2014 ರಲ್ಲಿ, ಕೇಂದ್ರ ಆರೋಗ್ಯ ಸಚಿವಾಲಯವು ಅತ್ಯಾಚಾರ ಸಂತ್ರಸ್ತರ ಚಿಕಿತ್ಸೆಗಾಗಿ ಹೊಸ ಮಾರ್ಗಸೂಚಿಗಳನ್ನು ರೂಪಿಸಿತ್ತು, ಅದರ ಪ್ರಕಾರ ಪ್ರತಿ ಆಸ್ಪತ್ರೆಯು ಸಂತ್ರಸ್ತೆಯ ವೈದ್ಯಕೀಯ ಮತ್ತು ವಿಧಿವಿಜ್ಞಾನ ಪರೀಕ್ಷೆಗೆ ಪ್ರತ್ಯೇಕ ಕೊಠಡಿಯನ್ನು ಹೊಂದಿರಬೇಕು. ಸಂತ್ರಸ್ತೆ ಮೇಲೆ ಟು ಫಿಂಗರ್ ಟೆಸ್ಟ್ ನಡೆಸುವುದು ಅವೈಜ್ಞಾನಿಕ ಮತ್ತು ಕಾನೂನುಬಾಹಿರ ಎಂದು ಕರೆಯಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ (World Health Organization) ಕೂಡಾ ಟು ಫಿಂಗರ್ ಟೆಸ್ಟ್ ಅನೈತಿಕ ಎಂದು ಕರೆದಿದೆ. ಅತ್ಯಾಚಾರ ಪ್ರಕರಣದಲ್ಲಿ, ಹೈಮನ್ ತನಿಖೆಯಿಂದ ಎಲ್ಲವೂ ಬಹಿರಂಗವಾಗುವುದಿಲ್ಲ ಎಂದು ಅವರು ಹೇಳಿತ್ತು. ಇದು ಅನುಮಾನಾಸ್ಪದವಾಗಿದೆ. ಟು ಫಿಂಗರ್ ಟೆಸ್ಟ್ ಮಾನವ ಹಕ್ಕುಗಳ ಉಲ್ಲಂಘನೆಯಾಗಬಹುದು ಹಾಗೂ ಸಂತ್ರಸ್ತೆಗೆ ನೋವನ್ನು ಉಂಟುಮಾಡಬಹುದು. ಇದು ಲೈಂಗಿಕ ದೌರ್ಜನ್ಯಕ್ಕೆ ಸಮವಾಗಿದ್ದು, ಈ ಟೆಸ್ಟ್ ಮೂಲಕ ಸಂತ್ರಸ್ತೆ ಮತ್ತೆ ಅಂತಹುದೇ ನೋವು ಅನುಭವಿಸಬೇಕಾಗುತ್ತದೆ ಎಂದಿತ್ತು.
ವಾರ್ ಅಗೇನ್ಸ್ಟ್ ರೇಪ್(WAR)ನ ಪ್ರೋಗ್ರಾಂ ಆಫೀಸರ್ ಶೆರಾಜ್ ಅಹ್ಮದ್ ಈ ಬಗ್ಗೆ ಮಾತನಾಡುತ್ತಾ ಟು ಫಿಂಗರ್ ಟೆಸ್ಟ್ ಕೂಡಾ ಅತ್ಯಾಚಾರವೇ. 2010 ರಲ್ಲಿ, ಹ್ಯೂಮನ್ ರೈಟ್ಸ್ ವಾಚ್ ವರದಿಯಲ್ಲಿ ಈ ಪರೀಕ್ಷೆಯನ್ನು ನಿಷೇಧಿಸಬೇಕು ಎಂದು ಹೇಳಿದೆ. ಟು ಫಿಂಗರ್ ಟೆಸ್ಟ್‌ಗೊಳಗಾದ ಮಹಿಳೆಯರನ್ನು ಮಾತನಾಡಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
ಹ್ಯೂಮನ್ ರೈಟ್ಸ್ ವಾಚ್ ನ ಮಹಿಳಾ ಹಕ್ಕುಗಳ ಸಂಶೋಧಕ ಅರುಣಾ ಕಶ್ಯಪ್ ಟು ಫಿಂಗರ್ ಟೆಸ್ಟ್ ಸಂತ್ರಸ್ತೆ ಮೇಲೆ ಮತ್ತೊಂದು ಅತ್ಯಾಚಾರ ಮಾಡಿದಂತೆ, ಇದು ಆಕೆಯನ್ನು ಮತ್ತಷ್ಟು ಅವಮಾನ ಹಾಗೂ ನೋವು ಉಂಟು ಮಾಡುತ್ತದೆ ಎಂದಿದ್ದಾರೆ.
ಏನಿದು ಟು ಫಿಂಗರ್ ಟೆಸ್ಟ್?: ಸರಳ ಭಾಷೆಯಲ್ಲಿ ಹೇಳುವುದಾದರೆ, ಈ ಪರೀಕ್ಷೆ ವೇಳೆ ಸಂತ್ರಸ್ತೆಯ ಗುಪ್ತಾಂಗಕ್ಕೆ ಎರಡು ಬೆರಳುಗಳನ್ನು ಹಾಕುವ ಮೂಲಕ ಪರೀಕ್ಷೆಯನ್ನು ಮಾಡಲಾಗುತ್ತದೆ. ಹೈಮೆನ್ ಇದೆಯೋ ಇಲ್ಲವೋ ಎಂಬುದನ್ನು ಕಂಡುಹಿಡಿಯಲು ಹೀಗೆ ಮಾಡಲಾಗುತ್ತದೆ. ಈ ಮೂಲಕ ಮಹಿಳೆ ಅದಕ್ಕೂ ಮುನ್ನ ದೈಹಿಕ ಸಂಪರ್ಕ ಮಾಡಿದ್ದಳೋ ಇಲ್ಲವೋ ಎಂದು ಪರೀಕ್ಷಿಸಲಾಗುತ್ತದೆ.
ಟು ಫಿಂಗರ್ ಟೆಸ್ಟ್ ಎಲ್ಲೆಲ್ಲಿ ಬ್ಯಾನ್ ಆಗಿದೆ?
ಟು ಫಿಂಗರ್ ಟೆಸ್ಟ್‌ಗೆ ವಿಶ್ವಸಂಸ್ಥೆ ಆಕ್ಷೇಪಿಸಿದೆ, ಈ ಪ್ರಕ್ರಿಯೆಯು ವೈಜ್ಞಾನಿಕವಲ್ಲ ಎಂದು ಹೇಳಿದೆ. ಭಾರತದಲ್ಲಿ 2013 ರಲ್ಲಿಯೇ ಟು ಫಿಂಗರ್ ಟೆಸ್ಟ್ ನಿಷೇಧಿಸಲಾಗಿದೆ. 2018 ರಲ್ಲಿ, ಬಾಂಗ್ಲಾದೇಶ ಇದನ್ನು ನಿಷೇಧಿಸಿದೆ.