ಅಡುಗೆ ಮಾಡುವಾಗ ಹಾಲು ಉಕ್ಕಿ, ಕಕ್ಕರ್‌ನಿಂದ ಹೊರ ಬರುವ ನೀರು, ಮಸಾಲೆ ಪದಾರ್ಥಗಳು ಬಿದ್ದು ಗ್ಯಾಸ್ ಸಟ್ವ್ ಗಲೀಜು ಆಗುತ್ತವೆ. ಕೆಲವೊಮ್ಮೆ ಏನೇ ಮಾಡಿದ್ರೂ ಹಠಮಾರಿ ಕಲೆಗಳು ಹೋಗದೇ ಅಲ್ಲಿಯೇ ಗಟ್ಟಿಯಾಗಿ ಕುಳಿತುಕೊಳ್ಳುತ್ತವೆ.
ಕೆಲವೊಮ್ಮೆ ಗ್ಯಾಸ್ ಬರ್ನರ್ ಮೇಲೆ ನೀರು ಅಥವಾ ಹಾಲು ಬಿದ್ದು ಅದರಲ್ಲಿರುವ ರಂಧ್ರಗಳು ಮುಚ್ಚಿಕೊಳ್ಳುತ್ತವೆ. ಇದರಿಂದ ಸಣ್ಣ ಪ್ರಮಾಣದಲ್ಲಿ ಬೆಂಕಿ ಬರಲು ಆರಂಭವಾಗುತ್ತದೆ. ಗ್ಯಾಸ್ ಬರ್ನರ್‌ನಲ್ಲಿ ಕಸ ಸೇರುವದರಿಂದ ಒಲೆ ವೇಗವಾಗಿ ಉರಿಯಲ್ಲ.
ಇಂದು ನಾವು ನಿಮಗೆ ಹೆಚ್ಚು ಖರ್ಚು ಇಲ್ಲದೇ ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿ ಹೇಗೆ ಗ್ಯಾಸ್ ಒಲೆ ಮತ್ತು ಬರ್ನರ್ ಸ್ವಚ್ಚಗೊಳಿಸಬೇಕು ಎಂದು ಹೇಳುತ್ತಿದ್ದೇವೆ. ಈ ಟ್ರಿಕ್‌ಗಳನ್ನು ಬಳಸಿ ನಿಮ್ಮ ಒಲೆಯನ್ನು ಹೊಸದರಂತೆ ಮಾಡಬಹುದಾಗಿದೆ.
ಅಡುಗೆ ಮಾಡುವಾಗ ಪದಾರ್ಥಗಳು ಬರ್ನರ್ ಮೇಲೆ ಬಿದ್ದು ರಂಧ್ರದಲ್ಲಿ ಕೊಳಕು ಸೇರ್ಪಡೆಯಾಗಿರುತ್ತದೆ. ಈ ಗಲೀಜು ತೆಗೆಯಲು ಮೊದಲು ನೀವು ಬರ್ನರ್‌ನ್ನು ಸ್ವಲ್ಪ ಬಿಸಿ ಮಾಡಿ. ನಂತರ ಇದರ ಮೇಲೆ ಅಡುಗೆಸೋಡಾ ಹಾಕಿ ತೊಳೆದ್ರೆ ರಂಧ್ರಗಳಲ್ಲಿ ಸಿಲುಕಿರುವ ಕಸ ಹೊರಗೆ ಬರುತ್ತದೆ.
ಕುದಿಯುತ್ತಿರುವ ಬಿಸಿನೀರಿನಲ್ಲಿ ಅಡುಗೆ ಸೋಡಾ ಹಾಕಿ. ನಂತರ ಇದಕ್ಕೆ ಗಲೀಜು ಆಗಿರುವ ಬರ್ನರ್‌ಗಳನ್ನು ಹಾಕಿ 10 ರಿಂದ 15 ನಿಮಿಷ ಬಿಡಬೇಕು. ಆನಂತರ ಹಳೆಯ ಟೂಥ್ ಬ್ರಶ್ ಬಳಸಿ ರಂಧ್ರಗಳನ್ನು ಸ್ವಚ್ಛಗೊಳಿಸಬೇಕು.
ವಿನೆಗರ್‌ನಿಂದ ಗ್ಯಾಸ್ ಸ್ಟೌವ್ ಅನ್ನು ತುಂಬಾ ಸುಲಭವಾಗಿ ಸ್ವಚ್ಛಗೊಳಿಸಬಹುದು. ನೀರಿನಲ್ಲಿ ವಿನಗೇರ್ ಸೇರಿಸಬೇಕು. ನಂತರ ಈ ನೀರಿನಲ್ಲಿ ಬರ್ನರ್‌ಗಳನ್ನು ಹಾಕಿ 30 ನಿಮಿಷದ ನಂತರ ತೆಗೆಯಬೇಕು. ಹೀಗೆ ಮಾಡುವದರಿಂದ ಎಲ್ಲಾ ರಂಧ್ರಗಳು ಸ್ವಚ್ಛಗೊಳ್ಳುತ್ತವೆ.
ನಿಂಬೆ ಮತ್ತು ಉಪ್ಪಿನೊಂದಿಗೆ ಗ್ಯಾಸ್ ಸ್ಟೌವ್ ಅನ್ನು ಸ್ವಚ್ಛಗೊಳಿಸಬಹುದು. ಅಡುಗೆ ಎಲ್ಲಾ ಮುಗಿದ್ಮೇಲೆ ಸ್ಟವ್ ಮೇಲೆ ನಿಂಬೆರಸ ಮತ್ತು ಉಪ್ಪು ಹಾಕಿ ತೊಳೆಯಬೇಕು. ಇದರಿಂದ ನಿಮ್ಮ ಸ್ವಟ್ ಹೊಸತರಂತೆ ಕಾಣಿಸುತ್ತದೆ. ಅದೇ ರೀತಿ ನಿಂಬೆ ಮತ್ತು ಉಪ್ಪಿನ ದ್ರಾವಣದಲ್ಲಿ ಬರ್ನರ್ ಅದ್ದಿ ತೊಳೆದ್ರೆ ರಂಧ್ರಗಳಲ್ಲಿ ಸಿಲುಕಿರುವ ಕಸ ಹೋಗುತ್ತದೆ. ಹಲ್ಲುಜ್ಜುವ ಹಳೆಯ ಬ್ರಶ್ ಬಳಸ ಬರ್ನರ್ ನಲ್ಲಿ ಸಿಲುಕಿರುವ ಕಸ ತೆಗೆಯಬಹುದು.