ಈ ಹಾಟ್ ಬೇಸಿಗೆ ರೊಮ್ಯಾನ್ಸ್ ಮಾಡೋದಕ್ಕೆ ಬೆಸ್ಟ್ ಅಂತೆ!

First Published | May 21, 2024, 2:34 PM IST

ಹೆಚ್ಚುತ್ತಿರುವ ಶಾಖ ಎಲ್ಲರ ಜೀವನವನ್ನೇ ಶೋಚನೀಯಗೊಳಿಸಿದೆ ಅನ್ನೋದು ಸುಳ್ಳಲ್ಲ. ಬಿಸಿ ಶಾಖದ ಹೊಡೆತಗಳು ಮತ್ತು ಬೆವರುವ ದೇಹ ಯಾವಾಗಾದ್ರೂ ಬೇಸಿಗೆ ಮುಗಿಯುತ್ತೆ ಅನಿಸುವಂತೆ ಮಾಡಿದೆ. ಆದರೆ ಈ ಋತು ರೊಮ್ಯಾನ್ಸ್ ಹೆಚ್ಚಿಸೋದಕ್ಕೆ ತುಂಬಾ ವಿಶೇಷವಾಗಿದೆಯಂತೆ.
 

ಹಮಾಮಾನ ಯಾವುದೇ ಇರಲಿ, ಆರೋಗ್ಯಕರ ಸಂಬಂಧ (healthy relationship) ಕಾಪಾಡಿಕೊಳ್ಳಲು ಇಂಟಿಮೆಸಿ ಬಹಳ ಮುಖ್ಯ. ಆದರೆ ಬೇಸಿಗೆಯಲ್ಲಿ ಮಾತ್ರ ರೊಮ್ಯಾನ್ಸ್ ಬೇಡವೇ ಬೇಡ ಅಂತಾರೆ ಹೆಚ್ಚಿನ ಜನ. ಬೇಸಿಗೆಯಲ್ಲಿ, ಬೆವರು ಮತ್ತು ಸೋಂಕುಗಳು ಹೆಚ್ಚಾಗಿ ನಿಕಟ ಪ್ರದೇಶವನ್ನು ಹಾನಿಗೊಳಿಸಲು ಪ್ರಾರಂಭಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಸೋಂಕಿನ ಅಪಾಯವೂ ಹೆಚ್ಚುತ್ತೆ, ಇದು ಬೇಸಿಗೆಯಲ್ಲಿ ಸೆಕ್ಸ್ ಮೇಲೂ ಪರಿಣಾಮ ಬೀರುತ್ತದೆ. ಆದರೆ ಬೇಸಿಗೆ ಕಾಲ ರೊಮ್ಯಾನ್ಸ್ ಮಾಡಲು ಬೆಸ್ಟ್ ಸೀಸನ್ ಅನ್ನೋದನ್ನು ಹೆಚ್ಚಿನ ಜನ ಒಪ್ಪಿಕೊಂಡಿದ್ದಾರೆ ಯಾಕೆ ಅನ್ನೋದನ್ನು ನೋಡೋಣ. 
 

ಬೇಸಿಗೆ ಏಕೆ ವಿಶೇಷ?
ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಪ್ರಕಾರ, ಬೇಸಿಗೆಯಲ್ಲಿ ಸಿರೊಟೋನಿನ್ ಮಟ್ಟ ಹೆಚ್ಚುತ್ತದೆ. ಇದು ರೊಮ್ಯಾಂಟಿಕ್ ಜೀವನಕ್ಕಾಗಿ (romantic life) ನಿಮ್ಮನ್ನು ಹೆಚ್ಚು ಉತ್ಸುಕರನ್ನಾಗಿ ಮಾಡುತ್ತದೆ. ಇದು ನಿಮಗೆ ಹೆಚ್ಚು ಆನಂದವನ್ನು ಸಹ ನೀಡುತ್ತೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ರಕ್ತದ ಹರಿವು ಹೆಚ್ಚಾಗಲು ಪ್ರಾರಂಭಿಸುತ್ತದೆ, ಇದರಿಂದಾಗಿ ಲೈಂಗಿಕ ಪ್ರಚೋದನೆ ಕೂಡ ಹೆಚ್ಚುತ್ತೆ.
 

Tap to resize

ಸೂರ್ಯನ ಬೆಳಕು ದೇಹದಲ್ಲಿ ವಿಟಮಿನ್ ಡಿ (Vitamin D) ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಕಾಮಾಸಕ್ತಿ ಕೂಡ ಹೆಚ್ಚುತ್ತದೆ, ಇದರಿಂದ ಮೂಡ್ ಸಹ ಚೆನ್ನಾಗಿರಲು ಆರಂಭವಾಗುತ್ತೆ.ವಾಸ್ತವವಾಗಿ, ವಿಟಮಿನ್ ಡಿ ಕೊರತೆ ದೇಹದ ಈಸ್ಟ್ರೊಜೆನ್ ಮತ್ತು ಟೆಸ್ಟೋಸ್ಟೆರಾನ್ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ, ಇದು ಸೆಕ್ಸ್ ಡ್ರೈವ್ ಅನ್ನು ಕಡಿಮೆ ಮಾಡುತ್ತದೆ.
 

