ಪತ್ನಿ ನೀತಾಗೆ ಮುಖೇಶ್ ಅಂಬಾನಿ ನೀಡಿದ ಜೆಟ್ ಲುಕ್ ನೋಡಿ ಒಮ್ಮೆ

First Published | Aug 12, 2020, 5:17 PM IST

ವಿಶ್ವದ ನಾಲ್ಕನೇ ಶ್ರೀಮಂತರಲ್ಲಿ ಸ್ಥಾನ ಪಡೆದಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಒಂದಕ್ಕಿಂತ ಒಂದು ದುಬಾರಿ ವಸ್ತುಗಳನ್ನು ಹೊಂದಿದ್ದು, ಅದರ ಬೆಲೆಯ ಕೇಳಿದರೆ ಎಂತವರೂ ದಂಗಾಗುವುದು ಗ್ಯಾರಂಟಿ. ಅವರ ಮನೆ ಆಂಟಿಲಿಯಾವನ್ನು ದೇಶದ ಅತ್ಯಂತ ದುಬಾರಿ ಮತ್ತು ಐಷಾರಾಮಿ ಮನೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ದುಬಾರಿ ಕಾರುಗಳಿಗೇನೂ ಕಡಿಮೆ ಇಲ್ಲ. ಮುಖೇಶ್ ಅಂಬಾನಿ ಒಂದು ವಿಹಾರ ನೌಕೆಯನ್ನು ಹೊಂದಿದ್ದು, ಇದರ ಮೌಲ್ಯ 1 ಮಿಲಿಯನ್ ಡಾಲರ್ (7,46,30,000.00 ರೂ.). ಅಷ್ಟೇ ಅಲ್ಲ, ಮುಖೇಶ್ ಏರ್ಬಸ್ 319 ಕಾರ್ಪೊರೇಟ್ ಜೆಟ್   ಸಹ ಹೊಂದಿದ್ದಾರೆ. ಮನರಂಜನಾ ಕ್ಯಾಬಿನ್, ಐಷಾರಾಮಿ ಸ್ಕೈ ಬಾರ್ ಮತ್ತು ಫ್ಯಾನ್ಸಿ ಡೈನಿಂಗ್‌ ಏರಿಯಾವನ್ನು ಹೊಂದಿದೆ ಇದು. ಅದನ್ನು ಖರೀದಿಸಿದಾಗ, ಅದರ ಮೌಲ್ಯ 100 ಮಿಲಿಯನ್ ಡಾಲರ್‌ (ಸುಮಾರು 7,46,22,50,000.00) ಆಗಿತ್ತು.   2007ರಲ್ಲಿ ಪತ್ನಿ ನೀತಾ ಅಂಬಾನಿ ಅವರ ಜನ್ಮದಿನದಂದು ಜೆಟ್ ಉಡುಗೊರೆಯಾಗಿ ನೀಡಿದರು. ಈ ಜೆಟ್‌ನ ಹೊರತಾಗಿ, ಮುಖೇಶ್ ಅಂಬಾನಿ ಇನ್ನೂ ಎರಡು ಖಾಸಗಿ ವಿಮಾನಗಳಾದ ಬೋಯಿಂಗ್ ಬ್ಯುಸಿನೆಸ್ ಜೆಟ್ -2 ಮತ್ತು ಫಾಲ್ಕನ್ 900 ಇಎಕ್ಸ್ ಹೊಂದಿದ್ದಾರೆ. ಮುಖೇಶ್ ಅಂಬಾನಿಯ ಏರ್ಬಸ್ 319 ರ ಒಳಗಿನ ಚಿತ್ರಗಳನ್ನು ನೋಡಿ.

