ನಾವು ಹುಟ್ಟಿದ್ದೇವೆ ಅಂದರೆ, ನಮ್ಮ ಸಾವು ಖಚಿತ ಅನ್ನೋದು ನಮಗೆಲ್ಲ ಗೊತ್ತು. ಸಮಯ ಬಂದಾಗ ಯಮರಾಜ ನಮ್ಮನ್ನು ಕರೆದೊಯ್ಯುತ್ತಾನೆ. ಅವರನ್ನು ತಡೆಯಲು ಯಾರಿಂದ ಸಾಧ್ಯವಿಲ್ಲ ಅಲ್ವಾ? ನೀವು ದೀರ್ಘಾಯುಷ್ಯ (long life) ಪಡೆಯಲು ಬಯಸಿದರೆ, ವಿಶ್ವದ ಒಂದು ನಗರವು ಅದಕ್ಕಾಗಿ ಪ್ರಸಿದ್ಧವಾಗಿದೆ. ಇದು ನಾರ್ವೆಯ ಒಂದು ಪ್ರದೇಶವಾಗಿದೆ.
ನಾವು ಲಾಂಗ್ ಇಯರ್ ಬೆನ್ ನಗರದ ಬಗ್ಗೆ ಮಾತನಾಡುತ್ತಿದ್ದೇವೆ. ಈ ನಗರದ ಬಗ್ಗೆ ಕೇಳಿದ್ರೆ ಇಲ್ಲಿ ಯಮರಾಜನಿಗೂ ಪ್ರವೇಶವಿಲ್ಲ ಎಂದು ತೋರುತ್ತದೆ. ಕಳೆದ 70 ವರ್ಷಗಳಲ್ಲಿ ಇಲ್ಲಿ ಯಾರೂ ಸತ್ತಿಲ್ಲ. ಸುಳ್ಳಲ್ಲ ಇದು ನಿಜ. ಈ ಸ್ಥಳದ ಬಗ್ಗೆ ಕೇಳಿದರೆ ನಿಮಗೆ ಆಶ್ಚರ್ಯ ಆಗಬಹುದು, ಆದರೆ ಇದು ನಿಜ. ಈ ನಗರದಲ್ಲಿ ಏನಿದೆ, ಅದರ ವಿಶೇಷತೆ ಏನು? 70 ವರ್ಷಗಳಿಂದ ಯಾರೂ ಸತ್ತಿಲ್ಲ (no people died in 70 years) ಅಂದ್ರೆ ಏನು ಎಂದು ತಿಳಿಯೋಣ, ಇದು ಇತರ ವಿಶಿಷ್ಟ ನಗರಗಳಿಗಿಂತ ಭಿನ್ನ.
ಸಾವನ್ನು ನಿಷೇಧಿಸಿದ ಸರಕಾರ
ನಾರ್ವೆಯ ಉತ್ತರ ಧ್ರುವದಲ್ಲಿರುವ ಲಾಂಗ್ ಇಯರ್ಬೆನ್ ನಗರ ವರ್ಷಪೂರ್ತಿ ತುಂಬಾ ತಂಪಾಗಿರುತ್ತದೆ. ಇಲ್ಲಿ ನೀವು ಎಲ್ಲಾ ಸಮಯದಲ್ಲೂ ಸ್ವೆಟರ್ ಧರಿಸುವ ಜನರನ್ನು ನೋಡುತ್ತೀರಿ. ಡೀಪ್ ಫ್ರೀಜರ್ (Deep freezer) ನಂತಹ ನಗರ ಇದಾಗಿದ್ದರೆ ಇಲ್ಲಿ ಸತ್ತ ನಂತರ ಜನರ ಶವಗಳು ಕೊಳೆಯುತ್ತವೆಯೇ? ಈ ಕಾರಣಕ್ಕಾಗಿಯೇ ಇಲ್ಲಿನ ಸರ್ಕಾರವು ಜನರ ಸಾವನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಸೂರ್ಯ ಮುಳುಗದ ದೇಶ
ಮತ್ತೊಂದು ವಿಶೇಷತೆ ಏನೆಂದರೆ, ಮೇ ನಿಂದ ಜುಲೈವರೆಗೆ ಸೂರ್ಯ ಇಲ್ಲಿ ಮುಳುಗುವಂತೆ ಕಾಣುವುದಿಲ್ಲ. ಸೂರ್ಯ ಇಲ್ಲಿ ಸತತ 76 ದಿನಗಳ ಕಾಲ ಇರುತ್ತಾನೆ. ಈ ಕಾರಣಕ್ಕಾಗಿ, ನಾರ್ವೆಯನ್ನು ಮಿಡ್ನೈಟ್ ಸನ್ ನಗರ ಎಂದೂ ಕರೆಯಲಾಗುತ್ತದೆ. ಇಲ್ಲಿ ಕೆಲವು ತಿಂಗಳವರೆಗೆ ತುಂಬಾ ಶೀತವಾಗಿರುತ್ತದೆ, ಜನರ ರಕ್ತ ಹೆಪ್ಪುಗಟ್ಟುತ್ತದೆ.
