ಇತ್ತೀಚಿಗೆಮಾರುಕಟ್ಟೆಯಲ್ಲಿ ರುಚಿಯಿಂದ ಹಿಡಿದು ಡಾಟಿಂಗ್‌ಗಳವರೆಗೆ, ಮೂಡ್‌ಗೆ ಹೊಂದುವಂತಹ ವಿವಿಧ ರೀತಿಯ ಕಾಂಡೋಮ್ಸ್ ಲಭ್ಯವಿದೆ. ಲೈಂಗಿಕ ಕ್ರಿಯೆಯನ್ನು ಆನಂದಿಸುವಾಗ ಕಾಂಡಮ್ ಬಳಸುವುದು ಸುರಕ್ಷಿತ. ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ಮತ್ತು ಸಂತೋಷದ ಲೈಂಗಿಕ ಕ್ರಿಯೆಗಾಗಿ, ಸುವಾಸನೆಯುಕ್ತಕಾಂಡೋಮ್ಸ್ ಸಹಾಯ ಪಡೆಯಬಹುದು. ಇಂದಿನ ದಿನಗಳಲ್ಲಿ ಕಾಂಡೋಮ್ಸ್ ವಿವಿಧ ರುಚಿಗಳಲ್ಲಿ ಲಭ್ಯವಿದೆ, ಆದರೆ ಅವುಗಳನ್ನು ಬಳಸುವ ಮುನ್ನ ಇದರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಿ.
ಫ್ಲೇವರ್ಡ್ ಮತ್ತು ಬಣ್ಣಓರಲ್ ಸೆಕ್ಸ್‌ನಿಂದಾಗಿ ಫ್ಲೇವರ್ ಕಾಂಡೋಮ್ ಬಳಕೆ ಹೆಚ್ಚಾಗಿದೆ. ಈ ನಡುವೆ, ಸಾದಾ ಕಾಂಡೋಮ್ಸ್ವಾಸನೆಯನ್ನು ನಿವಾರಿಸಲು ಫ್ಲೇವರ್ ಕಾಂಡೋಮ್ಸ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಹೆಚ್ಚಿನ ತಯಾರಕರು ಸ್ವಾದಕ್ಕೆ ಹೊಂದಿಕೆಯಾಗುವಂತೆ ಕಾಂಡೋಮ್‌ಗಳಿಗೆ ಕೃತಕ ಬಣ್ಣ ಬಳಸುತ್ತಾರೆ, ಇದರ ಬಗ್ಗೆ ಎಚ್ಚರವಾಗಿರಬೇಕು.
ಸುರಕ್ಷಿತ ಓರಲ್ ಸೆಕ್ಸ್ಓರಲ್ ಸೆಕ್ಸ್‌ನಲ್ಲಿ ಫ್ಲೇವರ್ ಮತ್ತು ಬಣ್ಣದ ಕಾಂಡೋಮ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಕಾಂಡೋಮ್ ತಯಾರಕರು ತಮ್ಮ ಉತ್ಪನ್ನಗಳು ಮೌಖಿಕ ಲೈಂಗಿಕಕ್ರಿಯೆಯಲ್ಲಿಯೂ ಸುರಕ್ಷಿತವೆಂದು ಖಚಿತಪಡಿಸಿಕೊಳ್ಳಲು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದಾಗಿ ಹೇಳುತ್ತಾರೆ. ಆದ್ದರಿಂದ, ಸುವಾಸನೆಯುಕ್ತ ಕಾಂಡೋಮ್‌ಗಳ ಸರಿಯಾದ ಮತ್ತು ಸಂಯಮದ ಬಳಕೆಹಾನಿಯುಂಟು ಮಾಡುವುದಿಲ್ಲ. ಆದರೂ ಸ್ವಲ್ಪ ಎಚ್ಚರಿಕೆಯಿಂದ ಬಳಸಿದರೆ ಒಳಿತು.
