ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಜಗತ್ತಿನ ಈ 4 ಶ್ರೀಮಂತ ವ್ಯಕ್ತಿಗಳು..!

First Published | Jan 21, 2024, 4:40 PM IST

ಬೆಂಗಳೂರು: ಇಡೀ ಜಗತ್ತೇ ಕಾತರದಿಂದ ಕಾಯುತ್ತಿರುವ ಆ ಘಳಿಗೆ ಬಂದೇ ಬಿಟ್ಟಿದೆ. ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣಪ್ರತಿಷ್ಟಾಪನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ಹಲವು ಸೆಲಿಬ್ರಿಟಿಗಳು ಪಾಲ್ಗೊಳ್ಳುತ್ತಿದ್ದಾರೆ. ಈ ಪೈಕಿ ಜಗತ್ತಿನ 4 ಶ್ರೀಮಂತ ವ್ಯಕ್ತಿಗಳು ಈ ರಾಮ ಮಂದಿನ ಉದ್ಘಾಟನಾ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಜನವರಿ 22ರ ಸೋಮವಾರ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆಯಾಗಲಿದೆ. ಈ ಭವ್ಯ ಹಾಗೂ ಐತಿಹಾಸಿಕ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡೇ ಅಯೋಧ್ಯೆಯತ್ತ ಹರಿದು ಬರುತ್ತಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ಹೇಳಿದಂತೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸುಮಾರು ನೂರು ಚಾರ್ಟೆಡ್ ವಿಮಾನಗಳು ಹಾರಾಟ ನಡೆಸಲಿವೆ ಎಂದಿದ್ದಾರೆ.

Tap to resize

ಇನ್ನು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರೀಡಾ ಕ್ಷೇತ್ರದ ದಿಗ್ಗಜರು, ಉದ್ಯಮಿಗಳು, ರಾಜಕಾರಣಿಗಳು, ಸಾಧು ಸಂತರೂ ಪಾಲ್ಗೊಳ್ಳಲಿದ್ದಾರೆ.

ಇದಷ್ಟೇ ಅಲ್ಲದೇ ಜಗತ್ತಿನ ಶ್ರೀಮಂತ ಉದ್ಯಮಿಗಳು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಇವರ ಎಷ್ಟು ಶ್ರೀಮಂತರೆಂದರೆ, ಮನಸ್ಸು ಮಾಡಿದರೆ, ನೆರೆಯ ಪಾಕಿಸ್ತಾನವನ್ನೇ ಖರೀದಿಸಬಹುದಾದಷ್ಟು ಶ್ರೀಮಂತಿಕೆ ಇವರ ಬಳಿಯಿದೆ. ಈ ರಾಮ ಮಂದಿರ ಕಾರ್ಯಕ್ರಮದಲ್ಲಿ ಭಾಗಿಯಾಗುವ ಶ್ರೀಮಂತ ವ್ಯಕ್ತಿಗಳು ಯಾರು ಎನ್ನುವುದನ್ನು ನೋಡೋಣ ಬನ್ನಿ

1. ಮುಕೇಶ್ ಅಂಬಾನಿ:

ಜಗತ್ತಿನ ಪ್ರಮುಖ ಹಾಗೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಮುಕೇಶ್ ಅಂಬಾನಿ ಹಾಗೂ ಅವರ ಕುಟುಂಬ, ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 
 

ರಾಮ ಮಂದಿರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಶ್ರೀಮಂತ ವ್ಯಕ್ತಿಗಳಲ್ಲಿ ಮುಕೇಶ್ ಅಂಬಾನಿ ಅಗ್ರಸಾಲಿನಲ್ಲಿ ನಿಲ್ಲುತ್ತಾರೆ. ಕೆಲವು ವರದಿಗಳ ಪ್ರಕಾರ ರಾಮ ಮಂದಿರ ನಿರ್ಮಾಣಕ್ಕೆ ಮುಕೇಶ್ ಅಂಬಾನಿ ದೊಡ್ಡ ಮೊತ್ತದ ದೇಣಿಗೆ ನೀಡಿದ್ದಾರೆ ಎನ್ನಲಾಗಿದೆ.