ಮುಖೇಶ್ ಅಂಬಾನಿಯ ಈ ಖಾಸಗಿ ಕಾರ್ಪೊರೇಟ್ ಜೆಟ್‌ನಲ್ಲಿ ಇಲ್ಲದಿರುವಸೌಲಭ್ಯಗಳಿಲ್ಲ.
ಜೆಟ್ ದೊಡ್ಡ ಹಾಲ್‌ ಹೊಂದಿದ್ದು, ಅದರಲ್ಲಿ ವಿಶ್ರಾಂತಿ ಪಡೆಯಬಹುದು,ಮೀಟಿಂಗ್‌ ಸಹ ನಡೆಸಬಹುದು.
Tap to resize

ಈ ಐಷಾರಾಮಿ ಜೆಟ್ ಒಂದಕ್ಕಿಂತ ಹೆಚ್ಚು ಹೈಟೆಕ್ ಸೌಲಭ್ಯ ಹೊಂದಿದೆ.
ಜೆಟ್‌ನಲ್ಲಿ ಹಲವಾರು ವಿಭಿನ್ನ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲಾಗಿದ್ದು,ಈ ಬ್ಯುಸಿನೆಸ್‌ ಮೀಟಿಂಗ್‌ಗಳಿಗೂ ಸೂಕ್ತವಾಗಿದೆ.
ಈ ರೀತಿಯ ಲಕ್ಷುರಿಯಸ್‌ ಜೆಟ್‌ನ್ನು ಕೇಲವೇ ಭಾರತೀಯ ಉದ್ಯಮಿಗಳು ಹೊಂದಿದ್ದಾರೆ ಅಷ್ಟೇ.
ಸುಮಾರು 25 ಜನರು ಏಕಕಾಲದಲ್ಲಿ ಪ್ರಯಾಣಿಸಬಹುದು. ಮನರಂಜನೆಯಿಂದ ಬಾರ್‌ವರೆಗೆ ಎಲ್ಲಾ ವ್ಯವಸ್ಥೆ ಇದೆ.
ಮುಖೇಶ್ ಅಂಬಾನಿ ಈ ಖಾಸಗಿ ಜೆಟ್‌ನಲ್ಲಿ ಹೊಂದಿರುವ ಐಷಾರಾಮಿ ಸೌಲಭ್ಯಗಳು ಖಾಸಗಿ ವಿಮಾನಗಳಲ್ಲಿ ವಿರಳವಾಗಿ ಕಂಡುಬರುತ್ತವೆ.
ಅತ್ಯುತ್ತಮ ವಿನ್ಯಾಸದ ಈ ಜೆಟ್‌ನ ಅಲಂಕಾರದಲ್ಲಿ ವಿಭಿನ್ನ ಬಣ್ಣಗಳನ್ನು ಬಳಸಲಾಗಿದೆ.
ವ್ಯಾಪಾರ ಸಭೆಗಳಿಗೆ ಈ ಜೆಟ್‌ನಲ್ಲಿ ವಿಶೇಷ ಕ್ಯಾಬಿನ್ ವ್ಯವಸ್ಥೆ ಮಾಡಲಾಗಿದೆ.
5 ಸ್ಟಾರ್‌ ಹೋಟೆಲ್‌ಗಿಂತ ಹೆಚ್ಚು ಐಷಾರಾಮಿ ಫೆಸಿಲಿಟಿಗಳನ್ನು ಹೊಂದಿದೆ ಈ ಜೆಟ್‌.
ಭವ್ಯವಾದ ಡೈನಿಂಗ್‌ ಹಾಲ್ ಜೊತೆ ಮನರಂಜನೆಗಾಗಿ ಪ್ರತಿಯೊಂದು ರೀತಿಯ ವ್ಯವಸ್ಥೆಯೂ ಇದರಲ್ಲಿದೆ.
ಮುಖೇಶ್ ಅಂಬಾನಿ ಈ ಜೆಟ್ ಹೆಂಡತಿ ನೀತಾ ಅಂಬಾನಿಗೆ ಜನ್ಮ ದಿನದಂದು ಉಡುಗೊರೆಯಾಗಿ ನೀಡಿದರು.

Latest Videos

click me!