ಆಧ್ಯಾತ್ಮದತ್ತ ವಾಲ್ತಿದ್ದಾರಾ ಕಿಂಗ್‌ ಖಾನ್: ಆಧ್ಯಾತ್ಮಿಕ ಗುರುವಿನ ಬಗ್ಗೆ ಹೇಳಿಕೊಂಡ ಶಾರುಖ್

First Published | Dec 22, 2023, 4:58 PM IST

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರು ತಮ್ಮ ಡಂಕಿ ಸಿನಿಮಾದ ಸಕ್ಸಸ್‌ ಖುಷಿಯಲ್ಲಿದ್ದು,ಈ ಸಿನಿಮಾದ ಬಿಡುಗಡೆ ವೇಳೆಯೂ ಕಿಂಗ್ ಖಾನ್ ಹಲವು ಹಿಂದೂ ದೇಗುಲಗಳ ದರ್ಶನ ಪಡೆದಿದ್ದರು. ಇಂತಹ ಕಿಂಗ್ ಖಾನ್ ಕಾರ್ಯಕ್ರಮವೊಂದರಲ್ಲಿ ತಮ್ಮ ಆಧ್ಮಾತ್ಮಿಕ ಗುರುವಿನ ಬಗ್ಗೆ ಮಾತನಾಡಿದ್ದು, ಇದು ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಏಳುವಂತೆ ಮಾಡಿದೆ.  

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರು ತಮ್ಮ ಡಂಕಿ ಸಿನಿಮಾದ ಸಕ್ಸಸ್‌ ಖುಷಿಯಲ್ಲಿದ್ದು, ಸಿನಿಮಾ ಈಗಾಗಲೇ ವಿದೇಶದಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಬಿಡುಗಡೆಗೆ ಮೊದಲು ವೈಷ್ಣೋದೇವಿ ದೇಗುಲ ಸೇರಿದಂತೆ ಹಲವು ಆಧ್ಯಾತ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ ಬಾದ್‌ಷಾ ತಮ್ಮ ಸಿನಿಮಾದ ಯಶಸ್ಸಿಗಾಗಿ ಪ್ರಾರ್ಥನೆ ಮಾಡಿದ್ದರು. 

ಇದಕ್ಕೂ ಮೊದಲು ಜವಾನ್ ಸಿನಿಮಾದ ಬಿಡುಗಡೆ ವೇಳೆಯೂ ಕಿಂಗ್ ಖಾನ್ ಹಲವು ಹಿಂದೂ ದೇಗುಲಗಳ ದರ್ಶನ ಪಡೆದಿದ್ದರು. ಇಂತಹ ಕಿಂಗ್ ಖಾನ್ ಕಾರ್ಯಕ್ರಮವೊಂದರಲ್ಲಿ ತಮ್ಮ ಆಧ್ಮಾತ್ಮಿಕ ಗುರುವಿನ ಬಗ್ಗೆ ಮಾತನಾಡಿದ್ದು, ಇದು ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಏಳುವಂತೆ ಮಾಡಿದೆ.  

Tap to resize

ಇತ್ತೀಚೆಗೆ ಮುಂಬೈನಲ್ಲಿ ಬಾಲಿವುಡ್‌ನ ಖ್ಯಾತ ನಿರ್ಮಾಪಕ  ವಿತರಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಬಿಲ್ಡರ್ ಆನಂದ್ ಪಂಡಿತ್ ಅವರ 60ನೇ ಹುಟ್ಟುಹಬ್ಬ ಬಹಳ ಅದ್ದೂರಿಯಾಗಿ ನಡೆಯಿತು. ನಿನ್ನೆ ನಡೆದ ಈ ಅದ್ದೂರಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಾಲಿವುಡ್‌ ಸೆಲೆಬ್ರಿಟಿಗಳಾದ ಸನ್ನಿ ಲಿಯೋನ್, ಸಲ್ಮಾನ್ ಖಾನ್, ಹೃತಿಕ್ ರೋಷನ್, ಕಾಜೋಲ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.

ನಟ ಶಾರುಖ್ ಖಾನ್ ಕೂಡ ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ಆನಂದ್ ಪಂಡಿತ್ ಅವರ ಬಗ್ಗೆ ಮಾತನಾಡಿದ ಶಾರುಖ್ ಖಾನ್ ಅವರು  ಆನಂದ್ ಪಂಡಿತ್ ಅವರನ್ನು ತನ್ನ ಆಧ್ಮಾತ್ಮಿಕ ಗುರು ಎಂದು ಹೇಳಿಕೊಂಡರು. ಅಲ್ಲದೇ ತನ್ನ ಸಿನಿಮಾಗಳು ಸೋತ ಸಮಯದಲ್ಲೆಲ್ಲಾ ತಾನು ಅವರ ಬಳಿ ಸಲಹೆ ಕೇಳಿದ್ದಾಗಿ ಅವರು ಹೇಳಿಕೊಂಡಿದ್ದಾರೆ.  
 

