ಗ್ಲಾಮರಸ್‌ ಫೋಟೋಗಳನ್ನು ಹಂಚಿಕೊಂಡ ಮಾಜಿ ವಿಂಬಲ್ಡನ್‌ ಚಾಂಪಿಯನ್‌ ಮರಿಯಾ ಶೆರಪೋವಾ..!

First Published | Jul 23, 2023, 2:11 PM IST

ಗ್ರೀಸ್‌: ವಿಶ್ವ ಮಾಜಿ ನಂ.1 ಟೆನಿಸ್ ಆಟಗಾರ್ತಿ ಮರಿಯಾ ಶೆರಪೋವಾ, ಟೆನಿಸ್‌ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಸತತ 4 ವರ್ಷಗಳ ಕಾಲ ವಿಶ್ವದ ಹಾಟ್‌ ಅಥ್ಲೀಟ್ ಎನ್ನುವ ಗರಿಯನ್ನು ಮುಡಿಗೇರಿಸಿಕೊಂಡಿದ್ದರು. ಟೆನಿಸ್‌ಗೆ ವಿದಾಯ ಹೇಳಿರುವ ಶೆರಪೋವಾ ಇದೀಗ ತಮ್ಮ ಪತಿಯ ಜತೆಗೆ ವೆಕೆಷನ್‌ ಎಂಜಾಯ್‌ ಮಾಡುತ್ತಿದ್ದು, ಸೆಕ್ಸಿ ಪೋಟೋಗಳನ್ನು ಹಂಚಿಕೊಂಡಿದ್ದಾರೆ.
 

5 ಬಾರಿಯ ಗ್ರ್ಯಾನ್‌ ಸ್ಲಾಂ ಚಾಂಪಿಯನ್‌ ಮರಿಯಾ ಶೆರಪೋವಾ, ಟೆನಿಸ್ ಬದುಕಿಗೆ ವಿದಾಯ ಹೇಳಿದ ಬಳಿಕ ವಿವಿಧ ಪ್ರದೇಶಗಳಿಗೆ ಭೇಟಿ ನೀಡುತ್ತಾ ಬಂದಿದ್ದಾರೆ. ಹೊಸ ಹೊಸ ಪ್ರದೇಶಗಳಿಗೆ ಪ್ರವಾಸ ಮಾಡುವುದು ಶೆರಪೋವಾ ಹವ್ಯಾಸವಾಗಿದೆ.

ರಷ್ಯಾದ ನೀಲಿ ಕಂಗಳ ಚಲುವೆ ಮರಿಯಾ ಶೆರಪೋವಾ, ತಮ್ಮ ಪತಿಯ ಜತೆ ಹಾಲಿಡೇ ಟ್ರಿಪ್ ಎಂಜಾಯ್ ಮಾಡುತ್ತಿದ್ದು, ಈಗ ಹಲವಾರು ಹಾಟ್‌ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Tap to resize

ಮರಿಯಾ ಶೆರಪೋವಾ ವಯಸ್ಸು 36 ಆಗಿದ್ದರೂ, ಯಾವ ಮಾಡೆಲ್‌ಗೂ ಕಮ್ಮಿಯಿಲ್ಲ ಎನ್ನುವಂತಹ ದೇಹಸಿರಿ ಹೊಂದಿದ್ದಾರೆ. ಇದೀಗ ಗ್ರೀಸ್‌ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದು, ಕಡಲ ಕಿನಾರೆಯಲ್ಲಿ ಸೂರ್ಯನ ಶಾಖಕ್ಕೆ ಮೈಯೊಡ್ಡಿ ಸ್ವಿಮ್ ಮಾಡಿದ್ದಾರೆ.

