ಒಳ ಉಡುಪಿಗೆ ಎಕ್ಸ್‌ಪೈರಿ ಡೇಟ್: ತೂತು ಬಿದ್ದ ಚೆಡ್ಡಿ ಧರಿಸಬಹುದೇ?

First Published | Sep 18, 2024, 8:14 PM IST

ಒಳಉಡುಪುಗಳಿಗೂ ಎಕ್ಸ್‌ಪೈರಿ ಡೇಟ್ ಇದೆಯೇ?: ಒಳಉಡುಪುಗಳನ್ನು ಎಷ್ಟು ಸಮಯದವರೆಗೆ ಬಳಸಬೇಕು ಎಂಬ ಬಗ್ಗೆ ಅನೇಕರಿಗೆ ತಿಳಿದಿಲ್ಲ. ನಿಮ್ಮ ಒಳಉಡುಪುಗಳನ್ನು ಎಷ್ಟು ತಿಂಗಳು ಬದಲಾಯಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ನಾವು, ನೀವು ಧರಿಸುವ ಅಂಡರ್‌ವೇರ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವೆಂದರೆ ಇಲ್ಲಿ ತಿಳಿದುಕೊಳ್ಳಿ. ಒಮ್ಮೆ ಅಂಡರ್ವೇರ್ ಖರೀದಿ ಮಾಡಿದರೆ ನಾವು ಅದರ ಸಾಮರ್ಥ್ಯ ಮುಗಿದು ಹೋದರೂ, ತೂತು ಬಿದ್ದರೂ ಅದನ್ನು ಬಿಡದೇ ಮತ್ತೊಮ್ಮೆ ಮಗದೊಮ್ಮೆ ಧರಿಸುತ್ತಾರೆ. ಇನ್ನು ಕೆಲವರು ವರ್ಷಕ್ಕೆ ಒಂದು ಜೊತೆ ಒಳ ಉಡುಪು ಖರೀದಿ ಮಾಡಿದರೆ, ಅದರ ಮೇಲೆಯೇ ಅವಲಂಬಿತರಾಗಿರುತ್ತಾರೆ. ಬದಲಿ ಅಂಡರ್‌ವಿಯರ್ ಇಲ್ಲದೇ ಕೆಲವೊಮ್ಮೆ ಅದನ್ನೇ ತೊಳೆದು ಹಸಿಯದ್ದನ್ನೇ ಧರಿಸುತ್ತಾರೆ. ಕೊನೆಗೆ, ಇನ್ನೇನು ಅದು ಉಪಯೋಗಕ್ಕೇ ಬರುವುದಿಲ್ಲ ಎಂದಾದಾಗ ಅದನ್ನು ಪುನಃ ಮನೆ ಒರೆಸಲು ಮರುಬಳಕೆ ವಸ್ತುವನ್ನಾಗಿ ಬಳಕೆ ಮಾಡಲಾಗುತ್ತದೆ. ನಾವು ಮಾಡುವ ಈ ಕಾರ್ಯ ಸರಿಯೇ? ಎಂಬ ಬಗ್ಗೆ ಅಧ್ಯಯನ ವರದಿಯೊಂದು ಹೀಗೆ ಹೇಳುತ್ತದೆ.

National Underwear Day

ಒಳ ಉಡುಪನ್ನು ಏಕೆ ಧರಿಸಲು ಗೊತ್ತಾ?
ನಮ್ಮ ದೈನಂದಿನ ಜೀವನದಲ್ಲಿ ನಾವು ಹಲವಾರು ಚಟುವಟಿಕೆಗಳಲ್ಲಿ ತೊಡಗುತ್ತೇವೆ. ಅವುಗಳಲ್ಲಿ ಸುರಕ್ಷಿತ ಭಾವನೆಯನ್ನು ಅನುಭವಿಸಲು ಅಂಡರ್‌ವೇರ್‌ಗಳು ಸಹಾಯ ಮಾಡುತ್ತವೆ. ಅಂಡರ್‌ವೇರ್‌ಗಳು ವ್ಯಕ್ತಿಯ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜನರು ಹಲವಾರು ಕಾರಣಗಳಿಗಾಗಿ ಅಂಡರ್‌ವೇರ್‌ಗಳನ್ನು ಧರಿಸುತ್ತಾರೆ. 

