ಹೆಚ್ಚು ಬೋಳು ತಲೆಯ ಪುರುಷರನ್ನು ಹೊಂದಿರುವ ಹತ್ತು ದೇಶಗಳ ಪಟ್ಟಿ ಇಲ್ಲಿದೆ ನೋಡಿ

First Published | Aug 7, 2024, 6:20 PM IST

ಪುರುಷರ ಎಲ್ಲಾ ಸೌಂದರ್ಯವೂ ಅವರ ಕೂದಲಿನಲ್ಲಿದ್ದು, ಅದಕ್ಕಾಗಿ ಹೇರ್ ಸ್ಟೈಲ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಬೋಳು ತಲೆಯಾದ್ರೆ ಅದನ್ನು ಮುಚ್ಚಿಕೊಳ್ಳಲು ಕ್ಯಾಪ್ ಧರಿಸೋದುಂಟು. ಕೆಲವರು ವಿಗ್ ಸಹ ಹಾಕ್ತಾರೆ. ಸೂಪರ್ ಹೇರ್‌ಪೀಸ್ ಮತ್ತು ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ ಜಂಟಿ ಸಮೀಕ್ಷೆಯ ಪ್ರಕಾರ, ವಿಶ್ವದಲ್ಲಿ ಅತಿ ಹೆಚ್ಚು ಬೋಳು ತಲೆಯ ಪುರುಷರನ್ನು ಹೊಂದಿರುವ ಹತ್ತು ದೇಶಗಳ ಪಟ್ಟಿ ಇಲ್ಲಿದೆ.

1.ಜೆಕ್ ಗಣರಾಜ್ಯ

ಈ ದೇಶದಲ್ಲಿ 1,09,00,555 ಜನರು ವಾಸಿಸುತ್ತಿದ್ದಾರೆ. ಆದರೆ ಇವರಲ್ಲಿ ಶೇಕಡಾ 42.8ರಷ್ಟು ಪುರುಷರು ಬೋಳುತಲೆ ಸಮಸ್ಯೆ ಎದುರಿಸುತ್ತಿದ್ದಾರೆ. ಈ ದೇಶವು ವಿಶ್ವದಲ್ಲೇ ಅತಿ ಹೆಚ್ಚು ಬೋಳು ತಲೆಯ ಪುರುಷರನ್ನು ಹೊಂದಿದೆ.

2. ಸ್ಪೇನ್

ಸ್ಪೇನ್ 4,86,92,804 ಜನಸಂಖ್ಯೆಯನ್ನು ಹೊಂದಿದ್ದು, ಇವರಲ್ಲಿ ಶೇಕಡಾ  42.6ರಷ್ಟು ಪುರುಷರು ಬೋಳುತಲೆ ಹೊಂದಿದ್ದಾರೆ. ಜೆಕ್ ಗಣರಾಜ್ಯಕ್ಕಿಂತ ಕೇವಲ 0.2 ಶೇಕಡಾ ಕಡಿಮೆಯೊಂದಿಗೆ ಈ ದೇಶವು ಎರಡನೇ ಸ್ಥಾನದಲ್ಲಿದೆ.

Tap to resize

3. ಜರ್ಮನಿ

ಮೂರನೇ ಸ್ಥಾನದಲ್ಲಿರುವ ಜರ್ಮನಿಯಲ್ಲಿ ಶೇ.41.2ರಷ್ಟು ಪುರುಷರು ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ದೇಶದ ಜನಸಂಖ್ಯೆ 8,46,69,326 ಆಗಿದೆ.

4. ಫ್ರಾನ್ಸ್, ಯುಕೆ

ಸಮೀಕ್ಷೆ ಪ್ರಕಾರ,  ಈ ಎರಡು ದೇಶಗಳನ್ನು ನಾಲ್ಕನೇ ಸ್ಥಾನದಲ್ಲಿವೆ. ಫ್ರಾನ್ಸ್ ಜನಸಂಖ್ಯೆಯು 6,83,73,433 ಆಗಿದ್ದರೆ UK ಜನಸಂಖ್ಯೆಯು ಸುಮಾರು 6,75,96,281 ಆಗಿದೆ. ಈ ದೇಶಗಳಲ್ಲಿ ಶೇಕಡಾ 39.2ರಷ್ಟು ಪುರುಷರು ಬೋಳುತಲೆ ಸಮಸ್ಯೆಯನ್ನು ಹೊಂದಿದ್ದಾರೆ.

