ಆ ಭಾಗ ಕಾಣುವಂತೆಯೇ ಬೋಲ್ಡ್ ಪೋಸ್ ಕೊಟ್ಟ ತುಪ್ಪದ ಬೆಡಗಿ ರಾಗಿಣಿ: ತುಂಬಾ ಕಷ್ಟ ಆಯ್ತಲ್ವಾ ಎಂದ ಫ್ಯಾನ್ಸ್!

ಕನ್ನಡ ಚಿತ್ರರಂಗದ ತುಪ್ಪದ ಬೆಡಗಿ ಅಂತಲೇ ಹೆಸರವಾಸಿಯಾಗಿರುವ ರಾಗಿಣಿ ದ್ವಿವೇದಿ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಬೋಲ್ಡ್ ಪೋಸ್ ಕೊಟ್ಟು ನೆಟ್ಟಿಗರ ಕಣ್ಮನ ಸೆಳೆದಿದ್ದಾರೆ.

ಸ್ಯಾಂಡಲ್‌ವುಡ್ ಮಾತ್ರವಲ್ಲದೇ ಕಾಲಿವುಡ್ ಹಾಗು ಬಾಲಿವುಡ್‌ನಲ್ಲಿ ಗ್ಲ್ಯಾಮರ್ ಹಾಗೂ ಬೋಲ್ಡ್ ನಟನೆಯಿಂದ ತನ್ನದೇ ಆದ ಬೇಡಿಕೆಯನ್ನು ಹೊಂದಿರುವ ನಟಿ ರಾಗಿಣಿ. ಕಳೆದ ಒಂದು ದಶಕದಿಂದ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ.
 

ನಟಿ ರಾಗಿಣಿ ದ್ವಿವೇದಿ ಬೋಲ್ಡ್ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ. ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಶೂ ಲೆಸ್ ಕಟ್ಟೋದು ತುಂಬಾ ಕಷ್ಟ ಆಯ್ತಲ್ವಾ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.


ರಾಗಿಣಿ ದ್ವಿವೇದಿ ಕಪ್ಪು ಬಣ್ಣದ ಚಿಕ್ಕ ಡ್ರೆಸ್‌ನಲ್ಲಿ ತಮ್ಮ ಅಂದವನ್ನು ಕ್ಯಾಮೆರಾಗೆ ವಿವಿಧ ಭಂಗಿಗಳಲ್ಲಿ ತೋರಿಸಿದ್ದಾರೆ. ವಿಶೇಷವಾಗಿ ಅವರು ತೊಟ್ಟ ಶೂ ಎಲ್ಲರ ಗಮನ ಸೆಳೆದಿದ್ದು, ನೆಟ್ಟಗರಂತೂ ತರೇಹವಾರು ಕಮೆಂಟ್ ಮಾಡಿ, ರೆಡ್ ಎಮೋಜಿ ಹಾಕಿದ್ದಾರೆ.

ರಾಗಿಣಿ ದ್ವಿವೇದಿ ಶೇರ್ ಮಾಡಿಕೊಂಡ ಫೋಟೋಗಳಿಗೆ ಲೈಕ್‌ಗಳ ಸುರಿಮಳೆಯೇ ಬಂದಿದ್ದು ನೆಟ್ಟಿಗರು, ಸ್ಯಾಂಡಲ್‌ವುಡ್‌ನ ಡೈಮೆಂಡ್ ಕ್ವೀನ್, ಹಾಟ್ ಹಾಟ್ ತುಪ್ಪ, ಊಫ್ ಸೋ ಹಾಟ್, ಶೂ ಲೆಸ್ ಕಟ್ಟೋಕ್ಕೆ ಕಷ್ಟ ಆಗಿಲ್ವಾ ಅಂತೆಲ್ಲಾ ಕಮೆಂಟ್‌ಗಳನ್ನು ಮಾಡಿದ್ದಾರೆ.

ಚಿತ್ರರಂಗದಲ್ಲಿ ಸಾಕಷ್ಟು ಏಳು ಬೀಳುಗಳನ್ನು ನೋಡಿರುವ ರಾಗಿಣಿ ಫ್ಯಾನ್ಸ್ ಸಖತ್ ದೊಡ್ಡದಿದೆ. ಅವರಿಗೆ ಇನ್​​ಸ್ಟಾಗ್ರಾಮ್​ನಲ್ಲಿ 8 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಸದ್ಯ ಅವರ ಹೊಸ ಫೋಟೋಶೂಟ್ ಪಡ್ಡೆಹೈಕ್ಳ ನಿದ್ದೆಗೆಡಿಸಿದೆ.

ನಟಿ ರಾಗಿಣಿ ಪರಭಾಷೆಗಳಲ್ಲೂ ಹೆಚ್ಚು ಗುರುತಿಸಿಕೊಳ್ಳುತ್ತಿದ್ದು, ಚಿತ್ರರಂಗದಲ್ಲಿ ಬೇಡಿಕೆಯೂ ಹೆಚ್ಚುತ್ತಿದೆ. ಕನ್ನಡದಲ್ಲಿ ಜಟ್ಟ ಗಿರಿರಾಜ್‌ ನಿರ್ದೇಶನದ ಚಿತ್ರದಲ್ಲಿಯೂ ನಾಯಕಿ ನಟಿಯಾಗಿ ಆಯ್ಕೆಯಾಗಿದ್ದಾರೆ.

ಕಿಚ್ಚ ಸುದೀಪ್ ಅಭಿನಯದ ವೀರ ಮದಕರಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ರಾಗಿಣಿ ದ್ವಿವೇದಿ ತುಂಬಾ ಖ್ಯಾತಿಯನ್ನು ಗಳಿಸಿದರು. ಅನಂತರ ಸಾಲು ಸಾಲು ಸಿನಿಮಾಗಳಲ್ಲಿ ಅವರು ನಟಿಸಿ ಸೈ ಎನಿಸಿಕೊಂಡರು.

ಇನ್ನು ರಾಗಿಣಿ ಸಮಯ ಸಿಕ್ಕಾಗೆಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಫ್ಯಾಮಿಲಿ ಜೊತೆ ಹೆಚ್ಚು ಸಮಯ ಕಳೆಯಲು ಇಷ್ಟಪಡುವ ರಾಗಿಣಿ ಹೊಸ ರುಚಿಯ ಆಹಾರಗಳನ್ನು ತಯಾರಿಸಲು ಪ್ರಯತ್ನಿಸುತ್ತಿರುತ್ತಾರೆ. ಅವರ ಅಡುಗೆ ಮಾಡುವ ವಿಡಿಯೋಗಳು ವೈರಲ್ ಆಗುತ್ತವೆ.

Latest Videos

click me!