ರಾಸಾಯನಿಕಗಳನ್ನು ಬಳಸಲಾಗುತ್ತದೆಹೆಚ್ಚಿನ ಕಾಂಡೋಮ್‌ಗಳನ್ನು ಆಹಾರ ಮತ್ತು ಔಷಧ ಆಡಳಿತವು ಅನುಮೋದಿಸುತ್ತದೆ ಮತ್ತು ಆರೋಗ್ಯವನ್ನು ರಕ್ಷಿಸುವುದನ್ನು ಖಚಿತಪಡಿಸುತ್ತದೆ. ಆದರೆ ಸ್ಟ್ರಾಬೆರಿ ಫ್ಲೇವರ್ ಕಾಂಡೋಮ್‌ಗೆ ಒಂದೇ ಹಳದಿ ಬಣ್ಣ ನೀಡಲು ಮತ್ತು ಸ್ಟ್ರಾಬೆರಿ ಫ್ಲೇವರ್ ಕಾಂಡೋಮ್‌ಗೆ ಮ್ಯಾಚ್ ಮಾಡುವ ಕೆಂಪು ಬಣ್ಣ ನೀಡಲು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಪುರುಷರು ಸುವಾಸನೆಯ ಕಾಂಡೋಮ್ ಬಳಸುವಾಗ ಯಾವುದೇ ತೊಂದರೆಗಳನ್ನು ಹೊಂದುವುದಿಲ್ಲ, ಆದರೆ ಓರಲ್ ಅಥವಾ ಇತರ ಕ್ರಿಯೆ ಮಾಡುವಾಗ ಮಹಿಳೆಯರಲ್ಲಿ ವಜೈನಾದಲ್ಲಿ ತುರಿಕೆ, ಉರಿ, ಊತ ಅಥವಾ ಗಂಟಲಿನ ತೊಂದರೆಯನ್ನು ಉಂಟುಮಾಡಬಹುದು.
ವಿವಿಧ ಸುವಾಸನೆಗಳುಸದ್ಯ ಮಾರುಕಟ್ಟೆಯಲ್ಲಿ ಫ್ಲೇವರ್ ಕಾಂಡೊಮ್ ಸ್ಟ್ರಾಬೆರಿ, ಕಿತ್ತಳೆ, ಪುದಿನಾ, ದ್ರಾಕ್ಷಿ, ಬಾಳೆಹಣ್ಣು, ಬಬ್ಬಲ್, ಚಾಕೋಲೇಟ್, ವೆನಿಲ್ಲಾ, ಬೇಕನ್, ಉಪ್ಪಿನಕಾಯಿ ಮತ್ತು ಕೋಲಾ ಫ್ಲೇವರ್ಸ್ ಹೆಚ್ಚು ಇಷ್ಟ. ಈ ರುಚಿಯ ಮೂಲಕ ಯುವ ಜನಾಂಗ ತಮ್ಮ ಲೈಂಗಿಕ ಜೀವನವನ್ನು ಆನಂದಿಸುವಂತೆ ಮಾಡುತ್ತದೆ.
ಫ್ಲೇವರ್ಡ್ ಕಾಂಡೋಮ್‌ಗಳುಈ ಕಾಂಡೋಮ್‌ಗಳು ಮೌಖಿಕ ಲೈಂಗಿಕತೆಗೆ ಅತ್ಯುತ್ತಮ. ಚಾಕೋಲೇಟ್, ಕಾಫಿ, ಸ್ಟ್ರಾಬೆರಿ, ಮಿಂಟ್, ವೆನಿಲ್ಲಾ ಹೀಗೆ ಹಲವು ಫ್ಲೇವರ್ಸ್ಮಾರುಕಟ್ಟೆಯಲ್ಲಿ ಲಭ್ಯ. ಲೈಂಗಿಕ ಕ್ರಿಯೆಗೆ ಇದನ್ನು ಬಳಸಬೇಕೆಂದಿದ್ದರೆ, ನೀವು ಅಥವಾ ಸಂಗಾತಿಗೆ ಯೀಸ್ಟ್ ಸೋಂಕು ಬರದಂತೆ ಸಕ್ಕರೆ ಮುಕ್ತವಾಗಿರುವ ಕಾಂಡೋಮ್ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಡಾಟೆಡ್ ಕಾಂಡೋಮ್ಸ್ವಲ್ಪ ಹೆಚ್ಚು ಮೋಜನ್ನು ಬಯಸಿದರೆ, ಇದು ಪರಿಪೂರ್ಣ ಕಾಂಡೋಮ್. ಟೆಕ್ಸ್ಯೂರ್ಡ್ ಅಥವಾ ಸ್ಟಡೆಡ್ ಕಾಂಡೋಮ್ಸ್ ಕೇವಲ ಸಂಗಾತಿಗೆ ಮಾತ್ರವಲ್ಲ, ನಿಮಗೂ ಒಂದು ಆಹ್ಲಾದಕರ ಅನುಭವವನ್ನು ನೀಡುತ್ತವೆ. ಈ ಕಾಂಡೋಮ್ಸ್ಸಂಪೂರ್ಣ ಕಾಂಡೋಮ್ ಮೇಲೆ ಸ್ವಲ್ಪ ಮಟ್ಟಿಗೆ ರೇಶಿಮೆಗಳನ್ನು ಹೊಂದಿರುತ್ತವೆ ಮತ್ತು ಲೈಂಗಿಕ ಕ್ರಿಯೆಯ ಸಮಯದಲ್ಲಿ ಹೆಚ್ಚು ಖುಷಿಯನ್ನು ನೀಡುತ್ತದೆ.
