ದಿನಕ್ಕೆ 250 ರೂ. ಗಳಿಸ್ತಿದ್ದ ಕೂಲಿ ಕಾರ್ಮಿಕ ಈಗ ಕೋಟ್ಯಾಧಿಪತಿ, ಜೀವನವನ್ನೇ ಬದಲಾಯಿಸಿತು ಯೂಟ್ಯೂಬ್‌ ಚಾನೆಲ್‌!

First Published | Feb 20, 2024, 5:00 PM IST

ಸೋಷಿಯಲ್‌ ಮೀಡಿಯಾ ಆರಂಭವಾದಾಗಿನಿಂದ ಸಾಕಷ್ಟು ಮಂದಿ ವೀಡಿಯೋ, ರೀಲ್ಸ್‌ ಮಾಡಿ ಫೇಮಸ್ ಆಗಿದ್ದಾರೆ. ಡ್ಯಾನ್ಸ್, ಕುಕ್ಕಿಂಗ್‌, ಇನ್‌ಫಾರ್ಮೆಟೀವ್ ವೀಡಿಯೋಗಳನ್ನು ಮಾಡಿ ಸಾವಿರಗಟ್ಟಲೆ ವೀವ್ಸ್‌ ಪಡೆಯುತ್ತಿದ್ದಾರೆ. ಹೀಗೆಯೇ ಒಮ್ಮೆ ದಿನಕ್ಕೆ 250 ರೂ. 250 ಗಳಿಸ್ತಿದ್ದ ಕೂಲಿ ಕಾರ್ಮಿಕ ಈಗ ಯೂಟ್ಯೂಬ್‌ನಿಂದ ಕೋಟ್ಯಾಧಿಪತಿಯಾಗಿದ್ದಾನೆ.

ಸೋಷಿಯಲ್‌ ಮೀಡಿಯಾ ಆರಂಭವಾದಾಗಿನಿಂದ ಸಾಕಷ್ಟು ಮಂದಿ ವೀಡಿಯೋ, ರೀಲ್ಸ್‌ ಮಾಡಿ ಫೇಮಸ್ ಆಗಿದ್ದಾರೆ. ಡ್ಯಾನ್ಸ್, ಕುಕ್ಕಿಂಗ್‌, ಇನ್‌ಫಾರ್ಮೆಟೀವ್ ವೀಡಿಯೋಗಳನ್ನು ಮಾಡಿ ಸಾವಿರಗಟ್ಟಲೆ ವೀವ್ಸ್‌ ಪಡೆಯುತ್ತಿದ್ದಾರೆ. ಈ ಮೂಲಕ ತಿಂಗಳಿಗೆ ಲಕ್ಷಾಂತರ ರೂ. ಸಂಪಾದಿಸುತ್ತಿದ್ದಾರೆ. ಅಂಥವರಲ್ಲಿ ಒಬ್ಬರು ಒಡಿಶಾದ ಐಸಾಕ್ ಮುಂಡಾ.

ರೀಲ್ಸ್‌, ವೀಡಿಯೋ ಮಾಡಿ ಹಣ ಗಳಿಸಿರೋದು ಕೇವಲ ಸೆಲೆಬ್ರಿಟಿಗಳಲ್ಲ. ಬದಲಿಗೆ ಜನಸಾಮಾನ್ಯರಿಗೂ ಇದು ತಮ್ಮ ಪ್ರತಿಭೆ ತೋರಿಸೋಕೆ ಅತ್ಯುತ್ತಮ ವೇದಿಕೆಯಾಗಿದೆ. ಕೂಲಿ ಕಾರ್ಮಿಕರು, ಕೆಳ ವರ್ಗದ ಜನರು ಇಂಥಾ ವೀಡಿಯೋಗಳಿಂದ ವೈರಲ್ ಆಗಿದ್ದಾರೆ. ಹಾಗೆಯೇ, ದಿನಗೂಲಿ ಕಾರ್ಮಿಕರಾಗಿರುವ ಒಡಿಶಾದ ಐಸಾಕ್ ಮುಂಡಾ, ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಅಂತರ್ಜಾಲದಲ್ಲಿ ವ್ಯಾಪಕವಾಗಿ ಗಮನ ಸೆಳೆದರು.

