ಋತುಬಂಧದ (menopause) ನಂತರ, ಕಡಿಮೆ ಹಾರ್ಮೋನ್ ಮಟ್ಟಗಳು ಯೋನಿ ಅಂಗಾಂಶಗಳನ್ನು ತೆಳ್ಳಗೆ ಅಥವಾ ಶುಷ್ಕವಾಗಿಸುತ್ತದೆ. ಇದರಿಂದ ಸೆಕ್ಸ್ ಬಗ್ಗೆ ಹೆಚ್ಚಾಗಿ ಮಹಿಳೆಯರು ಒಲವು ತೋರುವುದಿಲ್ಲ. ಹಾಗಿದ್ರೆ ಋತುಬಂಧದ ಬಳಿಕವೂ ಸೆಕ್ಸ್ ಲೈಫ್ ಆನಂದಿಸಲು ಬಯಸಿದ್ರೆ ಏನು ಮಾಡಬೇಕು? ಅನ್ನೋದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
ಐವತ್ತರ ವಯಸ್ಸಿನ ನಂತರ ಮಹಿಳೆಯರ ಆರೋಗ್ಯ ಕ್ಷೀಣಿಸುತ್ತಾ ಹೋಗುತ್ತದೆ. ಆದರೆ ಇದರರ್ಥ ನೀವು ನಿಮ್ಮ ಲೈಂಗಿಕ ಜೀವನವನ್ನು ಶಾಶ್ವತವಾಗಿ ಆನಂದಿಸುವುದನ್ನು ನಿಲ್ಲಿಸಬೇಕು ಎಂದಲ್ಲ. ಋತುಬಂಧದ ನಂತರ ಉತ್ತಮ ಲೈಂಗಿಕ ಜೀವನಕ್ಕಾಗಿ ಕೆಲವು ಸಲಹೆಗಳು ಇಲ್ಲಿವೆ.
ಚೆನ್ನಾಗಿ ನಿದ್ರೆ ಮಾಡಿ:
ಋತುಬಂಧದ ಸಮಯದಲ್ಲಿ ರಾತ್ರಿ ಹೆಚ್ಚಾಗಿ ಬೆವರುತ್ತದೆ ಮತ್ತು ನಿದ್ರಾಹೀನತೆ ಸಮಸ್ಯೆ ಕೂಡ ಕಾಡುತ್ತೆ. ಆದರೆ ಆರ್ಗಸಂ ನಿಮ್ಮ ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ, ಜೊತೆಗೆ ನಿದ್ರಾಹೀನತೆಯ (sleepless) ವಿರುದ್ಧ ಹೋರಾಡಲು ನಿಮಗೆ ಉತ್ತಮ ಅವಕಾಶವನ್ನು ನೀಡುತ್ತದೆ.
ಉತ್ತಮ ಲ್ಯೂಬ್ರಿಕೇಶನ್:
ಋತುಬಂಧದ ನಂತರ, ಯೋನಿ ಶುಷ್ಕತೆ ಹೆಚ್ಚಾಗಿರುತ್ತೆ. ಆದರೆ ವಾರದಲ್ಲಿ ಎರಡರಿಂದ ಮೂರು ಬಾರಿ ಸೆಕ್ಸ್ ಮಾಡುವುದರಿಂದ ಯೋನಿ ವೆಟ್ ಆಗುತ್ತದೆ. ಜೊತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಸಂತೋಷದ ವೈವಾಹಿಕ ಜೀವನ: ಸಂತೋಷದ ವೈವಾಹಿಕ ಜೀವನವನ್ನು ಹೊಂದುವುದು ಅರ್ಥಪೂರ್ಣವಾಗಿದೆ. ಇದರ ಜೊತೆಗೆ ಲೈಂಗಿಕ ತೃಪ್ತಿಯು ನಿಮ್ಮ ವಿವಾಹ ಜೀವನವನ್ನು ಹಿಂದೆಂದಿಗಿಂತಲೂ ಹೆಚ್ಚು ಸಂತೋಷವಾಗಿರುವಂತೆ ಮಾಡುತ್ತೆ.
ಕಡಿಮೆ ಮೈಗ್ರೇನ್ (migrain): ಋತುಬಂಧದ ಸಮಯದಲ್ಲಿ ತೀವ್ರ ತಲೆನೋವು ಇರೋದು ಸಾಮಾನ್ಯ. ಈ ಸಮಸ್ಯೆ ನಿವಾರಿಸಲು ಸೆಕ್ಸ್ ಕೂಡ ಸಹಕಾರಿ. ಲೈಂಗಿಕತೆಯು ತಲೆ ನೋವಿನ ಸಮಸ್ಯೆಗಳನ್ನು ನಿರ್ಮೂಲನೆಗೆ ಸಹಾಯ ಮಾಡುತ್ತೆ.