ಬೇಸಿಗೆಯಲ್ಲಿ ಲೈಂಗಿಕತೆಯನ್ನು ಆರೋಗ್ಯಕರವಾಗಿಸಲು ಈ ಸಲಹೆಗಳನ್ನು ಅನುಸರಿಸಿ  
ಹೈಡ್ರೇಟ್ ಆಗಿರಿ
ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಆಗಿಡುವುದು ಅವಶ್ಯಕ. ಇದು ದೇಹದ ಉಷ್ಣತೆಯನ್ನು ಸಮತೋಲನವಾಗಿರಿಸುತ್ತೆ. ಲೈಂಗಿಕ ಕ್ರಿಯೆಗೆ ಮೊದಲು ತಂಪಾದ ಮತ್ತು ಆರೋಗ್ಯಕರ ಪಾನೀಯಗಳನ್ನು ಕುಡಿಯಿರಿ, ಇದರಿಂದ ದೇಹದಲ್ಲಿ ಶಕ್ತಿ ಮತ್ತು ತಂಪು ಉಳಿಯುತ್ತದೆ. ದೇಹದ ಶಾಖ ನಿರ್ವಹಿಸಲು ದಿನವಿಡೀ ಸರಿಯಾದ ಪ್ರಮಾಣದ ನೀರನ್ನು (hydrate) ಕುಡಿಯೋದು ಮುಖ್ಯ.

ಶವರ್ ಸೆಕ್ಸ್ 
ಸೆಕೆಯಾಗೋದರಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಶವರ್ ಸೆಕ್ಸ್ (Shower sex) ಟ್ರೈ ಮಾಡಿ ನೋಡಿ. ಇದು ಲೈಂಗಿಕ ಸೆಷನ್ ಅನ್ನು ಮಸಾಲೆಯುಕ್ತವಾಗಿಸುತ್ತದೆ ಮತ್ತು ದೇಹದಲ್ಲಿ ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇದು ಲೈಂಗಿಕ ಜೀವನಕ್ಕೆ ಹೊಸತನವನ್ನು ತರುತ್ತದೆ ಮತ್ತು ಬಂಧವನ್ನು ಬಲಪಡಿಸುತ್ತದೆ. ಬೇಸಿಗೆಯಲ್ಲಿ, ಲೈಂಗಿಕತೆಯ ಸಮಯದಲ್ಲಿ ಸೋಂಕಿನ ಅಪಾಯವೂ ಇರುತ್ತೆ. ಹಾಗಾಗಿ ಶವರ್ ಸೆಕ್ಸ್ ಬೆಸ್ಟ್. 

ಕೋಣೆ ತಾಪಮಾನವನ್ನು ಕಾಪಾಡಿಕೊಳ್ಳಿ
ಸೆಕ್ಸ್ ಸಮಯದಲ್ಲಿ ಅತಿಯಾಗಿ ಬೆವರೋದರಿಂದ ಸೋಂಕಿನ ಅಪಾಯ ಕಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಶಾಖವನ್ನು ನಿವಾರಿಸಲು, ಏರ್ ಪ್ಯೂರಿ ಫೈರ್, ಫ್ಯಾನ್ ಮತ್ತು ಏಸಿಯೊಂದಿಗೆ ಕೋಣೆಯ ತಾಪಮಾನವನ್ನು ಸಾಮಾನ್ಯಗೊಳಿಸಿ. ಇದು ಆರಾಮದಾಯಕ ಸೆಕ್ಸ್ ಗೆ ಸಹಾಯ ಮಾಡುತ್ತದೆ. 

ಐಸ್ ಕ್ಯೂಬ್ ಬಳಸಿ
ಲೈಂಗಿಕ ಸೆಷನ್ ಅನ್ನು ಸಿಜ್ಲಿಂಗ್ ಮಾಡಲು ಐಸ್ ಕ್ಯೂಬ್ (ice cube) ಬಳಸಿ. ಅದು ಓರಲ್ ಆಗಿರಲಿ, ಅಥವಾ ಯಾವುದೇ ರಿತಿಯ ಸೆಕ್ಸ್ ಆಗಿರಲಿ ಐಸ್ ಕ್ಯೂಬ್ ಮಸಾಜ್ ಮಾಡೋದು, ಇವೆಲ್ಲವೂ ಬೇಸಿಗೆಯಲ್ಲಿ ಅಹ್ಲಾದಕರವಾಗಿರುತ್ತೆ, ರೊಮ್ಯಾನ್ಸ್ ಮತ್ತಷ್ಟು ಹೆಚ್ಚುತ್ತೆ. ಇದಲ್ಲದೆ, ಸೆಕ್ಸ್ ಟಾಯ್ಸ್ ಕೂಲ್ ಮಾಡುವ ಮೂಲಕ ಬಳಸಿ. ಇದು ಪರಾಕಾಷ್ಠೆಗೆ ಕಾರಣವಾಗುತ್ತದೆ.
 

ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸಿ
ಬ್ಯಾಕ್ಟೀರಿಯಾದ ವರ್ಗಾವಣೆಯನ್ನು ತಪ್ಪಿಸಲು ಸ್ವಚ್ಚತೆ ಬಗ್ಗೆ ಕಾಳಜಿ ವಹಿಸಿ. ಇದು ಯೋನಿಯನ್ನು ಆರೋಗ್ಯವಾಗಿಡುತ್ತದೆ. ಇದಲ್ಲದೆ, ಲೈಂಗಿಕ ಆಟಿಕೆಗಳನ್ನು ಬಳಸುವ ಮೊದಲು ಸ್ವಚ್ಚಗೊಳಿಸುವ ಮೂಲಕ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸೋದನ್ನು ಮರೆಯಬೇಡಿ. 

Latest Videos

click me!