Tap to resize

ಕಾರ್ಮಿಕರಾಗಿದ್ದ ಐಸಾಕ್‌, ಕೋವಿಡ್ -19 ಸಾಂಕ್ರಾಮಿಕ ರೋಗವು ಹರಡಲು ಪ್ರಾರಂಭಿಸಿದಾಗ, ನಿರುದ್ಯೋಗಿಯಾಗಿ ಬಿಟ್ಟರು. ತಮ್ಮ ಕುಟುಂಬದ ದೈನಂದಿನ ಅಗತ್ಯಗಳನ್ನು ಪೂರೈಸಲು ಸಹ ಅವರಲ್ಲಿ ದುಡ್ಡಿರಲ್ಲಿಲ್ಲ. 'ನಾನು ದಿನಗೂಲಿ ಕೆಲಸ ಮಾಡಿ ದಿನಕ್ಕೆ 250 ರೂ. ಗಳಿಸುತ್ತಿದೆ. ಆದರೆ ಕೋವಿಡ್ -19 ಹರಡುವಿಕೆಯಿಂದಾಗಿ ಆ ಹಣವೂ ಸಿಗೋದು ನಿಂತು ಹೋಯಿತು' ಎಂದು ಅವರು ಹೇಳುತ್ತಾರೆ.

ಆ ಸಮಯದಲ್ಲಿ ಐಸಾಕ್‌, ಯೂಟ್ಯೂಬ್ ವೀಡಿಯೊಗಳ ಮೂಲಕ ಹಣ ಗಳಿಸುವ ಸಾಧ್ಯತೆಯ ಬಗ್ಗೆ ತಿಳಿದುಕೊಂಡರು. ಇಸಾಕ್ ಮುಂಡಾ ಈಟಿಂಗ್ ಎಂಬ ಚಾನಲ್ ಅನ್ನು ಪ್ರಾರಂಭಿಸಿದರು. ಮಾರ್ಚ್ 2020ರಲ್ಲಿ ಯೂಟ್ಯೂಬ್‌ ಚಾನೆಲ್ ಪ್ರಾರಂಭಿಸಿ, ಇದರಲ್ಲಿ ವಿವಿಧ ಸಾಂಪ್ರದಾಯಿಕ ಒಡಿಶಾ ಭಕ್ಷ್ಯಗಳನ್ನು ತಿನ್ನುವ ಬಗ್ಗೆ ಮಾಹಿತಿ ನೀಡುತ್ತಿದ್ದರು.

ಒಡಿಶಾದ ಅತ್ಯಂತ ಪ್ರಿಯವಾದ ಪಾಸಿ ಭಕಲವನ್ನು ಸವಿಯುತ್ತಿರುವ ವಿಡಿಯೋ ವೈರಲ್ ಆಯಿತು.. ಇದು ಅವರಿಗೆ ಸುಮಾರು 20,000 ಚಂದಾದಾರರನ್ನು ನೀಡಿತು. ಈಗ ಐಸಾಕ್‌ ಯೂಟ್ಯೂಬ್ ಸ್ಟಾರ್ ಆಗಿದ್ದಾರೆ.

'ಆರಂಭದಲ್ಲಿ, ಯಾರೂ ನನ್ನ ವೀಡಿಯೊಗಳನ್ನು ನೋಡುತ್ತಿರಲಿಲ್ಲ, ಆದರೆ ನಿಧಾನವಾಗಿ, ಜನರು ನನ್ನ ವೀಡಿಯೊಗಳನ್ನು ಇಷ್ಟಪಟ್ಟು ವೀಕ್ಷಿಸಲು ಪ್ರಾರಂಭಿಸಿದರು' ಎಂದು ಐಸಾಕ್‌ ಹೇಳುತ್ತಾರೆ.

ಅಮೆರಿಕಾ, ಬ್ರೆಜಿಲ್ ಮತ್ತು ಮಂಗೋಲಿಯಾ ದೇಶಗಳಲ್ಲಿ ಜನರು ಐಸಾಕ್‌ ಮುಂಡಾ ವೀಡಿಯೊಗಳನ್ನು ನೋಡುತ್ತಾರೆ. ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಐಸಾಕ್ ಮುಂಡಾ ಅವರನ್ನು ಹೊಗಳಿದ್ದಾರೆ.

'ಇಂದು, ನನ್ನ ವೀಡಿಯೊಗಳು ಉತ್ತಮವಾಗಿ ಕಾಣಿಸಿಕೊಂಡಾಗ ನಾನು ಸುಮಾರು 3 ಲಕ್ಷ ರೂಪಾಯಿಗಳನ್ನು ಗಳಿಸುತ್ತೇನೆ. ನನ್ನ ವೀಡಿಯೊಗಳನ್ನು ಎಡಿಟ್ ಮಾಡಲು ನಾನು ಲ್ಯಾಪ್‌ಟಾಪ್ ಮತ್ತು ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿದೆ. ಇಂದು ನಾನು ನನ್ನ ಕುಟುಂಬಕ್ಕೆ ಅವರು ಕನಸು ಕಾಣದ ಜೀವನವನ್ನು ನೀಡಿದ್ದೇನೆ' ಎಂದು ಐಸಾಕ್ ಮುಂಡಾ ಸಂತೃಪ್ತಿಯಿಂದ ಹೇಳುತ್ತಾರೆ.

Latest Videos

click me!