ಇಲ್ಲಿ ಕೊನೆಯದಾಗಿ ಸಾವು ಸಂಭವಿಸಿದ್ದು 1917 ರಲ್ಲಿ
ಇಲ್ಲಿನ ಹೆಚ್ಚಿನ ಜನಸಂಖ್ಯೆಯು ಕ್ರಿಶ್ಚಿಯನ್ ಧರ್ಮವನ್ನು ನಂಬುತ್ತದೆ. ವರದಿಗಳ ಪ್ರಕಾರ, ಇಲ್ಲಿ ಕೊನೆಯ ಸಾವು 1917 ರಲ್ಲಿ ಸಂಭವಿಸಿತು. ಅಂದಿನಿಂದ, ಇಲ್ಲಿ ಯಾವುದೇ ಸಾವುಗಳು ಸಂಭವಿಸಿಲ್ಲ. ಯಮರಾಜನು ಇಲ್ಲಿನ ವಿಳಾಸವನ್ನು ಮರೆತಿದ್ದಾನೆ ಎಂದು ಜನರು ಭಾವಿಸುತ್ತಾರೆ.
1917ರಲ್ಲಿ ಸತ್ತವರ ಸಾವಿಗೆ ಕಾರಣ ಇನ್ ಫ್ಲುಯೆಂಝಾ. ಇಲ್ಲಿ ಶವ ಹೂಳಲಾಯಿತು, ಆದರೆ ಈ ಶವವು ಇಲ್ಲಿಯವರೆಗೆ ಕೊಳೆಯಲಿಲ್ಲ ಮತ್ತು ಅದರಲ್ಲಿರುವ ಬ್ಯಾಕ್ಟೀರಿಯಾಗಳು ಸಹ ಜೀವಂತವಾಗಿವೆ ಎನ್ನಲಾಗಿದೆ. ಇದರಿಂದ ಮತ್ತಿತರರಿಗೂ ಸಮಸ್ಯೆ ಉಂಟಾಗಲಿದೆ.
ಸತ್ತವರಿಗೆ ವ್ಯವಸ್ಥೆ :
ಪ್ರತಿಯೊಬ್ಬರೂ ಸಾವಿಗೆ ಹೆದರುತ್ತಾರೆ, ಆದರೆ ಸಾವು ಪ್ರಕೃತಿ ನಿಯಮ, ಅದಕ್ಕೆ ಯಾವುದೇ ಪರಿಹಾರವಿಲ್ಲ. ಆದರೂ ಇಲ್ಲಿನ ಸರ್ಕಾರವು ಸಾಯುವವರಿಗಾಗಿ ಒಂದು ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ವ್ಯವಸ್ಥೆಯ ಪ್ರಕಾರ, ಯಾರಾದರೂ ಸಾಯುವ ಹಂತದಲ್ಲಿದ್ದಾಗ, ಅವರನ್ನು ಹೆಲಿಕಾಪ್ಟರ್ ಮೂಲಕ ಮತ್ತೊಂದು ಸ್ಥಳಕ್ಕೆ ಕಳುಹಿಸಲಾಗುತ್ತದೆ ಮತ್ತು ಅವರ ಅಂತ್ಯಕ್ರಿಯೆಯನ್ನು ಅಲ್ಲಿಯೇ ಮಾಡಲಾಗುತ್ತದೆ. ಈ ನಗರವು ತುಂಬಾ ಚಿಕ್ಕದಾಗಿದೆ ಮತ್ತು ಇಲ್ಲಿನ ಒಟ್ಟು ಜನಸಂಖ್ಯೆ ಕೇವಲ 2000 ಆಗಿರುವುದರಿಂದ ಮಾತ್ರ ಇದೆಲ್ಲವೂ ಸಾಧ್ಯ. ಹಾಗಾಗಿ ಇಲ್ಲಿ ಇದುವರೆಗೂ ಸಾವು ಸಂಭವಿಸಿಯೇ ಇಲ್ಲ ಎನ್ನಬಹುದು.