ಹುಲ್ಲಿನ ಮೆದೆಯಲ್ಲಿ ಕೂತು ಹಾಟ್ ಫೋಸ್ ಕೊಟ್ಟ ಸಾರಾ ಅಣ್ಣಯ್ಯ: ಚಡ್ಡಿ ಹಾಕಿದ್ದೀಯಾ ಎಂದ ಫ್ಯಾನ್ಸ್‌!

First Published | Nov 2, 2023, 11:47 AM IST

ಕನ್ನಡತಿ ಧಾರವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಆದ ಸಾರಾ ಅಣ್ಣಯ್ಯ ಎಲ್ಲರ ಮನ ಸೆಳೆಯುವಲ್ಲಿ ಸಫಲರಾದರು. ನಮ್ಮ ಲಚ್ಚಿ ಎಂಬ ಧಾರಾವಾಹಿಯಲ್ಲಿ ಮಿಂಚಿದ್ದರು ಸಾರಾ ಅಣ್ಣಯ್ಯ. 

ಅಮೃತಧಾರೆ ಧಾರಾವಾಹಿಯಲ್ಲಿ ನಟನೆ ಮಾಡುತ್ತಾ ಇದ್ದಾರೆ. ಗೌತಮ್ ಮುದ್ದಿನ ತಂಗಿಯಾಗಿ ನಟನೆ ಮಾಡುತ್ತಿರುವ ಇವರು ತೆರೆ ಹಿಂದೆ ಕೂಡ ಅಷ್ಟೇ ಬೋಲ್ಡ್ ಆಗಿ ಇರುವ ನಟಿ ಎಂದರೆ ತಪ್ಪಾಗದು ಧಾರಾವಾಹಿಯಲ್ಲಿ ಕೂಡ ಅಷ್ಟೇ ಬೋಲ್ಡ್ ಆಗಿ ಬಟ್ಟೆಯನ್ನು ಧರಿಸುತ್ತಾರೆ ಸಾರಾ ಅಣ್ಣಯ್ಯ.

ಸದ್ಯ ಕನ್ನಡ ಸೀರಿಯಲ್ ಲೋಕದ ಸುಂದರಿ ಸಾರಾ ಅಣ್ಣಯ್ಯ ನವೆಂಬರ್ ತಿಂಗಳನ್ನ ವಿಶೇಷವಾಗಿ ವೆಲ್‌ಕಮ್ ಮಾಡಿದ್ದಾರೆ. ಸಖತ್ ಪೋಸ್ ಕೊಟ್ಟು ಪಡ್ಡೆಗಳ ನಿದ್ದೆಗೆಡಿಸಿದ್ದು, ಅವರ ಫೋಟೋಸ್ ವೈರಲ್ ಆಗಿದೆ.

Tap to resize

ಸಾರಾ ಅಣ್ಣಯ್ಯ ಕೊಂಚ ಜಾಸ್ತಿನೇ ಓಪನ್ ಆಗಿರೋ ಡ್ರೆಸ್ ತೊಟ್ಟಿದ್ದಾರೆ. ಇದರ ಕಲರ್ ಮತ್ತು ಡಿಸೈನ್ ಸ್ಪೆಷಲ್ ಅನಿಸುತ್ತದೆ. ಇದಕ್ಕೊಪ್ಪುವ ರೀತಿಯಲ್ಲಿಯೇ ಸಾರಾ ಅಣ್ಣಯ್ಯ ಹುಲ್ಲಿನ ಮೆದೆಯಲ್ಲಿ ಕೂತು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. 

ಸಾರಾ ಅಣ್ಣಯ್ಯ ಈ ಮಾಡ್ರನ್ ಡ್ರೆಸ್‌ನ ಫೋಟೋ ಶೂಟ್‌ನಲ್ಲಿ ಹ್ಯಾಟ್‌ ಕೂಡ ಧರಿಸಿಕೊಂಡು ವಿಶೇಷವಾಗಿಯೇ ಮಿಂಚಿದ್ದು, ಜೊತೆಗೆ ಕೊಂಚ ಹಾಟ್ ಆಗಿಯೂ ಕಾಣಿಸುತ್ತಿದ್ದಾರೆ.

ಸಾರಾ ಫೋಟೋಗಳನ್ನು ನೋಡಿದ ನೆಟಿಜನ್ಸ್, ನಮ್ ಹಳ್ಳಿಕಡೆ ಚೂರು ಕೆಟ್ಟದಾಗಿ ಬಟ್ಟೆ ಹಾಕುದ್ರು ಬೈತಿದ್ದು ಹೇಗೆ ಗೊತ್ತಾ. ಅಯ್ಯೋ ನಿನ್ ತೀರಿಗೆ ಬೆಂಕಿ ಹಾಕ ನಿಂಗೇನ್ ಬಂತೆ ಬರಬಾರದ್ದು, ಸಖತ್ ಹಾಟ್ ಮಗಾ, ಸೆಕ್ಸಿ, ಚಡ್ಡಿ ಹಾಕಿದ್ದೀಯಾ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಸಾರಾ ಅಣ್ಣಯ್ಯ ಕನ್ನಡತಿ ಸೀರಿಯಲ್‌ನ ವರೂಧಿನಿ ಅಂತಲೇ ಫೇಮಸ್. ಭುವಿಯ ಬೆಸ್ಟ್ ಫ್ರೆಂಡ್, ಹರ್ಷನನ್ನು ಹುಚ್ಚಿಯಂತೆ ಪ್ರೀತಿಸೋ, ಪ್ರೀತಿಗೋಸ್ಕರ ಏನು ಬೇಕಾದರೂ ಮಾಡೋ ಈ ಹುಡುಗಿ, ತನ್ನ ವಿಭಿನ್ನ ಪಾತ್ರದಿಂದಲೇ ಈ ನಟಿ ಜನಮನ ಸೆಳೆದಿದ್ದರು.

Latest Videos

click me!