ದೇಹದ ನೋಟವನ್ನು ಹೆಚ್ಚಿಸುವ ಸಲುವಾಗಿ ಅನೇಕ ಜನರು ಅಂಡರ್‌ವೇರ್‌ಗಳನ್ನು ಧರಿಸುತ್ತಾರೆ. ಅಂಡರ್‌ವೇರ್‌ಗಳನ್ನು ಧರಿಸುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ನೈರ್ಮಲ್ಯದ ದೃಷ್ಟಿಯಿಂದ ಅಂಡರ್‌ವೇರ್‌ಗಳು ನಮಗೆ ಬಹಳ ಮುಖ್ಯ. ಏಕೆಂದರೆ ಅವು ಬ್ಯಾಕ್ಟೀರಿಯಾದಿಂದ ನಮಗೆ ರಕ್ಷಣೆ ನೀಡುತ್ತವೆ. ಹೆಚ್ಚುವರಿ ಬೆವರು ಹೊರಹೋಗುವುದನ್ನು ತಡೆಯುತ್ತದೆ.

ಸ್ವಚ್ಛವಾದ ಅಂಡರ್‌ವೇರ್‌ಗಳು ಮೂತ್ರನಾಳದ ಸೋಂಕುಗಳು (UTIs) ಉಂಟಾಗುವ ಅಪಾಯದಿಂದ ನಮ್ಮನ್ನು ರಕ್ಷಿಸುತ್ತದೆ. ನಮ್ಮ ದೇಹದಿಂದ ಬರುವ ದುರ್ವಾಸನೆ ಮತ್ತು ಅಸ್ವಸ್ಥತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಅಂಡರ್‌ವೇರ್‌ಗಳನ್ನು ಧರಿಸುವುದರಿಂದ ಜನನಾಂಗದ ತುರಿಕೆ ಮತ್ತು ಸೋಂಕುಗಳಿಂದ ರಕ್ಷಣೆ ನೀಡುತ್ತದೆ.

Tap to resize

ಒಳ ಉಡುಪುಗಳನ್ನು ಧರಿಸದ ಯುವತಿಯರನ್ನು ಕಾಣುವುದು ಅಪರೂಪ. ಇದು ಮಹಿಳೆಯರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಏಕೆಂದರೆ ದೇಹದ ಆಕಾರವನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುವಲ್ಲಿ ಅಂಡರ್‌ವೇರ್‌ಗಳ ಪಾತ್ರವೂ ಇದೆ. ಕೆಲವು ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸುವುದೇ ಬ್ರಾಗಳಂತಹ ಅಂಡರ್‌ವೇರ್‌ಗಳು. ಆದರೆ ಇವುಗಳನ್ನು ಎಷ್ಟು ಕಾಲ ಬಳಸಬೇಕು ಎಂಬುದಕ್ಕೆ ಸಮಯ ಮಿತಿ ಇದೆಯೇ? ಎಂಬುದು ಅನೇಕರಿಗೆ ತಿಳಿದಿಲ್ಲ. ಅದೇ ರೀತಿ ಹರಿದ ಅಂಡರ್‌ವೇರ್‌ಗಳನ್ನು ಧರಿಸುವ ಬಗ್ಗೆಯೂ ಅನೇಕರಿಗೆ ಗೊಂದಲ ಇರಬಹುದು. 

