಣದ ಶಾರ್ಟ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ನಟಿ ರಾಗಿಣಿ ದ್ವಿವೇದಿ, ಬಹಳ ಮಾದಕವಾಗಿ ಕಿಶನ್‌ ಬಿಳಗಲಿ ಜೊತೆ ಡಾನ್ಸ್‌ ಮಾಡಿದ್ದಾರೆ.

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹಾಗೂ ಕಿಶನ್‌ ಬಿಳಗಲಿಯ ಹಾಟ್‌ ಮಳೆ ಡಾನ್ಸ್‌ ನೋಡಿ ಅವರ ಇನ್ಸ್‌ಟಾಗ್ರಾಮ್‌ ಖಾತೆಯಲ್ಲಿ ಸಾಕಷ್ಟು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಕಿಶನ್‌ ಬಿಳಗಳಿ ನಟಿ ಚೈತ್ರಾ ಆಚಾರ್‌ ಜೊತೆಗೂ ಇದೇ ರೀತಿಯ ಹಾಟ್‌ ಡಾನ್ಸ್‌ ವಿಡಿಯೋವನ್ನ ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದರು.

ನಟ ಅಮೀರ್‌ ಖಾನ್‌ ಹಾಗೂ ಸೋನಾಲಿ ಬೇಂದ್ರೆ ಅಭಿನಯದ ಸರ್ಫ್‌ರೋಷ್‌ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ 25 ವರ್ಷ ಪೂರೈಸಿತ್ತು. 

ಈ ಸಿನಿಮಾದ ಜೋ ಹಾಲ್‌ ದಿಲ್‌ ಕಾ ಹಾಡಿಗೆ ಕಿಶನ್‌ ಹಾಗೂ ತುಪ್ಪದ ಬೆಡಗಿ ರಾಗಿಣಿ ಮಳೆಯಲ್ಲಿ ನೆನೆದು ಡಾನ್ಸ್‌ ಮಾಡಿದ್ದಾರೆ. 

ಈ ರೀಲ್‌ಗೆ ಕಾಮೆಂಟ್‌ ಮಾಡಿರುವ ನಿರೂಪಕ ನಿರಂಜನ್‌ ದೇಶಪಾಂಡೆ, 'ರಾಜ, ಒಳ್ಳೆ ಮಚ್ಚೆ ಇದೆ ನಿನಗೆ..ಸೂಪರ್ ರೀಲ್‌' ಎಂದು ಕಾಮೆಂಟ್‌ ಮಾಡಿದ್ದಾರೆ.

ಕಾಮೆಂಟ್‌ ಮಾಡಿರುವ ಮತ್ತೊಬ್ಬ ವ್ಯಕ್ತಿ, ನೀವು ಹೋಗ್ತಾ ಇರೋ ಸ್ಪೀಡ್‌ ನೋಡಿದ್ರೆ ಪ್ರಜ್ವಲ್‌ ರೇವಣ್ಣ ಅವರನ್ನೇ ಮೀರೀಸೋ ಹಾಗೆ ಕಾಣ್ತಿದೆ ಎಂದಿದ್ದಾರೆ.

'ಬ್ರಹ್ಮ ಹಣೆಬರನ ಎಲ್ಲರಿಗೂ ಹಣೆ ಮೇಲ್ ಬರ್ದಿದ್ರೆ ನಿಂಗೆ .....ಮೇಲೆ ಬರೆದು ಕಳಸವ್ನೇ ಗುರು... ಯಾಕ್ ನಮಗೆ ಹಿಂಗೆ ಹೊಟ್ಟೆ ಉರ್ಸಿಯೆ' ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.

'ರಸಿಕರ ರಾಜ.... ಮಸ್ತ ಇರೋ ಹುಡಗಿನ ಯಾರನು ಬಿಡುವುದಿಲ್ಲ ನೀ.' ಎಂದು ಮತ್ತೊಬ್ಬರು ಕಿಶನ್‌ ಹಾಗೂ ರಾಗಿಣಿ ರೀಲ್‌ಗೆ ಕಾಮೆಂಟ್‌ ಮಾಡಿದ್ದಾರೆ.

ಹಿಂದಿಯಲ್ಲಿ ಮಾಧುರಿ ದೀಕ್ಷಿತ್‌ ಸೇರಿದಂತೆ ಪ್ರಸಿದ್ಧ ನಟಿಯರೊಂದಿಗೆ ರಿಯಾಲಿಟಿ ಶೋಗಳನ್ನೂ ಕಿಶನ್‌ ಬಿಳಗಲಿ ಡಾನ್ಸ್‌ ಮಾಡುವ ಮೂಲಕ ಗಮನಸೆಳೆದಿದ್ದಾರೆ.

'ನನಗೆ ಒಂದು ಗೊತ್ತಾಗಲ್ಲ, ಯಾಕೆ ಈ ಗಂಡು ಮಕ್ಕಳ ಮೇಲೆ ಈ ಅಪವಾದಗಳು, ಅಥವಾ ಹೆಣ್ಣುಮಕ್ಕಳ ಮೇಲೆ, ಯಾರಿಗೂ ಯೋಗ್ಯತೆ ಇದಿಯೋ ತಾಕತ್ತು ಇದಿಯೋ ಅವರು ರೀಲ್ ಮಾಡ್ತಾರೆ, ನಿಮ್ಮಲ್ಲಿ ಇಲ್ಲಿ ಯಾರಿಗಾದರೂ ಯೋಗ್ಯತೆ ತಾಕತ್ತು ಇದ್ದರೆ ರಾಗಿಣಿ ಅವರನ್ನು ಕೇಳಿ, ಅವರು ಒಪ್ಪಿಕೊಳ್ಳಬಹುದು, ಹುಡುಗ ಬೆಳೆಯುತ್ತಾ ಇದಾನೆ ಅನ್ನೋದನ್ನು ನೋಡೋದು ಬಿಟ್ಟು, ಬರೀ ಇದೆ ಆಗೋಯ್ತು ಈ ದರಿದ್ರ ಗೆಟ್ಟ ಸಮಾಜ' ಎಂದು ಇನ್ನೊಬ್ಬರು ಈ ವಿಡಿಯೋಗೆ ಕಾಮೆಂಟ್‌ ಪೋಸ್ಟ್‌ ಮಾಡಿದ್ದಾರೆ.

'ಆಡು ಮುಟ್ಟದ ಸೊಪ್ಪಿಲ್ಲ ಕಿಶನ್ ಮುಟ್ಟದ ಹುಡ್ಗಿರ್ ಇಲ್ಲಆದ್ರೂ.. ಐ ಲೈಕ್‌ ಯೂ ಕಿಶನ್‌..' ಎಂದು ಮತ್ತೊಬ್ಬರು ಬರೆದಿದ್ದು, ಡಾನ್ಸ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಅದರಲ್ಲೂ ಪ್ರಮುಖವಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ಕಿಶನ್‌ 70 ಲಕ್ಷಕ್ಕೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.

ರಾಗಿಣಿ ಜೊತೆಗಿನ ವಿಡಿಯೋವನ್ನು ಈವರೆಗೂ ಅಂದಾಜು 1 ಮಿಲಿಯನ್‌ ವ್ಯಕ್ತಿಗಳು ವೀಕ್ಷಣೆ ಮಾಡಿದ್ದರೆ, 60 ಲಕ್ಷಕ್ಕೂ ಅಧಿಕ ಮಂದಿ ಇದಕ್ಕೆ ಲೈಕ್‌ ಒತ್ತಿದ್ದಾರೆ.

Latest Videos

click me!