ಸೂಪರ್ ತೆಳು ಕಾಂಡೋಮ್‌ಗಳುಕಾಂಡೋಮ್ ಬಳಸಿದ್ದರೂ ಕಾಂಡೋಮ್ ಮುಕ್ತ ಸೆಕ್ಸ್ ಆನಂದವನ್ನು ಆನಂದಿಸಲು ಬಯಸಿದರೆ, ಸೂಪರ್ ಸ್ಲಿಮ್ ಕಾಂಡೋಮ್ ಅತ್ಯಂತ ಪ್ರಿಯವಾದ ಕಾಂಡೋಮ್ ಆಗಲಿವೆ. ಇದು ಒಂದು ಟ್ರಾನ್ಸ್‌ಪರಂಟ್ ಕಾಂಡೋಮ್ ಆಗಿದ್ದು, ಇದನ್ನು ಮುಟ್ಟಿದಾಗ ಚರ್ಮದಂತೆ ಕಾಣುವ ಶೀರಾನ್ ಮೆಟೀರಿಯಲ್‌ನಿಂದ ಮಾಡಲ್ಪಟ್ಟಿದೆ. ಅನಗತ್ಯ ಗರ್ಭಧಾರಣೆ ಮತ್ತು ಲೈಂಗಿಕ ಕಾಯಿಲೆಗಳಿಂದ ರಕ್ಷಣೆ ನೀಡುವಲ್ಲಿ ಇದು ತುಂಬಾ ಪರಿಣಾಮಕಾರಿ.
ಪ್ಲ್ಯಾಟರ್ ಆಕಾರದ ಕಾಂಡೋಮ್ಸ್ಈ ಕಾಂಡೋಮ್ ಎರಡೂ ಸಂಗಾತಿಗಳ ಸಂವೇದನೆಯನ್ನು ಉತ್ತುಂಗಕ್ಕೆ ತರುತ್ತದೆ. ತುದಿ ಸಡಿಲವಾಗಿದ್ದು, ತುಂಬಾ ಎತ್ತರವಾಗಿದೆ.
ಡಾರ್ಕ್ ಕಾಂಡೋಮ್‌ಗಳಲ್ಲಿ ಹೊಳಪುಕ್ರೇಜಿ ಸೆಕ್ಸ್ ಅನ್ನು ಇಷ್ಟಪಡುತ್ತಿದ್ದರೆ, ಇದು ಸೂಕ್ತ ಆಯ್ಕೆ. 0 ಸೆಕೆಂಡುಗಳ ನಂತರ, ಕಾಂಡೋಮ್ ಗಳು ಕತ್ತಲಲ್ಲಿ ಬೆಳಗಲು ಪ್ರಾರಂಭಿಸುತ್ತವೆ. ಇದು ಸಂಪೂರ್ಣವಾಗಿ ವಿಷಕಾರಿಯಲ್ಲ ಮತ್ತು ಮೂರು ಪದರಗಳನ್ನು ಹೊಂದಿವೆ. ಒಳ ಮತ್ತು ಹೊರ ಪದರಗಳು ಲ್ಯಾಟೆಕ್ಸ್‌ನಿಂದ ಮಾಡಲ್ಪಟ್ಟಿವೆ, ಆದರೆ ಮಧ್ಯದ ಪದರವು ಒಂದು ಸುರಕ್ಷಿತ ವರ್ಣದ್ರವ್ಯದಿಂದ ಮಾಡಲ್ಪಟ್ಟಿದ್ದು, ಇದು ಹೊಳೆಯುವಂತೆ ಮಾಡುತ್ತದೆ.
ಆದರೆ ಕಾಂಡೋಮ್ ಖರೀದಿಸುವಾಗಲೂ ಎಚ್ಚರ ವಹಿಸಬೇಕು. ಮುಂದಿನ ಬಾರಿ, ಕಾಂಡೋಮ್ ಖರೀದಿಸಲು ಹೋದಾಗಲೆಲ್ಲ, ಅದರ ಮೇಲಿರುವ ಲೇಬಲ್ ಅನ್ನು ಪರಿಶೀಲಿಸಿ ಮತ್ತು ಗರ್ಭಾವಸ್ಥೆ ಮತ್ತು STD ಯನ್ನು ತಡೆಗಟ್ಟಲು FDA ನಿಂದ ಅನುಮೋದನೆಯಾಗಿದೆಯೇ ಎಂಬುದನ್ನು ನೋಡಿ. ಅನುಮೋದನೆಗೊಂಡರೆ ಮಾತ್ರ ಖರೀದಿಸಿ.