ಅಂಡರ್‌ವೇರ್‌ಗಳನ್ನು ಸರಿಯಾಗಿ ಬಳಸುವುದು ವೈಯಕ್ತಿಕ ಸ್ವಚ್ಛತೆ ಅವಲಂಬಿಸಿರುತ್ತದೆ. ಅಂಡರ್‌ವೇರ್‌ಗಳನ್ನು ದೀರ್ಘಕಾಲ ಧರಿಸುವ ಮೂಲಕ ನಿಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ.

ಹೆಚ್ಚಿನ ವಸ್ತುಗಳಿಗೆ ಮುಕ್ತಾಯ ದಿನಾಂಕ (Expiry Date) ಇರುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಮುಕ್ತಾಯ ದಿನಾಂಕದ ನಂತರ ಆ ಉತ್ಪನ್ನಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳು, ಔಷಧಗಳು, ಲೋಷನ್‌ಗಳು, ಅಂಗಡಿಗಳಲ್ಲಿ ಖರೀದಿಸಿ ತಿನ್ನುವ ಆಹಾರಗಳು, ಎಣ್ಣೆಗಳು ಮುಂತಾದ ಎಲ್ಲದಕ್ಕೂ ಮುಕ್ತಾಯ ದಿನಾಂಕ ಇರುವಂತೆ. ಅದರಂತೆಯೇ ಅಂಡರ್‌ವೇರ್‌ಗಳಿಗೂ ಮುಕ್ತಾಯ ದಿನಾಂಕ ಇದೆಯೇ? ಎಂದು ಅನೇಕರು ಯೋಚಿಸಬಹುದು. ನಿಮ್ಮಲ್ಲಿ ಯಾರಾದರೂ ಹಾಗೆ ಯೋಚಿಸುತ್ತಿದ್ದರೆ, ಈ ಮಾಹಿತಿಯಿಂದ ನಿಮ್ಮ ಪ್ರಶ್ನೆಗೆ ಉತ್ತರ ಸಿಗಲಿದೆ.

ಅಂಡರ್‌ವೇರ್‌ಗಳಿಗೂ ಮುಕ್ತಾಯ ದಿನಾಂಕ ಇದೆಯೇ?
ತಜ್ಞರ ಪ್ರಕಾರ,  ಅಂಡರ್‌ವೇರ್‌ಗಳಿಗೆ ಇಲ್ಲಿಯವರೆಗೆ ಯಾವುದೇ ಮುಕ್ತಾಯ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ. ಆದರೆ, ನಾವು ಅದನ್ನು ಎಷ್ಟು ಕಾಲ ಬಳಸುತ್ತೇವೆ ಮತ್ತು ಅದನ್ನು ತೊಳೆಯಲು ಯಾವ ರೀತಿಯ ಡಿಟರ್ಜೆಂಟ್‌ಗಳನ್ನು ಬಳಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. 

ಈ ಬಗ್ಗೆ ತಜ್ಞರೊಬ್ಬರು ಹೇಳುವಂತೆ, ಒಂದು ಅಂಡರ್‌ವೇರ್ ಅನ್ನು ಎಷ್ಟು ಕಾಲ ಬಳಸಬಹುದು ಎಂಬುದಕ್ಕೆ ಯಾವುದೇ ಸಮಯ ಮಿತಿಯಿಲ್ಲ. ಆದರೆ, 6 ತಿಂಗಳಿಗೊಮ್ಮೆ ಅಥವಾ ಪ್ರತಿ ವರ್ಷವೂ ಅಂಡರ್‌ವೇರ್‌ಗಳನ್ನು ಬದಲಾಯಿಸುವುದು ಒಳ್ಳೆಯದು ಎಂದು ಹೇಳುತ್ತಾರೆ.

