ಮಹಾನಗರದಲ್ಲೊಂದು ಮಾದರಿ ಕೆಲಸ: ಫುಟ್‌ಪಾತ್‌ನಲ್ಲಿದ್ದ ತಾತನಿಗೆ ಭರ್ಜರಿ ವ್ಯಾಪಾರ

First Published Oct 28, 2020, 10:12 PM IST

ವೃದ್ಧ ವ್ಯಾಪಾರಿಯ ಲಕ್ ಬದಲಾಯಿಸಿತು ಟ್ವೀಟ್ | ಔಷಧ ವ್ಯಾಪಾರಿಯ ಬದುಕಲ್ಲಿ ಹೊಸ ಬೆಳಕು | ಸಿಲಿಕಾನ್ ಸಿಟಿಯಲ್ಲಿ ಮಾದರಿ ಕೆಲಸ

ಇತ್ತೀಚೆಗಷ್ಟೇ ದೆಹಲಿ ಬಾಬಾ ಕಾ ಧಾಭಾ ವೈರಲ್ ಆಗಿದ್ದನ್ನು ಎಲ್ಲರೂ ನೋಡಿದ್ರು. ವ್ಯಾಪಾರವಿಲ್ಲದೆ ಪರದಾಡುತ್ತಿದ್ದ ಸ್ವಾವಲಂಬಿ ವೃದ್ಧ ದಂಪತಿಗಳ ಸಣ್ಣದೊಂದು ವಿಡಿಯೋ ಮಾಡಿದ ದೊಡ್ಡ ಬದಲಾವಣೆಯನ್ನು ಎಲ್ಲರೂ ನೋಡಿ ಮೆಚ್ಚಿದ್ರು. ಇಂತಹದೇ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲೂ ನಡೆದಿದೆ.
undefined
ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಔಷಧಿ ಗಿಡಗಳನ್ನು ಮಾರುತ್ತಿದ್ದ 80 ವರ್ಷದ ವೃದ್ಧ ಕೊರೋನಾದಿಂದ ವ್ಯಾಪಾರವಿಲ್ಲದೆ ಬಡವಾಗಿದ್ದರು. ಆದರೆ ಸೋಷಿಯಲ್ ಮೀಡಿಯಾ ಅವರ ಲಕ್ ಬದಲಾಯಿಸಿತು.
undefined
ಸಿದ್ದಪ್ಪ ಎನ್ನುವ ಹಿರಿಯ ವ್ಯಾಪಾರವಿಲ್ಲದೆ ಕಷ್ಟ ಪಡುವ ಸಂದರ್ಭದಲ್ಲಿ ಒಂದಷ್ಟು ಜನ ಒಗ್ಗೂಡಿ ನೆರವಾಗಿದ್ದಾರೆ. ಫುಟ್‌ ಪಾತ್ ಬದಿಯಲ್ಲಿ ಬಟ್ಟೆ ಹರಡಿ ಛತ್ರಿ ಹಿಡಿದು ಗಿಡ ಮಾರುತ್ತಿದ್ದರು.
undefined
ಇದನ್ನು ಗಮನಿಸಿದ ಅಶ್ವಿನಿ ಎಂಬ ಯುವತಿ ಇದರ ಫೋಟೋ ತೆಗದು ಟ್ವೀಟ್ ಮಾಡಿ ಸಿದ್ದಪ್ಪ ಅವರ ಮೊಬೈಲ್ ಸಂಖ್ಯೆಯನ್ನೂ ಕೊಟ್ಟಿದ್ದರು.
undefined
ಟ್ವೀಟ್ ವೈರಲ್ ಆಗುತ್ತಿದ್ದಂತೆ ಬಹಳಷ್ಟು ಜನ ಮೆಚ್ಚುಗೆ ವ್ಯಕ್ತ ಪಡಿಸಿ ವೃದ್ಧ ವ್ಯಾಪಾರಿಗೆ ನೆರವಾಗಿದ್ದಾರೆ.
undefined
ಒಂದು ಟ್ವೀಟ್ ಪರಿಣಾಮ 20ಕ್ಕೂ ಹೆಚ್ಚು ಜನರು ಸಿದ್ದಪ್ಪ ಅವರಿಂದ ಗಿಡ ಖರೀದಿಸಿದ್ದಾರೆ.
undefined
ಬಾಲಿವುಡ್ ನಟ ರಣದೀಪ್ ಹೂಡಾ ಅವರೂ ಟ್ವೀಟ್ ಮಾಡಿ ಸಿದ್ದಪ್ಪ ಅವರನ್ನು ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ.
undefined
ಸ್ಯಾಂಡಲ್‌ವುಡ್ ನಟಿ ಸಂಯುಕ್ತಾ ಹೊರನಾಡು ಕೂಡಾ ಸಿದ್ದಪ್ಪ ಅವರನ್ನು ಭೇಟಿ ಮಾಡಿ ಗಿಡ ಖರೀದಿಸುವಂತೆ ಕೇಳಿಕೊಂಡಿದ್ದಾರೆ.
undefined
click me!