ಋತುಬಂಧದ ನಂತರ ನಿಮ್ಮ ಲೈಂಗಿಕ ಆರೋಗ್ಯವನ್ನು ಸುಧಾರಿಸಲು ಸಲಹೆಗಳು:
ಆಕ್ಟೀವ್ ಆಗಿರಿ : ನಿಮ್ಮ ಶಕ್ತಿಯ ಮಟ್ಟಗಳು, ಸಂತೋಷ ಮತ್ತು ದೇಹವು ಆರೋಗ್ಯಯುತವಾಗಿರಲು ನೀವು ಸಂಪೂರ್ಣವಾಗಿ ಆಕ್ಟೀವ್ ಆಗಿರಬೇಕು. ಇವೆಲ್ಲವೂ ನಿಮ್ಮ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತೆ.
ವ್ಯಾಯಾಮ ಮಾಡಿ:
ವ್ಯಾಯಾಮ ಮಾಡೋದ್ರಿಂದ ಲೈಂಗಿಕ ಜೀವನವು ಉತ್ತಮವಾಗಿರುತ್ತೆ. ಇವು ಪರಾಕಾಷ್ಠೆಯ ಸ್ನಾಯುಗಳನ್ನು ಬಲಪಡಿಸಬಹುದು ಮತ್ತು ಯೋನಿಗೆ ರಕ್ತದ ಹರಿವನ್ನು ಹರಿಸಲು ಸಹಾಯ ಮಾಡುತ್ತೆ. ಜೊತೆಗೆ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತೆ.
ಧೂಮಪಾನದಿಂದ ದೂರವಿರಿ:
ಸಿಗರೇಟು ಸೇದುವುದರಿಂದ ಈಸ್ಟ್ರೋಜೆನ್ ನ ಪರಿಣಾಮಗಳನ್ನು ಕಡಿಮೆ ಮಾಡಬಹುದು ಮತ್ತು ಯೋನಿಗೆ ರಕ್ತದ ಹರಿವನ್ನು ಕಡಿಮೆ ಮಾಡಬಹುದು. ಇದರ ಪರಿಣಾಮವಾಗಿ ಬೇಗನೆ ಮೂಡ್ ಬರೋದು ಅಷ್ಟೊಂದು ಸುಲಭವಾಗಿರೋದಿಲ್ಲ.
ಆಲ್ಕೋಹಾಲ್ ಮತ್ತು ಮಾದಕವಸ್ತುಗಳಿಂದ ದೂರವಿರಿ:
ಅವು ನಿಮ್ಮ ದೇಹವು ಹೆಚ್ಚು ನಿಧಾನವಾಗಿ ಪ್ರತಿಕ್ರಿಯಿಸಲು ಕಾರಣವಾಗಬಹುದು. ಇವು ಸೆಕ್ಸ್ ಡ್ರೈವ್ (sex drive) ಕಡಿಮೆ ಮಾಡಲು ಕಾರಣವಾಗುತ್ತೆ. ಇದರಿಂದ ಹೆಚ್ಚು ತೊಂದರೆ ಅನುಭವಿಸಬೇಕಾಗಿ ಬರಬಹುದು.
ಆಗಾಗ್ಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿ:
ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ, ಅದು ನಿಮ್ಮ ಯೋನಿಗೆ ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ಆರೋಗ್ಯಕರ ಜೀವನ ನಿಮ್ಮದಾಗಲು ಸಹಾಯ ಮಾಡುತ್ತೆ. ಆದುದರಿಂದ ವಯಸ್ಸಾದ ತಕ್ಷಣ ಸೆಕ್ಸ್ ಕಡೆ ಒಲವು ತೋರುವುದನ್ನು ಬಿಡುವ ಬದಲಾಗಿ, ಹೆಚ್ಚು ಒಲವು ತೋರಿಸುವುದು ಉತ್ತಮ.
ಲೈಂಗಿಕ ಕ್ರಿಯೆಯ ಸಮಯದಲ್ಲಿ ಪ್ರಚೋದನೆ:
ಲೈಂಗಿಕ ಕ್ರಿಯೆಯ ಸಮಯದಲ್ಲಿ ಉದ್ರೇಕಗೊಳ್ಳಲು ನಿಮಗೆ ನೀವೇ ಸಮಯ ನೀಡಿ. ಉದ್ರೇಕಗೊಂಡ ದೇಹದ ತೇವಾಂಶವು ಅಂಗಾಂಶಗಳನ್ನು ರಕ್ಷಿಸುತ್ತದೆ ಮತ್ತು ಲೈಂಗಿಕತೆ ಉತ್ತಮವಾಗಿರಲು ಸಹಾಯ ಮಾಡುತ್ತೆ. ಆದುದರಿಂದ ನಿಮ್ಮ ಮೂಡನ್ನು ಸೆಕ್ಸ್ ಕಡೆಗೆ ಒಲಿಸಿಕೊಳ್ಳುವಂತೆ ನೋಡಿ.