ಈ ರೀತಿ ಅಂಡರ್‌ವೇರ್‌ಗಳನ್ನು ಬದಲಾಯಿಸುವ ಮೂಲಕ ಹಲವಾರು ರೀತಿಯ ಸೋಂಕುಗಳು ಬರುವುದನ್ನು ಸುಲಭವಾಗಿ ತಪ್ಪಿಸಬಹುದು. ಒಂದು ವೇಳೆ ನೀವು ಅಂಡರ್‌ವೇರ್‌ಗಳನ್ನು ದೀರ್ಘಕಾಲ ಬದಲಾಯಿಸದೆ ಬಳಸಿದರೆ ಅಲರ್ಜಿ, ಚರ್ಮದ ಸಮಸ್ಯೆಗಳಂತಹ ಸೋಂಕುಗಳು ಬರುವ ಅಪಾಯ ಹೆಚ್ಚು.

ಅಂಡರ್‌ವೇರ್‌ಗಳನ್ನು ಯಾವಾಗ ಬದಲಾಯಿಸಬೇಕು?
ನೀವು ಬಳಸುತ್ತಿರುವ ಅಂಡರ್‌ವೇರ್ ತುಂಬಾ ಹಳೆಯದಾಗಿದ್ದರೆ ಅಥವಾ ಸಡಿಲವಾಗಿದ್ದರೆ ಅದನ್ನು ಬಳಸದಿರುವುದು ಒಳ್ಳೆಯದು. ಇದಲ್ಲದೆ, ನಿಮ್ಮ ಅಂಡರ್‌ವೇರ್ ಅನ್ನು ತೊಳೆದ ನಂತರವೂ ಅದರಿಂದ ದುರ್ವಾಸನೆ ಬರುತ್ತಿದ್ದರೆ ಅದನ್ನು ಯಾವುದೇ ಕಾರಣಕ್ಕೂ ಬಳಸಬೇಡಿ.

ಅಂಡರ್‌ವೇರ್‌ಗಳು ಹಳೆಯ ಬಟ್ಟೆಯಂತೆ ಹರಿದು ಹೋಗಲು ಪ್ರಾರಂಭಿಸಿದರೆ ಅದನ್ನು ಖಂಡಿತವಾಗಿಯೂ ಬದಲಾಯಿಸಬೇಕು. ಹರಿದ ಅಂಡರ್‌ವೇರ್‌ಗಳು ಒಳ್ಳೆಯದಲ್ಲ. ಅವು ಯಾವುದೇ ಕೀಟಗಳಿಂದಲೂ ಉಂಟಾಗಿರಬಹುದು. ಅವುಗಳನ್ನು ಬಳಸುವುದರಿಂದ ಉತ್ತಮ ಫಲಿತಾಂಶಗಳು ದೊರೆಯುವುದಿಲ್ಲ. 

ಅಂಡರ್‌ವೇರ್‌ಗಳಲ್ಲಿ ರಂಧ್ರಗಳು ಉಂಟಾಗಲು ಕೀಟಗಳು, ಬಿಳಿ ವಿಸರ್ಜನೆ, ಮೂತ್ರನಾಳದ ಸೋಂಕು, ಬ್ಯಾಕ್ಟೀರಿಯಾದ ಸೋಂಕು ಸೇರಿದಂತೆ ಹಲವು ಕಾರಣಗಳಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ರಂಧ್ರ ಏಕೆ ಉಂಟಾಗುತ್ತದೆ ಎಂಬುದನ್ನು ಪರಿಶೀಲಿಸುವುದು ಮುಖ್ಯ. ಸಾಧ್ಯವಾದಷ್ಟು ಆ ಅಂಡರ್‌ವೇರ್‌ಗಳನ್ನು ಬಳಸಬೇಡಿ.

