ಸ್ವಿಮ್ ಸೂಟ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಪೋರ್ಕಿ ನಟಿ: ಟರ್ಕಿಯಲ್ಲಿ ಪ್ರಣಿತಾಗೇನು ಕೆಲಸ?

ಪೋರ್ಕಿ ಚಿತ್ರದ ಮೂಲಕ ಪ್ರಣಿತಾ ಸುಭಾಷ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ಸದ್ಯ ತೆಲುಗು, ತಮಿಳು, ಹಿಂದಿ, ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಫೋಟೋಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾರೆ. 

ದಕ್ಷಿಣ ಭಾರತದ ಹೆಸರಾಂತ ನಟಿ, ಕನ್ನಡತಿ ಪ್ರಣಿತಾ ಸುಭಾಷ್ ಟರ್ಕಿ ಪ್ರವಾಸದಲ್ಲಿ ಇದ್ದಾರೆ. ಕುಟುಂಬದೊಂದಿಗೆ ಟರ್ಕಿ ಪ್ರವಾಸದಲ್ಲಿರುವ ಅವರು, ತಿಳಿನೀಲಿ ಕಡಲು ಕಿನಾರೆಯಲ್ಲಿ ಸ್ವಿಮ್ ಸೂಟ್ ಹಾಕಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. 

ಸ್ವಿಮ್ ಸೂಟ್‌ನಲ್ಲಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲೂ ಪ್ರಣಿತಾ ಹಂಚಿಕೊಂಡಿದ್ದು, ಸದ್ಯ ಈ ಪೋಟೋ ಸಖತ್ ವೈರಲ್ ಆಗಿದೆ. ಒಂದು ಕಡೆ ಪ್ರವಾಸದಲ್ಲಿ ನಟಿ ಬ್ಯುಸಿಯಾಗಿದ್ದರೆ, ಮತ್ತೊಂದು ಕಡೆ ರಿಷಿ ನಟನೆಯ ಸಿನಿಮಾದಲ್ಲೂ ಅವರು ನಟಿಸಿದ್ದಾರೆ.


ರಾಮನ ಅವತಾರ ಸಿನಿಮಾದಲ್ಲಿ ಪ್ರಣಿತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದು, ಅರುಣ್ ಸಾಗರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವಿಕಾಸ್ ಪಂಪಾಪತಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಪ್ರಣಿತಾ ಸುಭಾಷ್ ಎಷ್ಟೇ ಮಾಡರ್ನ್ ಆಗಿದ್ದರೂ ತನ್ನ ಮೂಲವನ್ನು ನೆನಪಿಸಿಕೊಳ್ಳುತ್ತಾರೆ. ತನಗೆ ಸಂಬಂಧಿಸಿದ ಯಾವುದೇ ವಿಷಯವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ವ್ರತ, ಪತಿಗೆ ಪಾದಪೂಜೆಯಂತ ಕಾರ್ಯಕ್ರಮದ ತಮ್ಮ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಪ್ರಣಿತಾ ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜು ಅವರನ್ನು ವಿವಾಹವಾಗಿದ್ದಾರೆ. ಈ ಜೋಡಿಗೆ ಮುದ್ದಾದ ಮಗು ಕೂಡ ಇದೆ. ಸದ್ಯ ಮಗುವಿನ ಲಾಲನೆ-ಪಾಲನೆಯಲ್ಲಿ ನಟಿ ಪ್ರಣಿತಾ ಬ್ಯುಸಿ ಆಗಿದ್ದು, ಮಗುವಿನ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ.

ಪ್ರಣಿತಾಗೆ ಒಂದು ಮಗು ಇದ್ದರೂ ಸಹ ತಮ್ಮ ಗ್ಲಾಮರಸ್ ಉಳಿಸಿಕೊಂಡಿದ್ದಾರೆ. ಇವರು ಅಮ್ಮನಾಗಿದ್ದಾರಾ ಎನ್ನುವಂತೆ ಇದ್ದಾರೆ. ವರ್ಕೌಟ್ ಮೂಲಕ ತಮ್ಮ ಫಿಟ್‍ನೆಸ್ ಅನ್ನು ಕಾಯ್ದುಕೊಂಡಿದ್ದಾರೆ.

Latest Videos

click me!