ಅಂಬಾನಿಯ 15000 ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗಲೆ ಅಂಟಿಲಿಯಾ, ಮನೆಯೊಳಗೆ ಏನೇನಿದೆ?

Published : Apr 13, 2023, 02:44 PM IST

ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿಯ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಂಬಾನಿ ಕುಟುಂಬದ ಐಷಾರಾಮಿ ಜೀವನಶೈಲಿ ಆಗಾಗ ಸುದ್ದಿಯಲ್ಲಿರುತ್ತದೆ. ಆದ್ರೆ ಈ ಕುಟುಂಬ ವಾಸಿಸುವ 15000 ಕೋಟಿ ರೂಪಾಯಿ ಬಂಗಲೆಯ ಬಗ್ಗೆ ನಿಮಗೆ ಗೊತ್ತಿದ್ಯಾ? ಆ ಬಗ್ಗೆ ಇಲ್ಲಿದೆ ಆಸಕ್ತಿಕರ ಮಾಹಿತಿ.

PREV
19
ಅಂಬಾನಿಯ 15000 ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗಲೆ ಅಂಟಿಲಿಯಾ, ಮನೆಯೊಳಗೆ ಏನೇನಿದೆ?

ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ವಿಶ್ವದಲ್ಲೇ ಅತೀ ದುಬಾರಿ ಖಾಸಗಿ ಮನೆಯನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ಇವರ ದುಬಾರಿ ಖಾಸಗಿ ಮನೆಯನ್ನು ಆಂಟಿಲಿಯಾ ಎಂದು ಕರೆಯಲಾಗುತ್ತದೆ.

29

27 ಅಂತಸ್ತಿನ ಕಟ್ಟಡದಲ್ಲಿ ಮುಕೇಶ್ ಅಂಬಾನಿ ಕುಟುಂವವು ವಾಸಿಸುತ್ತದೆ. ಇದರಲ್ಲಿ ನೀತಾ ಅಂಬಾನಿ, ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ ಮತ್ತು ಪೃಥ್ವಿ ಅಂಬಾನಿ ಇದ್ದಾರೆ.

39

ಅಂಬಾನಿ ಕುಟುಂಬವು 2012 ರಲ್ಲಿ ಆಂಟಿಲಿಯಾಕ್ಕೆ ಸ್ಥಳಾಂತರಗೊಂಡಿತು ಮತ್ತು ಪ್ರಸ್ತುತ ಮನೆಯ ಬೆಲೆ 15,000 ಕೋಟಿ ರೂ. ಆಂಟಿಲಿಯಾ ತನ್ನ ವೈಶಿಷ್ಟ್ಯಗಳು, ಗ್ರ್ಯಾಂಡ್ ಪಾರ್ಟಿಗಳು, ಭದ್ರತೆ ಮತ್ತು ಹಲವಾರು ಇತರ ಕಾರಣಗಳಿಗಾಗಿ ಆಗಾಗ ಸುದ್ದಿಯಲ್ಲಿರುತ್ತದೆ. ಇಂಟರ್‌ನೆಟ್‌ನಲ್ಲಿ ಆಂಟಿಲಿಯಾದ ಸಾಕಷ್ಟು ಫೋಟೋಗಳು ಲಭ್ಯವಿದೆ.
 

49

ಐಷಾರಾಮಿ ಮನೆಯು 173 ಮೀಟರ್ ಎತ್ತರ ಮತ್ತು 37,000 ಚದರ ಮೀಟರ್‌ಗಳಲ್ಲಿ ಹರಡಿಕೊಂಡಿದೆ. ಎತ್ತರದ ಕಟ್ಟಡವು ಬಹು ಅಂತಸ್ತಿನ ಕಾರ್ ಪಾರ್ಕಿಂಗ್, 9 ಹೈ ಸ್ಪೀಡ್ ಎಲಿವೇಟರ್‌ಗಳು ಮತ್ತು ಸಿಬ್ಬಂದಿಗೆ ವಿಶೇಷ ಸೂಟ್‌ಗಳನ್ನು ಹೊಂದಿದೆ. 2012ರಿಂದ ಈವರೆಗೂ ಕೂಡಾ ಈ ಅಂಟಿಲಿಯಾ ಮನೆಯು ತನ್ನ ಐಷಾರಾಮಿ ವ್ಯವಸ್ಥೆಯಿಂದಲೇ ಅತೀ ಜನಪ್ರಿಯವಾಗಿದೆ. 