ಒಂದು ವೇಳೆ ಹರಿದ ಅಂಡರ್‌ವೇರ್ ಅನ್ನು ಇತ್ತೀಚೆಗೆ ಖರೀದಿಸಿದ್ದರಿಂದ ಅದನ್ನು ಎಸೆಯಲು ಮನಸ್ಸಾಗದೇ ಇರಬಹುದು. ಹರಿದಿದ್ದರೂ ಆ ಅಂಡರ್‌ವೇರ್‌ಗಳನ್ನು ಬಳಸಬೇಕೆಂದು ಮನಸ್ಸು ಬಯಸಬಹುದು. ಅವುಗಳನ್ನು ಧರಿಸಲೇಬೇಕೆಂದರೆ ಡಿಟರ್ಜೆಂಟ್‌ನಿಂದ ತೊಳೆದು ಬಿಸಿ ನೀರಿನಲ್ಲಿ ನೆನೆಸಿ ಒಣಗಿಸಿ ನಂತರ ಬಳಸಿ. ಹಾಗೆ ಮಾಡಲು ಸಾಧ್ಯವಾಗದಿದ್ದರೆ, ತೊಳೆದು ಒಣಗಿಸಿದ ಅಂಡರ್‌ವೇರ್‌ಗಳನ್ನು ಇಸ್ತ್ರಿ ಮಾಡಿ ಬಳಸಿ. ಯಾವ ಕಾರಣಕ್ಕಾಗಿ ರಂಧ್ರ ಉಂಟಾಗುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ. 

ನಿಮ್ಮ ಅಂಡರ್‌ವೇರ್‌ಗಳು ಒರಟಾಗಿದ್ದರೆ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಹೆಚ್ಚು. ಮೃದುವಾದ ಅಂಡರ್‌ವೇರ್‌ಗಳನ್ನು ಬಳಸುವುದು ಬಹಳ ಮುಖ್ಯ.  ತುಂಬಾ ಹಾರ್ಡ್ ಇರುವ ಅಂಡರ್‌ವೇರ್‌ಗಳನ್ನು ಬಳಸುವುದರಿಂದ ನಿಮ್ಮ ದೇಹದಲ್ಲಿ ತುರಿಕೆ ಉಂಟಾಗುತ್ತದೆ. ಇದಲ್ಲದೆ, ನಿಮ್ಮ ಗುಪ್ತಾಂಗಗಳಲ್ಲಿ ಸೋಂಕು ಉಂಟಾಗುವ ಅಪಾಯವೂ ಇದೆ.

ನೆನಪಿಡಿ!
ನೀವು ಬಳಸುವ ಟವೆಲ್ ಮತ್ತು ಬ್ರಾಗಳನ್ನು 6 ತಿಂಗಳಿಗೊಮ್ಮೆ ಖಂಡಿತವಾಗಿಯೂ ಬದಲಾಯಿಸಬೇಕು. ಅವುಗಳ ಬಳಕೆಯ ಅವಧಿ ಅಷ್ಟೇ.

ಅದೇ ರೀತಿ ಮುಖದ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಮುಖ ಮತ್ತು ದೇಹಕ್ಕೆ ಒಂದೇ ಟವೆಲ್ ಅನ್ನು 6 ತಿಂಗಳಿಗಿಂತ ಹೆಚ್ಚಾಗಿ ಬಳಸಬಾರದು.

ಮನೆಯಲ್ಲಿರುವ ಎಲ್ಲರೂ ಒಂದೇ ಟವೆಲ್ ಅನ್ನು ಬಳಸಬಾರದು. ಏಕೆಂದರೆ ಪ್ರತಿಯೊಬ್ಬರ ಚರ್ಮವೂ ವಿಭಿನ್ನವಾಗಿರುತ್ತದೆ. 

ಸ್ನಾನದ ಸೋಪ್ ಕೂಡ ಪ್ರತ್ಯೇಕವಾಗಿರಬೇಕು. ಮನೆಯಲ್ಲಿರುವ ಎಲ್ಲರೂ ಒಂದೇ ಸೋಪನ್ನು ಬಳಸಬಾರದು.

ಮೇಲೆ ಹೇಳಿದ ವಿಷಯಗಳನ್ನು ನೀವು ಪಾಲಿಸಿದರೆ, ಯಾವುದೇ ಸೋಂಕುಗಳು ಬಾರದೆ ಆರೋಗ್ಯವಾಗಿರುತ್ತೀರಿ.

Latest Videos

click me!