ಪೋಷಕರಾಗುವುದು ಜೀವನದ ಅತ್ಯಂತ ಸುಂದರ ಅನುಭವಗಳಲ್ಲಿ ಒಂದಾಗಿದೆ, ಆದರೆ ಅನೇಕ ದಂಪತಿಗಳು ಬಂಜೆತನವನ್ನು ಅನುಭವಿಸುತ್ತಾರೆ. ಇದು ಪುರುಷರು ಮತ್ತು ಮಹಿಳೆಯರಲ್ಲಿ ಬೆಳೆಯುತ್ತಿರುವ ಬಂಜೆತನದ ಸಮಸ್ಯೆಗೆ ಸಂಬಂಧಿಸಿರಬಹುದು. ಮಹಿಳೆಯ ಫಲವತ್ತತೆಯು ಹಾರ್ಮೋನುಗಳ ಬದಲಾವಣೆಗಳು, ವಯಸ್ಸು, ಬೊಜ್ಜು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವಿವಿಧ ಅಂಶಗಳಿಂದ ಪರಿಣಾಮ ಬೀರಬಹುದು, ಆದರೆ ಪುರುಷ ಬಂಜೆತನವು ಆಘಾತ, ಮಧುಮೇಹ, ಅತಿಯಾದ ಮದ್ಯಪಾನ, ಧೂಮಪಾನ ಮತ್ತು ಇತರ ನಡವಳಿಕೆಗಳಂತಹ ಕಾಯಿಲೆಗಳಿಂದ ಉಂಟಾಗಬಹುದು.
ಲೈಫ್ ಸ್ಟೈಲ್‌ನಲ್ಲಿ ಉಂಟಾದಂತಹ ಹಲವಾರು ಬದಲಾವಣೆಗಳು ಕಳಪೆ ಲೈಂಗಿಕ ಕಾರ್ಯಕ್ಷಮತೆ ಮತ್ತು ಫಲವತ್ತತೆ ಸಮಸ್ಯೆಗಳಿಗೆ ಕಾರಣವಾಗುತ್ತೆ ಅನ್ನೋದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ನಿಮ್ಮ ಆಹಾರ ಮತ್ತು ದೈನಂದಿನ ವೇಳಾಪಟ್ಟಿಗೆ ಕೆಲವು ಹೊಂದಾಣಿಕೆಗಳನ್ನು ಮಾಡುವ ಮೂಲಕ ಮಾತ್ರ ನೀವು ಸೆಕ್ಸ್ ಲೈಫ್ ಅನ್ನು ಸುಧಾರಿಸಲು ಸಾಧ್ಯವಾಗುತ್ತೆ.
ನಿಮ್ಮ ಡಯಟ್ ಲಿಸ್ಟ್ ನಲ್ಲಿ ಈ ಕೆಳಗಿನ ಆಹಾರಗಳನ್ನು ಸೇರಿಸೋದ್ರಿಂದ ನಿಮ್ಮ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯಕ್ಕೆ ಸಹಾಯ ಮಾಡುತ್ತೆ. ಅಂತಹ ಆಹಾರಗಳು ಯಾವುವು? ಅವು ನಿಮ್ಮ ಲೈಂಗಿಕ ಜೀವನವನ್ನು ಸ್ಪೈಸ್ ಅಪ್ ಮಾಡಲು ಹೇಗೆ ಸಹಾಯ ಮಾಡುತ್ತೆ ಅನ್ನೋದನ್ನು ನೋಡೋಣ.
ಈರುಳ್ಳಿ ಮತ್ತು ಬೆಳ್ಳುಳ್ಳಿ ರಕ್ತ ಪರಿಚಲನೆಯನ್ನು ಹೆಚ್ಚಿಸಲು ತುಂಬಾ ಪ್ರಯೋಜನಕಾರಿ. ಅವು ಕೆಟ್ಟ ಉಸಿರಾಟಕ್ಕೆ ಕಾರಣವಾಗಬಹುದಾದರೂ, ಉತ್ತಮ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತೆ. ರಕ್ತ ಪರಿಚಲನೆ ಚೆನ್ನಾಗಿ ಆದರೆ ನಿಮ್ಮ ಸೆಕ್ಸ್ ಲೈಫ್ ಕೂಡ ಚೆನ್ನಾಗಿರುತ್ತೆ ಅನ್ನೋದು ನೆನಪಿನಲ್ಲಿಡಿ.
ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಹೇರಳವಾಗಿದೆ. ಅವು ಲೈಂಗಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಅಗತ್ಯವಾಗಿವೆ. ಆದುದರಿಂದ ಪ್ರತಿದಿನ ನಿಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಸೇವಿಸಲು ಮರೆಯಬೇಡಿ.