ನಾನು ಗೂಬೆಯಂತೆ ಮಧ್ಯರಾತ್ರಿ ಎದ್ದು ಕುಳಿತುಕೊಳ್ಳುತ್ತಿದೆ. ಈ ವೇಳೆ ಅವರು ಬಂದು ನನ್ನನ್ನು ಭೇಟಿಯಾಗುತ್ತಿದ್ದರು. ನಂತರ ನಾವು ಸೀದಾ ಜೂಹುವಿನತ್ತ ತೆರಳುತ್ತಿದ್ದೆವು. ಸ್ವತಃ ಪಂಡಿತ್ ಅವರೇ ವಾಹನ ಚಾಲನೆ ಮಾಡುತ್ತಿದ್ದರು.

ಎರಡು ಕಿಲೋ ಮೀಟರ್‌ನ ಈ ಸಣ್ಣ ಪಯಣದ ವೇಳೆ  ಮಾರ್ಗದಲ್ಲಿರುವ ಕೆಲವು ಬಿಲ್ಡಿಂಗ್‌ಳನ್ನು ಹೊರತುಪಡಿಸಿ ಎಲ್ಲಾ ಬಿಲ್ಡಿಂಗ್‌ಗಳನ್ನು ಆನಂದ್ ಪಂಡಿತ್ ಅವರು ಹೊಂದಿದ್ದು ಇದು ಅವರ ಪ್ರಯಾಣವನ್ನು ಸುಗಮಗೊಳಿಸಿದೆ ಎಂದು ಆನಂದ್ ಪಂಡಿತ್ ಜೊತೆಗಿನ ತಮ್ಮ ಒಡನಾಟವನ್ನು ನೆನೆದುಕೊಂಡು ಶಾರುಖ್ ಖಾನ್ ಮಾತನಾಡಿದ್ದಾರೆ.

ಆನಂದ್ ಪಂಡಿತ್ ಅವರ ಜೊತೆ ನನ್ನ ಅಂತಿಮ ಸಂಬಂಧ  ಅವರು ನನ್ನ ಆಧ್ಮಾತ್ಮಿಕ ಗುರು ಎಂಬುದಾಗಿದ್ದು, ಲೋಟಸ್ ಡೆವಲಪರ್ ಹೆಸರಿನಡಿ ಅವರ ಕಟ್ಟಡಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ನೀವು ಅಲ್ಲಿಗೆ ಹೋದಾಗ ನಿಮಗೆ ಅದು ನೀವು ನ್ಯೂಯಾರ್ಕ್‌ನಲ್ಲೋ ಅಮೆರಿಕಾದಲ್ಲೂ ಇರುವಂತೆ ಭಾವನೆ ಮೂಡಿಸುತ್ತದೆ. 
 

ಅವುಗಳು ಸೋ ಹೈ ಎಂಡ್ ಸೌಕರ್ಯಗಳನ್ನು ಹೊಂದಿರುವುದರ  ಜೊತೆಗೆ ಮನೆಯಂತೆಯೂ ಬೆಚ್ಚನೆಯ  ಫೀಲ್ ಆಗುತ್ತದೆ ಎಂದ ಡಂಕಿ ಹೀರೋ, ಆನಂದ್ ಪಂಡಿತ್ ಮನೆಯವರನ್ನೂ ಕೊಂಡಾಡಿದರು. 

ಇದರ ಜೊತೆಗೆ ಆನಂದ್ ಅವರು ರಿಯಲ್ ಎಸ್ಟೇಟ್ ಡೆವಲಪರ್ ಆಗಿರುವುದರಿಂದ ವಾಸ್ತುವನ್ನು ಕೂಡ ಅವರು ಚೆನ್ನಾಗಿ ಅರಿತುಕೊಂಡಿದ್ದಾರೆ ಹೀಗಾಗಿ ಅವರು ತಾವಿರುವ ಸ್ಥಳಕ್ಕೆ ಆನಂದ್ ಪಂಡಿತ್ ಅವರನ್ನು ಕರೆಯುತ್ತಲೇ ಇರುತ್ತೇನೆ ಎಂದು ಹೇಳಿಕೊಂಡಿದ್ದಾರೆ. 

ನಾನು ನನ್ನ ಹಿಂದಿನ ಬಾರಿಯ ಸಿನಿಮಾ ಸರಿಯಾಗಿ ಓಡಲಿಲ್ಲ ಏನಾದರು ಮಾಡಿ ಎಂದು ಹೇಳಿದೆ. ಈ ವೇಳೆ ಆನಂದ್ ಪಂಡಿತ್ ಅವರು ಸರಿ ಇಲ್ಲೊಂದು ಕನ್ನಡಿಯನ್ನು ಇಡಿ ಎಂದು ಹೇಳುತ್ತಾರೆ. ಅದೃಷ್ಟವಶಾತ್ ನನ್ನ ಸಿನಿಮಾಗಳು ಚೆನ್ನಾಗಿ ಓಡುತ್ತಿವೆ ಎಂದು ಶಾರುಖ್ ಖಾನ್ ಹೇಳಿಕೊಂಡಿದ್ದಾರೆ. 

Latest Videos

click me!