ರಿಯಲ್‌ಮಿ GT5 ಪ್ರೊ
ಸೆಪ್ಟೆಂಬರ್ 2023ರಲ್ಲಿ ಬಿಡುಗಡೆಯಾದ ರಿಯಲ್‌ಮಿ GT5 ಅತ್ಯಂತ ವೇಗವಾಗಿ ಚಾರ್ಜ್ ಆಗುವ ಮೊಬೈಲ್ ಫೋನ್ ಆಗಿದೆ. ಇದು ಎರಡು ಚಾರ್ಜಿಂಗ್ ರೂಪಾಂತರಗಳಲ್ಲಿ ಲಭ್ಯವಿದೆ. ಒಂದು ರಿಯಲ್‌ಮಿ GT5 150W, ಇನ್ನೊಂದು ರಿಯಲ್‌ಮಿ GT5 240W. 240W ಮಾಡೆಲ್ ಕೇವಲ 80 ಸೆಕೆಂಡುಗಳಲ್ಲಿ 1 ರಿಂದ 20% ವರೆಗೆ ಚಾರ್ಜ್ ಆಗುತ್ತದೆ. 100% ಚಾರ್ಜ್ ಆಗಲು 10 ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.
ರೆಡ್‌ಮಿ ನೋಟ್ 12
ರೆಡ್‌ಮಿ ನೋಟ್ 12 ಎಕ್ಸ್‌ಪ್ಲೋರರ್ 210W ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಇದು 4,300 mAh ಬ್ಯಾಟರಿಯನ್ನು 9 ನಿಮಿಷಗಳಲ್ಲಿ ಪೂರ್ಣವಾಗಿ ಚಾರ್ಜ್ ಮಾಡಲು ಸಹಾಯ ಮಾಡುತ್ತದೆ.
ಒನ್‌ಪ್ಲಸ್ 10T
ಒನ್‌ಪ್ಲಸ್ 10T ಮತ್ತೊಂದು ವೇಗದ ಚಾರ್ಜಿಂಗ್ ಸ್ಮಾರ್ಟ್‌ಫೋನ್. ಇದು 150W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಇದು 4,800 mAh ಬ್ಯಾಟರಿಯನ್ನು 18 ನಿಮಿಷಗಳಲ್ಲಿ ಪೂರ್ಣವಾಗಿ ಚಾರ್ಜ್ ಮಾಡಲು ಸಹಾಯ ಮಾಡುತ್ತದೆ.
Xiaomi 14 ಪ್ರೊ
Xiaomi 14 ಪ್ರೊ 120W ವೇಗದ ಚಾರ್ಜ್ ವೈಶಿಷ್ಟ್ಯವನ್ನು ನೀಡುವ ಮೊಬೈಲ್ ಫೋನ್‌ಗಳಲ್ಲಿ ಒಂದಾಗಿದೆ. ಇದು ಸರಾಸರಿ 22 ರಿಂದ 27 ನಿಮಿಷಗಳಲ್ಲಿ ಬ್ಯಾಟರಿಯನ್ನು 100% ಚಾರ್ಜ್ ಮಾಡಲು ಸಹಾಯ ಮಾಡುತ್ತದೆ.
ಮೋಟೋರೋಲಾ ಎಡ್ಜ್ 40
ಮೋಟೋರೋಲಾ ಎಡ್ಜ್ 40 ಪ್ರೊ ಸ್ಮಾರ್ಟ್‌ಫೋನ್ 125W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಇದು ಕೇವಲ 23 ನಿಮಿಷಗಳಲ್ಲಿ ಬ್ಯಾಟರಿಯನ್ನು ಪೂರ್ಣವಾಗಿ ಚಾರ್ಜ್ ಮಾಡುತ್ತದೆ. ಸುಮಾರು 6 ನಿಮಿಷಗಳಲ್ಲಿ 50% ಚಾರ್ಜ್ ಆಗುತ್ತದೆ.