5. ಇಟಲಿ

ಇಲ್ಲಿಯ ಶೇ.39.2 ಪುರುಷರು ಬೋಳುತಲೆಯನ್ನು ಹೊಂದಿದ್ದಾರೆ, ಫ್ರಾನ್ಸ್ ಮತ್ತು ಯುಕೆಗಿಂತ ಈ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಈ ದೇಶದ ಜನಸಂಖ್ಯೆ 5,89,68,501 ಆಗಿದೆ.

6. ನೆದರ್ಲ್ಯಾಂಡ್ಸ್

ನೆದರ್ಲ್ಯಾಂಡ್ಸ್ ವಿಶ್ವದ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಈ ದೇಶದ ಜನಸಂಖ್ಯೆಯು 1,81,46,200 ಮತ್ತು ಅವರಲ್ಲಿ 38.9% ಪುರುಷರು ಬೋಳುತಲೆ ಮತ್ತು ಹಲವರು ಕೂದಲು ಉದರುವಿಕೆ ಸಮಸ್ಯೆ ಹೊಂದಿದ್ದಾರೆ.

7. ಪೋಲೆಂಡ್

ಸಮೀಕ್ಷೆಯಲ್ಲಿ ಪೋಲೆಂಡ್ ಏಳನೇ ಸ್ಥಾನದಲ್ಲಿದೆ. 3,66,20,970 ಜನರು ಈ ದೇಶದಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಶೇ.38.8ರಷ್ಟು ಬೋಳುತಲೆ ಹೊಂದಿರುವ ಪುರುಷರಿದ್ದಾರೆ ಎಂದು ಸಮೀಕ್ಷೆ ಹೇಳುತ್ತದೆ.

8. USA

ಅಮೆರಿಕದಲ್ಲಿ ಅನೇಕ ದೇಶಗಳ ಜನರು ಒಟ್ಟಿಗೆ ವಾಸಿಸುತ್ತಾರೆ. ಪ್ರಸ್ತುತ USA ಜನಸಂಖ್ಯೆಯು ಸರಿಸುಮಾರು 33,49,14,895 ಆಗಿದೆ. ಸಮೀಕ್ಷೆಯ ಪ್ರಕಾರ, ಈ ದೇಶದಲ್ಲಿ 37.9% ಪುರುಷರು ಕೂದಲಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

9.ಕೆನಡಾ

ಸೂಪರ್ ಹೇರ್‌ಪೀಸ್ ಮತ್ತು ವರ್ಲ್ಡ್ ಪಾಪ್ಯುಲೇಶನ್ ಪ್ರಕಾರ, ಕೆನಾಡ 9ನೇ ಸ್ಥಾನದಲ್ಲಿದೆ. ಸುಮಾರು 4,10,12,563 ಜನಸಂಖ್ಯೆಯನ್ನು ಹೊಂದಿರುವ ಈ ದೇಶದಲ್ಲಿ ಶೇ.36.3 ಪುರುಷರು ಬೋಳುತಲೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

10. ಬೆಲ್ಜಿಯಂ

ಈ ಜಂಟಿ ಸಮೀಕ್ಷೆಯಲ್ಲಿ ಕೊನೆಯ ದೇಶ ಬೆಲ್ಜಿಯಂ. ಈ ದೇಶದಲ್ಲಿ 36% ಪುರುಷರು ಕೂದಲು ಉದುರುವಿಕೆಯಿಂದ ಬಳಲುತ್ತಿದ್ದಾರೆ. ಈ ದೇಶದ ಜನಸಂಖ್ಯೆ 1,17,63,650 ಆಗಿದೆ.

Latest Videos

click me!