ರಷ್ಯಾದ ಮಾಜಿ ಟೆನಿಸ್ ಆಟಗಾರ್ತಿ, ಅಂತಾರಾಷ್ಟ್ರೀಯ ಟೆನಿಸ್ ಬದುಕಿಗೆ ಗುಡ್‌ ಬೈ ಹೇಳಿದ ಬಳಿಕ, ಓದಿನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಹಾಲಿಡೇ ಟ್ರಿಪ್‌ನಲ್ಲಿಯೂ ಶೆರಪೋವಾ ಕೈಯಲ್ಲಿ ಬುಕ್‌ ಹಿಡಿದಿರುವುದು ಕಂಡು ಬಂದಿದೆ.

ತಮ್ಮ ಜತೆಗಾರ ಅಲೆಕ್ಸಾಂಡರ್‌ ಗಿಲ್ಕಿಸ್‌ ಹಾಗೂ ತಮ್ಮ ಮಗು ಥಿಯೋದೊರೆ ಎಂದರೆ ತಮಗೆ ಅಚ್ಚುಮೆಚ್ಚು ಎಂದು ಮರಿಯಾ ಶೆರಪೋವಾ ಈ ಮೊದಲಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 

ಮರಿಯಾ ಶೆರಪೋವಾ ಟೆನಿಸ್‌ ಬದುಕಿಗೆ ವಿದಾಯ ಹೇಳಿದ ಬಳಿಕವೂ ಅವರ ಫ್ಯಾನ್ ಫಾಲೋವರ್ಸ್ ಕಡಿಮೆಯಾಗಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಶೆರಪೋವಾ ಅವರ ಫಾಲೋವರ್ಸ್‌ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಬಂದಿದೆ.
 

ರಷ್ಯಾದ ಚಲುವೆ ಮರಿಯಾ ಶೆರಪೋವಾ ಎಂತಹ ಪ್ರತಿಭಾನ್ವಿತ ಟೆನಿಸ್ ಆಟಗಾರ್ತಿ ಆಗಿದ್ದರು ಎಂದರೆ, ತಮ್ಮ 17ನೇ ವಯಸ್ಸಿನಲ್ಲಿಯೇ ಪ್ರತಿಷ್ಠಿತ ವಿಂಬಲ್ಡನ್‌ ಟೆನಿಸ್ ಗ್ರ್ಯಾನ್‌ಸ್ಲಾಂ ಜಯಿಸುವಲ್ಲಿ ಯಶಸ್ವಿಯಾಗಿದ್ದರು.

2001ರಲ್ಲಿ WTA ಟೂರ್ ಮೂಲಕ ಟೆನಿಸ್‌ಗೆ ಪಾದಾರ್ಪಣೆ ಮಾಡಿದ್ದ ಶೆರಪೋವಾ, 2020ರ ಪೆಬ್ರವರಿಯಲ್ಲಿ ಟೆನಿಸ್ ಬದುಕಿಗೆ ವಿದಾಯ ಘೋಷಿಸಿದ್ದರು. 2005ರಲ್ಲಿ ಮಹಿಳಾ ಸಿಂಗಲ್ಸ್‌ನಲ್ಲಿ ಮೊದಲ ಬಾರಿಗೆ ನಂ.1 ಶ್ರೇಯಾಂಕಿತ ಆಟಗಾರ್ತಿ ಎನಿಸಿದ್ದರು. 

2016ರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ವೇಳೆ ಶೆರಪೋವಾ ಮೆಲ್ಡೋನಿಯಮ್ ಎನ್ನುವ ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದರು. ಇದಾದ ಬಳಿಕ ಶೆರಪೋವಾ ಅವರನ್ನು ವಾಡಾ ಎರಡು ವರ್ಷಗಳ ಕಾಲ ಅಂತಾರಾಷ್ಟ್ರೀಯ ಟೆನಿಸ್‌ನಿಂದ ನಿಷೇಧ ಹೇರಿತ್ತು. ಬಳಿಕ ಆ ನಿಷೇಧವನ್ನು 15 ತಿಂಗಳಿಗೆ ಇಳಿಸಲಾಗಿತ್ತು.

Latest Videos

click me!