ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಜೈ ಜಗದ್ದೀಶ್ ಮತ್ತು ವಿಜಯಲಕ್ಷ್ಮಿ ಸಿಂಗ್ ಪುತ್ರಿ ವೈಭವಿ.
ಮೇಕಪ್ ಕೋರ್ಸ್ ಮಾಡಿರುವ ವೈಭವಿ ವಿಭಿನ್ನವಾದ ಬಣ್ಣಗಳನ್ನು ಬಳಸಿ ಮೇಕಪ್ ಮಾಡಿದ್ದಾರೆ.
Instagramನಲ್ಲಿ 44 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದು, ಪ್ರತಿ ಫೋಟೋಗಳನ್ನು ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಬಾಲ ಕಲಾವಿದೆಯಾಗಿ 'ಕತೆಗಳು ಸಾರ್ ಕತೆಗಳು' ಮತ್ತು 'ಕೋತಿಗಳು ಸಾರ್ ಕೋತಿಗಳು' ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
2019ರಲ್ಲಿ ತೆರೆ ಕಂಡ 'ಯಾನಾ' ಚಿತ್ರದ ಮೂಲಕ ನಟಿಯಾಗಿ ಲಾಂಚ್ ಆಗಿದ್ದಾರೆ.
ಈ ಚಿತ್ರವನ್ನು ತಾಯಿ ವಿಜಯಲಕ್ಷ್ಮಿ ನಿರ್ದೇಶಿಸಿದ್ದು, ಸಹೋದರಿ ವೈನಿಧಿ ಮತ್ತು ವೈಸಿರಿ ಜೊತೆ ವೈಭವಿ ಅಭಿನಯಿಸಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ಮಾಡಿದ ಲೈವ್‌ಚಾಟ್ ಮೂಲಕ ನಡೆಸಿದ ಸಂದರ್ಶನದಲ್ಲಿ ತಮ್ಮ ಜೀವನಶೈಲಿ ಬಗ್ಗೆ ಮಾತನಾಡಿದ್ದರು.
ವೈಭವಿ ಬಿಡುವಿನ ಸಮಯದಲ್ಲಿ ಮನೆಯಲ್ಲಿ ಕುಕ್ಕಿಂಗ್ ಮಾಡುತ್ತಾರೆ.
ಕಾಮನಬಿಲ್ಲಿನ ಬಣ್ಣಗಳಂತೆ ಮೇಕಪ್ ಮಾಡಿ ಸೀರಿಸ್ ರೀತಿಯಲ್ಲಿ ಶೇರ್ ಮಾಡುತ್ತಿದ್ದಾರೆ.