ಸ್ವಂತ ಊರಿನಲ್ಲಿ ಕೆಲಸ ಸಿಗದ ಕಾರಣ ಜೀವನೋಪಾಯಕ್ಕಾಗಿ ಲಕ್ಷಾಂತರ ಯುವಕರು ಬೇರೆ ರಾಜ್ಯಗಳಿಗೆ, ಬೇರೆ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ. ಇದರಿಂದಾಗಿ ಪ್ರತಿದಿನ ರೈಲುಗಳಲ್ಲಿ ಎಂದಿಗಿಂತಲೂ ನೂಕುನುಗ್ಗಲು ಹೆಚ್ಚುತ್ತಿದೆ. ವಿಶೇಷ ದಿನಗಳಂತೂ ಕೇಳುವುದೇ ಬೇಡ. ಮುಂಗಡ ಬುಕ್ಕಿಂಗ್ ಮಾಡಿದ ರೈಲು ಬೋಗಿ ಮಾತ್ರವಲ್ಲದೆ ಶೌಚಾಲಯದಲ್ಲಿಯೂ ಕುಳಿತು, ಪ್ರಯಾಣಿಸುವ ಪರಿಸ್ಥಿತಿ ಇದೆ. ಅದರಲ್ಲಿಯೂ ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ ಸೇರಿ ಹಲವು ರಾಜ್ಯಗಳಿಂದ ಲಕ್ಷಾಂತರ ಯುವಕರು ದಕ್ಷಿಣ ಭಾರತದತ್ತ ವಲಸೆ ಬರೋದು ಹೆಚ್ಚುತ್ತಲೇ ಇದೆ.