ಟೆನಿಸ್ ಜಗತ್ತಿನ ನಿದ್ದೆ ಕದ್ದ ಸುರಸುಂದರಿಯವರಿವರು..! ಇವರು ಆಟಕ್ಕೂ ಸೈ, ನೋಟಕ್ಕೂ ಸೈ

First Published | Aug 18, 2024, 3:22 PM IST

ಶ್ರೀಮಂತ ಕ್ರೀಡೆಗಳಲ್ಲಿ ಒಂದು ಎನಿಸಿರುವ ಟೆನಿಸ್‌ನಲ್ಲಿ ಈ ಐದು ಮಹಿಳಾ ಟೆನಿಸ್ ಆಟಗಾರ್ತಿಯರು ತಮ್ಮ ಆಟದ ಜತೆಗೆ ಬ್ಯೂಟಿಯ ವಿಚಾರದಲ್ಲೂ ಆಗಾಗ ಸದ್ದು ಮಾಡುತ್ತಲೇ ಬಂದಿದ್ದಾರೆ. ಈ ಐದು ಸ್ಟಾರ್ ಟೆನಿಸ್ ಆಟಗಾರ್ತಿಯರು ಯಾವ ಸಿನಿಮಾ ನಟಿಯರಿಗೂ ಕಮ್ಮಿಯಿಲ್ಲ. ಬನ್ನಿ ನಾವಿಂದು ಆ ಐದು ಮಹಿಳಾ ಟೆನಿಸ್ ಆಟಗಾರ್ತಿಯರು ಯಾರು ಎನ್ನುವುದನ್ನು ನೋಡೋಣ ಬನ್ನಿ
 

1. ಯುಜೆನಿ ಬೌಚರ್ಡ್‌ :

ಯುಜೆನಿ ಬೌಚರ್ಡ್‌ ಟೆನಿಸ್ ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ಹೆಸರು. ಕೆನಡಾ ಮೂಲದ ಸ್ಟಾರ್ ಟೆನಿಸ್ ಆಟಗಾರ್ತಿಯ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ಯುಜೆನಿ ಬೌಚರ್ಡ್‌ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ 2.3 ಮಿಲಿಯನ್ ಫಾಲೋವರ್ಸ್ ಇದ್ದಾರೆ.

2. ಸಾನಿಯಾ ಮಿರ್ಜಾ:

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಮೂಗುತಿ ಸುಂದರಿ ಎಂದೇ ಪ್ರಖ್ಯಾತರಾಗಿದ್ದಾರೆ. ಸಾನಿಯಾ ಮಿರ್ಜಾ ನೋಡುವುದಕ್ಕೆ ಯಾವ ಬಾಲಿವುಡ್ ಹೀರೋಯಿನ್‌ಗೂ ಕಮ್ಮಿಯಿಲ್ಲ. ಹೈದರಾಬಾದ್ ಮೂಲದ ಸಾನಿಯಾಗೆ 13.2 ಮಿಲಿಯನ್‌ ಫಾಲೋವರ್ಸ್‌ ಇದ್ದಾರೆ. 

Tap to resize

3. ಮರಿಯಾ ಶೆರಪೋವಾ:

ರಷ್ಯಾದ ಮಾದಕ ಟೆನಿಸ್ ತಾರೆ ಮರಿಯಾ ಶರಪೋವಾಗೆ ಕೇವಲ ರಷ್ಯಾದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಶೆರಪೋವ ತನ್ನ ಆಟಕ್ಕಿಂತ ತಮ್ಮ ಮೈಮಾಟದಿಂದಲೇ ಸುದ್ದಿಯಾಗಿದ್ದೇ ಹೆಚ್ಚು. 
 

ಮರಿಯಾ ಶೆರಪೋವಾ 2020ರಲ್ಲಿಯೇ ವೃತ್ತಿಪರ ಟೆನಿಸ್‌ ಬದುಕಿಗೆ ವಿದಾಯ ಹೇಳಿದ್ದಾರೆ. ಶೆರಪೋವಾ ಟೆನಿಸ್‌ಗೆ ನಿವೃತ್ತಿ ಘೋಷಿಸುವ ಮುನ್ನ 5 ಬಾರಿ ಟೆನಿಸ್ ಗ್ರ್ಯಾನ್‌ಸ್ಲಾಂ ಜಯಿಸಿದ್ದಾರೆ.

4. ಅನಾ ಇವಾನೋವಿಕ್:

ಸರ್ಬಿಯಾದ ನೀಳಕಾಯದ ಟೆನಿಸ್ ಆಟಗಾರ್ತಿ ಅನಾ ಇವಾನೋವಿಕ್‌ ಎದುರು ಯಾವ ಹಾಲಿವುಡ್ ನಟಿಯರೂ ಸಪ್ಪೆ ಎನಿಸುತ್ತಾರೆ. ಅನಾ ಇವಾನೋವಿಕ್ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ 1.5 ಮಿಲಿಯನ್ ಫಾಲೋವರ್ಸ್‌ ಇದ್ದಾರೆ. ಅನಾ ಒಂದು ಕಾಲದಲ್ಲಿ ನಂ.1 ಶ್ರೇಯಾಂಕಿತ ಟೆನಿಸ್ ಆಟಗಾರ್ತಿಯಾಗಿದ್ದರು.

5. ಅನ್ನಾ ಕೌರ್ನಿಕೋವಾ:

ರಷ್ಯಾ ಮೂಲದ ಮಾಡೆಲ್ ಕಂ ಟೆನಿಸ್ ಆಟಗಾರ್ತಿ ಅನ್ನಾ ಕೌರ್ನಿಕೋವಾ ಸೌಂದರ್ಯಕ್ಕೆ ಮನಸೋಲದವರೇ ಇಲ್ಲವೇನೋ. ಆಟಕ್ಕಿಂತ ಈಕೆಯ ಆಫ್‌ಫೀಲ್ಡ್‌ ಫೋಟೋಗಳೇ ಹೆಚ್ಚು ಗಮನ ಸೆಳೆಯುತ್ತಾ ಬಂದಿವೆ.

ಅನ್ನಾ ಕೌರ್ನಿಕೋವಾಗೆ ಇನ್‌ಸ್ಟಾಗ್ರಾಂನಲ್ಲಿ 1.9 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇನ್ನು  ಅನ್ನಾ ಕೌರ್ನಿಕೋವಾ ಅವರ ಫೋಟೋವನ್ನು ಹಲವು ಮ್ಯಾಗ್ಸಿನ್‌ಗಳು ತಮ್ಮ ತಮ್ಮ ಕವರ್‌ ಪೇಜ್‌ನಲ್ಲಿ ಬಳಸಿವೆ.

Latest Videos

click me!