ಹತ್ತಲ್ಲ ನೂರಲ್ಲ ಮಿಲಿಯನ್: ಒಂದೇ ಬಾರಿಗೆ ರಾಶಿ ರಾಶಿ ಮರಿಗಳನ್ನಿಡುವ ಜೀವಿಗಳಿವು

Published : Sep 06, 2024, 03:48 PM IST

 ಮನುಷ್ಯರು ಒಂದು ಸಮಯದಲ್ಲಿ ಒಂದೇ ಒಂದು ಮಗುವಿಗೆ ಜನ್ಮ ನೀಡುತ್ತಾರೆ. ವಿರಳವಾಗಿ ಅವಳಿಗಳು ತ್ರಿವಳಿಗಳಿಗೆ ಜನ್ಮ ನೀಡುತ್ತಾರೆ. ಆದರೆ ಪ್ರಾಣಿಗಳ ಲೋಕ ಹಾಗಲ್ಲ, ಇಲ್ಲಿ ಒಂದೇ ಸಮಯಕ್ಕೆ ಸಾವಿರಾರು ಮರಿಗಳ ಜನನವಾಗುವುದು ಹೀಗೆ ತನ್ನ ಸಂತಾನವನ್ನು ಅತೀ ಹೆಚ್ಚು ವೃದ್ಧಿಸುವ ಕೆಲ ಜೀವಿಗಳ ಡಿಟೇಲ್ ಇಲ್ಲಿದೆ. 

PREV
15
ಹತ್ತಲ್ಲ ನೂರಲ್ಲ ಮಿಲಿಯನ್: ಒಂದೇ ಬಾರಿಗೆ ರಾಶಿ ರಾಶಿ ಮರಿಗಳನ್ನಿಡುವ ಜೀವಿಗಳಿವು

ಪ್ರಾಣಿ ಲೋಕವೇ ಒಂದು ಅದ್ಭುತ, ಇದು ತನ್ನ ವಿಭಿನ್ನ ಹಾಗೂ ಅದ್ಭುತವಾದ ಕೆಲ ಸಾಮರ್ಥ್ಯಗಳಿಂದ ಮಾನವರಿಗೆ ಸದಾ ಅಚ್ಚರಿಯನ್ನೇ ನೀಡುತ್ತಿರುತ್ತದೆ. ಮನುಷ್ಯರು ಒಂದು ಸಮಯದಲ್ಲಿ ಒಂದೇ ಒಂದು ಮಗುವಿಗೆ ಜನ್ಮ ನೀಡುತ್ತಾರೆ. ವಿರಳವಾಗಿ ಅವಳಿಗಳು ತ್ರಿವಳಿಗಳಿಗೆ ಜನ್ಮ ನೀಡುತ್ತಾರೆ. ಆದರೆ ಪ್ರಾಣಿಗಳ ಲೋಕ ಹಾಗಲ್ಲ, ಇಲ್ಲಿ ಒಂದೇ ಸಮಯಕ್ಕೆ ಸಾವಿರಾರು ಮರಿಗಳ ಜನನವಾಗುವುದು ಹೀಗೆ ತನ್ನ ಸಂತಾನವನ್ನು ಅತೀ ಹೆಚ್ಚು ವೃದ್ಧಿಸುವ ಕೆಲ ಜೀವಿಗಳ ಡಿಟೇಲ್ ಇಲ್ಲಿದೆ. 

25
ಸೀಹಾರ್ಸ್ ಅಥವಾ ಸಮುದ್ರ ಕುದುರೆ

ಸೀಹಾರ್ಸ್‌ ಅಥವಾ ಸಮುದ್ರ ಕುದುರೆಗಳಲ್ಲಿ (sea Horse) ಗಂಡು ಸಮುದ್ರ ಕುದುರೆ ಸಂತಾನೋತ್ಪತಿಯನ್ನು ಮಾಡುತ್ತದೆ. ಇದು ಒಂದೇ ಸಮಯಕ್ಕೆ ಎರಡು ಸಾವಿರ ಮರಿಗಳಿಗೆ ಜನ್ಮ ನೀಡುತ್ತದೆ. ಇದರ ಈ ಸಾಮರ್ಥ್ಯದಿಂದಲೇ ಇದು ಜೀವಂತ ವಾಟರ್ ಫಿರಂಗಿ ಎಂಬ ಹೆಸರು ಗಿಟ್ಟಿಸಿಕೊಂಡಿದೆ.  ಗಂಡು ಸೀ ಹಾರ್ಸ್‌ಗಳೇ ಇಲ್ಲಿ ಮರಿಗಳಿಗೆ ಜನ್ಮ ನೀಡುವ ಮೊಟ್ಟೆಗಳನ್ನು ಇಡುತ್ತದೆ.  ಸೀ ಹಾರ್ಸ್‌ಗಳ ಪ್ರಬೇಧಗಳನ್ನಾಧರಿಸಿ ಒಂದು ಸಲಕ್ಕೆ ಇದು 150 ರಿಂದ 2000 ಮೊಟ್ಟೆಗಳನ್ನು ಇಡುತ್ತದೆ. 

