ಸವಿ ಸವಿ ನೆನಪು..ಸಾವಿರ ನೆನಪು..ಬಾಯಲ್ಲಿ ನೀರೂರಿಸೋ 90ರ ದಶಕದ ವೆರೈಟಿ ಮಿಠಾಯಿ

First Published | Mar 28, 2023, 2:36 PM IST

ಶುಂಠಿ ಮಿಠಾಯಿ, ಕಟಾಯಿ, ಕ್ಯಾಂಡಿ, ಕೊಬ್ಬರಿ ಮಿಠಾಯಿ..ಒಂದಾ ಎರಡಾ..90s ಆಸುಪಾಸಿನಲ್ಲಿ ಜನಿಸಿದವರೇ ಭಾಗ್ಯವಂತರು. ಯಾಕಂದ್ರೆ ಆಗ ಲಭ್ಯವಿದ್ದ ತಿನಿಸುಗಳನ್ನು ನೆನಪಿಸಿಕೊಂಡ್ರೆ ಈಗ್ಲೂ ಬಾಯಲ್ಲಿ ನೀರೂರುತ್ತೆ. ಸದ್ಯ ತಮಿಳುನಾಡಿನ ಪುಟ್ಟ ಅಂಗಡಿಯೊಂದರಲ್ಲಿ 90sನಲ್ಲಿ ಲಭಿಸುತ್ತಿದ್ದ ಮಿಠಾಯಿಗಳು ಲಭ್ಯವಿದ್ದು, ಜನರು ಅಲ್ಲಿಗೆ ಸಾಲುಗಟ್ಟಿ ಬರುತ್ತಿದ್ದಾರೆ.

90sಕಿಡ್‌ ಅತ್ಯಂತ ಅದೃಷ್ಟವಂತರು ಎಂದು ಹಲವರು ಹೇಳುವುದನು ಕೇಳಿರಬಹುದು. ಅವರು ಗ್ಯಾಜೆಟ್ಸ್ ಇಲ್ಲದ ಸುಂದರವಾದ ಬಾಲ್ಯದಲ್ಲಿ ಬೆಳೆದರು. ಸರಳ, ಸುಲಭವಾದ ಜೀವನಶೈಲಿಯಲ್ಲಿ ಬದುಕಿದ್ದರು. 90s ಕಿಡ್‌ ಎಂದಾಗ ಮುಖ್ಯವಾಗಿ ನೆನಪಾಗುವ ವಿಷಯವೆಂದರೆ ಆಗ ಲಭ್ಯವಾಗುತ್ತಿದ್ದ ತಿನಿಸುಗಳು. ಜಂಕ್‌ಫುಡ್‌ಗಳಲ್ಲದೆ ಸ್ವಾದಿಷ್ಟವಾದ ವೈವಿಧ್ಯಮಯ ಸಿಹಿತಿನಿಸುಗಳು ಆಗ ಲಭ್ಯವಿತ್ತು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
 

90ರ ದಶಕ ಅಂದ್ರೆ 'ಗೋಲ್ಡನ್ ಪೀರಿಯಡ್'. ಶಾಲಾ ಆವರಣದ ಹೊರಗಿನ ಪುಟ್ಟ ಅಂಗಡಿಯ ಮಿಠಾಯಿಗಳು ಎಲ್ಲರ ಅಚ್ಚುಮೆಚ್ಚು. ಪಾಕೆಟ್ ಮನಿ ಉಳಿಸಿ, ಬಸ್‌ಗೆ ಹಣ ಕೊಟ್ಟರೆ, ನಡೆದು ಬಂದು ಅದನ್ನು ಉಳಿಸಿ ಮಕ್ಕಳು ಮಿಠಾಯಿ ಮೆಲ್ಲುತ್ತಿದ್ದರು.

