ಸ್ಯಾಂಡಲ್‌ವುಡ್‌ನ ಕೆಜಿಎಫ್ ಸಿನಿಮಾದ ನಟಿ ರೂಪಾ ರಾಯಪ್ಪ ಕನ್ನಡದ ಬೋಲ್ಡೆಸ್ಟ್ ನಟಿ ಅಂತಲೇ ಹೇಳಬಹುದು. ಕನ್ನಡದಲ್ಲಿ ಇಲ್ಲಿವರೆಗೂ ಯಾರೂ ಇಷ್ಟೊಂದು ಬೋಲ್ಡ್ ಆಗಿಯೇ ಫೋಟೋಶೂಟ್ ಮಾಡಿಸಿದ್ದೇ ಇಲ್ಲ. ಆದರೆ ರೂಪಾ ರಾಯಪ್ಪ ಈ ವಿಚಾರದಲ್ಲಿ ತುಂಬಾನೆ ಓಪನ್ ಆಗಿದ್ದಾರೆ.
ರೂಪಾ ರಾಯಪ್ಪ ತಮ್ಮ ಚಿತ್ರ ಜೀವನದಲ್ಲಿ ಕೆಜಿಎಫ್ ಮೂಲಕವೇ ಹೆಸರಾಗಿದ್ದಾರೆ. ಈ ಚಿತ್ರದಲ್ಲಿ ಶಾಂತಿ ಅನ್ನುವ ಪಾತ್ರದಲ್ಲಿಯೇ ರೂಪಾ ರಾಯಪ್ಪ ನಟಿಸಿದ್ದರು. ಆದರೆ ಕೆಜಿಎಫ್ ಸಿನಿಮಾದ ಈ ನಟಿ ಆಫ್ ದಿ ಸ್ಕ್ರೀನ್ ತುಂಬಾ ಸಿಂಪಲ್ ಅಂತಲೂ ಅಂದುಕೊಡವರಿಗೆ ರೂಪಾ ರಾಯಪ್ಪ ಈಗಾಗಲೇ ಶಾಕ್ ಕೊಟ್ಟಿದ್ದಾರೆ.
ಇದೀಗ ಲೈಟ್ ಬಣ್ಣದ ಔಟ್ ಫಿಟ್‌ನಲ್ಲಿ ಸಖತ್ ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯ ಗ್ಲ್ಯಾಮರಸ್ ಲುಕ್‌ಗೆ ಅಭಿಮಾನಿಗಳು, ರೂಪಾ ರಾಯಪ್ಪ ಬೆಂಕಿ ಅವತಾರ, ಜೂಮ್ ಮಾಡಿ ನೋಡಿ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ. ಕ್ಯಾಮೆರಾಗೆ ಪೋಸ್ ಕೊಟ್ಟಿರೋ ಬೋಲ್ಡ್ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದೆ.
ರೂಪಾ ರಾಯಪ್ಪ ಅವರು ಸ್ಯಾಂಡಲ್‌ವುಡ್‌ನಲ್ಲಿ ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ಸದ್ಯ ‘ದಿ ಜಡ್ಜ್ಮೆಂಟ್’ ಎಂಬ ಸಿನಿಮಾದಲ್ಲಿ ರವಿಚಂದ್ರನ್, ಧನ್ಯಾ ರಾಮ್‌ಕುಮಾರ್ ಮತ್ತು ದಿಗಂತ್ ಜೊತೆ ರೂಪಾ ರಾಯಪ್ಪ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಜೆಕೆ ಜೊತೆ ‘ಕಾಡ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ‘ಎಲ್ರ ಕಾಲೆಳೆಯುತ್ತೆ ಕಾಲ’ ಚಿತ್ರದಲ್ಲಿ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಜೊತೆ ರೂಪಾ ರಾಯಪ್ಪ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಶ್ವೇತಾ ಶ್ರೀವಾತ್ಸವ್ ಜೊತೆ ಹೊಸ ಪ್ರಾಜೆಕ್ಟ್‌ನಲ್ಲಿ ರೂಪಾ ರಾಯಪ್ಪ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಹಿಂದಿ ವೆಬ್ ಸಿರೀಸ್‌ವೊಂದರಲ್ಲಿ ಬಣ್ಣ ಹಚ್ಚಿದ್ದಾರೆ. ಈ ಮೂಲಕ ಹಿಂದಿ ಚಿತ್ರರಂಗಕ್ಕೂ ಪರಿಚಯವಾಗಲಿದ್ದಾರೆ.