35
ಒಶನ್‌ ಸನ್ ಫಿಶ್( ಸಾಗರ ಸೂರ್ಯ ಮೀನು)

ಮೋಲಾ ಅಥವಾ (ocean sun fish) ಸಾಗರ ಸೂರ್ಯ ಮೀನು ಇದು ಭಾರವಾದ ಮೂಳೆಗಳನ್ನು ಹೊಂದಿರುವ ಮೀನಾಗಿದ್ದು, ತನ್ನ ವಿಶಿಷ್ಟವಾದ ಆಕಾರಕ್ಕೆ ಹೆಸರಾಗಿದೆ. ಇದು ಮೊಟ್ಟೆ ಇಡುವ ಸಮಯದಲ್ಲಿ ಒಂದಲ್ಲ ಎರಡಲ್ಲ 300 ಮಿಲಿಯನ್ ಮೊಟ್ಟೆಗಳನ್ನು ಇಡುತ್ತದೆ. ಇದರ ಸಂತಾನೋತ್ಪತಿಯ ಬೃಹತ್ ಸಾಮರ್ಥ್ಯ ಒಂದು ಅದ್ಭುತವೇ ಸರಿ.

45
ಗ್ರೇ ಪಾರ್ಟ್ರಿಡ್ಜ್ ಕ್ಲಚ್

ಗ್ರೇ ಪಾರ್ಟ್ರಿಡ್ಜ್ ಕ್ಲಚ್ (gray pertridge clutches) ಎಂದು ಕರೆಯಲ್ಪಡುವ ಉತ್ತರ ಅಮೆರಿಕಾ ಮೂಲದ ಈ ಬೂದು ಬಣ್ಣದ ಪುಟ್ಟ ಹಕ್ಕಿಯೂ ಕೂಡ ತನ್ನ ಅದ್ಭುತವಾದ ಸಂತಾನೋತ್ಪತಿಯ ಸಾಮರ್ಥ್ಯಕ್ಕೆ ಹೆಸರಾಗಿದ್ದು ಒಮ್ಮೆ ಮೊಟ್ಟೆ ಇಡಲು ಕೂತರೆ 16ರಿಂದ 22ರವರೆಗೆ ಮೊಟ್ಟೆಗಳನ್ನು ಇಡಲು ಶುರು ಮಾಡುತ್ತದೆ. ಹಕ್ಕಿಗಳಲ್ಲಿ ಒಂದು ಸಮಯಕ್ಕೆ ಇಷ್ಟೊಂದು ಮೊಟ್ಟೆ ಇಡುವುದು ಸಣ್ಣ ವಿಚಾರವಲ್ಲ. 

55
ಆಫ್ರಿಕನ್ ಡ್ರೈವರ್ ಆಂಟ್

ಆಫ್ರಿಕನ್ ಡ್ರೈವರ್ ಆಂಟ್ (African driver ants)ಎಂದು ಕರೆಯಲ್ಪಡುವ ಈ ಆಫ್ರಿಕನ್ ಇರುವೆಗಳು ಕೂಡ ತಮ್ಮ ಬೃಹತ್ ಸಂತಾನೋತ್ಪತಿಯ ಕಾರಣಕ್ಕೆ ಪ್ರಾಣಿ ಲೋಕದಲ್ಲಿ ಅದ್ಭುತವೆನಿಸಿವೆ. ಈ ಇರುವೆಗಳು ಪ್ರತಿ 35 ದಿನಗಳಿಗೆ 3 ರಿಂದ 4 ಮಿಲಿಯನ್ ಮೊಟ್ಟೆಗಳನ್ನು ಇಡುತ್ತವೆ. 

click me!

Recommended Stories