ವೀರ ಮದಕರಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮುದ್ದು ಮುಖದ ನೀಳ ಸುಂದರಿ ರಾಗಿಣಿ ದ್ವಿದೇವಿ (Ragini Dwivedi), ಮೊದಲ ಸಿನಿಮಾದ ಮೂಲಕವೇ ಸಿನಿ ರಸಿಕರ ಮನಸ್ಸು ಗೆದ್ದಿದ್ದರು. ನಂತ್ರ ಕನ್ನಡದ ಜೊತೆ ಮಲಯಾಲಂ, ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲೂ ರಾಗಿಣಿ ನಟಿಸಿದ್ದರು.
ಹೆಚ್ಚಾಗಿ ತಮ್ಮ ಬೋಲ್ಡ್ ಅವತಾರಗಳಲ್ಲಿ ಕಾಣಿಸಿಕೊಳ್ಳುವ ರಾಗಿಣಿ ದ್ವಿವೇದಿ, ತಮ್ಮ ಹೊಸ ಹೊಸ ಫೋಟೊ ಶೂಟ್ ಗಳ ಮೂಲಕವೇ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚುತ್ತಿರುತ್ತಾರೆ. ಇದೀಗ ಮತ್ತೊಂದು ಹೊಸ ಫೋಟೊ ಶೂಟ್ನಲ್ಲಿ ನಟಿ ಕಾಣಿಸಿಕೊಂಡಿದ್ದು, ಕೆಂಪು ಬಣ್ಣದ ಥೈ ಹೈ ಸ್ಲಿಟ್ ಗೌನ್ ನಲ್ಲಿ ನಟಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಕೆಂಪು ಸ್ಯಾಟಿನ್ ಗೌನ್, ಜೊತೆಗೆ ತಲೆ ಮೇಲೆ ಹ್ಯಾಟ್, ಅದರ ಮೇಲೆ ದೊಡ್ಡದಾದ ಹೂವಿನ ಡಿಸೈನ್ ಇದೆ. ಈ ಲುಕ್ ಜೊತೆಗೆ ರಾಗಿಣಿ SHE is a flower … but isn’t soft !! When her petals fall they hit like bullets ಎಂದು ಬರೆದುಕೊಂಡಿದ್ದಾರೆ. ಅಂದ್ರೆ ನನ್ನನ್ನ ಸಾಫ್ಟ್ ಅಂತ ಅಂದುಕೋಬೇಡಿ, ಹೂವಿನ ಎಲ್ಲಾ ಎಸಳುಗಳು ಬಿದ್ದ ಮೇಲೆ ಬುಲ್ಲೆಟ್ ನಂತೆ ಸ್ಟ್ರಾಂಗ್ ಆಗುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇನ್ನು ನಟಿಯ ಫೋಟೊ ನೋಡೀ ಅಭಿಮಾನಿಗಳು ಮನಸೋತಿದ್ದು, ದೇವತೆ, ರಾಜ ಕುಮಾರಿ, ಗಾರ್ಜಿಯಸ್ ಕ್ವೀನ್, ರೆಡ್ ಚೆರ್ರಿ, ಇನ್’ಕ್ರೆಡಿಬಲ್, ಧ್ವನಿಯ ಒಡತಿ, ಮಾತಿನ ಕನ್ನಡತಿ… ಮುದ್ದಾದ ನಗುವೇ ನಿಮ್ಮ ಆಭರಣ, ಅದನ್ನು ವರ್ಣಿಸಲು ಸಾಲದಾಗಿದೆ ನನ್ನ ವ್ಯಾಕರಣ ಎಂದೆಲ್ಲಾ ಬರೆದುಕೊಂಡಿದ್ದಾರೆ.
ಕರಿಯರ್ ಬಗ್ಗೆ ಹೇಳೋದಾದ್ರೆ ನಟಿ ತಮಿಳಿನ ಕಿಕ್ ಮತ್ತು ಇಮೇಲ್ ಎನ್ನುವ ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ಕನ್ನಡದಲ್ಲಿ ವೃಷಭ, ಸಾರಿ ಕರ್ಮ ರಿಟರ್ನ್ಸ್ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜೊತೆಗೆ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ನಟನೆಯ ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ವಿಲನ್ ಪಾತ್ರದಲ್ಲೂ ರಾಗಿಣಿ ಮಿಂಚುತ್ತಿದ್ದಾರೆ