59

ಐಷಾರಾಮಿ ಮನೆಗೆ ಅಂಟಿಲಿಯಾ ಎಂಬ ಹೆಸರು ಯಾಕೆ?
ಈವರೆಗೂ ಹಲವಾರು ಮಂದಿಗೆ ಈ ಮನೆಗೆ ಅಂಟಿಲಿಯಾ ಎಂದು ಹೆಸರಿಟ್ಟಿರುವುದು ಏಕೆ, ಏನಿದರ ಅರ್ಥ ಎಂದು ತಿಳಿದಿಲ್ಲ. ಈ ಬಗ್ಗೆ ಇಲ್ಲಿದೆ ವಿವರ.ಆಂಟಿಲಿಯಾ ಎಂಬುದು 15 ನೇ ಶತಮಾನದಲ್ಲಿ ಅನೇಕ ನಕ್ಷೆಗಳಲ್ಲಿ ಕಾಣಿಸಿಕೊಂಡ ದ್ವೀಪದ ಹೆಸರಾಗಿದೆ. 15 ನೇ ಶತಮಾನದಲ್ಲಿ ಅನೇಕ ನಕ್ಷೆಗಳಲ್ಲಿ ಈ ದ್ವೀಪ ಕಾಣಿಸಿಕೊಂಡಿತ್ತು. ಈ ಸ್ಥಳವು ಈವರೆಗೂ ಯಾರು ಕಾಣದ ದ್ವೀಪ ಎಂದು ನಂಬಲಾಗಿದೆ. 

69

ಹಾಗೆಯೇ ಈ ದ್ವೀಪ ಅಸ್ತಿತ್ವದ್ಲಲೇ ಇಲ್ಲ ಎಂದು ಹೇಳುವವರು ಹಲವಾರು ಮಂದಿ ಇದ್ದಾರೆ. ಹಾಗೆಯೇ ಇದು ನ್ಯಾವಿಗೇಟರ್‌ಗಳ ತಪ್ಪು ಕಲ್ಪನೆಯಾಗಿದೆ ಎಂದು ಕೂಡಾ ನಂಬಲಾಗಿದೆ. ಈ ದ್ವೀಪವನ್ನು ಐಲ್ ಆಫ್ ಸೆವೆನ್ ಸಿಟೀಸ್ ಎಂದೂ ಕರೆಯುತ್ತಾರೆ.

79

ಆಂಟಿಲಿಯಾ ಎಂಬ ಹೆಸರು ಸಹ ವಸತಿ ಕಟ್ಟಡಕ್ಕೆ ಸರಿಹೊಂದುತ್ತದೆ. ಏಕೆಂದರೆ ಇದು ಸೂರ್ಯ ಮತ್ತು ಕಮಲದಿಂದ ಸ್ಫೂರ್ತಿ ಪಡೆಯುತ್ತದೆ. ಸಸ್ಯಗಳನ್ನು ಉಲ್ಲೇಖಿಸಿ, ಆಂಟಿಲಿಯಾವು ಆಸ್ಟರೇಸಿ ಕುಟುಂಬದಲ್ಲಿ ಹೂಬಿಡುವ ಸಸ್ಯಗಳ ಒಂದು ಕುಲವಾಗಿದೆ ಮತ್ತು ಪ್ರಸ್ತುತ ಕ್ಯೂಬಾಕ್ಕೆ ಸ್ಥಳೀಯವಾಗಿರುವ ಆಂಟಿಲಿಯಾ ಬ್ರಾಚಿಚೆಟಾ ಎಂಬ ಒಂದು ಜಾತಿಯಿದೆ.

89

ಶತಮಾನದ ರಿಯಲ್ ಎಸ್ಟೇಟ್
ಅಂಬಾನಿ ಕುಟುಂಬದ ಮನೆಯನ್ನು ಚಿಕಾಗೋ ಮೂಲದ ಎರಡು ಪ್ರಸಿದ್ಧ ಆರ್ಕಿಟೆಕ್ಚರ್ ಸಂಸ್ಥೆಗಳಾದ ಪರ್ಕಿನ್ಸ್ & ವಿಲ್ ಮತ್ತು ಲಾಸ್ ಏಂಜಲೀಸ್‌ನಲ್ಲಿರುವ ಹಿರ್ಷ್ ಬೆಡ್ನರ್ ಅಸೋಸಿಯೇಟ್ಸ್ ವಿನ್ಯಾಸಗೊಳಿಸಿದ್ದಾರೆ. .

99

ಮನೆಯ ನಿರ್ಮಾಣವು 2006 ರಲ್ಲಿ ಪ್ರಾರಂಭವಾಯಿತು. ಈ ಯೋಜನೆಯು ಪೂರ್ಣವಾಗಲು ಆರು ವರ್ಷಗಳು ಬೇಕಾಯಿತು. ಈ ಕಟ್ಟಡವು 8 ರಷ್ಟು ತೀವ್ರತೆಯ ಭೂಕಂಪವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ

Read more Photos on
click me!

Recommended Stories