2. ಗೌತಮ್ ಅದಾನಿ:

ಭಾರತದ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಗೌತಮ್ ಅದಾನಿ ಕೂಡಾ ಹಿಂದೆ ಬಿದ್ದಿಲ್ಲ. ಗೌತಮ್ ಅದಾನಿ ಹಾಗೂ ಮತ್ತವರ ಕುಟುಂಬ ಶ್ರೀರಾಮನ ಪ್ರಾಣಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
 

ಗೌತಮ್ ಅದಾನಿ, ಅದಾನಿ ಎಂಟರ್‌ಪ್ರೈಸಸ್ ಸಂಸ್ಥೆಯ ಮಾಲೀಕರಾಗಿದ್ದಾರೆ. ಗೌತಮ್ ಅದಾನಿಯವರ ಒಂದು ದಿನದ ದುಡಿಮೆಯೇ 80ರಿಂದ 100 ಕೋಟಿ ರುಪಾಯಿಗಳು ಎನ್ನಲಾಗುತ್ತಿದೆ. 

3. ರತನ್ ಟಾಟಾ:

ರಾಮ ಮಂದಿರ ಉದ್ಘಾಟನೆಗೆ ಸಾಕ್ಷಿಯಾಗಲಿರುವ ಶ್ರೀಮಂತ ವ್ಯಕ್ತಿಗಳಲ್ಲಿ ರತನ್ ಟಾಟಾ ಕೂಡಾ ಒಬ್ಬರಾಗಿದ್ದಾರೆ. ರತನ್ ಟಾಟಾ, ಟಾಟಾ ಗ್ರೂಪ್‌ನ ಮಾಜಿ ಮುಖ್ಯಸ್ಥರಾಗಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ರತನ್ ಟಾಟಾ ಸುಮಾರು 100 ಕೋಟಿ ರುಪಾಯಿಗಳನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. 
 

ರತನ್ ಟಾಟಾ ತಮ್ಮ ಸಂಪಾದನೆಯ ಅರ್ಧ ಪಾಲನ್ನು ಸಮಾಜಮುಖಿ ಕೆಲಸಕ್ಕಾಗಿ ದೇಣಿಗೆ ನೀಡುತ್ತಾ ಬಂದಿದ್ದಾರೆ. ಇಲ್ಲದಿದ್ದರೇ ರತನ್ ಟಾಟಾ, ಗಳಿಕೆಯಲ್ಲಿ ಮುಕೇಶ್ ಅಂಬಾನಿ ಅವರಿಗಿಂತಲೂ ಎಷ್ಟೋ ಮುಂದಿರುತ್ತಿದ್ದರು ಎಂದು ವರದಿಯಾಗಿದೆ.
 

4. ಅನಿಲ್ ಅಗರ್‌ವಾಲ್:

ವೇದಾಂತ ಗ್ರೂಪ್ ಆಫ್ ಕಂಪನಿಯ ಸಂಸ್ಥಾಪಕರು ಹಾಗೂ ಚೇರ್‌ಮನ್ ಆಗಿರುವ ಅನಿಲ್ ಅಗರ್‌ವಾಲ್, ರಾಮ ಮಂದಿರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.  
 

ವೇದಾಂತ ಕಂಪನಿಯ ಒಟ್ಟು ಮೌಲ್ಯವೇ ಸುಮಾರು 2 ಲಕ್ಷ ಕೋಟಿ ರುಪಾಯಿಗಳಾಗಿದೆ. ತುಂಬಾ ಸರಳವಾಗಿ ಕಾಣಿಸಿಕೊಳ್ಳುವ ಅನಿಲ್ ಅಗರ್‌ವಾಲ್ ಹಾಗೂ ಅವರ ಕುಟುಂಬ ಈ ಭೌವ್ಯ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
 

Latest Videos

click me!