Tap to resize

ಪೈಸೆಗಳಿಗೆ ಸಿಗುತ್ತಿದ್ದ ಆ ಮಿಠಾಯಿಗಳು ಈಗಿಲ್ಲ. ಬಾಯಲ್ಲಿ ರುಚಿ ಮಾತ್ರ ಇನ್ನೂ ಹಾಗೆಯೇ ಇದೆ ಎಂದು ಹಲವರು ಬೇಸರಪಟ್ಟುಕೊಳ್ಳುತ್ತಾರೆ. ಸದ್ಯ ತಮಿಳುನಾಡಿನ ಪುಟ್ಟ ಅಂಗಡಿಯೊಂದರಲ್ಲಿ 90sನಲ್ಲಿ ಲಭಿಸುತ್ತಿದ್ದ ಮಿಠಾಯಿಗಳು ಲಭ್ಯವಿದ್ದು, ಜನರು ಅಲ್ಲಿಗೆ ಸಾಲುಗಟ್ಟಿ ಬರುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ, ಪಾಲಯಂಕೊಟ್ಟೈ ಸ್ಥಳೀಯರಾದ ಕೃಷ್ಣನ್ ಅವರು ಹತ್ತಿರದ ಗೋಪಾಲಸ್ವಾಮಿ ದೇವಸ್ಥಾನದ ಸಮೀಪದಲ್ಲಿ ಈ ಅಂಗಡಿಯನ್ನು ನಡೆಸುತ್ತಿದ್ದಾರೆ. ಇಲ್ಲಿಯವರೆಗೆ 2000 ಮಕ್ಕಳು ಈ ಪುಟ್ಟ ಅಂಗಡಿಗೆ ಬಂದಿದ್ದಾರೆ. ಅದರಲ್ಲೂ 90ರ ದಶಕದ ಮಕ್ಕಳು ಈ ಅಂಗಡಿಗೆ ಬರೋಕೆ ಹೆಚ್ಚು ಆಸಕ್ತಿ ತೋರುತ್ತಾರೆ. ಅಲ್ಲಿ ಅವರು ಮಿಠಾಯಿಗಳು ಮತ್ತು ಆಟಿಕೆಗಳನ್ನು ಖರೀದಿಸಬಹುದು.

90ರ ದಶಕದ ಮಕ್ಕಳು ಐದು ಪೈಸೆಯಿಂದ ಹಿಡಿದು 25 ಪೈಸೆಯ ವರೆಗೆ ರುಚಿಕರವಾದ ಮಿಠಾಯಿಗಳನ್ನು ಖರೀದಿಸಿ ತಿಂದ ಸಮಯವನ್ನು ಯಾವತ್ತೂ ಮರೆಯುವುದಿಲ್ಲ. ಕೊಬ್ಬರಿ ಮಿಠಾಯಿ, ಜೇನು ಮಿಠಾಯಿ, ಪಾಪಡ್ ಮತ್ತು ಮಮ್ಮಿ ಡ್ಯಾಡಿ ಕ್ಯಾಂಡಿ ಸೇರಿದಂತೆ ಹಲವು ಮಿಠಾಯಿಗಳಿ 80 ಮತ್ತು 90ರ ದಶಕದಲ್ಲಿ ಜನಪ್ರಿಯವಾಗಿದ್ದವು. 

ಮಿಠಾಯಿಗಳನ್ನು ಖರೀದಿಸಲು ಈ ಸಂಸ್ಥೆಗೆ ಭೇಟಿ ನೀಡಿದ ಮಕ್ಕಳು ತಾವು ಪ್ರತಿದಿನ ಇಲ್ಲಿಗೆ ಭೇಟಿ ನೀಡುತ್ತೇವೆ. ನಮ್ಮ ಇಷ್ಟದ ಹಲವು ಮಿಠಾಯಿಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ಈ ಅಂಗಡಿಯು ವಿವಿಧ ರೀತಿಯ ಮಿಠಾಯಿಗಳನ್ನು ಹೊಂದಿದೆ ಮತ್ತು ವೆಚ್ಚವು ನಿಜವಾಗಿಯೂ ಅಗ್ಗವಾಗಿದೆ ಎಂದು ಹೇಳಿದ್ದಾರೆ. ಅಚ್ಚರಿಯ ವಿಚಾರೆಂದರೆ ಇದನ್ನು 90ರ ದಶಕದ ಮಕ್ಕಳು ಮಾತ್ರ ಖರೀದಿಸುವುದಿಲ್ಲ ಎಂದು ಅಂಗಡಿ ಮಾಲೀಕ ಕೃಷ್ಣನ್‌ ಹೇಳುತ್ತಾರೆ.

2018ರಲ್ಲಿ, ‘ಚೆನ್ನೈ ಅಂಗಡಿ’ ಎಂಬ ಸಾವಯವ ಚಿಲ್ಲರೆ ಅಂಗಡಿಯನ್ನು ಪ್ರಾರಂಭಿಸಲಾಯಿತು. ಎಂಟು ತಿಂಗಳೊಳಗೆ ಕಂಪನಿಯನ್ನು ಮುಚ್ಚಿದರೂ, ಅಂಗಡಿಯ ಮಾಲೀಕ ಭಾಸ್ಕರ್ ಅದನ್ನು 2020ರಲ್ಲಿ 90ರ ದಶಕದಲ್ಲಿ ಸಾಂಪ್ರದಾಯಿಕ ಸಿಹಿ ಮತ್ತು ತಿಂಡಿ ಅಂಗಡಿಯಾಗಿ ಮತ್ತೆ ತೆರೆದರು. ಕಡಿಮೆ ಅವಧಿಯಲ್ಲಿ, ನಾವು ಸುಮಾರು 1,000 ಗ್ರಾಹಕರನ್ನು ಹೊಂದಿದ್ದೇವೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ. 

Latest Videos

click me!