ಹಾರ್ದಿಕ್ ಪಾಂಡ್ಯ ಇಲ್ಲದೆ ಮಗನ ಹುಟ್ಟುಹಬ್ಬ ಆಚರಿಸಿದ ನತಾಶಾ! ಬರ್ತಡೇ ಫೋಟೊಗಳು ಇಲ್ಲಿವೆ

First Published | Aug 1, 2024, 1:30 PM IST

ಮಾಜಿ ಪತಿ, ಕ್ರಿಕೆಟಿಗೆ ಹಾರ್ದಿಕ್ ಪಾಂಡ್ಯ ವಿಚ್ಛೇದನ ಬಳಿಕ ಇದೇ ಮೊದಲ ಬಾರಿಗೆ ಪತಿ  ಇಲ್ಲದೆ ನತಾಶಾ ಮಗನ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರ  ಮಗನ ಬರ್ತಡೇ ಆಚರಣೆಯ ಫೋಟೊಗಳು ಇನ್ಸ್‌ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಯಾರಾರು ಕಾಮೆಂಟ್ ಮಾಡಿದ್ದಾರೆ ಇಲ್ಲಿದೆ ನೋಡಿ

 ಮಾಜಿ ಪತಿ ಇಲ್ಲದೆ ನತಾಶಾ ಮಗನ ಹುಟ್ಟುಹಬ್ಬವನ್ನ ಇದೇ ಮೊದಲ ಬಾರಿಗೆ ಆಚರಿಸುವಂತಾಯಿತು. ಮಗನ ಬರ್ತಡೇ ಆಚರಣೆಯ ಫೋಟೊಗಳು ಇನ್ಸ್‌ಟಾಗ್ರಾಂನಲ್ಲಿ ಹಂಚಿಕೊಂಡಿರುವ ನತಾಶ.

ನಟಿ, ಮಾಡೆಲ್ ಆಗಿರುವ ನತಾಶಾ ಸ್ಟಾಂಕೋವಿಕ್ ಮತ್ತು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ವಿಚ್ಛೇದನ ಪಡೆದಿದ್ದ ಜಗತ್ತಿನಾದ್ಯಂತ ಸುದ್ದಿಯಾಗಿತ್ತು. ಆ ಬಳಿಕ ನಟಿ ಹಾರ್ದಿಕ ಪಾಂಡ್ಯನೊಂದಿಗೆ ಕಾಣಿಸಿಕೊಂಡಿರಲಿಲ್ಲ. ಬದಲಾಗಿ ಹಳೆಯ ಗೆಳೆಯನೊಂದಿಗೆ ಸುತ್ತಾಟ ನಡೆಸಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.

Tap to resize

ಸದ್ಯ ಮಗ ಅಗಸ್ತ್ಯನೊಂದಿಗೆ ತನ್ನ ತವರು ಮನೆಯಾದ ಸೆರ್ಬಿಯಾದಲ್ಲಿರುವ ನತಾಶಾ. ಇತ್ತೀಚೆಗೆ ತನ್ನ ಮುದ್ದಿನ ಮಗ ಅಗತ್ಸ್ಯ ನಾಲ್ಕನೇ ವರ್ಷದ ಹುಟ್ಟು ಹಬ್ಬ ಅದ್ದೂರಿ ಆಚರಿಸಿದರು. ಮಗನ ಹುಟ್ಟುಹಬ್ಬ ಫೋಟೊ, ವಿಡಿಯೋಗಳನ್ನ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಮಗ ಅಗಸ್ತ್ಯ ಹುಟ್ಟಿದ ಬಳಿಕ ಪ್ರತಿವರ್ಷ ಮಾಜಿ ಪತಿ ಹಾರ್ದಿಕ್ ಪಾಂಡ್ಯ ಜೊತೆಗೂಡಿ ಸಂಭ್ರಮಿಸುತ್ತಿದ್ದ ನತಾಶಾ ಇದೇ ಮೊದಲ ಬಾರಿಗೆ ಹಾರ್ದಿಕ್ ಪಾಂಡ್ಯ ಇಲ್ಲದೆ ಮಗನ ನಾಲ್ಕು ವರ್ಷದ ಹುಟ್ಟು ಹಬ್ಬ ಆಚರಿಸುವಂತಾಗಿದೆ

ಇತ್ತ ಹಾರ್ದಿಕ್ ಪಾಂಡ್ಯ ಸಹ ಮಗ ಅಗಸ್ತ್ಯ ಎಂದರೆ ಪಂಚಪ್ರಾಣ. ಹುಟ್ಟುಹಬ್ಬದಂದು ಮುದ್ದಿನ ಮಗನನ್ನು ಅಪ್ಪಕೊಂಡು ವಿಶ್ ಮಾಡಲಾಗದ ಕೊರಗಿರುವ ಪಾಂಡ್ಯ.

ನತಾಶಾ-ಹಾರ್ದಿಕ್ ವಿಚ್ಛೇದನ ಬಳಿಕ ತಮ್ಮ ಮಗುವನ್ನು ತಾವೇ ಪೋಷಿಸಲು ನಿರ್ಧರಿಸಿರುವ ನತಾಶಾ. ಹುಟ್ಟು ಹಬ್ಬದ ವೇಳೆ ಬಿಳಿ ಹಾಟ್ ವೀಲ್ಸ್ ಶರ್ಟ್ ಧರಿಸಿರುವ ಮಗ ಅಗಸ್ತ್ಯ. ಆಟಿಕೆ ಕಾರಿನಲ್ಲಿ ಫೋಟೊಗೆ ಪೋಸ್‌ ಕೊಟ್ಟಿರುವುದು ಕಾಣಬಹುದಾಗಿದೆ.

ನತಾಶಾ ಮಗನ ಹುಟ್ಟುಹಬ್ಬದ ಚಿತ್ರಗಳನ್ನ ಕೆಲವು ಬಲೂನ್, ಎಮೋಜಿ ಜೊತೆಗೆ ಹ್ಯಾಷ್‌ಟ್ಯಾಗ್ ಬಳಸಿ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. 'ಆಗಸ್ತ್ಯನಿಗೆ ಇಂದಿಗೆ ನಾಲ್ಕು ವರ್ಷ ತುಂಬಿದೆ..' ಎಂದು ಬರೆದುಕೊಂಡಿದ್ದಾರೆ. ನತಾಶಾಳ ಈ ಪೋಸ್ಟ್‌ಗೆ ಹಾರ್ದಿಕ್ ಪಾಂಡ್ಯ ಸಹೋದರ ಕೃನಾಲ್ ಪಾಂಡ್ಯ ಅವರು ಕಾಮೆಂಟ್ ಹಾರ್ಟ್ ಸಿಂಬಲ್ ಕಳಿಸಿದ್ದಾರೆ. ಜೊತೆಗೆ ನೇಹಾ ಧೂಪಿಯಾ ಸಹ 'ಹುಟ್ಟುಹಬ್ಬದ ಶುಭಾಶಯ, ದೇವರು ಒಳ್ಳೆಯದು ಮಾಡಲಿ' ಎಂದು ಹಾರ್ಟ ಎಮೊಜಿ ಜೊತೆಗೆ ಕಾಮೆಂಟ್ ಮಾಡಿದ್ದಾರೆ.

Latest Videos

click me!