ಮೆಣಸು ಮತ್ತು ಮೆಣಸಿನಕಾಯಿಗಳು ಉರಿಯೂತ ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ರಕ್ತದ ಹರಿವನ್ನು ಹೆಚ್ಚಿಸುತ್ತವೆ. ಹಾಗಿದ್ರೆ ಇನ್ನೇಕೆ ತಡ ನಿಮ್ಮ ಸೆಕ್ಸ್ ಲೈಫ್ ನ್ನು ಸ್ಪೈಸಿಯಾಗಿಸಲು ನಿಮ್ಮ ಆಹಾರದಲ್ಲೂ ಸ್ಪೈಸ್ ಹೆಚ್ಚಾಗಿ ಸೇವಿಸಿ.
ಸಂತಾನೋತ್ಪತ್ತಿ ಕಾರ್ಯವನ್ನು ಹೆಚ್ಚಿಸಲು ಒಬ್ಬರು ತಮ್ಮ ಆಹಾರವನ್ನು ಬದಲಾಯಿಸುವುದರ ಜೊತೆಗೆ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಹಾಗಿದ್ರೆ ಯಾವುದರ ಬಗ್ಗೆ ನಾವು ಗಮನ ಹರಿಸಬೇಕು? ಅದರಿಂದ ಏನಾಗುತ್ತೆ ಅನ್ನೋದರ ಬಗ್ಗೆ ನೋಡೋಣ.
ಸಕ್ರಿಯರಾಗಿರಿ:
ದೈಹಿಕವಾಗಿ ಸಕ್ರಿಯರಾಗಿರುವುದು ನಿಮ್ಮ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ನಿಮ್ಮ ಲೈಂಗಿಕತೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಪ್ರತಿದಿನ ವ್ಯಾಯಾಮ ಮಾಡೋದ್ರಿಂದ ಫರ್ಟಿಲಿಟಿಯನ್ನು ಸುಧಾರಿಸುತ್ತದೆ ಮತ್ತು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.
ವೈದ್ಯರ ಬಳಿಗೆ ಹೋಗಿ:
ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಅಥವಾ ಇನ್ನಾವುದೇ ಗಂಭೀರ ಕಾಯಿಲೆಯನ್ನು ಹೊಂದಿದ್ದರೆ ಯಾವುದೇ ಹಿಂಜರಿಕೆಯಿಲ್ಲದೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಮತ್ತು ಅಗತ್ಯ ಚಿಕಿತ್ಸೆಯನ್ನು ಪಡೆಯಿರಿ. ಇದರಿಂದ ಸಮಸ್ಯೆಗೆ ಶೀಘ್ರ ಪರಿಹಾರ ಸಿಗುತ್ತದೆ.
ಸ್ಟ್ರೆಸ್ ನಿವಾರಿಸಿ:
ಹೆಚ್ಚು ಹೆಚ್ಚು ಸ್ಟ್ರೆಸ್ ಗೆ ಒಳಗಾಗುವುದರಿಂದ ವ್ಯಕ್ತಿಯ ರಕ್ತದೊತ್ತಡ ಮತ್ತು ಹೃದಯ ಬಡಿತ ಕೂಡ ಹೆಚ್ಚಾಗುತೆ. ಇದು ವೀರ್ಯದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಲೈಂಗಿಕ ಬಯಕೆಯನ್ನು ಕಡಿಮೆ ಮಾಡುತ್ತದೆ. ಆದುದರಿಂದ ಸ್ಟ್ರೆಸ್ ನಿವಾರಿಸಲು ಪ್ರಯತ್ನಿಸಿ.
ನಿದ್ರೆಯ ವೇಳಾಪಟ್ಟಿ:
ಆರೋಗ್ಯ ತಜ್ಞರ ಪ್ರಕಾರ, ಆರೋಗ್ಯಕರ ಜೀವನಶೈಲಿ ಮತ್ತು ಸಾಕಷ್ಟು ನಿದ್ರೆಯನ್ನು ಪಡೆಯುವುದು ವೀರ್ಯಾಣುಗಳ ಗುಣಮಟ್ಟ ಮತ್ತು ಲೈಂಗಿಕ ಬಯಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದುದಾರಿಂದ ಸರಿಯಾದ ಪ್ರಮಾಣದಲ್ಲಿ ನಿದ್ರೆ ಪಡೆಯಲು ಪ್ರಯತ್ನಿಸಿ.
ಕೆಟ್ಟ ಅಭ್ಯಾಸಗಳಿಗೆ ನೋ ಎನ್ನಿ:
ರೆಡ್ ವೈನ್ ರಕ್ತಪರಿಚಲನೆಯನ್ನು ಸುಧಾರಿಸುತ್ತೆ ನಿಜಾ, ಆದರೆ ಹೆಚ್ಚು ಆಲ್ಕೋಹಾಲ್ ಮತ್ತು ಸ್ಮೋಕ್ ಮಾಡೋದು ಲೈಂಗಿಕ ಕಾರ್ಯಕ್ಷಮತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ನಿಯಮಿತವಾಗಿ ಮದ್ಯಪಾನ ಮತ್ತು ಧೂಮಪಾನವು ಪುರುಷರ ಫರ್ಟಿಲಿಟಿ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಮತ್ತು ವೀರ್ಯಾಣುವಿನ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ.