ಪ್ರಪಂಚದಲ್ಲಿ ಭಾರತ ಬೆಳೆಯುತ್ತಿರುವ ದೇಶ ಅಥವಾ ಡೆವಲಪಿಂಗ್ ಕಂಟ್ರಿ ಎಂದು ಗುರುತಿಸಿಕೊಂಡಿದೆ. ಶಿಕ್ಷಣ, ಆರೋಗ್ಯ, ತಂತ್ರಜ್ಞಾನ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಭಾರತ ಮುಂದಿದೆ. ಆದರೂ ಇಲ್ಲೂ ಹಲವು ಸಮಸ್ಯೆಗಳಿವೆ. ಹಲವು ರಾಜ್ಯಗಳು ಸರಿಯಾದ ಮೂಲಭೂತ ಸೌಕರ್ಯಗಳೂ ಇಲ್ಲದೆ ನರಳುತ್ತಿವೆ.
ಒಂದು ಹೊತ್ತಿನ ಅನ್ನ, ಕುಡಿಯುವ ನೀರು, ಮನೆ ಮೊದಲಾದ ಮೂಲಭೂತ ವ್ಯವಸ್ಥೆಗಳು ಇಲ್ಲದೇನೆ ಸಂಕಷ್ಟ ಅನುಭವಿಸುತ್ತಿರುವ ಅದೆಷ್ಟೋ ಮಂದಿ ದೇಶದಲ್ಲಿದ್ದಾರೆ. ಈ ಬಗ್ಗೆ ಇತ್ತೀಚಿಗೆ ಅಧ್ಯಯನವೊಂದನ್ನು ನಡೆಸಲಾಗಿದೆ. ಇದರಲ್ಲಿ ಭಾರತದ ಯಾವ ರಾಜ್ಯಗಳು ಎಷ್ಟು ಬಡತನದಲ್ಲಿವೆ ಎಂಬುದನ್ನು ತಿಳಿಸಲಾಗಿದೆ.
ಬಹು ಆಯಾಮದ ಬಡತನದ ಬಗ್ಗೆ ದೇಶದಲ್ಲಿ ನಡೆದಿರುವ ಅಧ್ಯಯನದ ಪ್ರಕಾರ, ದಕ್ಷಿಣ ಭಾರತದಲ್ಲಿ ಬಡತನದ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ಆದ್ರೆ ಉತ್ತರ ಭಾರತದಲ್ಲಿ ಬಡತನದ ಪ್ರಮಾಣ ಹೆಚ್ಚಿದೆ ಎಂದು ತಿಳಿದುಬಂದಿದೆ.
ಭಾರತದಲ್ಲಿ ಅತಿ ಕಡಿಮೆ ಬಡತನ ಇರುವ ರಾಜ್ಯ ಕೇರಳ ಎಂದು ವರದಿಯಲ್ಲಿ ತಿಳಿಸಲಾಗಿದೆ. ಬಿಹಾರದಲ್ಲಿ ಅತಿಹೆಚ್ಚು ಬಡತನವಿದೆ. ಕೇರಳ, ಗೋವಾ, ಪುದುಚೇರಿ ರಾಜ್ಯಗಳಲ್ಲಿ ಶೇ.1ಕ್ಕಿಂತ ಕಡಿಮೆ ಬಡತನ ಇದೆ.
ಗೋವಾದಲ್ಲಿ ಶೇ. 0.84 ಮತ್ತು ಪುದುಚೇರಿಯಲ್ಲಿ ಶೇ. 0.85 ಮಾತ್ರವಿದೆ. ದೇಶದ ಒಟ್ಟು ಬಹು ಆಯಾಮದ ಬಡತನ ಶೇ.14.96ರಷ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ದೇಶದ ಬಡತನದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 18ನೇ ಸ್ಥಾನದಲ್ಲಿದೆ., ಕರ್ನಾಟಕದಲ್ಲಿ ಶೇ. 7.58 ರಷ್ಟು ಬಡತನ ಇದೆ ಎಂದು ತಿಳಿದುಬಂದಿದೆ. ಜಾರ್ಖಂಡ್‌ನಲ್ಲಿ 28.81, ಮೇಘಾಲಯದಲ್ಲಿ 27.79, ಉತ್ತರಪ್ರದೇಶದಲ್ಲಿ 22.93, ಮಧ್ಯಪ್ರದೇಶದಲ್ಲಿ 20.63, ಅಸ್ಸಾಂನಲ್ಲಿ 19.35, ಛತ್ತೀಸ್ಗಡದಲ್ಲಿ 16.37 ಬಡತನದ ಪ್ರಮಾಣವಿದೆ.
ಇನ್ನು ಒಡಿಶಾದಲ್ಲಿ15.68, ನಾಗಾಲ್ಯಾಂಡ್‌ನಲ್ಲಿ 15.43, ರಾಜಸ್ಥಾನದಲ್ಲಿ: 15.31, ಅರುಣಾಚಲಪ್ರದೇಶದಲ್ಲಿ 13.76, ತ್ರಿಪುರದಲ್ಲಿ 13.11, ಪಶ್ಚಿಮ ಬಂಗಾಳದಲ್ಲಿ11.89, ಗುಜರಾತ್‌ನಲ್ಲಿ 11.66, ಉತ್ತರಾಖಂಡ್‌ನಲ್ಲಿ 9.67, ಮಣಿಪುರ್‌ನಲ್ಲಿ 8.10, ಮಹಾರಾಷ್ಟ್ರದಲ್ಲಿ 7.81 ಬಡತನವಿದೆ ಎಂಬುದನ್ನು ವರದಿಯಲ್ಲಿ ಹೇಳಲಾಗಿದೆ.
ಹರಿಯಾಣದಲ್ಲಿ 7.07, ಆಂಧ್ರಪ್ರದೇಶದಲ್ಲಿ 6.06, ತೆಲಂಗಾಣದಲ್ಲಿ 5.88, ಮಿಜೋರಾಂನಲ್ಲಿ 5.30, ಹಿಮಾಚಲಪ್ರದೇಶದಲ್ಲಿ 4.93, ಪಂಜಾಬ್‌ನಲ್ಲಿ 4.75, ಸಿಕ್ಕಿಂನಲ್ಲಿ 2.60 ಪ್ರಮಾಣದಷ್ಟು ಬಡತನವಿದೆ.