ಮಕ್ಕಳ ಕೇಳುವ ಕೌಶಲ್ಯವನ್ನು ಸುಧಾರಿಸುವುದು
ಸಾಮಾನ್ಯವಾಗಿ ಮಕ್ಕಳು ಬೆಳೆದಂತೆ ಪೋಷಕರ ಮಾತು ಕೇಳುವುದಿಲ್ಲ. ಬದಲಿಗೆ ಪೋಷಕರ ಮೇಲೆ ಕೋಪ, ಹಠ, ಕಿರಿಕಿರಿ ತೋರಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ, ಕೆಲವೊಮ್ಮೆ ಪೋಷಕರು ತಾಳ್ಮೆ ಕಳೆದುಕೊಂಡು ಮಕ್ಕಳನ್ನು ಹೊಡೆಯುತ್ತಾರೆ ಅಥವಾ ಬೈಯುತ್ತಾರೆ. ಇದರಿಂದ ಅವರ ನಡುವೆ ಬಿರುಕು ಉಂಟಾಗುತ್ತದೆ.
ಹಾಗಾಗದಿರಲು, ಪೋಷಕರಿಗೆ ಕೆಲವು ಸಲಹೆಗಳು ಇಲ್ಲಿವೆ. ಅವುಗಳನ್ನು ಪಾಲಿಸಿದರೆ ಸಾಕು. ನಿಮ್ಮ ಮಕ್ಕಳು ಖಂಡಿತವಾಗಿಯೂ ನಿಮ್ಮ ಮಾತು ಕೇಳುತ್ತಾರೆ. ಆ ಸಲಹೆಗಳು ಏನು ಅಂತ ನೋಡೋಣ ಬನ್ನಿ.
ಮಕ್ಕಳು ನಿಮ್ಮ ಮಾತು ಕೇಳಲು ಪೋಷಕರಿಗೆ ಕೆಲವು ಸಲಹೆಗಳು
1.ಮಕ್ಕಳ ಗಮನ ಸೆಳೆಯಿರಿ
ನಿಮ್ಮ ಮಕ್ಕಳು ನಿಮ್ಮ ಮಾತು ಕೇಳುವಂತೆ ಮಾಡಲು ಉತ್ತಮ ಮಾರ್ಗವೆಂದರೆ ನೀವು ಅವರ ಗಮನವನ್ನು ಸೆಳೆಯುವುದು. ನಿಮ್ಮ ಮಗುವಿನ ಗಮನವನ್ನು ನಿಮ್ಮತ್ತ ಸೆಳೆಯಲು, ನೀವು ನಿಮ್ಮ ಮಗುವನ್ನು ಸ್ಪರ್ಶಿಸಬಹುದು ಅಥವಾ ಕಣ್ಣಿನ ಸಂಪರ್ಕ ಮಾಡಬಹುದು. ಇದು ನಿಮ್ಮ ಮಗು ನಿಮ್ಮ ಮಾತು ಕೇಳುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
2. ನಗುತ್ತಾ ಮಾತನಾಡಿ
ನಿಮ್ಮ ಮಗುವಿಗೆ ಏನನ್ನಾದರೂ ಹೇಳುವಾಗ ನಗುತ್ತಿರುವಾಗ, ಶಾಂತವಾಗಿ ಮತ್ತು ಅಂಶಗಳಿಗೆ ಒತ್ತು ನೀಡಿ ಹೇಳಬೇಕು. ಆಗ ಅವರು ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
ಮಕ್ಕಳು ಮಾತು ಕೇಳಲು ಸಲಹೆಗಳು
3. ಕಡಿಮೆ ಪದಗಳನ್ನು ಬಳಸಿ
ನೀವು ಮಗುವಿಗೆ ಏನನ್ನಾದರೂ ಹೇಳಬೇಕಾದರೆ ಅಥವಾ ಕೆಲಸ ಮಾಡಲು ಹೇಳಬೇಕಾದರೆ ಕಡಿಮೆ ಪದಗಳನ್ನು ಬಳಸಿ. ಮಕ್ಕಳು ಹಲವು ವಾಕ್ಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನೀವು ಹೇಳುವುದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ. ಆದ್ದರಿಂದ ಯಾವಾಗಲೂ ಕೆಲವು ಪದಗಳಲ್ಲಿ ಮಾತ್ರ ವಿಷಯವನ್ನು ವಿವರಿಸಿ. ಅಂದ್ರೆ ಸಂಕ್ಷಿಪ್ತವಾಗಿ ಮಾತನಾಡಬೇಕು.
4. ಕೂಗಬೇಡಿ
ನಿಮ್ಮ ಮಗು ನೀವು ಹೇಳುವುದನ್ನು ಕೇಳದಿದ್ದರೆ, ಅವರ ಮೇಲೆ ಕೂಗುವ ಬದಲು, ವಿನಮ್ರರಾಗಿರಿ. ಇದರಿಂದ ಅವರು ನಿಮ್ಮ ಮಾತು ಕೇಳುವ ಸಾಧ್ಯತೆ ಹೆಚ್ಚು.
ಮಕ್ಕಳು ಮಾತು ಕೇಳಲು ಸಲಹೆಗಳು
5. ಎರಡನೇ ಅವಕಾಶ ನೀಡಿ
ನಿಮ್ಮ ಮಗು ಏನನ್ನಾದರೂ ಮಾಡುತ್ತಿರುವಾಗ ನೀವು ಮಾತನಾಡಿದರೆ, ಅವರು ನೀವು ಹೇಳಿದ್ದನ್ನು ಗಮನಿಸದೇ ಇರಬಹುದು, ಆದ್ದರಿಂದ ತಕ್ಷಣ ಅವರ ಮೇಲೆ ಕೂಗುವ ಬದಲು ಸ್ವಲ್ಪ ಸಮಯ ನೀಡಿ. ಮಕ್ಕಳು ಕೆಲವೊಮ್ಮೆ ಒಂದು ವಿಷಯದಿಂದ ಇನ್ನೊಂದಕ್ಕೆ ಗಮನಹರಿಸಲು ಸಮಯ ತೆಗೆದುಕೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಅವರೊಂದಿಗೆ ಮಾತನಾಡಿ ಮತ್ತು ಸ್ವಲ್ಪ ಸಮಯ ಕಾಯಿರಿ. ಈ ಸಮಯದ ಅಂತರದಲ್ಲಿ ನಿಮ್ಮ ಮಗು ನೀವು ಹೇಳುವುದನ್ನು ಅರ್ಥಮಾಡಿಕೊಳ್ಳುತ್ತದೆ.